ಮೈಸೂರಿನ ಸಭೆಯಲ್ಲಿ ಮುಖಂಡರಿಗೆ, ಶಾಸಕರಿಗೆ ಮಹತ್ವದ ಟಾಸ್ಕ್ ಕೊಟ್ಟ ಸಿಎಂ, ಇಲ್ಲಿದೆ ಇನ್ಸೈಡ್ ಮಾಹಿತಿ
ಈ ಬಾರಿ ಕರ್ನಾಟಕದಲ್ಲಿ ಕನಿಷ್ಠ 20 ಕ್ಷೇತ್ರಗಳಲ್ಲಿ ಗೆಲ್ಲಬೇಕೆಂದು ಕಾಂಗ್ರೆಸ್ ಗುರಿಹೊಂದಿದ್ದು, ಚುನಾವಣಾ ರಣತಂತ್ರಗಳನ್ನು ಹೆಣೆಯುತ್ತಿದೆ. ಅದರಲ್ಲೂ ಮುಖ್ಯವಾಗಿ ಈ ಸಲ ಮೈಸೂರು, ಚಾಮರಾಜನಗರ ಕ್ಷೇತ್ರವನ್ನು ಖುದ್ದು ಸಿಎಂ ಸಿದ್ದರಾಮಯ್ಯನವರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಈ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ರಣತಂತ್ರಗಳನ್ನು ರೂಪಿಸಿದ್ದಾರೆ. ಅಲ್ಲದೇ ಶಾಸರು, ಮುಖಂಡರುಗಳಿಗೆ ಕೆಲ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಹಾಗಾದ್ರೆ, ಇಂದಿನ ಸಭೆಯಲ್ಲಿ ಏನೆಲ್ಲಾ ಚರ್ಚೆ ಆಯ್ತು ಎನ್ನುವ ಇನ್ಸೈಡ್ ಡಿಟೇಲ್ಸ್ ಇಲ್ಲಿದೆ.
ಮೈಸೂರು, (ಮಾರ್ಚ್ 24): ತವರು ಜಿಲ್ಲೆ ಮೈಸೂರನ್ನು (Mysuru- Kodagu) ಗೆಲ್ಲಬೇಕು, ಚಾಮರಾಜನಗರ (Chamarajangara) ಮರಳಿ ಪಡೆಯಲು ಸಿಎಂ ಸಿದ್ದರಾಮಯ್ಯ (CM Siddaramaiah) ನೇರವಾಗಿ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಇಂದು(ಮಾರ್ಚ್ 24) ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿರುವ ಸಿದ್ದರಾಮಯ್ಯ ಅವರು ಲೋಕಸಭಾ ಚುನಾವಣೆ ಸಂಬಂಧ ಕಾಂಗ್ರೆಸ್ ನಾಯಕರೊಂದಿಗೆ ಮಹತ್ವದ ಸಭೆ ನಡೆಸಿದರು. ಈ ಸಭೆಯಲ್ಲಿ ಮೈಸೂರು ಮತ್ತು ಚಾಮರಾಜನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿಗೆ ಬೇಕಾದ ಮಾನದಂಡಗಳ ಬಗ್ಗೆ ಚರ್ಚಿಸಿದರು. ಅದರಲ್ಲೂ ಮುಖ್ಯವಾಗಿ ಯದುವೀರ್ ಟಾರ್ಗೆಟ್ ಬೇಡ. ಬಿಜೆಪಿ ಅಷ್ಟೆ ನಮ್ಮ ಟಾರ್ಗೆಟ್. ಯದುವೀರ್ ಮಹರಾಜ ಅನ್ನುವುದಕ್ಕಿಂತ ಬಿಜೆಪಿ ಅಭ್ಯರ್ಥಿ ಅನ್ನುವುದಷ್ಟೆ ಇರಲಿ. ಭಾಷಣ ಮಾಡವಾಗ ಎಚ್ಚರ ಇರಲಿ. ಯದುವೀರ್ ವಿರುದ್ಧ ಸಿಕ್ಕ ಸಿಕ್ಕಾಗೆ ಹೇಳಿಕೆ ಕೊಡಬೇಡಿ ಎಂದು ಮುಖಂಡರಿಗೆ ಕಿವಿ ಮಾತು ಹೇಳಿದ್ದಾರೆ.
ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಸಭೆಯಲ್ಲಿ ಸಿದ್ದರಾಮಯ್ಯ ಅವರು ಮುಖಂಡರು, ಶಾಸಕರು, ಸಚಿವರಿಗೆ ಕೆಲ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಯದುವೀರ್ ಟಾರ್ಗೆಟ್ ಬೇಡ. ಬಿಜೆಪಿ ಅಷ್ಟೆ ನಮ್ಮ ಟಾರ್ಗೆಟ್. ಯದುವೀರ್ ಮಹರಾಜ ಅನ್ನುವುದಕ್ಕಿಂತ ಬಿಜೆಪಿ ಅಭ್ಯರ್ಥಿ ಅನ್ನುವುದಷ್ಟೆ ಇರಲಿ. ಭಾಷಣ ಮಾಡವಾಗ ಎಚ್ಚರ ಇರಲಿ. ಯದುವೀರ್ ವಿರುದ್ಧ ಸಿಕ್ಕ ಸಿಕ್ಕಾಗೆ ಹೇಳಿಕೆ ಕೊಡಬೇಡಿ. ಎಮೋಷನಲ್ ವಿಚಾರವನ್ನ ತಿರುಗಿಸುವಲ್ಲಿ ಬಿಜೆಪಿಯವರು ನಿಸ್ಸೀಮರು. ಹೀಗಾಗಿ ಬಿಜೆಪಿಯವರಿಗೆ ನಿಮ್ಮ ಹೇಳಿಕೆ ಆಹಾರವಾಗಬಾರದು. ಈ ಕಾರಣದಿಂದ ಯದುವೀರ್ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ ಎಂದು ಸಭೆಯಲ್ಲಿ ಮುಖಂಡರು ಹಾಗೂ ಶಾಸಕರುಗಳಿಗೆ ಸಿಎಂ ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: ಕೋಲಾರಕ್ಕಾಗಿ ಕಾಂಗ್ರೆಸ್ನಲ್ಲಿ ಬಿಗ್ ಫೈಟ್: ಟಿಕೆಟ್ ನಮಗೆ ಬೇಕೆಂದ ಮುಸ್ಲಿಂ ಸಮುದಾಯ
ಪ್ರತಿ ಕ್ಷೇತ್ರ ಮಾಹಿತಿ ಕೇಳಿದ ಸಿಎಂ
ಇನ್ನು ಇದೇ ಸಭೆಯಲ್ಲಿ 2014-2019ರ ಲೋಕಸಭ ಚುನಾವಣೆಯ ಜಿಲ್ಲೆಯ ಪ್ರತಿ ಕ್ಷೇತ್ರದ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಹಿತಿ ಪಡೆದುಕೊಂಡರು. ಯಾವ ಕ್ಷೇತ್ರದ ಬಿಜೆಪಿ ಲೀಡ್ ಆಗಿತ್ತು. ಕಾಂಗ್ರೆಸ್ ಲೀಡ್ ಏನು ಎಂದು ಸ್ಥಳೀಯ ಮುಖಂಡರಿಂದ ಮಾಹಿತಿ ಪಡೆದುಕೊಂಡರು. ಮಡಿಕೇರಿ,ವಿರಾಜಪೇಟೆ, ಪಿರಿಯಾಪಟ್ಟಣ, ಚಾಮುಂಡೇಶ್ವರಿ,ಕೃಷ್ಣರಾಜ, ಚಾಮರಾಜ ಇಷ್ಟು ಕ್ಷೇತ್ರದಲ್ಲಿ ಬಿಜೆಪಿಗೆ ಲೀಡ್ ಬಂದಿದೆ. ಹುಣಸೂರು ನರಸಿಂಹರಾಜದಲ್ಲಿ ಮಾತ್ರ ಕಾಂಗ್ರೆಸ್ ಗೆ ಲೀಡ್ ಬಂದಿದೆ. ಕೊಡಗಿನಲ್ಲಿ ಈಗ ಎರಡು