ವಾಜಪೇಯಿ ಭಾಷಣದ ಅಕ್ಷರರೂಪ | ಭಾರತವನ್ನು ಪರಮ ವೈಭವ ಶಿಖರಕ್ಕೇರಿಸುವುದು ಎನ್ನುವುದರ ಅರ್ಥ ಇದು
ಅಟಲ್ ಬಿಹಾರಿ ವಾಜಪೇಯಿ ಅವರು 1972ರಲ್ಲಿ ಮಾಡಿದ್ದ ಭಾಷಣವೊಂದರ ಅಕ್ಷರರೂಪವಿದು. ಈ ಭಾಷಣದಲ್ಲಿ ವಾಜಪೇಯಿ ಆರ್ಎಸ್ಎಸ್ನ ಮೂಲ ವಿಚಾರಧಾರೆಗಳು, ದೇಶ ಕಟ್ಟುವ ಬಗ್ಗೆ ಗುರೂಜಿ (ಎಂ.ಎಸ್.ಗೋಲ್ವಾಲ್ಕರ್) ಅವರಿಗಿದ್ದ ಆಶಯಗಳು, ಮುಸ್ಲಿಮರ ಬಗೆಗೆ ಆರ್ಎಸ್ಎಸ್ನ ದೃಷ್ಟಿಕೋನ, ಸಮಾಜ ಸುಧಾರಣೆ ಸೇರಿದಂತೆ ಹತ್ತಾರು ವಿಚಾರಗಳನ್ನು ನಿರರ್ಗಳವಾಗಿ, ಕೇಳುವವರ ಮನಮುಟ್ಟುವಂತೆ ಪ್ರಸ್ತಾಪಿಸಿದ್ದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು (ಆರ್ಎಸ್ಎಸ್) ಸ್ಥಾಪಿಸಿ ಅದರ ಕಾರ್ಯಚಟುವಟಿಕೆಗಳು ಹೀಗಿರಬೇಕೆಂಬ ಮುನ್ನುಡಿ ಬರೆದವರು ಡಾಕ್ಟರ್ಜಿ ಎಂದೇ ಖ್ಯಾತರಾದ ಸಂಘದ ಮೊದಲ ಸರಸಂಘಚಾಲಕ ಕೇಶವ ಬಲಿರಾಂ ಹೆಡ್ಗೇವಾರ್. ಡಾಕ್ಟರ್ಜಿ ಆಶಯಗಳಿಗೆ ಸೈದ್ಧಾಂತಿಕ ಚೌಕಟ್ಟು ನೀಡಿ, ಸಂಘದ ವ್ಯಾಪ್ತಿ ಜಗದಗಲ ವಿಸ್ತರಿಸಲು ಭದ್ರ ಬುನಾದಿ ಹಾಕಿದವರು ಗುರೂಜಿ ಎಂದೇ ಪ್ರಸಿದ್ಧರಾದ ಮಾಧವರಾವ್ ಸದಾಶಿವರಾವ್ ಗೋಲ್ವಾಲ್ಕರ್. ಇಂದು ನಮ್ಮ ರಾಜ್ಯ-ದೇಶವನ್ನು ಬಿಜೆಪಿ ಆಳುತ್ತಿದೆ. ಸಂಘಕ್ಕೆ ಡಾಕ್ಟರ್ಜಿ-ಗುರೂಜಿ ಜೋಡಿ ಎಷ್ಟು ಮುಖ್ಯವೋ, ಬಿಜೆಪಿ ಪಾಲಿಗೆ ಅಟಲ್ ಬಿಹಾರಿ ವಾಜಪೇಯಿ, ಲಾಲಕೃಷ್ಣ ಆಡ್ವಾಣಿ ಜೋಡಿ ಅಷ್ಟೇ ಮುಖ್ಯ. ಇವರಿಬ್ಬರಿಗೂ ಸಂಘವೇ ಮೂಲನೆಲೆಯಾದರೂ ಸಂಘದ ಆಶಯಗಳನ್ನು ಇವರಿಬ್ಬರೂ ಪರಿಭಾವಿಸಿದ್ದ ರೀತಿಯಲ್ಲಿ ಸಾಕಷ್ಟು ಭಿನ್ನತೆಯಿತ್ತು.
ಗುರೂಜಿ ನಿಧನದ ನಂತರ ಮಹಾರಾಷ್ಟ್ರದ ಸಾಂಗ್ಲಿಯ ಗ್ರಂಥಾಲಯದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು. 1972ರಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅಂದಿನ ಜನಸಂಘದ ನಾಯಕ ವಾಜಪೇಯಿ ತಮ್ಮ ದೀಕ್ಷಾ ಗುರುವಿನ ಒಡನಾಟವನ್ನು ಸುದೀರ್ಘವಾಗಿ ನೆನಪಿಸಿಕೊಂಡಿದ್ದರು. ಒಂದು ತಾಸು ಭಾಷಣದಲ್ಲಿ ಸಂಘದ ಮೂಲ ವಿಚಾರಧಾರೆಗಳು, ದೇಶ ಕಟ್ಟುವ ಬಗ್ಗೆ ಗುರೂಜಿ ಅವರಿಗಿದ್ದ ಆಶಯಗಳು, ಮುಸ್ಲಿಮರ ಬಗೆಗೆ ಆರ್ಎಸ್ಎಸ್ ದೃಷ್ಟಿಕೋನ, ಸಮಾಜ ಸುಧಾರಣೆ ಸೇರಿದಂತೆ ಹತ್ತಾರು ವಿಚಾರಗಳನ್ನು ವಾಜಪೇಯಿ ನಿರರ್ಗಳವಾಗಿ, ಕೇಳುವವರ ಮನಮುಟ್ಟುವಂತೆ ಪ್ರಸ್ತಾಪಿಸಿದ್ದರು.
ವಾಜಪೇಯಿ ಜನ್ಮದಿನದ (ಡಿ.25) ಹಿನ್ನೆಲೆಯಲ್ಲಿ ‘ಟಿವಿ9 ಕನ್ನಡ ಡಿಜಿಟಲ್’ ಈ ಭಾಷಣವನ್ನು ಕನ್ನಡದಲ್ಲಿ ಅಕ್ಷರರೂಪಕ್ಕಿಳಿಸಿದೆ. ‘ಭಾರತೀಯ ಸಮಾಜ ಒಡೆದುಹೋಗಬಾರದು. ಈ ದೇಹ ಚಂದನದಂತೆ ತೇಯಲಿ, ಉತ್ತಮ ಸಮಾಜ ರೂಪುಗೊಳ್ಳಲಿ’ ಎಂಬ ಗುರೂಜಿ ಅವರ ಆಶಯವನ್ನೇ ವಾಜಪೇಯಿ ತಮ್ಮ ಜೀವನದುದ್ದಕ್ಕೂ ಪಾಲಿಸಿದ್ದರು. ಈಗ ನಮ್ಮ ದೇಶ-ರಾಜ್ಯವನ್ನು ಆಳುತ್ತಿರುವ ನಾಯಕರಿಗೆ, ಬಿಜೆಪಿಯಲ್ಲಿ ಉನ್ನತ ಸ್ಥಾನಕ್ಕೆ ಏರಿರುವ ದೊಡ್ಡವರಿಗೆ ಸಂಘದ ಮೂಲ ಆಶಯಗಳ ಬಗ್ಗೆ ಅಂದು ವಾಜಪೇಯಿ ಏನು ಹೇಳಿದ್ದರು ಎಂಬುದು ನಿಜಕ್ಕೂ ಒಂದು ಪಾಠ.
