ಬೆಂಗಳೂರು: ಹೈದರಾಬಾದ್ ಕರ್ನಾಟಕಕ್ಕೆ ಸಚಿವ ಸಂಪುಟದಲ್ಲಿ ಅನ್ಯಾಯ ಆಗುತ್ತಿದೆ. ನಮ್ಮ ಭಾಗಕ್ಕೆ ಬರೀ ಪಶುಸಂಗೋಪನೆ ಇಲಾಖೆ ಕೊಡುತ್ತಾರೆ. ಇದೀಗ ಪ್ರಭು ಚೌಹಾಣ್ ಪಶುಸಂಗೋಪನೆ ಸಚಿವರಾಗಿದ್ದಾರೆ. ಏಕೆ ಯಾವಾಗಲೂ ನಾವು ದನ ಕಾದುಕೊಂಡೇ ಇರಬೇಕಾ? ಪಶು ಸಂಗೋಪನೆ ತಗೊಂಡು, ದನ ಕಾದುಕೊಂಡಿರಬೇಕಾ? ಎಂದು ವಿಧಾನಸಭೆಯಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಮತ್ತೊಬ್ಬರು ಆನಂದ್ ಸಿಂಗ್ ಇದ್ದಾರೆ, ಅವರಿಗೂ ಬೇಸರ ಆಗಿದೆ. ಅವರಿಗೂ ಈಗಾಗಲೇ ಅಸಮಾಧಾನವಿದೆ ಎಂದು ಕೇಳಿದ್ದೇನೆ. ಸಂಪುಟದಲ್ಲೂ ಹೈದರಾಬಾದ್ ಕರ್ನಾಟಕ ಭಾಗವನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ವಿಧಾನಸಭೆಯಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಭಾಗದ ಬಗ್ಗೆ ಚರ್ಚೆ ನಡೆದಿದೆ. ಈ ಮಧ್ಯ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಚರ್ಚೆ ವೇಳೆ ಆಕ್ಷೇಪ ವ್ಯಕ್ತವಾಗಿದೆ. ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 50 ವರ್ಷಗಳ ಕಾಲ ಖರ್ಗೆ, ಧರಂಸಿಂಗ್ ಅಧಿಕಾರದಲ್ಲಿದ್ದರು. ಆವಾಗ ಯಾಕೆ ಕಲ್ಯಾಣ ಕರ್ನಾಟಕ ಭಾಗ ಅಭಿವೃದ್ಧಿಯಾಗಿಲ್ಲ. ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಹೇಳಿಕೆಗೂ ಯತ್ನಾಳ್ ಟಾಂಗ್ ಕೊಟ್ಟಿದ್ದಾರೆ.
ವೀರಶೈವ ಮಹಾಸಭಾದಲ್ಲಿ ನೀವುಗಳೇ ತುಂಬಿಕೊಂಡಿದ್ದೀರಿ. ನಾನು ಯಾವುದೇ ಮಠ, ಶಾಲೆಗಳ ಹೆಸರಿನಲ್ಲಿ ಲೂಟಿಮಾಡಿಲ್ಲ. ನನ್ನ ನೈತಿಕತೆ ಬಗ್ಗೆ ಮಾತಾಡಲು ಹೋಗಬೇಡಿ ಎಂದು ಯತ್ನಾಳ್ ಹೇಳಿದ್ದಾರೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ದುಡ್ಡು ಕೊಟ್ಟಿದ್ದು ಯಡಿಯೂರಪ್ಪ ಎಂದು ಸದನದಲ್ಲಿ ಮಾಜಿ ಸಿಎಂ ಬಿಎಸ್ವೈ ಪರ ಯತ್ನಾಳ್ ಬ್ಯಾಟಿಂಗ್ ಮಾಡಿದ್ದಾರೆ.
ಅದಕ್ಕೆ ಪ್ರತಿಕ್ರಿಯೆ ನೀಡಿದ ಪ್ರಿಯಾಂಕ್ ಖರ್ಗೆ, ಬಿ.ಎಸ್. ಯಡಿಯೂರಪ್ಪ ಮೇಲೆ ಈ ಪ್ರೀತಿ 2 ತಿಂಗಳ ಮೊದಲೇ ಇದ್ದಿದ್ದರೆ ಅವರು ಇನ್ನೂ ಹೆಚ್ಚು ಕಾಲ ಸಿಎಂ ಆಗಿರುತ್ತಿದ್ದರು ಎಂದು ತಿಳಿಸಿದ್ದಾರೆ. ಕಲ್ಯಾಣ ಕರ್ನಾಟಕ ಮಾನವ, ಸಾಂಸ್ಕೃತಿಕ, ಕೃಷಿ ಅಭಿವೃದ್ಧಿ ಸಂಘದ ಚಟುವಟಿಕೆಯ ಬಗ್ಗೆ ಆಡಿಟ್ ಆಗಬೇಕೆಂದು ಒತ್ತಾಯ ಮಾಡಿದ್ದಾರೆ. ದುಡ್ಡು ಹಿಂಪಡೆದು ಕೌಶಲ್ಯಾಭಿವೃದ್ಧಿಗೆ ಬಳಸಬೇಕೆಂದು ಒತ್ತಾಯಿಸಿದ್ದಾರೆ. ಈ ಸಂಬಂಧ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: Gender Sensitivity: ಬೇಕಾಬಿಟ್ಟಿಯಾಗಿ ರೇಪ್ ಪದ ಬಳಕೆಗೆ ವಿಧಾನಸಭಾ ಸದಸ್ಯೆಯರ ಆಕ್ಷೇಪ, ಪಕ್ಷಭೇದ ಮೀರಿದ ಮಾದರಿ ಚರ್ಚೆ
ಇದನ್ನೂ ಓದಿ: ಕಿಲಾರಿ ಎತ್ತುಗಳನ್ನು ಹೊಂದುವುದು ಶ್ರೀಮಂತಿಕೆ ಮತ್ತು ಪ್ರತಿಷ್ಠೆಯ ಸಂಕೇತ, ಉತ್ತರ ಕರ್ನಾಟಕದಲ್ಲಿ ಇವುಗಳಿಗೆ ಭಾರಿ ಬೇಡಿಕೆ!
Published On - 5:09 pm, Thu, 23 September 21