ಕಾಂಗ್ರೆಸ್ನಲ್ಲಿ ಒಂದು ಕುಟುಂಬಕ್ಕೆ ಒಂದು ಟಿಕೆಟ್ ವಿಚಾರ; ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದೇನು?
ಕಮ್ಯುನಲ್ ಅಜೆಂಡಾ ಹಿಂದೆ ಸರ್ಕಾರ ಇದೆ. ಹಿಜಾಬ್, ಆಜಾನ್ ಇದೆಲ್ಲದರ ಹಿಂದೆ ಸರ್ಕಾರ ಇದೆ. ಹಿಜಾಬ್ ವಿವಾದ ಅರ್ಧ ಗಂಟೆಯಲ್ಲಿ ಪರಿಹರಿಸಬಹುದಿತ್ತು. ಅವರು ಧ್ರುವೀಕರಣಕ್ಕಾಗಿ ಈ ರೀತಿಯಾಗಿ ಮಾಡುತ್ತಿದ್ದಾರೆ.
ಉದಯಪುರ್: 2023ರ ಚುನಾವಣೆಗೆ ಕಾಂಗ್ರೆಸ್ (Congress) ಪಕ್ಷದಿಂದ ನಿಧಾನವಾಗಿ ತಯಾರಿ ನಡೆಯುತ್ತಿದೆ. ಈ ಬಾರಿ ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ನೀಡುವುದಾಗಿ ಕಾಂಗ್ರೆಸ್ ನಾಯಕರು ಚರ್ಚೆ ನಡೆಸುತ್ತಿದ್ದಾರೆ. ಇದರ ಬಗ್ಗೆ ಪಕ್ಷದ ಕೆಲವರಿಗೆ ಅಸಮಧಾನ ಇದೆ. ಈ ಕುರಿತು ಟಿವಿ9 ಜೊತೆ ಮಾತನಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah), ಈ ಬಗ್ಗೆ ಪ್ರಸ್ತಾವನೆ ಇದೆ. ಆದರೆ, ಜಾರಿಗೊಳಿಸಬೇಕೆಂದಿಲ್ಲ. ಮುಂದಿನ ದಿನಗಳಲ್ಲಿ ಇದನ್ನ ಪರಿಗಣಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಮದರಸಾಗಳಲ್ಲಿ ರಾಷ್ಟ್ರಗೀತೆ ಕಡ್ಡಾಯಕ್ಕೆ ಒತ್ತಾಯಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ಕಮ್ಯುನಲ್ ಅಜೆಂಡಾ ಹಿಂದೆ ಸರ್ಕಾರ ಇದೆ. ಹಿಜಾಬ್, ಆಜಾನ್ ಇದೆಲ್ಲದರ ಹಿಂದೆ ಸರ್ಕಾರ ಇದೆ. ಹಿಜಾಬ್ ವಿವಾದ ಅರ್ಧ ಗಂಟೆಯಲ್ಲಿ ಪರಿಹರಿಸಬಹುದಿತ್ತು. ಅವರು ಧ್ರುವೀಕರಣಕ್ಕಾಗಿ ಈ ರೀತಿಯಾಗಿ ಮಾಡುತ್ತಿದ್ದಾರೆ. ಇದು ಅತ್ಯಂತ ಭ್ರಷ್ಟ ಸರ್ಕಾರ ಎಂದು ಕಿಡಿಕಾರಿದ್ದಾರೆ.
ಅವರಿಗೆ ಹೇಳಲು ಸಾಧನೆಗಳಿಲ್ಲ. ಹೀಗಾಗಿ ಧಾರ್ಮಿಕ, ಭಾವನಾತ್ಮಕ ವಿಷಯ ತರುತ್ತಿದ್ದಾರೆ. ನಾವು ಮತ್ತೆ ಜನ ಜಾಗರಣಾ ಹೋರಾಟ ಮಾಡುತ್ತೇವೆ. ಜೂ.15ರಿಂದ ಮತ್ತಷ್ಟು ತೀವ್ರವಾಗಿ ಹೋರಾಟ ಮಾಡುತ್ತೇವೆ. ಅಗಸ್ಟ್ 2 ರಿಂದ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಯಾತ್ರೆ ಮಾಡುತ್ತೇವೆ. ಈ ಬಿಜೆಪಿ ಸರ್ಕಾರದ ವೈಫಲ್ಯವನ್ನ ಜನರಿಗೆ ತಿಳಿಸುತ್ತೇವೆ ಎಂದು ತಿಳಿಸಿದರು.
70 ವರ್ಷ ಮೇಲ್ಪಟ್ಟವರಿಗೆ ಟಿಕೆಟ್ ಬೇಡ ಎಂಬ ವಿಚಾರದ ಬಗ್ಗೆ ಮಾತನಾಡಿರುವ ಸಿದ್ದು, ವ್ಯಕ್ತಿ ಆರೋಗ್ಯವಂತರಾಗಿದ್ದರೆ, ಫಿಸಿಕಲಿ ಫಿಟ್ ಆಗಿದ್ದರೆ ರಾಜಕೀಯ ಮಾಡಲು ಯಾವುದೇ ತೊಂದರೆ ಇಲ್ಲ. ಆರೋಗ್ಯ ಸರಿ ಇಲ್ಲದೆ ಇದ್ದರೆ ಅವರೇ ಹೊಗುತ್ತಾರೆ. ಯಾರನ್ನೂ ಬಲವಂತವಾಗಿ ನಿವೃತ್ತಿ ಹೊಂದಿ ಅನ್ನೋದು ಸರಿ ಅಲ್ಲ. ರಾಜಕಾರಣದಲ್ಲಿ ಯುವಕರು ಹಾಗೂ ಹಿರಿಯರು ಅನುಭವಿಗಳು ಇರಬೇಕು ಎಂದು ಅಭಿಪ್ರಾಯಪಟ್ಟರು. ನಾಯಕರ ಮಕ್ಕಳೇ ನಾಯಕರಾಗುತ್ತಾರೆ ಎಂಬ ವಿಚಾರದ ಬಗ್ಗೆ ಹೇಳಿಕೆ ನೀಡಿದ ಅವರು, ಜನ ಎಲ್ಲಿವರೆಗೆ ಸ್ವೀಕರಿಸುತ್ತಾರೆ, ಅಲ್ಲಿವರೆಗೆ ಕುಟುಂಬ ರಾಜಕಾರಣ ಅಂತಾ ಹೇಳೋಕೆ ಆಗಲ್ಲ ಎಂದರು.
ಹೆಚ್ಚಿನ ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:58 am, Mon, 16 May 22