AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜರಾಜೇಶ್ವರಿ ನಗರದ ಮತದಾರ ಅಭ್ಯರ್ಥಿಗಳ ಹಣೆಬರಹ ನಿರ್ಧರಿಸಿದ್ದಾನೆ!

ಅಬ್ಬರದ ಪ್ರಚಾರ, ಅನೇಕ ಡ್ರಾಮಾ–ಮೆಲೊಡ್ರಾಮಾ, ಪರಸ್ಪರ ಬೈದಾಟ–ಕೆಸರೆರಚಾಟ, ದೂರು–ಪ್ರತಿದೂರುಗಳ ನಂತರ ರಾಜರಾಜೇಶ್ವರಿ ನಗರದ ವಿಧಾನ ಸಭಾ ಉಪಚುನಾವಣೆಗೆ ಇಂದು ಮತದಾನ ನಡೆಯಿತು. ಆಡಳಿತಾರೂಢ ಭಾರತೀಯ ಜನತಾ ಪಕ್ಷ, ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಮತ್ತು ಜನತಾ ದಳ (ಎಸ್) ಪಕ್ಷದ ಪ್ರಮುಖ ನಾಯಕರೆಲ್ಲ ತಮ್ಮ ತಮ್ಮ ಅಭ್ಯರ್ಥಿಗಳ ಪರವಾಗಿ ಹಲವಾರು ದಿನಗಳ ಕಾಲ ದಣಿವರಿಯೆ ಪ್ರಚಾರ ಮಾಡಿದ್ದು ಯಾವ ಪರಿಣಾಮ ಬೀರಿದೆ ಎನ್ನುವುದನ್ನು ಇಂದು ಮತದಾರ ನಿರ್ಧರಿಸಿದ್ದಾನೆ. 2018ರ ವಿಧಾನ ಸಭೆ ಚುನಾವಣೆಯಲ್ಲಿ ಮುನಿರತ್ನ ಕಾಂಗ್ರೆಸ್ ಪಕ್ಷದ ಟಿಕೆಟ್​ನಿಂದ […]

ರಾಜರಾಜೇಶ್ವರಿ ನಗರದ ಮತದಾರ ಅಭ್ಯರ್ಥಿಗಳ ಹಣೆಬರಹ ನಿರ್ಧರಿಸಿದ್ದಾನೆ!
ಅರುಣ್​ ಕುಮಾರ್​ ಬೆಳ್ಳಿ
|

Updated on: Nov 03, 2020 | 10:22 PM

Share

ಅಬ್ಬರದ ಪ್ರಚಾರ, ಅನೇಕ ಡ್ರಾಮಾಮೆಲೊಡ್ರಾಮಾ, ಪರಸ್ಪರ ಬೈದಾಟಕೆಸರೆರಚಾಟ, ದೂರುಪ್ರತಿದೂರುಗಳ ನಂತರ ರಾಜರಾಜೇಶ್ವರಿ ನಗರದ ವಿಧಾನ ಸಭಾ ಉಪಚುನಾವಣೆಗೆ ಇಂದು ಮತದಾನ ನಡೆಯಿತು. ಆಡಳಿತಾರೂಢ ಭಾರತೀಯ ಜನತಾ ಪಕ್ಷ, ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಮತ್ತು ಜನತಾ ದಳ (ಎಸ್) ಪಕ್ಷದ ಪ್ರಮುಖ ನಾಯಕರೆಲ್ಲ ತಮ್ಮ ತಮ್ಮ ಅಭ್ಯರ್ಥಿಗಳ ಪರವಾಗಿ ಹಲವಾರು ದಿನಗಳ ಕಾಲ ದಣಿವರಿಯೆ ಪ್ರಚಾರ ಮಾಡಿದ್ದು ಯಾವ ಪರಿಣಾಮ ಬೀರಿದೆ ಎನ್ನುವುದನ್ನು ಇಂದು ಮತದಾರ ನಿರ್ಧರಿಸಿದ್ದಾನೆ.