—
ಅನೇಕ ವರ್ಷಗಳ ನಂತರ ನನಗೆ ನಿಮ್ಮನ್ನು ಭೇಟಿಯಾಗುವ ಅವಕಾಶ ಲಭಿಸಿದೆ. ಆದರೆ ಈ ಸೌಭಾಗ್ಯವು ದುರ್ಭಾಗ್ಯದ ಒಂದು ನೋವಿನ ಸಂಗತಿಯೊಂದಿಗೆ ಸೇರಿಕೊಂಡಿದೆ. ಇಲ್ಲಿ ಉಪಸ್ಥಿತರಿರುವವರು ನಮ್ಮೆಲ್ಲರಿಗೆ ವಿಶೇಷವಾಗಿ ಅವರಿಗೆ, ಪರಮಪೂಜ್ಯ ಶ್ರೀ ಗುರೂಜಿ ಅವರ ಚರಣದಲ್ಲಿ ಕುಳಿತು ಭಾರತದ ಭಕ್ತಿಯ ಪಾಠ ಕಲಿತವರು ಅಥವಾ ಅವರ ಜತೆ ಸೇರಿ ಸಹ ಕಾರ್ಯದಿಂದ ರಾಷ್ಟ್ರದ ಸೇವೆ ಮಾಡುವ ಅವಕಾಶ ಸಿಕ್ಕಿದವರು. ಇವರೆಲ್ಲರಿಗೂ ಇದು ಆಘಾತದ ಸಮಯ. ಪರಮ ಪೂಜ್ಯ ಗುರುಗಳು ನಮ್ಮ ನಡುವೆ ಇಲ್ಲ. ಇವತ್ತು ಕೇವಲ ಚಿತ್ರದಲ್ಲಿ ನಾವು ಅವರನ್ನು ನೋಡುತ್ತಿದ್ದೇವೆ. ನಾವೀಗ ಅವರ ಚಿತ್ರವನ್ನು ಅನಾವರಣ ಮಾಡುತ್ತಿದ್ದೇವೆ. ಸಾವಿನ ಮುನ್ನ ನನ್ನ ಸ್ಮಾರಕ ಮಾಡಬಾರದು ಎಂದು ಅವರು ಹೇಳಿದ್ದರು.
ಇವತ್ತು ನೀವು ಚಿತ್ರವನ್ನು ಮಾಡಿದ್ದೀರಿ. ನಾಳೆ ಯಾರದರೊಬ್ಬರು ಅವರ ಮೂರ್ತಿಯನ್ನು ಮಾಡಲು ಯತ್ನಿಸಬಹುದು. ನಾಡಿದ್ದು ಯಾರೊಬ್ಬರು ಅವರ ನೆನಪಿನಲ್ಲಿ ಮಂದಿರ ಕಟ್ಟಬಹುದು. ಆದರೆ ಇದೆಲ್ಲವೂ ಅವರ ಆಶಯಗಳಿಗೆ ತದ್ವಿರುದ್ಧವಾಗಿರುತ್ತದೆ. ಇವರು ಅವರ ಎಲ್ಲ ಕೆಲಸವನ್ನು ಅವರೇ ಮಾಡಿಹೊರಟರು, ನಮಗೆ ಅವರು ಏನೂ ಬಿಟ್ಟು ಹೋಗಿಲ್ಲ. ಅವರು ನಮಗಾಗಿ ಏನೂ ಬಿಟ್ಟು ಹೋಗಿಲ್ಲ ಎಂದು ಹೇಳುವುದೂ ಸರಿಯಲ್ಲ. ನಮಗಾಗಿ ಅವರು ರಾಷ್ಟ್ರಭಕ್ತಿಯ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ . ಸಮಾಜವನ್ನು ಸಂಘಟಿತ, ನಿಯಮಬದ್ಧ ಮತ್ತು ಶಕ್ತಿಶಾಲಿ ಮಾಡಲಿರುವ ಒಂದು ಅಪೂರ್ಣ ಕಾರ್ಯವನ್ನು ಬಿಟ್ಟುಹೋಗಿದ್ದಾರೆ. ಭಾರತವನ್ನು ಪರಮ ವೈಭವದ ಶಿಖರಕ್ಕೆ ತಲುಪಿಸಲಿರುವ ದೊಡ್ಡ ಕನಸನ್ನು ಬಿಟ್ಟು ಹೋಗಿದ್ದಾರೆ.
ಕಾರ್ಪರೇ ಅವರು ಹೇಳಿದಂತೆ ಜೀವನದುದ್ದಕೂ ನಂದಾದೀಪದಂತೆ ಅವರು ಹೊತ್ತಿ ಉರಿಯುತ್ತಿರುತ್ತಾರೆ. ಸ್ವಯಂ ಉರಿಯುತ್ತಾ ಬೆಳಕಾದರು. ಅಂಧಕಾರದ ಶಕ್ತಿಯೊಂದಿಗೆ ಹೋರಾಡುತ್ತಿದ್ದರು. ಈ ಹೋರಾಟದಲ್ಲಿ ಅವರು ಎಂದಿಗೂ ವಿಶ್ರಾಂತಿ ಕೇಳಲಿಲ್ಲ. ಆರಾಮವಾಗಿರಲಿಲ್ಲ. ಕರ್ತವ್ಯದ ಪಥದಲ್ಲಿ ಅವರು ನಿಲ್ಲಲಿಲ್ಲ, ಬಗ್ಗಲಿಲ್ಲ. ಅವರು ಮುಂದೆ ಹೋಗುತ್ತಲೇ ಇದ್ದರು. ಉಪನಿಷತ್ತಿನ ಮಂತ್ರ ಅವರ ಜೀವನದಲ್ಲಿ ಸಾಕಾರವಾಯಿತು. ಶರೀರದ ಕಣಕಣ ಜೀವನದ ಕ್ಷಣಕ್ಷಣ ಆಹೋರಾತ್ರ ದೇಶದ ಚಿಂತೆ. ಆ ಚಿಂತೆ ಅವರಲ್ಲಿ ನಿರಾಶೆ ಉಂಟು ಮಾಡಲಿಲ್ಲ. ಆ ಚಿಂತನೆ ಅವರಲ್ಲಿ ನಿಷ್ಕೃಯತೆಯನ್ನುಂಟು ಮಾಡಲಿಲ್ಲ. ನಮ್ಮ ಸಮಾಜದಲ್ಲಿ ತುಂಬಾನೇ ಯೋಚನೆ ಮಾಡುವ ಜನರು ನಮಗೆ ಸಿಗುತ್ತಾರೆ. ಅವರು ಹೇಳುತ್ತಾರೆ ನಿಮ್ಮ ದೇಶ ಇನ್ನು ಉಳಿಯಲ್ಲ ಎಂದು ಹೇಳುತ್ತಾರೆ. ಕೆಲವರು ಎಷ್ಟು ನಿರಾಶಾವಾದಿಗಳು ಎಂದರೆ ಅವರ ಸಂಪರ್ಕಕ್ಕೆ ಬಂದವರಲ್ಲಿಯೂ ನಿರಾಶೆ ಉಂಟು ಮಾಡುತ್ತಾರೆ. ಪರಮಪೂಜ್ಯ ಗುರೂಜಿ ಈ ಬಗ್ಗೆ ಚಿಂತಿತರಾಗಿರಲಿಲ್ಲ ಅಂತಲ್ಲ. ಆ ಯೋಚನೆಯಿಂಂದ ಅವರೊಂದು ಕಿಡಿ ಹುಟ್ಟಿಸಲು ಬಯಸುತ್ತಿದ್ದರು. ಈಗ ದೇಶದ ಸ್ಥಿತಿ ಉತ್ತಮವಾಗಿರದೇ ಇದ್ದೆರ ನಾವು ಅದನ್ನು ಉತ್ತಮ ಪಡಿಸುತ್ತೇವೆ. ನಾವು ಇವತ್ತು ದುರ್ಬಲರಾಗಿದ್ದರೆ ಅಥವಾ ಅಭಾವದಲ್ಲಿದ್ದರೆ ಭಾರತ ಮಾತೆಯ ಪುತ್ರಿ ಅಥವಾ ಪುತ್ರ, ಗೌರವ-ಸಮೃದ್ಧಿಯಿಂದ ಜೀವನ ನಡೆಸಲು ಸಾಧ್ಯವಾಗದೇ ಇದ್ದರೆ ಇದು ನಮ್ಮ ಪಾಲಿಗೆ ಸವಾಲಿನ ವಿಷಯ. ನಾವು ಈ ಸವಾಲನ್ನು ಸ್ವೀಕರಿಸಿ ಭಾರತದವನ್ನು ಬದಲಿಸುತ್ತೇವೆ. ಅವರ ಆಲೋಚನೆಯಲ್ಲಿ ಈ ಕನಸು ಹುಟ್ಟುತ್ತಿತ್ತು. ಆಗಾಗಾ ನನ್ನ ಕಣ್ಣಮುಂದೆ ಆ ಕೊನೆಯ ದಿನದ ಚಿತ್ರ ಬರುತ್ತದೆ.
