ಬಿವೈ ವಿಜಯೇಂದ್ರ 3 ವರ್ಷ ಮಾತ್ರ ಅಧ್ಯಕ್ಷ: ಪ್ರಹ್ಲಾದ್​ ಜೋಶಿ ಸ್ಪಷ್ಟನೆ

ಬಿವೈ ವಿಜಯೇಂದ್ರ ಅವರನ್ನು ನೇಮಕ ಮಾಡಿ ಹೈಕಮಾಂಡ್​ ಅತ್ಯಂತ ಸೂಕ್ತ ನಿರ್ದಾರ ಕೈಗೊಂಡಿದೆ. ಯುವ ನಾಯಕತ್ವಕ್ಕೆ ಅವಕಾಶ ಕೊಡಬೇಕು ಎಂದು ಪಕ್ಷ ತೀರ್ಮಾನ ಮಾಡಿದೆ. ಹುಮ್ಮಸ್ಸಿನಿಂದ ಕೆಲಸ ಮಾಡುವ ಯುವಕರು ಬೇಕಿತ್ತು. ನಮ್ಮ ಸಂಪೂರ್ಣ ಸಹಕಾರ ಬಿವೈ ವಿಜಯೇಂದ್ರ ಅವರಿಗೆ ಇದೆ ಎಂದು ಪ್ರಹ್ಲಾದ್​ ಜೋಶಿ ಹೇಳಿದರು.

ಬಿವೈ ವಿಜಯೇಂದ್ರ 3 ವರ್ಷ ಮಾತ್ರ ಅಧ್ಯಕ್ಷ: ಪ್ರಹ್ಲಾದ್​ ಜೋಶಿ ಸ್ಪಷ್ಟನೆ
ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ
Follow us
ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ವಿವೇಕ ಬಿರಾದಾರ

Updated on:Nov 12, 2023 | 2:55 PM

ಹುಬ್ಬಳ್ಳಿ ನ.12: ಬಿವೈ ವಿಜಯೇಂದ್ರ (BY Vijayendra) ನೇಮಕ ಮಾಡಿರುವುದನ್ನು ನಾನು ಹರ್ಷದಿಂದ ಸ್ವಾಗತ‌ ಮಾಡುತ್ತೇನೆ. ಬಿವೈ ವಿಜಯೇಂದ್ರ ಮೂರು ವರ್ಷ ಮಾತ್ರ ಅಧ್ಯಕ್ಷರಾಗಿರುತ್ತಾರೆ. ನಂತರ ಮತ್ತೊಬ್ಬ ಕಾರ್ಯಕರ್ತ ಅಧ್ಯಕ್ಷರಾಗುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ (Pralhad Joshi) ಬಾಂಬ್ ಸಿಡಿಸಿದ್ದಾರೆ. ಹುಬ್ಬಳ್ಳಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು​ ಬಿವೈ ವಿಜಯೇಂದ್ರ ಅವರನ್ನು ನೇಮಕ ಮಾಡಿ ಹೈಕಮಾಂಡ್​ ಅತ್ಯಂತ ಸೂಕ್ತ ನಿರ್ದಾರ ಕೈಗೊಂಡಿದೆ. ಯುವ ನಾಯಕತ್ವಕ್ಕೆ ಅವಕಾಶ ಕೊಡಬೇಕು ಎಂದು ಪಕ್ಷ ತೀರ್ಮಾನ ಮಾಡಿದೆ. ಹುಮ್ಮಸ್ಸಿನಿಂದ ಕೆಲಸ ಮಾಡುವ ಯುವಕರು ಬೇಕಿತ್ತು. ನಮ್ಮ ಸಂಪೂರ್ಣ ಸಹಕಾರ ಬಿವೈ ವಿಜಯೇಂದ್ರ ಅವರಿಗೆ ಇದೆ ಎಂದು ಹೇಳಿದರು.

