AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದ ದೀರ್ಘಾವಧಿ ಸಿಎಂ ಆಗಲಿದ್ದಾರೆ ಸಿದ್ದರಾಮಯ್ಯ: ದೇವರಾಜ ಅರಸು​​ ದಾಖಲೆ ನಾಳೆ ಬ್ರೇಕ್​​

ಕರ್ನಾಟಕದ ಇತಿಹಾಸದಲ್ಲೇ ಅತೀ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ದಾಖಲೆ ಬರೆಯಲಿದ್ದಾರೆ. ಈ ವರೆಗೆ ಸುದೀರ್ಘ ಸಿಎಂ ಹೆಗ್ಗಳಿಗೆ ಭಾಜನರಾಗಿದ್ದ ದೇವರಾಜ ಅರಸು ಅವರ ರೆಕಾರ್ಡ್ ನಾಳೆ ​​ಬ್ರೇಕ್​​ ಆಗಲಿದೆ. ಬಜೆಟ್ ಮಂಡನೆಯಲ್ಲೂ ಸಿದ್ದರಾಮಯ್ಯ ಈಗಾಲೇ ಎಲ್ಲರಿಗಿಂತ ಮುಂದಿದ್ದು, ಅವರ ಅಭಿಮಾನಿಗಳು ಈ ಐತಿಹಾಸಿಕ ಕ್ಷಣವನ್ನು ಸಂಭ್ರಮಿಸುತ್ತಿದ್ದಾರೆ.

ರಾಜ್ಯದ ದೀರ್ಘಾವಧಿ ಸಿಎಂ ಆಗಲಿದ್ದಾರೆ ಸಿದ್ದರಾಮಯ್ಯ: ದೇವರಾಜ ಅರಸು​​ ದಾಖಲೆ ನಾಳೆ ಬ್ರೇಕ್​​
ಸಿದ್ದರಾಮಯ್ಯ
ಪ್ರಸನ್ನ ಹೆಗಡೆ
|

Updated on:Jan 05, 2026 | 11:55 AM

Share

ಬೆಂಗಳೂರು, ಜನವರಿ 05: ರಾಜ್ಯದ ದೀರ್ಘಾವಧಿ ಸಿಎಂ ಎಂಬ ಹೆಗ್ಗಳಿಕೆಗೆ ಸಿದ್ದರಾಮಯ್ಯ ಅವರು ಪಾತ್ರರಾಗಲು ಕೇವಲ ಒಂದೇ ದಿನ ಬಾಕಿ ಇದ್ದು, ದೇವರಾಜ ಅರಸು ದಾಖಲೆಯನ್ನು ನಾಳೆ ಮುರಿಯಲಿದ್ದಾರೆ. 7 ವರ್ಷ 239 ದಿನಗಳ ಕಾಲ ಡಿ. ದೇವರಾಜ ಅರಸು ಕರ್ನಾಟಕದ ಸಿಎಂ‌ ಆಗಿದ್ದ‌ರು. ಸಿದ್ದರಾಮಯ್ಯ ಕೂಡ ಇಂದಿಗೆ 7 ವರ್ಷ 239 ದಿನ ಪೂರೈಸಿದ್ದಾರೆ. ಮೂರನೇ ಸ್ಥಾನದಲ್ಲಿ ಎಸ್​. ನಿಜಲಿಂಗಪ್ಪ ಅವರಿದ್ದು, 7 ವರ್ಷ 175 ದಿನಗಳ ಕಾಲ ಅವರು ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಬಳಿಕ 4ನೇ ಸ್ಥಾನದಲ್ಲಿ ರಾಮಕೃಷ್ಣ ಹೆಗಡೆ 5 ವರ್ಷ 216 ದಿನ ಮತ್ತು 5 ವರ್ಷ 82 ದಿ‌ನ ಸಿಎಂ ಆಗಿದ್ದ ಬಿ.ಎಸ್​. ಯಡಿಯೂರಪ್ಪ 5ನೇ ಸ್ಥಾನದಲ್ಲಿದ್ದಾರೆ.