ಜೂನ್ 5ರಂದು ನಂದು ಬೆಳ್ ಬೆಳಗ್ಗೆ ಅವರನ್ನು ಭೇಟಿಯಾದ ದೌರ್ಭಾಗ್ಯಶಾಲಿ ನಾನು. ನಾವು ರಾತ್ರಿ ಇಡೀ ಆಜರಾರಬಾದ್ನಿಂದ ಕಾರಿನಲ್ಲಿ ಪ್ರಯಾಣಿಸಿ ಹೆಗ್ಗಡೆ ವಾರ್ ಭವನ ಮುಟ್ಟಿದಾಗ ಪರಮಪೂಜ್ಯ ಗುರುಗಳ ಭೇಟಿ ಮಾಡುವ ಇಚ್ಛೆ ನಮಗಿತ್ತು. ಸಂಧ್ಯಾವಂದನೆ ಮಾಡಿ ಕುಳಿತಿದ್ದರು. ಸಂಧ್ಯಾ ಕ್ರಮ ಯಾವತ್ತೂ ನಿಂತಿಲ್ಲ. ಸಂಘದ ಪ್ರಾರ್ಥನೆ ಪ್ರತಿದಿನ ಮಾಡುವುದು ಯಾವುದೂ ತಪ್ಪಲಿಲ್ಲ. ಸಂಜೆಯ ನಂತರ ಭೇಟಿಯಾಗಬೇಕು ಎಂದು ನಾವು ಅಲ್ಲಿ ತಲುಪಿದಾಗ ಅದೇ ಸ್ನಿಗ್ದ ನಗು ಮನಸೂರೆಗೊಳ್ಳುವ, ತಾಪ ನಿವಾರಣೆ ಮಾಡುವಂಥದ್ದು. ಎಷ್ಟೇ ಸುಸ್ತಾಗಿದ್ದರೂ ಎಷ್ಟೇ ಚಿಂತಿರಾಗಿದ್ದರೂ ಒಂದು ಬಾರಿ ಪರಮಪೂಜ್ಯ ಗುರೂಜಿ ಅವರನ್ನು ಭೇಟಿ ಮಾಡಿದರೆ, ಅವರ ನೋಟ ಬಿದ್ದರೆ ಸಾಕು ಆ ಸುಸ್ತು ಹೋಗಿಬಿಡುತ್ತದೆ. ಅವತ್ತೂ ಅವರು ತುಂಬಾ ಸುಸ್ತಾಗಿದ್ದರು, ಅವರನ್ನ ನೋಡಿದ ಯಾವುದೇ ವ್ಯಕ್ತಿಗೂ ಅದು ಅರ್ಥವಾಗುತ್ತಿರಲಿಲ್ಲ. ಆದರೆ ಕೆಲವರಿಗೆ ಅರ್ಥವಾಗುತ್ತಿತ್ತು. ಡಾ. ಅಭಾಜಿ ಥತ್ತೆ ಅಲ್ಲಿದ್ದರು. ಅವರು ಎಲ್ಲರನ್ನೂ ಪರಿಚಯ ಮಾಡಿಕೊಂಡರು.
ಆಜರಾಬಾದ್ನಿಂದ ಬಂದ ಇವರು ಯಾರು? ಅವರು ಯಾರು? ಇವರು ನಿಮ್ಮ ಮನೆಯಲ್ಲಿ ಉಳಿದಿದ್ದಾರೆಯೇ? ಈ ಸ್ವಯಂ ಸೇವಕನ ಹೆಸರು ಏನು? ನಾವು ಜನಸಂಘ ಕಾರ್ಯಕರ್ತರಾಗಿದ್ದೆವು. ಕಾರ್ಯಕ್ರಮ ಹೇಗಾಯಿತು? ಆಮೇಲೆ ಒಬ್ಬ ವೈದ್ಯರನ್ನು ಪರಿಚಯಿಸಿದರು. ಆಗ ಅವರು ಕೇಳಿದರು ಯಾವ ವೈದ್ಯರು? ನನಗೊಬ್ಬ ವೈದ್ಯರು ಗೊತ್ತು, ಅವರು ರೋಗಿಯನ್ನು ನೋಡಲು ಹೋಗಿದ್ದರು. ರೋಗಿಯಲ್ಲಿ ಕೇಳಿದರು ನಿಮಗೇನು ಸಮಸ್ಯೆ ಇದೆ ಅಂತ. ಆಗ ರೋಗಿ ಹೇಳಿದರು. ನನಗೆ ಸಮಸ್ಯೆ ಏನು ಇದೆ ಎಂಬುದನ್ನು ನೀವೇ ಹೇಳಬೇಕು. ನಾನೇ ಸಮಸ್ಯೆ ಹೇಳುವುದಾದರೆ ನಿಮ್ಮ ಅಗತ್ಯ ಏನಿತ್ತು? ನೀವು ಡಾಕ್ಟರ್ ನೀವೇ ಹೇಳಿ ನನಗೇನು ಸಮಸ್ಯೆ ಇದೆ ಅಂತ. ಆಗ ಡಾಕ್ಟು ಹೇಳಿದರು ತಾಳಿ, ನಾನುಒಬ್ಬ ವೈದ್ಯರನ್ನು ಕರೆ ತರುತ್ತೇನೆ ಅವರು ನಿನ್ನಲ್ಲಿ ಕೇಳದೆಯೇ ನಿನ್ನ ಸಮಸ್ಯೆ ಏನು ಎಂದು ಹೇಳುತ್ತಾರೆ. ಆ ಡಾಕ್ಟರ್ ಹೊರಗೆ ಬಂದು ಒಂದು ವೆಟರ್ನರಿ ಸರ್ಜನ್ ನನ್ನು ಕರೆದುಕೊಂಡು ಬಂದರು. ಇವರು ಪ್ರಾಣಿಗಳ ಡಾಕ್ಟರ್, ಇವರು ನಿಮಗೆ ಚಿಕಿತ್ಸೆ ನೀಡಬಲ್ಲರು. ಇವರು ರೋಗಿಗಳಿಗೆ ಏನು ಸಮಸ್ಯೆ ಇದೆ ಎಂಬುದನ್ನು ಹೇಳಬೇಕಾಗಿಲ್ಲ . ಅವರಿಗೆ ಎಲ್ಲವೂ ಅರ್ಥವಾಗಿ ಬಿಡುತ್ತದೆ. ನಮ್ಮ ಜತೆ ಇದ್ದ ವೈದ್ಯರಲ್ಲಿ ಗುರೂಜಿ ಕೇಳಿದರು ನೀವು ಯಾವ ವೈದ್ಯರು ಎಂದು. ಅದೊಂದು ತಮಾಷೆ. ಅವರಿಗೂ ಗೊತ್ತಿತ್ತು ಆ ಡಾಕ್ಟರ್ ಯಾರು ಎಂಬುದು
ಮೃತ್ಯು ಬಾಗಿಲಲ್ಲಿ ನಿಂತಿತ್ತು. ಶರೀರ ಸಹಕರಿಸುತ್ತಿರಲಿಲ್ಲ. ಸಂಸಾರದ ಬಂಧನ ಒಂದೊಂದಾಗಿ ಕಳಚಿಕೊಂಡು ಹೋಗುತ್ತಿತ್ತು. ಗುರೂಜಿಗೆ ಗೊತ್ತುತ್ತು ಸಾವಿನ ಕರೆ ಬಂದಿದೆ ಎಂದು. ಪ್ರಾತಃಕಾಲಕ್ಕೆ ಹೇಳಿದ್ದರು, ಅವರು ಸಮಯ ಬರುತ್ತಿದೆ ಎಂದು For whom the bell rang.. ಈ ಗಂಟೆ ಯಾರಿಗಾಗಿ ಬಾರಿಸುತ್ತಿದೆ?
