ಕೋಲಾರಕ್ಕಾಗಿ ಕಾಂಗ್ರೆಸ್ನಲ್ಲಿ ಬಿಗ್ ಫೈಟ್: ಟಿಕೆಟ್ ನಮಗೆ ಬೇಕೆಂದ ಮುಸ್ಲಿಂ ಸಮುದಾಯ
ಸಚಿವ ಕೆಎಚ್ ಮುನಿಯಪ್ಪ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣಗಳ ಮಧ್ಯೆ ಕೋಲಾರ ಟಿಕೆಟ್ಗಾಗಿ ಹಗ್ಗಜಗ್ಗಾಟ ನಡೆದಿದ್ದು, ಹೈಕಮಾಂಡ್ಗೆ ದಿಕ್ಕುತೋಚದಂತಾಗಿದೆ. ಪರಿಶಿಷ್ಟ ಜಾತಿಯಲ್ಲಿ ಎಡಗೈ ಅಥವಾ ಬಲಗೈ ಸಮುದಾಯಕ್ಕೆ ನೀಡಬೇಕುವ ಎನ್ನುವ ಚರ್ಚೆಗಳು ನಡೆದಿವೆ. ಇದರ ಮಧ್ಯೆ ಈ ಬಾರಿ ಕೋಲಾರ ಟಿಕೆಟ್ ಮುಸ್ಲಿಂ ಸಮುದಾಯಕ್ಕೆ ನೀಡಬೇಕೆಂಬ ಬೇಡಿಕೆ ಕೇಳಿಬಂದಿದೆ.
ಕೋಲಾರ, ಮಾರ್ಚ್ 24: ಲೋಕಸಭೆ ಚುನಾವಣೆಗೆ (Lok Sabha Elections) ಕರ್ನಾಟಕದ ಕಾಂಗ್ರೆಸ್ ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆಯಾಗಿದ್ದು, ಇನ್ನು ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದು ಬಾಕಿ ಇದೆ. ಕಳೆದ ರಾತ್ರಿ ಬಿಡುಗಡೆಯಾದ ಕಾಂಗ್ರೆಸ್ನ 4ನೇ ಪಟ್ಟಿಯಲ್ಲೂ, ರಾಜ್ಯದ ಆ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಪ್ರಕಟಿಸಿಲಿಲ್ಲ. ಅದರಲ್ಲೂ ಕೋಲಾರ ಟಿಕೆಟ್ ಆಯ್ಕೆ ಕಾಂಗ್ರೆಸ್ ಹೈಕಮಾಂಡ್ಗೆ ಕಗ್ಗಂಟಾಗಿದೆ. ಸಚಿವ ಕೆಎಚ್ ಮುನಿಯಪ್ಪ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣಗಳ ಮಧ್ಯೆ ಕೋಲಾರ ಟಿಕೆಟ್ಗಾಗಿ ಹಗ್ಗಜಗ್ಗಾಟ ನಡೆದಿದ್ದು, ಹೈಕಮಾಂಡ್ಗೆ ದಿಕ್ಕುತೋಚದಂತಾಗಿದೆ. ಪರಿಶಿಷ್ಟ ಜಾತಿಯಲ್ಲಿ ಎಡಗೈ ಅಥವಾ ಬಲಗೈ ಸಮುದಾಯಕ್ಕೆ ನೀಡಬೇಕುವ ಎನ್ನುವ ಚರ್ಚೆಗಳು ನಡೆದಿವೆ. ಇದರ ಮಧ್ಯೆ ಈ ಬಾರಿ ಕೋಲಾರ ಟಿಕೆಟ್ ಮುಸ್ಲಿಂ ಸಮುದಾಯಕ್ಕೆ ನೀಡಬೇಕೆಂಬ ಬೇಡಿಕೆ ಕೇಳಿಬಂದಿದೆ.
