Raksha Bandhan 2021: ಗೋಕಾಕ ಶಾಸಕ ರಮೇಶ್ ಜಾರಕಿಹೊಳಿಗೆ ಬಿಜೆಪಿ ಕಾರ್ಯಕರ್ತೆಯರ ರಾಖಿ ಬಂಧನ

ಬಿಜೆಪಿ ಕಾರ್ಯಕರ್ತೆಯರ ರಕ್ಷಾ ಬಂಧನ ರಮೇಶ್ ಜಾರಕಿಹೊಳಿ ಅವರ ಸಂಕಷ್ಟಗಳನ್ನು ದೂರಮಾಡುವುದೋ ಎಂಬುದನ್ನು ಕಾದುನೋಡಬೇಕಷ್ಟೇ.

Raksha Bandhan 2021: ಗೋಕಾಕ ಶಾಸಕ ರಮೇಶ್ ಜಾರಕಿಹೊಳಿಗೆ ಬಿಜೆಪಿ ಕಾರ್ಯಕರ್ತೆಯರ ರಾಖಿ ಬಂಧನ
ರಮೇಶ್ ಜಾರಕಿಹೊಳಿಗೆ ರಾಖಿ ಕಟ್ಟುತ್ತಿರುವ ದೃಶ್ಯ
Follow us
TV9 Web
| Updated By: ಡಾ. ಭಾಸ್ಕರ ಹೆಗಡೆ

Updated on:Aug 25, 2021 | 10:22 AM

ಬೆಳಗಾವಿ: ರಕ್ಷಾ ಬಂಧನ ಎಂದರೆ ಸಾಕು ಎಲ್ಲರಿಗೂ ನೆನಪಾಗುವುದು ಅಣ್ಣ ತಮ್ಮಂದಿರಿಗೆ ರಾಖಿ ಕಟ್ಟುವ ಅಕ್ಕ ತಂಗಿಯರು. ಸಹೋದರತ್ವದ ಸಂಕೇತವಾದ ರಕ್ಷಾ ಬಂಧನವನ್ನು ಎಲ್ಲರೂ ಆಚರಿಸುವುದು ಸಹಜ. ಅಂತೆಯೆ ನಟ ನಟಿಯರು, ಆಟಗಾರರು, ರಾಜಕಾರಣಿಗಳು ಆಚರಿಸುವುದು ಸಹ ಅಷ್ಟೇ ಸಹಜ. ಸದ್ಯ ಅಶ್ಲೀಲ ಸಿಡಿ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರೂ ಇಂದು ರಕ್ಷಾ ಬಂಧನ ಆಚರಿಸಿದ್ದಾರೆ. ಗೋಕಾಕ ಶಾಸಕರಾಗಿರುವ ಅವರಿಗೆ ಬಿಜೆಪಿ ಕಾರ್ಯಕರ್ತೆಯರೂ ಹಾಗೂ ಅವರ ಸಾಮಾಜಿಕ ಜೀವನದ ಸಹೋದರಿಯರು ರಾಖಿ ಕಟ್ಟಿದ್ದಾರೆ.

ಕಳೆದ ಕೆಲ ತಿಂಗಳಿನಿಂದ ಸಿಡಿ ಪ್ರಕರಣದ ದೆಸೆಯಿಂದ ರಾಜಕೀಯವಾಗಿ ಹಿನ್ನೆಲೆಗೆ ಅವರು ಸರಿದಿದ್ದಾರೆ. ಮುಂದಿನ ದಿನಗಳಲ್ಲಿ ರಾಜಕೀಯ ಜೀವನದ ಪುನರುಜ್ಜೀವನದ ಕನಸು ಹೆಣೆಯುತ್ತಿರುವ ಶಾಸಕ ರಮೇಶ್ ಜಾರಕಿಹೊಳಿ ಇತ್ತೀಚಿಗಷ್ಟೇ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ ಅವರ ನೇಮಕ ಅತೃಪ್ತಿಯನ್ನೂ ಮೂಡಿಸಿತ್ತು. ಆದರೆ ಸತತ ದೆಹಲಿ ಭೇಟಿ ಮತ್ತು ಬಿಜೆಪಿ ಹೈಕಮಾಂಡ್ ಅಭಯ ಅವರ ಅಸಮಾಧಾನವನ್ನು ಶಮನಗೊಳಿಸಿದೆ ಎಂದು ಸಹ ಹೇಳಲಾಗಿದೆ. ಇಂದು ಬಿಜೆಪಿಯ ಕಾರ್ಯಕರ್ತೆಯರು ಶಾಸಕ ರಮೇಶ್ ಜಾರಕಿಹೊಳಿ ಅವರಿಗೆ ಅಭಯದ ರಕ್ಷೆ ಕಟ್ಟಿದ್ದಾರೆ, ಅರ್ಥಾತ್ ರಾಖಿ ಕಟ್ಟಿದ್ದಾರೆ. ಬಿಜೆಪಿ ಕಾರ್ಯಕರ್ತೆಯರ ರಕ್ಷಾ ಬಂಧನ ರಮೇಶ್ ಜಾರಕಿಹೊಳಿ ಅವರ ಸಂಕಷ್ಟಗಳನ್ನು ದೂರಮಾಡುವುದೋ ಎಂಬುದನ್ನು ಕಾದುನೋಡಬೇಕಷ್ಟೇ.

ಇದನ್ನೂ ಓದಿ: 

Raksha Bandhan 2021: ವಿಶೇಷ ರೀತಿಯಲ್ಲಿ ರಕ್ಷಾ ಬಂಧನದ ಶುಭಕೋರಿದ ಐಪಿಎಲ್ ತಂಡಗಳು

ಜಮ್ಮು ಮತ್ತು ಕಾಶ್ಮೀರದ ಜನರು ತಾಳ್ಮೆ ಕಳೆದುಕೊಂಡರೆ ನೀವು ಇಲ್ಲದಂತಾಗುತ್ತೀರಿ: ಕೇಂದ್ರಕ್ಕೆ ಮೆಹಬೂಬಾ ಮುಫ್ತಿ ಎಚ್ಚರಿಕೆ

(Raksha Bandhan 2021 BJP activists who tied Rakhi for MLA Ramesh Jarkiholi)

Published On - 5:43 pm, Sun, 22 August 21