ಒಬ್ಬ ಸ್ವಯಂ ಸೇವಕ ಬಂದಾಗ ಮರಣವನ್ನೂ ಪಕ್ಕಕಿಟ್ಟರು. ನೋವನ್ನು ನುಂಗಿದರು ಶರೀರದ ವ್ಯಥೆಯನ್ನು ಮರೆತರು. ಸ್ವಯಂ ಸೇವಕರೊಂದಿಗೆ ನಕ್ಕರು, ಹಾಸ್ಯಮಾಡಿದರು. ಚಹಾ ತನ್ನಿ ಎಂದರು. ಚಹಾ ಅವರಿಗೆ ಮಾತುಕತೆಗಿರುವ ವಿಷಯವಾಗಿತ್ತು. ಅವರಿಗೆ ನೆನಪಿತ್ತು ಯಾರು ಚಹಾ ಕುಡಿಯುತ್ತಾರೆ? ಇಲ್ಲ ಎಂಬುದು. ನನಗೆ ಹೊಟ್ಟೆಯಲ್ಲಿ ಸಮಸ್ಯೆ ಇತ್ತು ಹಾಗಾಗಿ ನಾನು ಚಹಾ ಕುಡಿಯುವುದು ನಿಲ್ಲಿಸಿದ್ದೆ. ಆಪರೇಷನ್ ನಂತರ ನಾನು ಚಹಾ ಕುಡಿಯುತ್ತಿದ್ದೆ. ಆದರೆ ಅವರಿಗೆ ನೆನಪಿತ್ತು ನಾನು ಚಹಾ ಕುಡಿಯುವುದಿಲ್ಲ ಎಂದು. ಇವ ಚಹಾ ಕುಡಿಯುವುದಿಲ್ಲ ಹಾಲು ತಾ ಎಂದರು. ನಾನು ಹೇಳಿದೆ, ನಾನು ಚಹಾ ಕುಡಿಯುವುದನ್ನು ಶುರು ಮಾಡಿದ್ದೇನೆ ಎಂದು. ಆಗ ಅವರು ಹೇಳಿದರು ಒಳ್ಳೇದಾಯ್ತು ಆ ಕಷ್ಟ ನಿವಾರಣೆ ಆಯ್ತಲ್ಲ. ಒಂದು ಕ್ಷಣ ನನಗೆ ನೆನಪಿಗೆ ಬಂದದ್ದು ಶರಶಯ್ಯೆಯಲ್ಲಿರುವ ಭೀಷ್ಮ ಪಿತಾಮಹ. ಮುಂದಿನ ಕ್ಷಣದಲ್ಲಿ ನೆನಪಾದದ್ದು ಭೀಷ್ಮರು ನ್ಯಾಯದ ಪಕ್ಷದಲ್ಲಿದ್ದರು. ಆದರೆ ಈ ತೇಜಸ್ವಿ, ತಪಸ್ವಿ ವ್ಯಕ್ತಿ ಪ್ರತಿ ಗಳಿಗೆ ಧರ್ಮಕ್ಕಾಗಿ ಹೋರಾಡಿದರು. ಇವರು ನ್ಯಾಯಕ್ಕಾಗಿ ಹೋರಾಡಿದರು. ಇವರು ಯಾವತ್ತೂ ಕೌರವರ ಪಕ್ಷದಲ್ಲಿರಲಿಲ್ಲ. ಅವರು ನಮಗೆ ಸಲಹೆ ನೀಡುತ್ತಿದ್ದದ್ದು ‘ವಯಂ ಪಂಚಾಧಿಕಂ ಶತಂ’.
ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನಿರ್ಬಂಧ ಹೇರಲಾಯಿತು. ಮಹಾತ್ಮ ಗಾಂಧಿಯವರ ಹತ್ಯೆಯ ಆರೋಪ ಮಾಡಿದವರಿಗೂ ಗೊತ್ತಿತ್ತು ಆರೋಪ ನಿರಾಧಾರವೆಂದು. ಅದು ಹಗೆಯಿಂದ ಕೂಡಿದ್ದಾಗಿತ್ತು. ಆದರೂ ಆರೋಪ ಮಾಡಿದರು. ಪರಮ ಪೂಜ್ಯ ಗುರೂಜಿ ತಮ್ಮ ಧೈರ್ಯವನ್ನು ಬಿಡಲಿಲ್ಲ, ವಿಚಲಿತರಾಗಲಿಲ್ಲ. ಅವರು ಸ್ವಯಂ ಸೇವಕರಲ್ಲಿ ಹೇಳಿದರು ಇದು ಪರೀಕ್ಷೆಯ ಸಮಯ. ಸಂಯಮದಿಂದ ಕೆಲಸ ಮಾಡಿ. ನಿರ್ಬಂಧ ತೆಗೆದುಹಾಕಬೇಕಾಗಿ ಬಂತು. ಅವರು ಆರೋಪ ಮುಕ್ತರಾಗಿ ಜೈಲಿನಿಂದ ಹೊರ ಬಂದಾಗ ಲಕ್ಷೋಪಲಕ್ಷ ಜನರು ಸಂತೋಷಗೊಂಡರು. ಆ ರೀತಿಯ ಸ್ವಾಗತ ಅನೇಕ ನಗರದಲ್ಲಿ ಅನೇಕ ವ್ಯಕ್ತಿಗಳಿಗೆ ಸಿಗಲಿಲ್ಲ. ಸ್ವಾಗತದ ನಂತರವೂ ಅವರು ಹೇಳಿದ್ದೇನು ಅಂದರೆ ನಮ್ಮನ್ನು ಬಂಧಿ ಮಾಡಿದವರು, ರಾಷ್ಟ್ರಕಾರ್ಯಕ್ಕೆ ನಿರ್ಬಂಧ ಹೇರಿದವರ ವಿರುದ್ಧ ನಮ್ಮ ‘ಮನಸ್ಸಿನಲ್ಲಿ ಯಾವುದೇ ದ್ವೇಷವಿಲ್ಲ’.
ವಯಂ ಪಚಾಂದಿಕಂ ಶತಂ. ನಾವು ನೂರೋ ಐದೋ ಅಲ್ಲ, ನಾವು ನೂರೈದು. ಆಗಲೂ ಒಂದು ಕ್ಷಣಕ್ಕೆ ನನಗೆ ಅವರು ಭೀಷ್ಮ ಪಿತಾಮಹನಂತೆ ಕಂಡರು ಯಾಕೆಂದರೆ ಭೀಷ್ಮ ಪಿತಾಮಹ ಕೂಡಾ ಇಚ್ಛಾ ಮರಣಿಯಾಗಿದ್ದರು. ಅವರು ಬಯಸಿದಾಗ ಶರೀರ ತ್ಯಾಗ ಮಾಡಿದರು. ಪರಮ ಪೂಜ್ಯ ಗುರುವನ್ನು ನಾನು ನೋಡಿದಾಗ ಅವರಿಗೆ ಗೊತ್ತಿತ್ತು ಮೃತ್ಯು ಬರುತ್ತಿದೆ ಎಂದು. ಆದರೆ ಅವರು ಮಂಚದಲ್ಲಿ ಮಲಗಿರಲಿಲ್ಲ. ಅಗತ್ಯ ಕಾರ್ಯಕ್ಕಾಗಿಯೂ ಬಾತ್ ರೂಂಗೆ ಹೋಗುತ್ತಿದ್ದರು. ನೀವು ಇಲ್ಲೇ ಕುಳಿತಿರಿ ನಾವು ಕಮೋಡ್ ತರುತ್ತೇವೆ ಎಂದು ಡಾಕ್ಟರ್ ಹೇಳುತ್ತಿದ್ದರು. ಅವರು ಬೇಡ ಅನ್ನುತ್ತಿದ್ದರು. ಅವರು ಕುಳಿತು ಯೋಗ ಮುದ್ರೆಯಲ್ಲಿ ಪ್ರಾಣ ತ್ಯಾಗ ಮಾಡಿದರು. ಮರಣದಲ್ಲಿಯೂ ಅವರು ಮಹಾನ್ ಆಗಿ ಬಿಟ್ಟರು.