ಕೋಲಾರ ಕ್ಷೇತ್ರಕ್ಕೆ ಪ್ರಬಲ ಆಕಾಂಕ್ಷೆಯಲ್ಲಿ ನಾನು ಒಬ್ಬ: ಎಲ್. ಹನುಮಂತಯ್ಯ
ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್ ವಿಚಾರವಾಗಿ ಬೆಂಗಳೂರಲ್ಲಿ ಎಲ್. ಹನುಮಂತಯ್ಯ ಪ್ರತಿಕ್ರಿಯಿಸಿದ್ದು, ರಮೇಶ್ ಕುಮಾರ್, ಖರ್ಗೆ ಜೊತೆ ನಡೆಸಿದ ಸಭೆಗೆ ನಾ ಹೋಗಿರಲಿಲ್ಲ. ಕೋಲಾರ ಕ್ಷೇತ್ರಕ್ಕೆ ಪ್ರಬಲ ಆಕಾಂಕ್ಷೆಯಲ್ಲಿ ನಾನು ಒಬ್ಬ. ಬಹುತೇಕ ಶಾಸಕರು ನನಗೆ ಬೆಂಬಲಿಸಿದ್ದಾರೆ. ಈಗಲೂ ನನಗೆ ಬೆಂಬಲಿಸುತ್ತಿದ್ದಾರೆ. ಬಲಗೈ ಸಮುದಾಯಕ್ಕೆ ಕೊಡಿ ಎಂಬ ಕೂಗು ಕೇಳಿ ಬರುತ್ತಿದೆ. ಆದರೆ ಕೋಲಾರಕ್ಕೆ ಸಾಂಪ್ರದಾಯಿಕವಾಗಿ ಎಡಗೈ ಸಮುದಾಯದವರಿಗೆ ಕೊಟ್ಟುಕೊಂಡು ಬಂದಿದ್ದಾರೆ ಅದನ್ನ ಮುಂದುವರೆಸಿ ಎಂದಿದ್ದೇನೆ ಎಂದರು.
ಇದನ್ನೂ ಓದಿ: ಮೋದಿ ಹೇಳಿದ ಪರಿವಾರವಾದ ರಾಜ್ಯದಲ್ಲಿ ಮುಕ್ತವಾಗಬೇಕು: ಬಿಎಸ್ವೈಗೆ ಸದಾನಂದಗೌಡ ಟಾಂಗ್
ಈಗಾಗಲೇ ರಾಜ್ಯದ ಐದು ಕ್ಷೇತ್ರದಲ್ಲಿ 3 ಕ್ಷೇತ್ರ ಬಲಗೈಗೆ ಕೊಟ್ಟಿದ್ದಾರೆ. ಚಿತ್ರದುರ್ಗ ಮತ್ತು ಕೋಲಾರದಲ್ಲಿ ಎಡಗೈ ಕೊಡಬೇಕು ಇಲ್ಲದಿದ್ದರೆ ಸಾಮಾಜಿಕ ಅನ್ಯಾಯವಾದಂಗೆ ಆಗುತ್ತೆ. ಮುನಿಯಪ್ಪನವರು ಅವರ ಕುಟುಂಬಕ್ಕೆ ಕೇಳುತ್ತಿದ್ದಾರೆ. ಶಾಸಕರುಗಳು ಕುಟುಂಬ ಬಿಟ್ಟು ಬೇರೆಯವರಿಗೆ ಕೊಡಿ ಎಂದಿದ್ದಾರೆ ಎಂದು ಹೇಳಿದ್ದಾರೆ.
ಪ್ರಚಾರ ಸಮತಿ ನೇಮಕ ವಿಚಾರವಾಗಿ ಮಾತನಾಡಿದ್ದು, ಅದು 6 ತಿಂಗಳ ಹಿಂದಯೇ ಪ್ರಸ್ತವಾನೇ ಹೋಗಿತ್ತು. ಸಹ ಅಧ್ಯಕ್ಷ ನೇಮಕಕ್ಕೂ ನಾನು ಕೋಲಾರ ಟಿಕೆಟ್ ಆಕಾಂಕ್ಷೆಯಾಗಿರೋದಕ್ಕೂ ಸಂಬಂಧವಿಲ್ಲ. ಇದನ್ನ ಹೈಕಮಾಂಡ್ ಮತ್ತು ರಾಜ್ಯ ನಾಯಕರು ಸ್ಪಷ್ಟನೆ ಕೊಟ್ಟಿದ್ದಾರೆ. ಟಿಕೆಟ್ ಗೊಂದಲ ಬಗೆಹರಿದ ಬಳಿಕ ಹೈಕಮಾಂಡ್ ಹೇಳಿದ್ರೆ ಬೇರೆಯವರಿಗೂ ಬಿಟ್ಟುಕೊಡಬಹುದು ಅಥವಾ ಪ್ರಚಾರಕ್ಕೂ ಹೋಗಬಹುದು ಎಂದರು.