2018ರ ವಿಧಾನ ಸಭೆ ಚುನಾವಣೆಯಲ್ಲಿ ಮುನಿರತ್ನ ಕಾಂಗ್ರೆಸ್ ಪಕ್ಷದ ಟಿಕೆಟ್​ನಿಂದ ಸ್ಫರ್ಧಿಸಿ, ಗೆದ್ದು ಆಮೇಲೆ ಬಿಜೆಪಿಗೆ ಪಕ್ಷಾಂತರ ಮಾಡಿ ಶಾಸಕತ್ವದಿಂದ ಅನರ್ಹಗೊಂಡಿದ್ದರಿಂದ ರಾಜರಾಜೇಶ್ವರಿ ನಗರ ಕ್ಷೇತ್ರ ಉಪ ಚುನಾವಣೆ ಎದುರಿಸಬೇಕಾಯಿತು. ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾದಾಗಿನಿಂದಲೇ ರಾಜಕೀಯ ಕಸರತ್ತುಗಳು ನಡೆಯಲಾರಂಭಿಸಿದ್ದವು. ಮುನಿರತ್ನ ವಿರುದ್ಧ ವಿರುದ್ಧ ಕತ್ತಿ ಮಸೆಯುತ್ತಿದ್ದ ಕಳೆದ ಬಾರಿಯ ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜು ಗೌಡ, ಟಿಕೆಟ್‌ಗಾಗಿ ಲಾಬಿ ನಡೆಸಿದ್ದರು. ಆದರೆ, ಅಂತಿಮವಾಗಿ ಮುನಿರತ್ನ ಅಖಾಡಕ್ಕಿಳಿಯಲು ಬಿಜೆಿಪಿ ಹೈಕಮಾಂಡ್‌ನಿಂದ ಅಪ್ಪಣೆ ಸಿಗುತ್ತಲೇ, ಸ್ಥಳೀಯ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿತಾದರೂ ಪಕ್ಷದ ವರಿಷ್ಠರನ್ನು ಎದುರು ಹಾಕಿಕೊಳ್ಳಲು ಇಚ್ಛಿಸದ ಮುನಿರಾಜು ಮತ್ತವರ ಬೆಂಬಲಿಗರು ಮೌನಕ್ಕೆ ಶರಣಾದರು. ಆದಾದ ನಂತರ, ರಾಜರಾಜೇಶ್ವರಿ ನಗರ ಕ್ಷೇತ್ರವನ್ನು ಉಳಿಸಿಕೊಳ್ಳಲು ಮುನಿರತ್ನ ಉರುಳಿಸಿದ ದಾಳಗಳು, ನಡೆಸಿದ ಕಸರತ್ತುಗಳು ಒಂದೆರಡಲ್ಲ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸಹ ಪ್ರತಿದಾಳಗಳನ್ನು ನಡೆಸಿ, ಪ್ರಚಾರದ ಸಮಯದಲ್ಲಿ ಮುನಿರತ್ನ ಅವರ ಕೈಮೇಲಾಗದಂತೆ ನೋಡಿಕೊಂಡರು.

ಮುನಿರತ್ನ ಉರುಳಿಸಿದ ದಾಳಗಳಲ್ಲಿ ಕಣ್ಣೀರು ಸುರಿಸಿದ್ದೂ ಒಂದು. ತಾಯಿಯನ್ನು ಮಾರಿಕೊಂಡಿದ್ದಾರೆಂದು ಕಾಂಗ್ರೆಸ್ ಹೀಯಾಳಿಸಿದೆ ಅಂತ ಹೇಳಿ ಜನರೆದರುರು ಗಳಗಳನೆ ಅತ್ತುಬಿಟ್ಟರು.ಕ್ಯಾಂಪೇನ್ ಶುರುವಾದಾಗಿನಿಂದಲೂ ಮುನಿರತ್ನ ಪದೇಪದೆ ಹೇಳಿದ್ದು ಹೊರಗಿನನಿಂದ ಅಂದರೆ ಕನಕಪುರದಿಂದ ಬಂದ ಗ್ಯಾಂಗ್‌ ಹಣ ಹಂಚುತ್ತಿದೆ ಎನ್ನವುದು. ಇದೇ ವಿಚಾರವಾಗಿ ನಂದಿನಿ ಲೇಔಟ್ ಠಾಣೆ ಮುಂದೆ ದೊಡ್ಡ ಡ್ರಾಮಾವೇ ನಡೆದುಹೋಗಿತ್ತು. ಮುನಿರತ್ನ ಪರ ಸಿನಿಮಾ ನಟ ದರ್ಶನ್ ಮತಯಾಚಿಸಿದ್ದು ವಿಶೇಷವಾಗಿತ್ತು. ಕಂದಾಯ ಸಚಿವ ಆರ್ ಅಶೋಕ ಹಗಲಿರುಳು ಓಡಾಡಿ ಪ್ರಚಾರ ನಡೆಸಿದ್ದರು.

