ಮನವಿ ಮಾಡಿಕೊಂಡ್ರೂ ಬಿಡದ ಇಡಿ ಅಧಿಕಾರಿಗಳು, ಹೋಗಲೇ ಬೇಕಾದ ಅನಿವಾರ್ಯತೆಯಲ್ಲಿ ಡಿಕೆ ಬ್ರದರ್ಸ್!

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಮಾಡಿದ್ದ ಮನವಿಯನ್ನು ಇಡಿ ಅಧಿಕಾರಿಗಳು ಡೋಂಟ್ ಕೇರ್ ಎಂದಿದ್ದಾರೆ. ಇದರಿಂದ ಡಿಕೆ ಬ್ರದರ್ಸ್​ ಮತ್ತೊಂದು ಅನಿವಾರ್ಯತೆಯಲ್ಲಿ ಸಿಲುಕಿಕೊಂಡಿದ್ದಾರೆ..

ಮನವಿ ಮಾಡಿಕೊಂಡ್ರೂ ಬಿಡದ ಇಡಿ ಅಧಿಕಾರಿಗಳು,  ಹೋಗಲೇ ಬೇಕಾದ ಅನಿವಾರ್ಯತೆಯಲ್ಲಿ ಡಿಕೆ ಬ್ರದರ್ಸ್!
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Oct 06, 2022 | 4:38 PM

ಬೆಂಗಳೂರು: ಕರ್ನಾಟಕದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ನಡೆಯುತ್ತಿರುವ ನಡುವೆಯೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ಗೆ ಇಡಿ ಶಾಕ್ ಕೊಟ್ಟಿದೆ. ಡಿಕೆ ಶಿವಕುಮಾರ್​ ಮಾಡಿದ್ದ ಮನವಿಯನ್ನು ಇಡಿ ಡೋಂಟ್ ಕೇರ್ ಎಂದಿದೆ. ಹಿನ್ನೆಲೆ್ಯಲ್ಲಿ ಡಿಕೆ ಬ್ರದರ್ಸ್ ವಿಚಾರಣೆ ಹಾಜರಾಗಲೇಬೇಕಾದ ಅನಿವಾರ್ಯತೆಲ್ಲಿ ಸಿಲುಕಿಕೊಂಡಿದ್ದಾರೆ.

ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತನಿಖೆಯ ವಿಚಾರಣೆಗಾಗಿ ಡಿಕೆ ಶಿವಕುಮಾರ್​ಗೆ ಇಡಿ ಸಮನ್ಸ್​ ನೀಡಿದೆ. ಆದ್ರೆ, ಡಿಕೆ ಶಿವಕುಮಾರ್ ಸಧ್ಯಕ್ಕೆ ಬರಲು ಆಗುವುದಿಲ್ಲ. ಮುಂದೊಂದು ದಿನ ಬರುವುದಾಗಿ ಇಡಿಗೆ ಮನವಿ ಮಾಡಿದ್ರು. ಆದ್ರೆ, ಡಿಕೆಶಿ ಮನವಿಯನ್ನು ಇಡಿ ತಿರಸ್ಕಾರ ಮಾಡಿದ್ದು, ವಿಚಾರಣೆಗೆ ಬರಲೇಬೇಕೆಂದು ಮತ್ತೊಂದು ಹೊಸ ಸಮನ್ಸ್ ನೀಡಿದೆ. ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಇಬ್ಬರೂ ಅಕ್ಟೋಬರ್ 7 ರಂದು ಹಾಜರಾಗುವಂತೆ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಡಿಕೆಶಿ ಬ್ರದರ್ಸ್ ಅನಿವಾರ್ಯವಾಗಿ ವಿಚಾರಣೆ ಹಾಜರಾಗಲು ದೆಹಲಿ ಹೋಗಲು ತೀರ್ಮಾನಿಸಿದ್ದಾರೆ.