ಕ್ಷೇತ್ರದಲ್ಲಿ ನಮ್ಮ ಶಾಸಕರೆ ಇದ್ದಾರೆ. ನನಗೆ ಎರಡು ಕ್ಷೇತ್ರ ಸೇರಿ ನನಗೆ ಒಂದು ಲಕ್ಷ ಲೀಡ್ ಬೇಕು. ಪಿರಿಯಾಪಟ್ಟಣದಲ್ಲಿ ಸಚಿವರೆ ಇದ್ದಾರೆ. ನಮಗೆ ಅಲ್ಲಿ 50 ಸಾವಿರ ಲೀಡ್ ಬೇಕು. ಹುಣಸೂರು ಮತ್ತು ಚಾಮುಂಡೇಶ್ವರಿ ಎರಡು ಕ್ಷೇತ್ರ ಸೇರಿ 60 ಸಾವಿರ ಲೀಡ್ ಆಗಬೇಕು. ಚಾಮರಾಜ ಮತ್ತು ಎನ್.ಆರ್. ಕ್ಷೇತ್ರ ಸೇರಿ ಒಂದು ಲಕ್ಷ ಲೀಡ್ ಕೊಡಿ. ಇನ್ನು ಕೃಷ್ಣರಾಜ ಕ್ಷೇತ್ರದ ಪರಿಸ್ಥಿತಿ ಕಷ್ಟ ಇದೆ. ಅಲ್ಲೂ ಸಹ ಪ್ರಯತ್ನ ಮಾಡಬೇಕು. ನಮ್ಮ ಶಾಸಕರಿರುವ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಲೀಡ್ ಬರಲೇಬೇಕು ಎಂದು ಶಾಸಕರುಗಳಿಗೆ ಟಾಸ್ಕ್ ನೀಡಿದರು.
ಮೈಸೂರು ಹಾಗೂ ಚಾಮರಾಜನಗರ ಕ್ಷೇತ್ರ ನನ್ನ ಪ್ರತಿಷ್ಠೆ
ಮೈಸೂರು ಹಾಗೂ ಚಾಮರಾಜನಗರ ಕ್ಷೇತ್ರ ನನ್ನ ಪ್ರತಿಷ್ಠೆಯಾಗಿದೆ. ಚಿಕ್ಕಪುಟ್ಟ ಅಸಮಾಧಾನ ಇದ್ದರೆ ಹೊಟ್ಟೆಗೆ ಹಾಕಿಕೊಳ್ಳಬೇಕು. ನಮಗೆ ಗೆಲುವು ಮಾತ್ರ ಮಾನದಂಡ, ಗೆಲುವಿಗೆ ಬಹಳ ಅವಕಾಶವಿದೆ. ಚಾಮರಾಜನಗರ, ಮೈಸೂರು ಎರಡೂ ಕ್ಷೇತ್ರಗಳಲ್ಲೂ ನಾವು ಗೆಲ್ಲುತ್ತೇವೆ. ಎಲ್ಲಾ ಕಡೆಯೂ ನಾನು ಬರಲು ಆಗುವುದಿಲ್ಲ. ನೀವೇ ನನ್ನ ಪ್ರತಿನಿಧಿಯಾಗಿ 2 ಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಮೈಸೂರು ಕ್ಷೇತ್ರದಲ್ಲಿ ಎರಡು ಬಾರಿ ಸೋತಿರುವುದನ್ನು ನೆನಪಿಟ್ಟುಕೊಳ್ಳಿ. ಇಷ್ಟು ಶಾಸಕರು ಇದ್ದರೂ ನಾವು ಗೆಲ್ಲದಿದ್ದರೆ, ಅದಕ್ಕೆ ಬೆಲೆ ಇರುತ್ತಾ? ಎಲ್ಲರೂ ಕೂಡ ಒಗ್ಗಟ್ಟಾಗಿ ಇರಿ. ಆಗ ನಾವು ಯಾಕೆ ಗೆಲ್ಲುವುದಿಲ್ಲ ಹೇಳಿ ಎಂದು ಸಭೆಯಲ್ಲಿ ಕಾಂಗ್ರೆಸ್ ಶಾಸಕರು, ಮುಖಂಡರಿಗೆ ಸಿಎಂ ಖಡಕ್ ಸೂಚನೆ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:05 pm, Sun, 24 March 24