ನಾನು ನಿಂತ ನೀರಲ್ಲ, ಹರಿಯುವ ನೀರು: ಕಾಂಗ್ರೆಸ್​ ಸೇರುವ ಸುಳಿವು ನೀಡಿದ ವಿ ಸೋಮಣ್ಣ

ಕ್ಷೇತ್ರದ ಜನರು ನನ್ನನ್ನು ಮನೆ ಮಗನಾಗಿ ನೋಡಿಕೊಂಡಿದ್ದಾರೆ. ನಾನು ಯಾರ ಬಗ್ಗೆಯೂ ಮಾತನಾಡಿಲ್ಲ. ರಾಜ್ಯಾಧ್ಯಕ್ಷರು, ಸಿಎಂ ಜತೆ ಕೆಲವು ವಿಷಯಗಳ ಬಗ್ಗೆ ಚರ್ಚಿಸಿದ್ದೇನೆ. ನನಗೆ ಈಗ 72 ವರ್ಷ, ಆಗಬೇಕಿರುವುದು ಏನೂ ಇಲ್ಲ. ಆದರೆ ಸೋಮಣ್ಣ ನಿಂತ ನೀರಲ್ಲ, ಹರಿಯುವ ನೀರು ಎಂದು ವಸತಿ ಸಚಿವ ವಿ ಸೋಮಣ್ಣ ಹೇಳಿದ್ದಾರೆ.

ನಾನು ನಿಂತ ನೀರಲ್ಲ, ಹರಿಯುವ ನೀರು: ಕಾಂಗ್ರೆಸ್​ ಸೇರುವ ಸುಳಿವು ನೀಡಿದ ವಿ ಸೋಮಣ್ಣ
ವಿ ಸೋಮಣ್ಣ
Follow us
ವಿವೇಕ ಬಿರಾದಾರ
|

Updated on:Mar 10, 2023 | 1:03 PM

ಬೆಂಗಳೂರು: ವಸತಿ ಸಚಿವ ವಿ ಸೋಮಣ್ಣ (V Somanna) ಸದ್ಯ ಪಕ್ಷದ ಕಾರ್ಯ ಚಟುವಟಿಕೆಗಳಿಂದ ಹಿಂದೆ ಉಳಿದಿದ್ದಾರೆ. ಪಕ್ಷದ ವಿರುದ್ಧ ಒಳಗೊಳಗೆ ಅಸಮಾಧಾನಗೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈಚಿನ ದಿನಗಳಲ್ಲಿ ಸೋಮಣ್ಣ ಕಾಂಗ್ರೆಸ್​ ಸೇರ್ಪಡೆಯಾಗುತ್ತಾರೆ ಎಂಬ ವಂದತಿಗಳು ಎದ್ದಿವೆ. ಈ ಹಿನ್ನೆಲೆ ರಾಜ್ಯ ನಾಯಕರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಮತ್ತು ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ (Nalin Kumar Kateel) ​ಅಸಮಾಧಾನ ಶಮನಕ್ಕಾಗಿ ಸಭೆ ಮಾಡಿದ್ದರೂ, ಇನ್ನು ಬೂದಿ ಮುಚ್ಚಿದ ಕೆಂಡದಂತಿದೆ. ಇದೀಗ ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಮತ್ತು ಚುನಾವಣಾ ನಿರ್ವಹಣಾ ಸಮಿತಿಯಿಂದ ಸೋಮಣ್ಣಗೆ ಕೋಕ್​​ ನೀಡಲಾಗಿದೆ. ಈ ಬಗ್ಗೆ ನಾನು ನಿಂತ ನೀರಲ್ಲ, ಹರಿಯುವ ನೀರು ಎಂದು ಹೇಳುವ ಮೂಲಕ ಕಾಂಗ್ರೆಸ್​ ಸೇರುವ ಸುಳಿವು ನೀಡಿದ್ದಾರೆ.

ಇದನ್ನೂ ಓದಿ: ಈಶ್ವರ್ ಖಂಡ್ರೆ ವಿಚಾರಕ್ಕೆ ಅವಾಚ್ಯವಾಗಿ ನಿಂದಿಸಿದ ಸಚಿವ ಸೋಮಣ್ಣ: ರೇಣುಕ ಪ್ರಸನ್ನ ಆರೋಪ

ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕ್ಷೇತ್ರದ ಜನರು ನನ್ನನ್ನು ಮನೆ ಮಗನಾಗಿ ನೋಡಿಕೊಂಡಿದ್ದಾರೆ. ನಾನು ಯಾರ ಬಗ್ಗೆಯೂ ಮಾತನಾಡಿಲ್ಲ. ರಾಜ್ಯಾಧ್ಯಕ್ಷರು, ಸಿಎಂ ಜತೆ ಕೆಲವು ವಿಷಯಗಳ ಬಗ್ಗೆ ಚರ್ಚಿಸಿದ್ದೇನೆ. ನನಗೆ ಈಗ 72 ವರ್ಷ, ಆಗಬೇಕಿರುವುದು ಏನೂ ಇಲ್ಲ. ಆದರೆ ಸೋಮಣ್ಣ ನಿಂತ ನೀರಲ್ಲ, ಹರಿಯುವ ನೀರು ಎಂದು ಹೇಳಿದ್ದಾರೆ.

ಪ್ರಚಾರ ಸಮಿತಿಯಲ್ಲಿ ಅವಕಾಶ ನೀಡದ ವಿಚಾರವಾಗಿ ಮಾತನಾಡಿದ ಅವರು ಈ ಬಗ್ಗೆ ನಾನು ಏನು ಮಾತಾಡುವುದಿಲ್ಲ. ನಾನು ಯಾರ ಬಗ್ಗೆಯೂ ಒಂದು ಸಣ್ಣ ಅಪಚಾರವೂ ಮಾಡಿಲ್ಲ. ರಾಜ್ಯಾಧ್ಯಕ್ಷರು, ಸಿಎಂ ನನಗೆ ಏನು ಹೇಳಿದ್ದಾರೆ ಅಂತ ನನಗೆ ಮಾತ್ರ ಗೊತ್ತಿದೆ. ಆದರೆ ಅವರ ಭಾವನೆಗಳನ್ನು ನಾನು ಅರ್ಥ ಮಾಡಿಕೊಂಡು, ನನ್ನ ಹೊಟ್ಟೆಪಾಡಿಗೋಸ್ಕರ ಏನು ಮಾಡಬೇಕು, ಅದನ್ನು ಮಾಡಿಕೊಂಡು ಹೋಗುತ್ತಿದ್ದೇನೆ. ಕ್ಷೇತ್ರದ ಜನರ ಋಣ ತೀರಿಸಲು ಎಲ್ಲಿವರೆಗು ಇರಬೇಕೋ ಅಲ್ಲಿವರೆಗೆ ಈ ಸೋಮಣ್ಣ ಇರುತ್ತಾ‌ನೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:56 pm, Fri, 10 March 23