ಬಲಿಪಶು ಮಾಡಲೆಂದೇ ಮಲ್ಲಿಕಾರ್ಜುನ ಖರ್ಗೆಯನ್ನ ಘಮಂಡಿ ಘಟಬಂಧನ್ ನಾಯಕ ಮಾಡಲಾಗುತ್ತಿದೆ: ಪ್ರಹ್ಲಾದ್ ಜೋಶಿ
ಇಂಡಿಯಾ ಕೂಟದ ಅಸ್ತಿತ್ವ ಎಲ್ಲಿದೆ, ತೋರಿಕೆಗೆ ಅಷ್ಟೇ ಇದೊಂದು ಘಟಬಂಧನ್. ಮಹಾರಾಷ್ಟ, ಉತ್ತರಪ್ರದೇಶ, ಪಶ್ಚಿಮ ಬಂಗಾಳಗದಲ್ಲಿ ಜಗಳ ಆಡುತ್ತಿದ್ದಾರೆ. ಕೇರಳದಲ್ಲಿ ಕಮ್ಯುನಿಸ್ಟ್ ಸರ್ಕಾರವಿದೆ. ಕಮ್ಯುನಿಸ್ಟ್ ಸರ್ಕಾರ ನಮ್ಮ ಮೇಲೆ ಅತ್ಯಾಚಾರ ಮಾಡುತ್ತಿದೆ, ನಮ್ಮ ಕಾರ್ಯಕರ್ತರನ್ನ ಹೊಡಿಯುತ್ತಿದ್ದಾರೆ ಅಂತ ಅಲ್ಲಿನ ಕಾರ್ಯಕರ್ತರು ಹೇಳುತ್ತಿದ್ದಾರೆ. ನಿಮ್ಮಲ್ಲೇ ಹೊಂದಾಣಿಕೆ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಹುಬ್ಬಳ್ಳಿ, ಜನವರಿ 15: ಇಂಡಿಯಾ (INDIA) ಕೂಟದ ಅಸ್ತಿತ್ವ ಎಲ್ಲಿದೆ, ತೋರಿಕೆಗೆ ಅಷ್ಟೇ ಇದೊಂದು ಘಟಬಂಧನ್. ಮಹಾರಾಷ್ಟ, ಉತ್ತರಪ್ರದೇಶ, ಪಶ್ಚಿಮ ಬಂಗಾಳಗದಲ್ಲಿ ಜಗಳ ಆಡುತ್ತಿದ್ದಾರೆ. ಕೇರಳದಲ್ಲಿ ಕಮ್ಯುನಿಸ್ಟ್ ಸರ್ಕಾರವಿದೆ. ಕಮ್ಯುನಿಸ್ಟ್ ಸರ್ಕಾರ ನಮ್ಮ ಮೇಲೆ ಅತ್ಯಾಚಾರ ಮಾಡುತ್ತಿದೆ, ನಮ್ಮ ಕಾರ್ಯಕರ್ತರನ್ನ ಹೊಡಿಯುತ್ತಿದ್ದಾರೆ ಅಂತ ಅಲ್ಲಿನ ಕಾರ್ಯಕರ್ತರು ಹೇಳುತ್ತಿದ್ದಾರೆ. ನಿಮ್ಮಲ್ಲೇ ಹೊಂದಾಣಿಕೆ ಇಲ್ಲ. ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒಕ್ಕೂಟದಿಂದ ಹೊರ ಬರುವ ವಿಚಾರ ಮಾಡುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸೋತರೇ ಗಾಂಧಿ ಕುಟುಂಬದ ಮೇಲೆ ಬರಬಾರದು, ಬಲಿಪಶು ಮಾಡಲೆಂದೇ ಮಲ್ಲಿಕಾರ್ಜುನ ಖರ್ಗೆ ಅವರನ್ನು ಘಮಂಡಿ ಘಟಬಂಧನ್ ನಾಯಕನನ್ನಾಗಿ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralahad Joshi) ಹೇಳಿದರು.