ಒಮ್ಮೊಮ್ಮೆ ಬದುಕಿನಲ್ಲಿ ತುಂಬಾ ಚೆನ್ನಾಗಿ ಬದುಕಿದವರು ಕೂಡಾ ಸಾವಿನ ಭಯದ ಮುಂದೆ ನಡುಗಿ ಬಿಡುತ್ತಾರೆ. ಆದರೆ ಪರಮಪೂಜ್ಯ ಗುರೂಜಿ ಅವರ ವ್ಯಕ್ತಿತ್ವ ಹಾಗಿರಲಿಲ್ಲ. ಸಾವು ಅವರಿಗೆ ಒಂದು ಆಟವಾಗಿತ್ತು. ಜೀವನ ಅವರಿಗೆ ಸಮರ್ಪಣೆ ಆಗಿತ್ತು. ಸಮಾಜ ಅವರಿಗೆ ಪರಮಾತ್ಮನ ಸೌಭಾಗ್ಯ ಆಗಿತ್ತು. ರಾಜಕೀಯ ಅವರಿಗೆ ಉಸಿರಾಟದಂತೆ ಅವಶ್ಯಕವಾಗಿತ್ತು. ಒಮ್ಮೊಮ್ಮೆ ಹೇಳುತ್ತಿದ್ದರು, ಉಸಿರಾಟವಿಲ್ಲದೆ ಯಾರಿಗಾದರೂ ಬದುಕಲು ಸಾಧ್ಯವೇ? ಎಂದು. ನಾವು ದೇಶಸೇವೆ ಮಾಡದಿದ್ದರೆ ಸಮಾಜವನ್ನು ಸಂಘಟಿತ ಮಾಡದೇ ಹೋದರೆ ನಾವು ಇದನ್ನು ಬಲಶಾಲಿ ಮಾಡದಿದ್ದರೆ, ಬೇಧ ಭಾವದಿಂದ ಮುಕ್ತ ಮಾಡದೇ ಇದ್ದರೆೆ ನಾವು ಸಂಘಟಿತರಾಗದೇ ಇದ್ದರೆ ಇದು ಯಾವ ರೀತಿ ಇರುತ್ತದೆ ಎಂದರೆ ನಾವು ಉಸಿರಾಡುತ್ತಿಲ್ಲ ಎಂದು ಹೇಳಿದ ಹಾಗೆ. ಉಸಿರಾಡದೇ ಇದ್ದರೆ ನಮಗೆ ಬದುಕಲು ಸಾಧ್ಯವೇ. ಸಂಘಟಿತರಾಗದೇ ಇದ್ದರೆ ಸಮಾಜ ಉಳಿಯಬಲ್ಲದೆ? ಆದರೆ ಅವರ ಕಾರ್ಯದಲ್ಲಿ ಎಷ್ಟು ನಿಷ್ಠೆ ಅಂದರೆ ಅವರ ಜತೆ ಇರುವರಿಗೆ ಅವರು ಧೈರ್ಯ ತುಂಬುತ್ತಿದ್ದರು.
ಭಕ್ತಿಯೇ ಭಗವಂತನ ಪ್ರಾಪ್ತಿಯ ಲಕ್ಷ್ಯ. ಮಾರ್ಗವೇ ಮಂದಿರವೂ ಆಗಿ ಬಿಡುತ್ತದೆ. ಭಕ್ತಿಯೇ ಭಗವಂತನ ರೂಪ ಪಡೆದುಕೊಳ್ಳುತ್ತದೆ. ದೇಹವೇ ಸಾಧನವಾಗಿ ಬದಲಾಗುತ್ತದೆ. ದೇಹದ ಜತೆ ಅಷ್ಟೊಂದು ತಾದಾತ್ಮ್ಯವನ್ನು ಅವರು ತಮ್ಮ ಜೀವನದಲ್ಲಿ ತೋರಿಸಿಕೊಟ್ಟರು. ದೇಶದಲ್ಲಿ ಹಲವಾರು ನೇತಾರರಿದ್ದರು, ಭವಿಷ್ಯದಲ್ಲಿಯೂ ಬರಬಹುದು. ಒಬ್ಬ ಚಿಕ್ಕ ನೇತಾರನೆಂದು ನನ್ನನ್ನೂ ಪರಿಗಣಿಸುತ್ತಾರೆ. ಆದ್ದರಿಂದಲೇ ನನ್ನನು ಥಿಯೇಟರ್ನ ಈ ವೇದಿಕೆಯಲ್ಲಿ ನಿಲ್ಲಿಸಲಾಗಿದೆ. ನೇತಾ ಮತ್ತು ಅಭಿನೇತಾ. ಆದರೆ ನೇತಾದ ಅರ್ಥ, ಜತೆಗೆ ಕರೆದುಕೊಂಡು ಹೋಗುವುದು. ನೇತಾ ಅಂದರೆ ಜತೆಗೆ ಕರೆದೊಯ್ಯುವವ, ಕರೆದುಕೊಂಡು ಹೋಗುವವ. ನನಗೆ ನೆನಪಿದೆ ಪರಮಪೂಜ್ಯ ಗುರೂಜಿಯನ್ನ ಅಲಹಾಬಾದ್ ವಿಶ್ವ ವಿದ್ಯಾಲಯಕ್ಕೆ ಕರೆದಿದ್ದರು. ಕೆಲವು ವಿಘ್ನ ಸಂತೋಷಿಗಳು (ನಾನು ಅವರ ಹೆಸರನ್ನು ಹೇಳಲು ಇಚ್ಛಿಸುವುದಿಲ್ಲ) ಗುರೂಜಿಯನ್ನು ಭಾಷಣ ಮಾಡಲು ಬಿಡಬಾರದು ಎಂದು ನಿರ್ಧರಿಸಿದ್ದರು. ಸಾವಿರಾರು ಯುವ ವಿದ್ಯಾರ್ಥಿಗಳು ಭಾಷಣ ಕೇಳಿಯೇ ಹೋಗಬೇಕೆಂದು ಸಿದ್ಧತೆ ಮಾಡಿಕೊಂಡು ಬಂದಿದ್ದರು. ಭಾಷಣ ನಡೆದೇ ಹೋಯ್ತು. ವಿರೋಧ ಮಾಡುವವರು ಹತ್ತಿಪ್ಪತ್ತು ಮಂದಿ ಇದ್ದರು. ಅವರಿಗೆ ತುಂಬ ಗೌರವದಿಂದ ಅರ್ಧ ಚಂದ್ರ ನೀಡಿ ಹಾಲ್ನಿಂದ ಹೊರ ಹಾಕಲಾಯಿತು.
ಆವಾಗ ಗುರೂಜಿಯಲ್ಲಿ ಕೇಳಿದರು, ಪ್ರಗತಿ ಅಂದರೆ ಏನು. ಪ್ರತೀ ಗತಿಯೂ ಪ್ರಗತಿಯೇ. ಯಾರಾದರೊಬ್ಬರೂ ಬೆಟ್ಟದ ತುದಿಯಿಂದ ನೆಗೆದು See how rapidly I am progressing (ನಾನು ಎಷ್ಟು ಬೇಗ ಮುಂದುವರಿಯುತ್ತಿದ್ದೇನೆ) ಎಂದು ಹೇಳಿದರೆ, (ಅವನ ಪ್ರಕಾರ) ಅಭಿವೃದ್ಧಿ ಆಗ್ತಿದೆ. ಆದರೆ ಅವನು ಪ್ರಪಾತಕ್ಕೆ ಹೋಗುತ್ತಿದ್ದಾನೆ. ಒಬ್ಬ ನೇತಾ ದೇಶವನ್ನು ಪ್ರಪಾತಕ್ಕೆ ಬೀಳಿಸುತ್ತಾನೆ ಎಂದಾದರೆ ಅವ ನೇತಾರ ಅಲ್ಲ, ಶಿಖರಕ್ಕೆ ಒಯ್ಯಬೇಕು. ಶಿಖರಕ್ಕೆ ಹೋಗಬೇಕಾದರೆ ಅದಕ್ಕೆ ಯಾವುದೇ ಶಾರ್ಟ್ ಕಟ್ ಇಲ್ಲ.