ಬಿಎಸ್​ ಯಡಿಯೂರಪ್ಪ ಒಂದು ಜಾತಿ ನಾಯಕ ಅಲ್ಲ. ಎಲ್ಲ ಸಮುಯಾದ ಜನ ಬಿಎಸ್ ಯಡಿಯೂರಪ್ಪ ಅವರಿಗೆ ಬೆಂಬಲ ಕೊಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಮಾರ್ಗದರ್ಶನದಲ್ಲಿ ವಿಜಯೇಂದ್ರ ಕೆಲಸ ಮಾಡಲಿದ್ದಾರೆ. ಯಾವದೂ ಬಣ ಇಲ್ಲ. ವಿಜಯೇಂದ್ರ 15 ವರ್ಷಗಳಿಂದ ಪಕ್ಷದ ಕೆಲಸ ಮಾಡುತ್ತಿದ್ದಾರೆ. ಸಿಟಿ ರವಿ, ಬೆಲ್ಲದ ಅಸಮಾಧಾನ ವಿಚಾರವಾಗಿ ಮಾತನಾಡಿದ ಅವರು ನಾನು ಬೆಲ್ಲದ ಅವರ ಜೊತೆ ಮಾತನಾಡುತ್ತೇನೆ. ಸಣ್ಣ ಪುಟ್ಟ ಅಸಮಾಧಾನ ಇದೆ. ನಾವು ಸರಿ ಮಾಡುತ್ತೇವೆ. ಬಿವೈ ವಿಜಯೇಂದ್ರ ಅವರಿಗೆ ನಾವು ಎಲ್ಲ ಬೆಂಬಲ ಕೊಡುತ್ತೇವೆ. ನಾವ ಲೋಕಸಭೆ ಚುನಾವಣೆಯಲ್ಲಿ 25 ಸ್ಥಾನ ಗೆಲ್ಲಬೇಕಿದೆ. ವಿಜಯೇಂದ್ರ ನೇತೃತ್ವದಲ್ಲಿ ನಾವೆಲ್ಲ ಕೆಲಸ ಮಾಡುತ್ತೇವೆ. ನನ್ನ ಸೇರಿ ಎಲ್ಲ ನಾಯಕರು ಅವರ ಜೊತೆ ಕೆಲಸ ಮಾಡುತ್ತೇವೆ. ಇದು ಜಾತಿ ಆಧಾರದ ಮೇಲೆ ಕೊಟ್ಟಿರುವ ಹುದ್ದೆ ಅಲ್ಲ. ಬಿಎಸ್ ಯಡಿಯೂರಪ್ಪ ಅವರ ಬಳಿಕ ನಳೀನ ಕುಮಾರ್ ಕಟೀಲು ಅಧ್ಯಕ್ಷರಾಗಿದ್ದರು ಎಂದು ತಿಳಿಸಿದರು.