ದೇವರಾಜ ಅರಸು ಅವರು ಸತತವಾಗಿ ಏಳೂವರೆ ವರ್ಷ ಅಧಿಕಾರದಲ್ಲಿದ್ದರೆ ಸಿದ್ದರಾಮಯ್ಯ ಮೊದಲ ಅವಧಿ ಪೂರ್ಣಗೊಂಡ ಬಳಿಕ ಮತ್ತೆ ಕಾಂಗ್ರೆಸ್​​ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರಲಿಲ್ಲ. 2018ರ ವಿಧಾನ ಸಭೆ ಚುನಾವಣೆ ಫಲಿತಾಂಶ ಅತಂತ್ರವಾಗಿದ್ದ ಕಾರಣಕ್ಕೆ ಜೆಡಿಎಸ್​​ ಜೊತೆ ಸೇರಿ ಕಾಂಗ್ರೆಸ್​​ ಮೈತ್ರಿ ಸರ್ಕಾರ ರಚಿಸಿತ್ತು. ಆದರೆ ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರ 14 ತಿಂಗಳಿಗೇ ಪತನವಾಗಿತ್ತು. ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿಯಿಂದ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಕ್ರಮವಾಗಿ ಮುಖ್ಯಮಂತ್ರಿಗಳಾಗಿದ್ದರು. ಅದಾದ ಬಳಿಕ 2023ರ ಚುನಾವಣೆಯಲ್ಲಿ ಕಾಂಗ್ರೆಸ್​​ ಸ್ಪಷ್ಟ ಬಹುಮತ ಪಡೆದ ಕಾರಣ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.

ಇದನ್ನೂ ಓದಿ: ಸಭೆಯನ್ನ ನಗೆ ಗಡಲಲ್ಲಿ ತೇಲಿಸಿದ ಸಿಎಂ ಕುರ್ಚಿ ಮಾತು, ಜೋರಾಗಿ ನಕ್ಕ ಡಿಕೆಶಿ

ಬಜೆಟ್​​ ಮಂಡನೆಯಲ್ಲೂ ದಾಖಲೆ

ಲೋಕದಳ, ಜನತಾ ದಳ ಪಕ್ಷಗಳಲ್ಲಿಯೂ ಈ ಹಿಂದೆ ಇದ್ದ ಸಿದ್ದರಾಮಯ್ಯ 2006ರಲ್ಲಿ ಕಾಂಗ್ರೆಸ್​​ ಸೇರಿ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ವಿಪಕ್ಷ ನಾಯಕನಿಂದ ಹಿಡಿದು ಮುಖ್ಯಮಂತ್ರಿ ಕುರ್ಚಿಯನ್ನೂ ಇದೀಗ ಎರಡನೇ ಬಾರಿ ಏರಿ ಸರ್ಕಾರ ನಡೆಸುತ್ತಿದ್ದಾರೆ. ರಾಜ್ಯ ಬಜೆಟ್ ಮಂಡನೆಯಲ್ಲೂ ಸಿಎಂ ಸಿದ್ದರಾಮಯ್ಯ ದಾಖಲೆ ಬರೆದಿದ್ದು, ಇದುವರೆಗೂ 16 ಬಜೆಟ್ ಮಂಡಿಸಿದ್ದಾರೆ. ಒಟ್ಟು 13 ಬಜೆಟ್​​ ಮಂಡಿಸಿರುವ ರಾಮಕೃಷ್ಣ ಹೆಗಡೆ ಎರಡನೇ ಸ್ಥಾನದಲ್ಲಿದ್ದಾರೆ.

ಶುಭಾಶಯ ಕೋರಿ ಬ್ಯಾನರ್​

ಸಿಎಂ ಸಿದ್ದರಾಮಯ್ಯನವರು ವಿಶಿಷ್ಠ ದಾಖಲೆ ಬರೆಯುತ್ತಿರುವ ಹಿನ್ನೆಲೆ ಅವರ ಅಭಿಮಾನಿಗಳು ಮತ್ತು ಬೆಂಬಲಿಗರಿಂದ ಸಂಭ್ರಮಾಚರಣೆಗೆ ಅದಾಗಲೇ ತಯಾರಿ ನಡೆದಿದೆ. ದೀರ್ಘವಧಿ ಸಿಎಂ ಆಗಿ ದಾಖಲೆ ಬರೆದ ಸಿದ್ದರಾಮಯ್ಯ ಎಂದು ಶುಭಾಶಯ ಕೋರಿರುವ ಪೋಸ್ಟರ್​​ನ ಅಭಿಮಾನಿಗಳು ಮುಖ್ಯಮಂತ್ರಿಗಳ ನಿವಾಸದ ಬಳಿ ಹಾಕಿದ್ದಾರೆ. ಕಾವೇರಿ ನಿವಾಸದ ಎದುರಿಗಿನ ಸರ್ಕಲ್ ಬಳಿ ಬ್ಯಾನರ್​​ ರಾರಾಜಿಸುತ್ತಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 11:54 am, Mon, 5 January 26