ಪ್ರತಿಯೊಂದು ಹೆಜ್ಜೆಯನ್ನೂ ಗಟ್ಟಿಯಾಗಿ ಇಡಬೇಕಾಗುತ್ತದೆ. ಪರಿಶ್ರಮ ಬೇಕಾಗುತ್ತದೆ, ಬೆವರು ಸುರಿಸಬೇಕಾಗುತ್ತದೆ. ಸಾಧನೆ ಮಾಡಬೇಕಾಗುತ್ತದೆ, ಉರಿಯಬೇಕಾಗುತ್ತದೆ, ಚಂದನದಂತೆ ತೇಯಬೇಕಾಗುತ್ತದೆ. ಹಾಗಿದ್ದರೇನೇ ಶಿಖರಕ್ಕೆ ಹತ್ತಲು ಸಾಧ್ಯವಾಗುತ್ತದೆ. ಶಿಖರದಿಂದ ಕೆಳಗೆ ಬರಲು ಶಾರ್ಟ್ ಕಟ್ ಇರುತ್ತದೆ. ಮೇಲೆ ಹೋಗಿ ಕೆಳಗೆ ಬರಲು ತುಂಬಾ ಸುಲಭ. ಆದರೆ ಕೆಳಗಿನಿಂದ ಮೇಲೇರುವುದಕ್ಕೆ ಸಾಧನೆ ಬೇಕು. ಪರಮ ಪೂಜ್ಯ ಗುರೂಜಿಯ ಸಾಧನೆ ಅಖಂಡವಾಗಿತ್ತು. ಅನನ್ಯ ಆರಾಧನೆ ಒಂದು ಪವಿತ್ರ ಪೂಜೆ. ಸಮಾಜದ ಚರಣದಲ್ಲಿ ಸಮರ್ಪಿತವಾಗಿತ್ತು. ಅವರ ಜೀವನದಿಂದ ಪ್ರೇರಿತರಾಗಿ ಜನರು ಮನೆ ಬಿಟ್ಟು ಹೊರಟರು. ಒಮ್ಮೊಮ್ಮೆ ಅವರಲ್ಲಿ ಕೆಲವರು ನಿರಾಶೆಯಿಂದ ವಾಪಸ್ ಬರುತ್ತಿದ್ದರು. ಸಮಾಜದಲ್ಲಿ ಎಷ್ಟು ಕಾರ್ಯಗಳು ಆಗಬೇಕಿತ್ತೋ ಅಷ್ಟು ಆಗದೇ ಇದ್ದಾಗ, ಜನರು ಸ್ವಾರ್ಥಿಗಳಾದರು. ಚಿಕ್ಕಚಿಕ್ಕ ವಿಷಯಗಳಿಗೆ ಜಗಳವಾಡುತ್ತಿದ್ದರು. ನಮ್ಮ ಜೀವನದಲ್ಲಿ ಯಾವುದಾದರೂ ಕಾರ್ಯ ಪೂರ್ಣಗೊಳ್ಳದೇ ಇದ್ದರೆ ಗುರೂಜಿ ಹೇಳುತ್ತಿದ್ದರು. ಹಾಗಾದರೆ ಪುನರ್ ಜನ್ಮ ಪಡೆದು ಮತ್ತೊಮ್ಮೆ ಇದೇ ಭೂಮಿಯಲ್ಲಿ ಹುಟ್ಟುವೆ, ಅಪೂರ್ಣವಾದ ಕೆಲಸವನ್ನು ಪೂರ್ಣಗೊಳಿಸುವೆ ಎಂದು. ಹೀಗಿದ್ದರೆ ನಿರಾಶೆಯ ಮಾತೆಲ್ಲಿ? ಈ ಜನ್ಮದಲ್ಲಿ ಅಲ್ಲದೇ ಹೋದರೆ ಮುಂದಿನ ಜನ್ಮದಲ್ಲಿ ನಾನು ಭಾರತವನ್ನು ಬದಲಿಸುವೆ. ನಾನು ಯಾವ ರೀತಿ ಭಾರತವನ್ನು ಬದಲಿಸುತ್ತೇನೆ ಎಂದರೆ ಜಗತ್ತು ಮಾರ್ಗದರ್ಶನಕ್ಕಾಗಿ ತಿರುಗಿ ನೋಡಬೇಕು. ಇದೇ ಭಾರತವನ್ನು ಪರಮ ವೈಭವ ಶಿಖಕ್ಕೇರಿಸುವ ಲಕ್ಷ್ಯದ ಅರ್ಥ. ಇದರಲ್ಲಿ ಯಾವುದೇ ಮತ ಭೇದಭಾವಗಳು ಇರುವುದಿಲ್ಲ. ಸಮಾಜದ ಪುನರ್ ಸಂಘಟನೆ ಹೇಗೆ ಮಾಡಬೇಕು ಪ್ರತಿಯೊಂದು ವಿಚಾರವೂ ವಿಭಿನ್ನವಾಗಿರುತ್ತದೆ.
ಪ್ರಜಾತಂತ್ರದಲ್ಲಿ ಭಿನ್ನಾಭಿಪ್ರಾಯ ಸ್ವಾಭಾವಿಕ. ಸ್ವಾಭಾವಿಕ ಅಷ್ಟೇ ಅಲ್ಲ ಅಗತ್ಯ ಕೂಡಾ. ವಿಚಾರದ ಮಂಥನ ನಡೆಯುವಾಗ ನಿಷ್ಕರ್ಷದ ನವನೀತ ಬರುತ್ತದೆ. ಆ ನವನೀತ ಸಮಾಜವನ್ನು ಪುಷ್ಟ ಮಾಡುತ್ತದೆ. ಶಕ್ತಿಶಾಲಿ ಮಾಡುತ್ತದೆ. ನಮ್ಮಲ್ಲಿ ವಿಚಾರ ಮಂಥನಕ್ಕೆ ಯಾವುದೇ ಅಡ್ಡಿ ಮಾಡುವುದಿಲ್ಲ. ಪ್ರಾಚೀನ ಕಾಲದಿಂದಲೂ ಇಲ್ಲಿ ಅನೇಕ ವಿಚಾರಗಳನ್ನು ಮಂಡಿಸುವ ಅಧಿಕಾವಿತ್ತು. ಖಂಡನೆಯಾಗುತ್ತಿತ್ತು, ಮಂಡನೆಯಾಗುತ್ತಿತ್ತು. ಜ್ಞಾನದ ವಿಷಯಗಳ ಚರ್ಚೆ ಆಗುತ್ತಿತ್ತು. ಈ ಚರ್ಚೆಯಲ್ಲಿ ಪರಾಭವಗೊಂಡವರು ಪರಾಜಯವನ್ನು ಒಪ್ಪಿಕೊಳ್ಳುತ್ತಿದ್ದರು. ಆದರೆ ಈಗ ಹಾಗಾಗುವುದಿಲ್ಲ.