ಕಾಂಗ್ರೆಸ್ ತೊರೆದು ಬಿಜೆಪಿಗೆ ಹೋದ ಮುನಿರತ್ನ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ, ಸಮ್ಮಿಶ್ರ ಸರ್ಕಾರ ಉರುಳಲು ಮುನಿರತ್ನ ಕಾರಣ. ಮುನಿರತ್ನ ತಮ್ಮನ್ನು ತಾವು ಬಿಜೆಪಿಗೆ ಮಾರಿಕೊಂಡಿದ್ದಾರೆ. ತಾಯಿಯಂದ್ದ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ ಎಂದು ಕಾಂಗ್ರೆಸ್ ನಾಯಕರು ತಮ್ಮ ಪ್ರಚಾರ ಭಾಷಣಗಳಲ್ಲಿ ಆರೋಪಿಸಿದ್ದರು.

ರಾಜರಾಜೇಶ್ವರಿ ನಗರದಲ್ಲಿ ಒಕ್ಕಲಿಗ ಮತಗಳೇ ನಿರ್ಣಾಯಕ, ಮುನಿರತ್ನಂ ನಾಯ್ಡು ಸಮುದಾಯಕ್ಕೆ ಸೇರಿದವರು ಅಂತ ಜಾತಿ ಪ್ಲೇಟ್ ಸಹ ಕಾಂಗ್ರೆಸ್‌ ನಾಯಕರು ಪ್ಲೇ ಮಾಡಿದರು. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ, ಒಕ್ಕಲಿಗ ಸಮುದಾಯದವರು ಅಂತ ಒತ್ತಿ ಹೇಳಿದ್ದರು.

ಅತ್ತ ಮುನಿರತ್ನ ಕಣ್ಣೀರ ಕೋಡಿ ಹರಿಸಿ ಮತದಾರರನ್ನು ಭಾವನಾತ್ಮಕವಾಗಿ ಬ್ಲ್ಯಾಕ್​ಮೇಲ್ ಮಾಡುತ್ತಿರುವ ಸಂಗತಿ ಗೊತ್ತಾಗುತ್ತಿದ್ದಂತೆ ಕುಸುಮಾ ಸಹ ಸಾರ್ವಜನಿಕವಾಗಿ ಕಣ್ಣೀರು ಸುರಿಸಲಾರಂಭಿಸಿದರು. ಗಂಡನನ್ನು ಕಳೆದುಕೊಂಡ ನನಗೆ ಈ ಕ್ಷೇತ್ರದ ಜನ ಪ್ರೀತಿ ವಿಶ್ವಾಸ ನೀಡಿ ಆದರಿಸುತ್ತಿದ್ದಾರೆ ಅಂತ ಅನುಕಂಪ ಗಿಟ್ಟಿಸಲಾರಂಭಿಸಿದ್ದರು.

ಹಣ, ಹೆಂಡ ವಿಚಾರವಾಗಿ ಬಿಜೆಪಿಕಾಂಗ್ರೆಸ್‌ ಪರಸ್ಪರ ಆರೋಪಗಳನ್ನು ಮಾಡಿದರು. ಅಲ್ಪಸಂಖ್ಯಾತರ ಮತಗಳನ್ನು ಸೆಳೆಯಲು ಭಗೀರಥ ಪ್ರಯತ್ನ ಮಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೊನೆಯದಾಗಿ ಹಿಂದೂತ್ವದ ಪರ ನಮ್ಮದೂ ಒಂದಿರಲಿ ಅಂದುಕೊಂಡು ‘ನಾನು ಹಿಂದೂ, ರಾಮನ ಭಕ್ತ’ ಎಂಬ ಮಂತ್ರ ಜಪಿಸಿದ್ದರು.

ಜೆಡಿ(ಎಸ್) ಪಕ್ಷದ ಅಭ್ಯರ್ಥಿ ಕೃಷ್ಣಮೂರ್ತಿ ಅವರ ಪ್ರಚಾರದ ಹೊಣೆಯನ್ನು ಹೊತ್ತಿದ್ದ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಒಕ್ಕಲಿಗ ಮತ್ತು ಅಲ್ಪಸಂಖ್ಯಾತರ ಮತಗಳ ಮೇಲೆ ಪ್ರಭಾವ ಬೀರಿದ್ದರು.

ಇವರೆಲ್ಲರ ಮಾತು, ಅರೋಪಪ್ರತ್ಯಾರೋಪಗಳನ್ನು ಕೇಳಿಸಿಕೊಂಡಿರುವ ಮತದಾರ ಇಂದು ಅವರ ಹಣೆಬರಹವನ್ನು ಬರೆದಿದ್ದಾನೆ. ವಿಜಯಲಕ್ಷ್ಮಿಯಾರಿಗೆ ಒಲಿಯಲಿದ್ದಾಳೆ ಅನ್ನುವುದು 10ನೇ ತಾರೀಖು ಗೊತ್ತಾಗುತ್ತದೆ.

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