Follow Us
ಇರಾನ್ ರಾಯಭಾರಿ ಬಳಿ ವಿವರಣೆ ಕೇಳಿದ ಭಾರತ
ಇರಾನ್ ರಾಯಭಾರಿ ಬಳಿ ವಿವರಣೆ ಕೇಳಿದ ಭಾರತ
ಸಿಲಿಂಡರ್ ಸ್ಫೋಟಕ್ಕೆ ಮನೆ ಧಗಧಗ, 3 ಲಕ್ಷ ನಗದು ಸೇರಿ ಚಿನ್ನಾಭರಣ ಭಸ್ಮ!
ಸಿಲಿಂಡರ್ ಸ್ಫೋಟಕ್ಕೆ ಮನೆ ಧಗಧಗ, 3 ಲಕ್ಷ ನಗದು ಸೇರಿ ಚಿನ್ನಾಭರಣ ಭಸ್ಮ!
ಒಂದೇ ಫ್ರೇಮ್‌ನಲ್ಲಿ ಹೆಂಡತಿ, ನಾಯಿ-ಬೆಕ್ಕು, ಪೊಲೀಸ್-ಕಳ್ಳ
ಒಂದೇ ಫ್ರೇಮ್‌ನಲ್ಲಿ ಹೆಂಡತಿ, ನಾಯಿ-ಬೆಕ್ಕು, ಪೊಲೀಸ್-ಕಳ್ಳ
ಲಕ್ಷ ಲಕ್ಷ ಖರ್ಚು ಮಾಡಿ ಬೆಳೆದ ಗುಲಾಬಿ ಈರುಳ್ಳಿಯನ್ನು ಕೇಳೋರೆ ಇಲ್ಲ!
ಲಕ್ಷ ಲಕ್ಷ ಖರ್ಚು ಮಾಡಿ ಬೆಳೆದ ಗುಲಾಬಿ ಈರುಳ್ಳಿಯನ್ನು ಕೇಳೋರೆ ಇಲ್ಲ!
CSK ಫ್ಯಾನ್ಸ್​ನ ಸೈಲೆಂಟ್ ಮಾಡಿದ್ದೇವೆ... ಕಾವ್ಯ ಮಾರನ್ ವಿಡಿಯೋ ವೈರಲ್
CSK ಫ್ಯಾನ್ಸ್​ನ ಸೈಲೆಂಟ್ ಮಾಡಿದ್ದೇವೆ... ಕಾವ್ಯ ಮಾರನ್ ವಿಡಿಯೋ ವೈರಲ್
ಬೆಳ್ಳಂ ಬೆಳಿಗ್ಗೆ ರೌಡಿಶೀಟರ್‌ಗಳ ಬೆವರಿಳಿಸಿದ ಕೆಜಿಎಫ್​​ ಪೊಲೀಸರು
ಬೆಳ್ಳಂ ಬೆಳಿಗ್ಗೆ ರೌಡಿಶೀಟರ್‌ಗಳ ಬೆವರಿಳಿಸಿದ ಕೆಜಿಎಫ್​​ ಪೊಲೀಸರು
ಬಲಮುರಿ-ಎಡಮುರಿಗೆ ಪ್ರವಾಸಿಗರಿಗೆ ನಿರ್ಬಂಧ: ಕಾರಣ ಇಲ್ಲಿದೆ
ಬಲಮುರಿ-ಎಡಮುರಿಗೆ ಪ್ರವಾಸಿಗರಿಗೆ ನಿರ್ಬಂಧ: ಕಾರಣ ಇಲ್ಲಿದೆ
ಮೆಮೊರಿ ಸುಧಾರಿಸಿಕೊಳ್ಳಿ ಎಂದು ಅಧಿಕಾರಿ ಟೇಬಲ್ ಮೇಲೆ ಬಾದಾಮಿ ಎಸೆದ ವ್ಯಕ್ತಿ
ಮೆಮೊರಿ ಸುಧಾರಿಸಿಕೊಳ್ಳಿ ಎಂದು ಅಧಿಕಾರಿ ಟೇಬಲ್ ಮೇಲೆ ಬಾದಾಮಿ ಎಸೆದ ವ್ಯಕ್ತಿ
ವಿದ್ಯಾರ್ಥಿನಿಯರ ಬಳಿ ಅಂಗಡಿ ನೋಡಿಕೊಳ್ಳಿ ಎಂದು ಹೇಳಿ ಹೋದ ಮಾಲೀಕ
ವಿದ್ಯಾರ್ಥಿನಿಯರ ಬಳಿ ಅಂಗಡಿ ನೋಡಿಕೊಳ್ಳಿ ಎಂದು ಹೇಳಿ ಹೋದ ಮಾಲೀಕ
ಅಗ್ನಿಗೆ ಆಹುತಿಯಾದ ಬಿಎಂಟಿಸಿ ಬಸ್​​: ಕ್ಷಣ ಮಾತ್ರದಲ್ಲಿ ತಪ್ಪಿದ ದುರಂತ
ಅಗ್ನಿಗೆ ಆಹುತಿಯಾದ ಬಿಎಂಟಿಸಿ ಬಸ್​​: ಕ್ಷಣ ಮಾತ್ರದಲ್ಲಿ ತಪ್ಪಿದ ದುರಂತ