ಈಗ ನಮ್ಮಲ್ಲಿ ಸಂಖ್ಯೆ ನೋಡಿ, ಸಂಖ್ಯೆ ನಮಲ್ಲಿ ಹೆಚ್ಚಿದೆ ಎಂಬ ಕಾರಣಕ್ಕೆ ನಿರ್ಣಯಗಳನ್ನು ತೆಗೆದುಕೊಳ್ಳಲಾಗುತ್ತದೆ. ಒಮ್ಮೊಮ್ಮೆ ಸಂಸತ್ತಿನಲ್ಲಿ ಹೀಗೂ ಆಗುತ್ತದೆ. ನಾನು ವಿಪಕ್ಷದಲ್ಲಿದ್ದೇನೆ. ಸಂಖ್ಯೆಯಲ್ಲಿ ಕಮ್ಮಿ ಇದ್ದೇವೆ. ಆದರೆ ಕೆಲವೊಂದು ವಿಷಯಗಳು ಇರುತ್ತವೆ ಅದರಲ್ಲಿ ವಾದ ನಮ್ಮ ಕಡೆ ಇರುತ್ತದೆ. ಆದರೆ ಸಂಖ್ಯೆ ಬೇರೆ ಪಕ್ಷದಲ್ಲಿರುತ್ತದೆ. ನಮ್ಮ ಜನರು ಹೇಳುತ್ತಾರೆ ಸರಿ. ಹಾಗಾದರೆ ಚರ್ಚೆಯಿಂದ ಸರಿಪಡಿಸೋಣ ಎಂದು. ಆದರೆ ಎಲ್ಲ ತೀರ್ಮಾನಗಳು ಸಂಖ್ಯೆಯಿಂದಲೇ ತೀರ್ಮಾನವಾಗುತ್ತದೆಯೇ, ತರ್ಕದ ಆಧಾರದಲ್ಲಿ ಇಲ್ಲವೇ? ಸರ್ವೋಚ್ಛ ನ್ಯಾಯಾಲಯದಲ್ಲಿರುವ ನ್ಯಾಯಾಧೀಶ ಸರ್ಕಾರಕ್ಕೆ ಸಹಾಯ ಮಾಡುವವಾಗಿರಬೇಕು ಎಂದು ಸಂಖ್ಯೆ ಹೇಳಿದರೆ ಅದು ನಿಯಮವಾಗುವುದೇ? ಅದನ್ನು ಸ್ವೀಕರಿಸಲಾಗುವುದೆ? ಯಾರಾದರೂ ನ್ಯಾಯಮೂರ್ತಿ ಆದರೆ ಅವರು ಅವರ ವಿಚಾರವನ್ನು ಜತೆಗಿಟ್ಟುಕೊಂಡೇ ಇರುತ್ತಾರೆ. ನಿಷ್ಪಕ್ಷವಾದ ಯಾವುದೇ ನ್ಯಾಯಮೂರ್ತಿ ಇರುವುದಿಲ್ಲ ಎಂದು ನಮ್ಮ ಮಿತ್ರರು ಹೇಳುತ್ತಾರೆ. ‘ಅವರು ಯಾವ ವರ್ಗದವರು ಎಂಬುದನ್ನು ಚರ್ಚೆ ಮಾಡೋಣ. ನಿರ್ಣಯ ಮಾಡುವ ಮುನ್ನ ಅದನ್ನು ಗಮನದಲ್ಲಿರಿಸುತ್ತಾನೆ. ಇದು ಸತ್ಯವಾ? ಇದು ಭಾರತೀಯ ಪರಂಪರೆಗೆ ಅನುಗುಣವಾಗಿದೆಯೇ? ಕೇರಳದಲ್ಲಿ ಹುಟ್ಟಿದ ಆದಿ ಶಂಕರಾಚಾರ್ಯರಿಗೆ ವಾರಣಾಸಿಯಲ್ಲಿ ಸತ್ಯದರ್ಶನ ಆಯ್ತು.
ಜ್ಞಾನದಿಂದ ನ್ಯಾಯಾಧೀಶರು ಯಾರು ಆಗುವುದು ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ. ಈಗ ಇಬ್ಬರು ಮಹಾನ್ ಪಂಡಿತರು ಪರಸ್ಪರ ಸ್ಪರ್ಧೆ ಮಾಡುತ್ತಿದ್ದಾರೆ. ಸರಸ್ವತಿ ವಿಭಿನ್ನ ರೂಪದಲ್ಲಿ ಪ್ರಕಟವಾಗುತ್ತಾಳೆ. ಅಲ್ಲಿ ಸ್ಪರ್ಧೆಯೇರ್ಪಡುತ್ತದೆ. ತೀರ್ಪು ಯಾರು ತೆಗೆದುಕೊಳ್ಳುತ್ತಾರೆ. ಯಾವ ವಿದ್ವಾನ್ ಸಿಕ್ಕಿಲ್ಲ. ಪತ್ನಿ ದೊಡ್ಡ ವಿದುಷಿ. ಅವರನ್ನು ನ್ಯಾಯಾಧೀಶರನ್ನಾಗಿ ಮಾಡಿ. ಅವರ ನ್ಯಾಯ ತೀರ್ಮಾನ ಒಪ್ಪಿಕೊಳ್ಳುವ ಷರತ್ತಿನೊಂದಿಗೆ ನಮ್ಮ ವೇದಾಂತದ ವಾದ ಆಗಬಹುದು. (ಮಂಡನಮಿಶ್ರರ ಎದುರು) ಆಗ ಆದಿ ಶಂಕರರು, ಆಕೆ ನಿಮ್ಮ ಪತ್ನಿ. ನಿಮ್ಮ ಪರವಾಗಿ ತೀರ್ಪು ನೀಡುತ್ತಾಳೆ. ನನಗೆ ಅನ್ಯಾಯ ಮಾಡುತ್ತಾಳೆ ಎಂದು ಹೇಳಲಿಲ್ಲ. ಶೀ ವಿಲ್ ಬಿ ಯುವರ್ ಬೆಟರ್ ಹಾಫ್. ಆಕೆ ನಿಷ್ಪಕ್ಷ ಹೇಗೆ ಆಗುತ್ತಾಳೆ. ಆಕೆ ನಿಷ್ಪಕ್ಷ ಆಗುತ್ತಾಳೆ, ನಿರಾಸಕ್ತ ಆಗಬಹುದು. 56 ಕೋಟಿ ಜನರು ಇರುವ ಈ ದೇಶದಲ್ಲಿ ಅಂಥ ಸಾವಿರ, ಲಕ್ಷ ಜನರು ಸಿಗುವುದಿಲ್ಲವೇ? ಒಂದು ಬಾರಿ ನ್ಯಾಯಾಧೀಶರ ಪದವಿಯಲ್ಲಿ ಕೂತರೆ ಯಾರು ಕುಟುಂಬದವರು? ಯಾರು ಪ್ರೀತಿ ಪಾತ್ರರು? ಯಾರು ಕೆಟ್ಟವರು ಎಂಬುದರ ಆಧಾರದ ಮೇಲೆ ತೀರ್ಪು ನೀಡುವುದಿಲ್ಲ. ಸತ್ಯದ ಆಧಾರದ ಮೇಲೆ ಮಾಡುತ್ತಾರೆ.
ನ್ಯಾಯದ ಪರವಾಗಿ ಮಾಡುತ್ತಾರೆ. ಹಾಗಿರುವ ಜನರು ಸಿಗುವುದಿಲ್ಲವೇ? ಅಂಥ ಜನರು ಸಿಗದಿದ್ದರೆ ಭಾರತದ ಭವಿಷ್ಯ ಗಾಢ ಅಂಧಕಾರದಲ್ಲಿದೆ ಎಂಬುದು ತಿಳಿದುಕೊಳ್ಳಬೇಕು. ತೀರ್ಪುಗಳು ಮತಗಳಿಂದ ನಿರ್ಣಯವಾಗುತ್ತದೆಯೇ? ಆಗುವುದಿಲ್ಲ. ಪರಮ ಪೂಜ್ಯ ಗುರೂಜಿ ಹೇಳುತ್ತಿದ್ದರು ನಾವು ರಾಜಕೀಯದಲ್ಲಿದ್ದೇವೆ. ಬೇರೆ ಬೇರೆ ರೀತಿಯ ಕೆಲಸ ಮಾಡುತ್ತೇವೆ. ಆದರೆ ಕೆಲವರು ಕೆಲಸ ಕಮ್ಮಿ ಮಾಡಲು ಪ್ರಯತ್ನಿಸುತ್ತಿರುತ್ತಾರೆ. ಅವರು ನಮ್ಮಲ್ಲಿ ಹೇಳುತ್ತಿದ್ದರು, ಕೆಲವೊಂದು ಲೌಕಿಕ ಸುಖ ಇರುತ್ತದೆ. ಜನರ ಆಸಕ್ತಿ ಇರುತ್ತದೆ. ಲೋಕಪ್ರಿಯವಾದುದು ಏನು? ಯಾರ ಮಾತನ್ನು ಕೇಳಿ ಜನರು ಚಪ್ಪಾಳೆ ಹೊಡೆಯುತ್ತಾರೆ? ಯಾವ ರೀತಿಯಲ್ಲಿ ಪ್ರಗತಿ ಮಾಡುತ್ತಾರೆ? ಅದು ಲೌಕಿಕ ಸುಖ ಆಗಿರುತ್ತದೆ.