ಇದನ್ನೂ ಓದಿ:  ಭಾರತ್ ಜೋಡೋ ಪಾದಯಾತ್ರೆಯ ಜೋಶ್​ನಲ್ಲಿದ್ದ ಡಿಕೆ ಶಿವಕುಮಾರ್​ಗೆ ಇಡಿ ಶಾಕ್: ನಾಳೆ ವಿಚಾರಣೆಗೆ ಬರಲೇ ಬೇಕೆಂದು ಸೂಚನೆ

ಈ ಬಗ್ಗೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕರಾಡಿಯಾ ಗ್ರಾಮದಲ್ಲಿ ಇಂದು(ಅ.06) ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ವಿಚಾರಣೆಗೆ ಹಾಜರಾಗಲು ನಾನು, ಸುರೇಶ್ ಕಾಲಾವಕಾಶ ಕೇಳಿದ್ವಿ. ನಾವು ಮನವಿ ಮಾಡಿಕೊಂಡರೂ ಇಡಿ ಅವಕಾಶ ಕೊಟ್ಟಿಲ್ಲ. ಇಡಿ ಅಧಿಕಾರಿಗಳು ಇಂದು ಮತ್ತೊಂದು ನೋಟಿಸ್​ ಕೊಟ್ಟಿದ್ದು, ನಾಳೆ ಬೆಳಗ್ಗೆ 10:30ಕ್ಕೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.ಹಾಗಾಗಿ ವಿಚಾರಣೆಗಾಗಿ ದೆಹಲಿಗೆ ಹೋಗುವೆ ಎಂದು ಹೇಳಿದರು.

ಈ ಬಗ್ಗೆ ಪಕ್ಷದ ಹಿರಿಯರ ಜೊತೆ ಚರ್ಚೆ ಮಾಡಿದ್ದೇವೆ. ಕಾನೂನಿಗೆ ಗೌರವ ಕೊಟ್ಟು ವಿಚಾರಣೆಗೆ ಹಾಜಗಾರಲು ಹೇಳಿದ್ದಾರೆ. ನಮ್ಮ ಪಕ್ಷ, ನಾವು ದೇಶದ ಕಾನೂನಿಗೆ ಗೌರವ ಕೊಡುವವರು. ನಾಳೆ ಇಡಿ ಅಧಿಕಾರಿಗೋಳು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಈ ಮೊದಲು ಡಿಕೆ ಶಿವಕುಮಾರ್​ಗೆ ವಿಚಾರಣೆಗೆ ಹಾಜರಾಗುವಂತೆ ಇಡಿ ಅಧಿಕಾರಿಗಳು ಡಿಕೆ ಶಿವಕುಮಾರ್ ಹಾಗೂ ಅವರ ಸಹೋದರ ಡಿಕೆ ಸುರೇಶ್​ಗೆ ಸಮನ್ಸ್​ ನೀಡಿತ್ತು. ಆದ್ರೆ, ಇದಕ್ಕೆ ಡಿಕೆ ಶಿವಕುಮಾರ್​, ಇಡಿ ವಿಚಾರಣೆಗೆ ಹೋಗುವುದಿಲ್ಲ. ಸಧ್ಯಕ್ಕೆ ಭಾರತ್ ಜೋಡೋ ಯಾತ್ರೆಯಲ್ಲಿ ಬ್ಯುಸಿಯಾಗಿದ್ದೇವೆ. ಇನ್ನೊಂದು ದಿನ ಬರುವುದಾಗಿ ಹೇಳಿದ್ದರು. ಅಲ್ಲದೇ ಇಡಿ ವಿಚಾರಣೆಗೆ ಹೋಗುವುದಿಲ್ಲ ಎಂದು ಮಾಧ್ಯಮಗಳಿಗೂ ಹೇಳಿದ್ದರು. ಆದ್ರೆ, ಇಡಿ ಅವಕಾಶ ನೀಡಿಲ್ಲದಿರುವುದರಿಂದ ವಿಚಾರಣೆ ಹಾಜರಾಗಲು ನಿರ್ಧರಿಸಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