ಕಾಂಗ್ರೆಸ್ನಿಂದ ಬಲಗೈ ಸಮುದಾಯದ ಸಿಎಂ ಮುನಿಯಪ್ಪಗೆ ಟಿಕೆಟ್ ನೀಡುವಂತೆ ಒತ್ತಾಯ
ಈ ಹಿನ್ನೆಲೆ ಅಲ್ಪಸಂಖ್ಯಾತ ಮುಖಂಡರಿಂದ ಸುದ್ದಿಗೋಷ್ಠಿ ಮಾಡಿದ್ದು, ಕಾಂಗ್ರೆಸ್ನಿಂದ ಬಲಗೈ ಸಮುದಾಯದ ಸಿಎಂ ಮುನಿಯಪ್ಪಗೆ ಟಿಕೆಟ್ ನೀಡುವಂತೆ ಒತ್ತಾಯ ಮಾಡಲಾಗಿದೆ. ಒಳ್ಳೆಯ ಅಭ್ಯರ್ಥಿ ಇದ್ದರೂ ಹುಡುಕಾಟ ನಡೆಯುತ್ತಿದೆ. 3 ಲಕ್ಷ ಅಲ್ಪಸಂಖ್ಯಾತ ಮತಗಳಿದ್ದರೆ, 6 ಲಕ್ಷ ಮತಗಳಿರುವ ಪರಿಶಿಷ್ಟರನ್ನ ಪರಿಗಣನೆ ಮಾಡಬೇಕು. ಅವರ ಅಭಿಪ್ರಾಯ ಸಂಗ್ರಹ ಮಾಡಿ ಅಭ್ಯರ್ಥಿ ಆಯ್ಕೆ ಮಾಡಬೇಕಿದೆ ಎಂದಿದ್ದಾರೆ.
ಇದನ್ನೂ ಓದಿ: ಹೈಕಮಾಂಡ್ ನಿರ್ಧಾರ ಒಪ್ಪಲೇಬೇಕಿದೆ, ಪಕ್ಷೇತರ ಸ್ಪರ್ಧೆ ಮಾಡಲ್ಲ: ಕೋಲಾರ ಬಿಜೆಪಿ ಸಂಸದ ಮುನಿಸ್ವಾಮಿ
ನಮಗೆ ಬಲ ಮತ್ತು ಎಡ ಮುಖ್ಯವಲ್ಲ. ನಮಗೆ ಕಾಣಿಸುತ್ತಿರುವುದು ಸ್ಟ್ರೆಂತ್ ಅಷ್ಟೆ. ಹಾಗಾಗಿ ದಲಿತ ಮುಖಂಡ ಸಿ.ಎಂ. ಮುನಿಯಪ್ಪ ಅವರಿಗೆ ಟಿಕೆಟ್ ಕೊಡಿ. ಅವರು ಅಭ್ಯರ್ಥಿ ಯಾದರೆ ಗೆಲವು ಖಚಿತ. 9 ಲಕ್ಷ ಮತಗಳನ್ನ ಪಡೆದು ಗೆಲವು ಸಾಧಿಸಲಿದ್ದಾರೆ. ವರಿಷ್ಟರು ದಯವಿಟ್ಟು ಸಿಎಂ ಮುನಿಯಪ್ಪ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಲಾಗಿದೆ. ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕಣ್ಣಿದ್ದು ಕುರುಡಾಗಿರುವುದು ಬೇಡ ಎಂದಿದ್ದಾರೆ. ಕಾಂಗ್ರೆಸ್ ಮುಖಂಡರಾದ ಕೆ.ಎ.ಅನ್ವರ್ ಪಾಷ, ಸಲಾವುದ್ದೀನ್ ಬಾಬು, ಜಾಫರ್ ಶರೀಫ್,ಜಾಫರ್ ಸಾಬ್, ಅಪ್ರೋಸ್ ಪಾಷಾ, ಶಂಷೀರ್, ಸಯ್ಯದ್ ಅಕ್ರಂ, ಸೀಪೂರ್ ಅಕ್ರಂ ಮತ್ತು ಮತ್ತಿತರರು ಭಾಗಿ ಆಗಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.