ಆಪರೇಶನ್ ಕಮಲದಲ್ಲಿ ಆಸಕ್ತಿ ಇಲ್ಲ, ನಾವು ಇದರಲ್ಲಿ ಕೈ ಹಾಕಲ್ಲ: ಜೋಶಿ

ಕಾಂಗ್ರೆಸ್​ನಲ್ಲಿ ಆಂತರಿಕ ಬಡಿದಾಟ ಇದೆ. ಈ ಕಾರಣಕ್ಕೆ ಅಭಿವೃದ್ಧಿ ಕುಂಠಿತವಾಗಿದೆ. ಬರದ ವಿಷಯದಲ್ಲಿ ಕರ್ನಾಟಕ ಸರ್ಕಾರ ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ. ಇವರು ಜನರ ಹಿತ ಮರೆತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ. 3 ಜನ ಡಿಸಿಎಮ್ ಸೃಷ್ಟಿ ಹಿಂದೆ ಸಿಎಂ ಸಿದ್ದರಾಮಯ್ಯ ಕೈವಾಡವಿದೆ. ಆಡಳಿತ ವ್ಯವಸ್ಥೆ ಅದೋಗತಿಗೆ ಹೋಗಿದೆ. ಬಿಜೆಪಿಯವರು ಸರ್ಕಾರ ಕೆಡವುತ್ತಾರೆ ಅಂತ ಕಾಂಗ್ರೆಸ್​ನವರು ಹೇಳುತ್ತಾರೆ. ನಾನು ಆತ್ಯಂತ ಪ್ರಮಾಣಿಕವಾಗಿ ಹೇಳುತ್ತೇನೆ, ಆಪರೇಶನ್ ಕಮಲದಲ್ಲಿ ನಮಗೆ ಆಸಕ್ತಿ ಇಲ್ಲ. ನಾವು ಇದರಲ್ಲಿ ಕೈ ಹಾಕಲ್ಲ. ಜನಪರ ಆಡಳಿತ ಕೊಡಿ ಎಂದರು.

ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷರ ಅಧಿಕಾರ ಸ್ವೀಕಾರಕ್ಕೆ ಮುಹೂರ್ತ ಫಿಕ್ಸ್, ತಂದೆ ಮಾರ್ಗ ಅನುಸರಿಸಿದ ವಿಜಯೇಂದ್ರ

ಕಾಂಗ್ರೆಸ್ ಒಳಜಗಳ ನೋಡಿ ಸರ್ಕಾರ ಬೀಳತ್ತೆ ಎಂದಿದ್ದಾರೆ. ಆದರೆ ನಾವು ಆಪರೇಶನ್ ಕಮಲ ಮಾಡುತ್ತೇವೆ ಎಂದು ಹೇಳಿಲ್ಲ. ಯಾರ ಆಪರೇಶನ್ ಕಮಲದ ಬಗ್ಗೆ ಮಾತಾಡ್ತಾರೆ, ಅವರಿಗೆ ಕರೆದು ಹೇಳುತ್ತೇವೆ. ಆಪರೇಶನ್ ಕಮಲ ನಡೀತಿಲ್ಲ. ಪಕ್ಷ ಬಿಟ್ಟ ಹೋಗುವುದ, ಬರುವುದು ಇರತ್ತೆ. ಹಾಲಿ ಶಾಸಕರು ಬಿಜೆಪಿಗೆ ಬರುವ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಕೂಡಾ ರಾಹುಲ್ ಗಾಂಧಿ ಲೇವಲ್​ಗೆ ಬರುತ್ತಿದ್ದಾರೆ. ರಾಹುಲ್ ಗಾಂಧಿಯದ್ದು ಎರಡು ಸ್ಟೇಟಮೆಂಟ್ ಇದೆ. ಒಂದು ಮೋದಿ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿ, ಇನ್ನೊಂದು ನಾನ ಮಾತಾಡಿದರೇ ಭೂಕಂಪ ಎಂದಿದ್ದರು. ಇದೀಗ ಸಿದ್ದರಾಮಯ್ಯ ಅವರು ಕೂಡ ಅವರ ಲೇವಲ್​ಗೆ ಬರುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.

