ಮತ್ತೊಬ್ಬರ ಮನೆಗೆ ಬೆಂಕಿ ಹಚ್ಚಿ ಚಳಿ ಕಾಯಿಸಿಕೊಳ್ಳುವುದು ಕಾಂಗ್ರೆಸ್ ಜನ್ಮ ಗುಣ: ಬಿಜೆಪಿ ಹೀಗೆ ಕಿಡಿ ಕಾರಿದ್ದೇಕೆ?

|

Updated on: Jun 15, 2024 | 1:03 PM

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಳ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣದ ವಿಚಾರವಾಗಿ ಪ್ರತಿಪಕ್ಷ ಬಿಜೆಪಿ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಬಿಜೆಪಿ ಮಾಡಿರುವ ಟೀಕೆಯ ವಿವರ ಇಲ್ಲಿದೆ.

ಮತ್ತೊಬ್ಬರ ಮನೆಗೆ ಬೆಂಕಿ ಹಚ್ಚಿ ಚಳಿ ಕಾಯಿಸಿಕೊಳ್ಳುವುದು ಕಾಂಗ್ರೆಸ್ ಜನ್ಮ ಗುಣ: ಬಿಜೆಪಿ ಹೀಗೆ ಕಿಡಿ ಕಾರಿದ್ದೇಕೆ?
ಮತ್ತೊಬ್ಬರ ಮನೆಗೆ ಬೆಂಕಿ ಹಚ್ಚಿ ಚಳಿ ಕಾಯಿಸಿಕೊಳ್ಳುವುದು ಕಾಂಗ್ರೆಸ್ ಜನ್ಮ ಗುಣ: ಬಿಜೆಪಿ
Follow us on

ಬೆಂಗಳೂರು, ಜೂನ್ 15: ಮತ್ತೊಬ್ಬರ ಮನೆಗೆ ಬೆಂಕಿ ಹಚ್ಚಿ ಅದರಲ್ಲಿ ಚಳಿ ಕಾಯಿಸಿಕೊಳ್ಳುವುದು ಕರ್ನಾಟಕ ಕಾಂಗ್ರೆಸ್ ಜನ್ಮ ಗುಣ ಎಂದು ಬಿಜೆಪಿ (BJP) ಕಿಡಿ ಕಾರಿದೆ. ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಳ ಅಭಿವೃದ್ಧಿ ನಿಗಮದ (Valmiki Scheduled Tribes Development Corporation) 94.73 ಕೋಟಿ ರೂ. ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ಆಡಳಿತಾರೂಢ ಕಾಂಗ್ರೆಸ್ ಪಕ್ಷ ಅನ್ಯಾಯದ ಪರಮಾಧಿ ತಲುಪಿದೆ ಎಂದು ಟೀಕಿಸಿದೆ.

ಮತ್ತೊಬ್ಬರ ಮನೆಗೆ ಬೆಂಕಿ ಹಚ್ಚಿ ಅದರಲ್ಲಿ ಚಳಿ ಕಾಯಿಸಿಕೊಳ್ಳುವುದು ಕರ್ನಾಟಕ ಕಾಂಗ್ರೆಸ್​​ನವರ ಜನ್ಮಗುಣ!! ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ನಿರಂತರವಾಗಿ ಅನ್ಯಾಯವೆಸಗುತ್ತಿರುವ ಕಾಂಗ್ರೆಸ್‌, ಈಗ ವಾಲ್ಮೀಕಿ ನಿಗಮದಲ್ಲಿ ನಡೆಸಿದ ಅಕ್ರಮದ ಹಣವನ್ನು ಬಾರ್‌‌ಗಳಿಗೆ ಕಳಿಸಿ ಅಲ್ಲಿಂದ ನಗದನ್ನು ವಿತ್‌ ಡ್ರಾ ಮಾಡಿಕೊಳ್ಳುವಷ್ಟರ ಮಟ್ಟಿಗೆ ಅನ್ಯಾಯದ ದಾರಿಯನ್ನು ತುಳಿದಿದೆ. ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ನಡೆದ ಅಕ್ರಮಗಳಿಗೆಲ್ಲವೂ ಸಿಎಂ ಸಿದ್ದರಾಮಯ್ಯ ಅವರೇ ಪ್ರಮುಖ ಕಾರಣ. ವಾಲ್ಮೀಕಿ ಸಮುದಾಯಕ್ಕೆ ನಿಜಕ್ಕೂ ನ್ಯಾಯ ದೊರೆಯಬೇಕೆಂದರೆ ಮೊದಲು ಸಿದ್ದರಾಮಯ್ಯನವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಎಕ್ಸ್​ ಸಂದೇಶದಲ್ಲಿ ಬಿಜೆಪಿ ಆಗ್ರಹಿಸಿದೆ.

ಬಿಜೆಪಿ ಎಕ್ಸ್ ಸಂದೇಶ


ವಾಲ್ಮೀಕಿ ನಿಗಮ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯಲ್ಲಿ ಮಹತ್ವದ ಪ್ರಗತಿ ಕಂಡಿರುವ ಎಸ್​ಐಟಿ, 18 ನಕಲಿ ಖಾತೆಗಳಿಗೆ ವರ್ಗಾವಣೆಯಾಗಿದ್ದ ಮೊತ್ತವನ್ನು ಮದ್ಯದಂಗಡಿಗಳು, ಚಿನ್ನಾಭರಣ ಮಾರಟ ಮಳಿಗೆಗಳು ಹಾಗೂ ಸಣ್ಣ ಕಂಪನಿಗಳಿಗೆ ವರ್ಗಾಯಿಸಿಕೊಂಡು ನಗದು ವಿತ್​ಡ್ರಾ ಮಾಡಿರುವುದನ್ನು ಬಯಲಿಗೆಳೆದಿತ್ತು.

ಇದನ್ನೂ ಓದಿ: ಬಾರ್​, ಚಿನ್ನದಂಗಡಿಯ ಖಾತೆಗಳಿಗೆ ವರ್ಗವಾಗಿತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ

ಈ ವಿಚಾರ ಬಹಿರಂಗವಾದ ಬೆನ್ನಲ್ಲೇ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಜೆಪಿ ಟೀಕಾ ಪ್ರಹಾರ ನಡೆಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