ಸ್ವಚ್ಛತೀರ್ಥ ಅಭಿಯಾನಕ್ಕೆ ಪ್ರಧಾನಿ ಮೋದಿ ಕರೆ ನೀಡಿದ ಹಿನ್ನೆಲೆಯಲ್ಲಿ ಪ್ರಹ್ಲಾದ್ ಜೋಶಿ ಇಂದು (ಸೋಮವಾರ) ಹುಬ್ಬಳ್ಳಿಯ ಉಣಕಲ್ಲ ಸಿದ್ದಪ್ಪಜ್ಜ ಮೂಲ ಗದ್ದುಗೆ ಮಠದಲ್ಲಿ ಸ್ವಚ್ಛತೆ ಮಾಡಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಒಟ್ಟಿನಲ್ಲಿ ಅವರಲ್ಲೇ ಹೊಂದಾಣಿಕೆ ಇಲ್ಲ. ಕಾಂಗ್ರೆಸ್ನವರು ಅಸಹಾಯಕ ಸ್ಥಿತಿಗೆ ಬಂದಿದ್ದಾರೆ. ಅವರು ಸೋಲುವುದು ಗ್ಯಾರೆಂಟಿ, ಜಗ್ಗೇಶ್ ಬಾಷೆಯಲ್ಲಿ ಹೇಳೋದಾದರೆ ಢಮಾರ್ ಆಗೋದು ಗ್ಯಾರೆಂಟಿ. ಅದಕ್ಕೆ ಮಲ್ಲಿಕಾರ್ಜುನ್ ಖರ್ಗೆಯವರನ್ನು ಬಲಿ ಕೊಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಭಾರತ ನ್ಯಾಯ ಯಾತ್ರೆಗೆ ಬಿಜೆಪಿ ಸರ್ಕಾರದ ರಾಜ್ಯಗಳು ಅನುಮತಿ ನೀಡದ ಆರೋಪ ವಿಚಾರವಾಗಿ ಮಾತನಾಡಿದ ಅವರು ಮಣಿಪುರ ಸರ್ಕಾರ ಅನುಮತಿ ಕೊಟ್ಟಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದಿದ್ದಕ್ಕೆ ಉತ್ತರ ಕೊಟ್ಟಿದ್ದೆ. ರಾಹುಲ್ ಗಾಂಧಿ ಪ್ರಚಾರ ಮಾಡದೇ ಇರುವುದು ದುರ್ದೈವ ಅಂದಿದ್ದೆ. ಅವರು ಹೆಚ್ಚು ಅಡ್ಡಾಡಿದಷ್ಟು ಒಳ್ಳೆಯದು. ಎಲ್ಲೆಲ್ಲಿ ಹೋಗುತ್ತಾರೆ? ಅವರು ಏನು ಅಂತಾ ಜನ ನೋಡುತ್ತಾರೆ. ಅವರಿಗೆ ಎಲ್ಲಾ ವ್ಯವಸ್ಥೆಯನ್ನು ನಾವು ಮಾಡುತ್ತೇವೆ. ಇನ್ನು ಜಗದೀಶ್ ಶೆಟ್ಟರ್ ಘರ್ ವಾಪಸಿ ಬಗ್ಗೆ ನನಗೆ ಗೊತ್ತಿಲ್ಲ. ಅದರ ಬಗ್ಗೆ ಚರ್ಚೆ ಮಾಡಿಲ್ಲ, ನನಗೆ ಅದು ಸಂಬಂಧವಿಲ್ಲ ಎಂದರು.
ಇದನ್ನೂ ಓದಿ: ಬಿವೈ ವಿಜಯೇಂದ್ರ 3 ವರ್ಷ ಮಾತ್ರ ಅಧ್ಯಕ್ಷ: ಪ್ರಹ್ಲಾದ್ ಜೋಶಿ ಸ್ಪಷ್ಟನೆ
ರಾಮಮಂದಿರ ವಿಷಯದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ, ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ. ಯಾರು ರಾಜಕಾರಣ ಮಾಡುತ್ತಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಎಲ್ಲರಿಗೂ ಆಹ್ವಾನ ಇತ್ತು, ಸಹಜವಾಗಿ ಬಂದಿದ್ದರೇ ಚರ್ಚೆ ಆಗುತ್ತಿರಲಿಲ್ಲ. ಎಲ್ಲಿ ವೋಟ್ ಸಿಗುತ್ತೆ ಅಲ್ಲಿಗೆ ಹೋಗುವ ವಿಚಾರ ಕಾಂಗ್ರೆಸ್ನದ್ದು ಎಂದು ವಾಗ್ದಾಳಿ ಮಾಡಿದರು.
ಜವಾಬ್ದಾರಿಯುತ ಸ್ಥಾನದಲ್ಲಿರುವವರು ಆ ರೀತಿ ಮಾತನಾಡಬಾರದು. ರಾಜಕಾರಣ ಮಾಡುತ್ತಿರುವುದು ಕಾಂಗ್ರೆಸ್ನವರೇ. ಅಯೋಧ್ಯೆಗೆ ಕಾಂಗ್ರೆಸ್ಸಿಗರು ಬಂದರೇ ಸಂತೋಷ, ಬರದಿದ್ದರೂ ಸಂತೋಷ ಎಂಧರಿ ಹೇಳಿದರು.
ಹಾವೇರಿ ಜಿಲ್ಲೆ ಹಾನಗಲ್‌ನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಮಾತನಾಡಿದ ಅವರು, ಸರ್ಕಾರದ ತುಷ್ಟೀಕರಣ ರಾಜಕಾರಣ ಸ್ಪಷ್ಟವಾಗಿ ಎದ್ದುಕಾಣುತ್ತಿದೆ. ಸರ್ಕಾರ ಯಾರನ್ನೋ ರಕ್ಷಿಸಲು ಹೊರಟಿದೆ ಅನ್ನೋದು ಕಾಣುತ್ತಿದೆ. ದಕ್ಷ ಅಧಿಕಾರಿಗಳನ್ನು ನೇಮಿಸಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು. ಅನ್ಯಜಾತಿಯವರು ಮಾಡಿದ್ದರೆ ಇದು ದೊಡ್ಡದಾಗುತ್ತಿತ್ತು. ಆಕೆ ನಮ್ಮ ಸಮುದಾಯದವರೇ ಕೃತ್ಯವೆಸಗಿದ್ದಾರೆಂದು ಹೇಳಿದ್ದಾಳೆ. ಇದರಲ್ಲಿ ತುಷ್ಟೀಕರಣ ರಾಜಕಾರಣದ ವಾಸನೆ ಇದೆ. ಯಾವುದೇ ಜಾತಿಯವರು ಇದ್ದರೂ ಅಪರಾಧಿಗಳು ಅಪರಾಧಿಗಳೇ. ಸರ್ಕಾರ ಇದರಲ್ಲಿ ತಮ್ಮ ನಿಯತ್ತನ್ನು ತೋರಿಸಲಿ ಎಂದು ಒತ್ತಾಯಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