ಸಿದ್ದರಾಮಯ್ಯ ಅವರಿಗೆ ಬೇರೆ ರಾಜ್ಯದ ರಾಜಕಾರಣದ ಮಾಹಿತಿ ಇಲ್ಲ. ಯಾರೋ ಬರೆದು ಕೊಡುತ್ತಾರೆ, ಅದನ್ನು ಭಾಷಣ ಮಾಡುತ್ತಾರೆ. ಪ್ರಧಾನಿ ಮೋದಿಯವರನ್ನು ಜನ ಸ್ವೀಕಾರ ಮಾಡಿದ್ದಾರೆ. ಸಿದ್ದರಾಮಯ್ಯ ಇದನ್ನು ಅರ್ಥ ಮಾಡಕೋಳ್ಳಬೇಕು. ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸಗಡ ಮಾಹಿತಿ ಪಡೆದುಕೊಂಡಿದ್ದೇನೆ. ನಾನು ರಾಜಸ್ಥಾನದ ಚುನಾವಣೆ ಉಸ್ತುವಾರಿ ಇದ್ದೆ. 3 ರಾಜ್ಯಗಳಲ್ಲಿ ಪೂರ್ತಿ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷಕ್ಕೆ ಮೂರು ವರ್ಷಗಳ ಕಾಲ ರಾಷ್ಟ್ರೀಯ ಅಧ್ಯಕ್ಷರನ್ನು ಮಾಡಲು ಆಗಿರಲಿಲ್ಲ. ವಂಶಪಾರಂಪರಿಕ ಬಿಟ್ಟು ಹೊರಗೆ ಬರಲು ಮೂರು ವರ್ಷ ಬೇಕಾಯ್ತು. ಇದೀಗ ಬಿಜೆಪಿ ಬಗ್ಗೆ ಮಾತಾಡುತ್ತೀರಾ. ಇದೀಗ ರಾಹುಲ್ ಗಾಂಧಿ ಜವಾಬ್ದಾರಿ ಬೇಡಾ ಅಂದಿದಕ್ಕೆ ಖರ್ಗೆ ಅಧ್ಯಕ್ಷರಾದರು. ಆದರೆ ಯಾವದೇ ಅಧಿಕಾರ ಇಲ್ಲ ಎಂದು ಹರಿಹಾಯ್ದರು.

ರಾಜಸ್ತಾನದಲ್ಲಿ ಕಾಂಗ್ರೆಸ್ ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ಕರ್ನಾಟಕದಲ್ಲಿ ಗ್ಯಾರಂಟಿ ಮೋಸ ಆದ ಹಾಗೆ, ರಾಜಸ್ಥಾನದಲ್ಲಿ ಮೋಸ ಆಗಿದೆ. ಇಲ್ಲಿಗಿಂತ ಹತ್ತು ಪಟ್ಟು ಹೆಚ್ಚು ಮೋಸ ಆಗಿದೆ. ಕರ್ನಾಟಕದಲ್ಲಿ ರೈತರಿಗೆ ವಿದ್ಯುತ್ ತೊಂದರೆ ಆಗುತ್ತಿದೆ. ಕರ್ನಾಟಕ ಸರ್ಕಾರ ಫ್ರೀ ಹೆಸರಲ್ಲಿ ಹೇಳುವುದು ಒಂದು ಮಾಡೋದು ಇನ್ನೊಂದು. ಇಲ್ಲಿ ಫಿಕ್ಸಡ್ ಚಾರ್ಜ್ ಜಾಸ್ತಿ ಮಾಡಿದ್ದಾರೆ. ಎಲ್ಲ ಅಭಿವೃದ್ಧಿ ಕೆಲಸ ಕುಂಠಿತವಾಗಿವೆ. ಅನೇಕ ಕಾಂಗ್ರೆಸ್ ಶಾಸಕರು ಬಹಿರಂಗವಾಗಿ ಮಾತಾಡುತ್ತಿದ್ದಾರೆ. ಸರ್ಕಾರ ದುಡ್ಡು ಕೊಡುತ್ತಿಲ್ಲ ಎಂದು ಶಾಸಕರೇ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.

ಅನೇಕ ರಾಜ್ಯಗಳಲ್ಲಿ ಬರ ಇದೆ, ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಲಿದೆ. ಮಾನದಂಡ ಪ್ರಕಾರ ಕೆಲವೇ ದಿನಗಳಲ್ಲಿ ಹಣ ಬಿಡುಗಡೆ ಅಗಲಿದೆ. ಇವರ ದುರಾಡಳಿತದಿಂದ ಇಂತಹ ಪರಸ್ಥಿತಿ ಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:32 pm, Sun, 12 November 23

ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!