ಶ್ರೇಯ ಏನು? ಕಲ್ಯಾಣ ಏನು? ಜನರ ಹಿತ ಅಂದರೇನು, ದೇಶಕ್ಕೆ ಉಪಯೋಗವಾಗುವಂತದ್ದು ಏನು? ಅವರು ಹೇಳುತ್ತಿದ್ದರು ಪ್ರೇಯಸ್ಸಿನ (ಲೌಕಿಕ ಸುಖದ) ಹಿಂದೆ ಓಡಬೇಡಿ, ಶ್ರೇಯಸ್ಸಿಕ್ಕಾಗಿ ಸಾಧನೆ ಮಾಡಿ. ಉದಾಹರಣೆಗೆ ಒಬ್ಬ ವ್ಯಕ್ತಿ ಅನಾರೋಗ್ಯದಿಂದ ಇದ್ದಾನೆ. ಅವನಿಗೆ ಚಟ್ಪಟಾ ತಿನ್ನಬೇಕು. ಆದರೆ ಅವ ಜ್ವರ ಬಾಧಿತ ವ್ಯಕ್ತಿ ಆತ ತಿನ್ನಬಾರದು. ಅದರಿಂದ ಆತನಿಗೆ ಅಪಾಯವಿದೆ. ಔಷಧಿ ತೆಗೆದುಕೊಳ್ಳಬೇಕು. ಪ್ರೇಯ್ ಮಸಾಲಾ, ಕಹಿ ಮದ್ದೇ ಶ್ರೇಯ್. ನಾವೇನು ಮಾಡಬೇಕು? ಕೆಲವೊಮ್ಮೆ ಅಮ್ಮನೂ ಮಗುವಿಗೆ ಸಿಹಿ ತಿನ್ನಲು ಕೊಟ್ಟು ಬಿಡುತ್ತಾರೆ. ಆದರೆ ಡಾಕ್ಟರ್ ಹೇಳುತ್ತಾರೆ ನೀವು ಮಾಡಿದ್ದು ಸರಿ ಇಲ್ಲ ಎಂದು. ಪ್ರೇಯ್ ಅಲ್ಲ ಶ್ರೇಯ್ ಮುಖ್ಯ.
ಪರಮಪೂಜ್ಯ ಗುರೂಜಿ ನೇರವಂತಿಕೆಯವಾರಾಗಿದ್ದರು. ಅವರು ಸಮಾಜಕ್ಕಾಗಿ ಸದಾ ನಿರ್ಭರವಾಗಿ ಹೇಳುತ್ತಿದ್ದರು. ಕೆಲವರು ಅವರನ್ನು ತಪ್ಪಾಗಿ ತಿಳಿದುಕೊಳ್ಳುತ್ತಿದ್ದರು. ಆದರೆ ಅವರ ನಿಕಟ ಸಂಪರ್ಕಕ್ಕೆ ಬಂದಾಲೇ ಗೊತ್ತಾಗುತ್ತಿತ್ತು ಅವರು ನೇರಾನೇರಾ ಮಾತಾಡುವವರು ಎಂದು. ಅವರ ನೇರವಂತಿಕೆ ಆತ್ಮೀಯತೆಯೊಂದಿಗೆ ಓತಪ್ರೋತವಾಗಿದೆ. ಸರ್ಜನ್ ಕೂಡಾ ಆಪರೇಷನ್ ಮಾಡ್ತಾರೆ. ಆದರೆ ರೋಗಿ ಇವ ನನ್ನನ್ನು ಸೀಳುತ್ತಾನೆ ಅಂದುಕೊಂಡರೂ, ಈತ ನನ್ನ ಶತ್ರು ಎಂದು ಎಂದುಕೊಂಡರೂ ಸರ್ಜನ್ ತನ್ನ ಕರ್ತವ್ಯ ಮರೆಯುವುದಿಲ್ಲ. ನನ್ನದೊಂದಿಗೆ ಬಂದಿದ್ದ ಡಾಕ್ಟರ್ಗೆ ಅವರು ಮತ್ತೊಂದು ಸಂಗತಿಯನ್ನು ಹೇಳಿದರು.
ಅದು ಹೀಗಿದೆ- ವೈದ್ಯರು ರೋಗಿಯನ್ನು ನೋಡಲು ಕರೆಯುತ್ತಾರೆ. ರೋಗಿಯನ್ನು ನೋಡಿದ ಕೂಡಲೇ ಇವನಿಗಿರುವ ಕಾಯಿಲೆ ಕೇವಲ ಇಂಜೆಕ್ಷನ್ನಿಂದ ವಾಸಿಯಾಗುವಂಥದ್ದಲ್ಲ ಎಂದು ಅವರಿಗೆ ಅರ್ಥವಾಯ್ತು. ಆದರೆ ಕಟ್ಟುಮಸ್ತಾಗಿದ್ದ ರೋಗಿಯು ಮಾತ್ರ, ಈ ಇಂಜೆಕ್ಷನ್ ಸೂಜಿ ನನ್ನ ದೇಹವನ್ನು ಚುಚ್ಚಲಾರದು. ಹಾಗಾಗಿ ನೀವು ಸರ್ಜರಿ ವ್ಯವಸ್ಥೆ ಮಾಡಬೇಕಾಗಿ ಬರುತ್ತದೆ ಎಂದು ತಮಾಷೆ ಮಾಡುತ್ತಿದ್ದ. ಆಗ ವೈದ್ಯರು, ಸರ್ಜರಿ ವ್ಯವಸ್ಥೆ ಮಾಡಲು ಮತ್ತೆ ಜಾನುವಾರುಗಳ ವೈದ್ಯರನ್ನು ಕರೆಯಬೇಕಾಗಿ ಬರುತ್ತದೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ಆದರೆ ಆಪರೇಷನ್ ಮಾಡಬೇಕಾದ ಅಗತ್ಯವಿರುವುದು ಸರ್ಜನ್ಗೆ ಮನವರಿಕೆಯಾಗಿತ್ತು. ಆಪರೇಷನ್ ಆಗಬೆಕು, ಆದರೆ ಆ ಪ್ರಕ್ರಿಯೆಯಲ್ಲಿ ಹೆಚ್ಚು ರಕ್ತ ಹರಿದುಹೋಗಬಾರದು ಎಂಬುದು ಸರ್ಜನ್ಗೆ ಇದ್ದ ಕಾಳಜಿಯಾಗಿತ್ತು.
ಗುರೂಜಿ ಹೇಳುತ್ತಿದ್ದರು ಸಮಾಜದಲ್ಲಿ ಒಬ್ಬ ವ್ಯಕ್ತಿ ತಪ್ಪಾದ ಕೆಲಸ ಮಾಡಿದರೆ ಅವನಿಗೆ ಶಿಕ್ಷೆ ನೀಡಬೇಕು. ಯಾವ ರೀತಿ ಎಂದರೆ ಅಮ್ಮ ಮಕ್ಕಳಿಗೆ ಶಿಕ್ಷೆ ನೀಡುವಂತೆ ನೀಡಬೇಕು. ತಪ್ಪಿಗೆ ಶಿಕ್ಷೆ ಆಗಬೇಕು. ಆತ ತನ್ನನ್ನು ತಾನು ಸುಧಾರಿಸಿಕೊಳ್ಳಲಿ ಎನ್ನುವುದೇ ಶಿಕ್ಷೆಯ ಉದ್ದೇಶ ಆಗಿರಬೇಕು, ಸಂಹಾರಕ್ಕಾಗಿ ಅಲ್ಲ. ನನಗೆ ನೆನಪಿದೆ ಆರ್ಎಸ್ಎಸ್ ಮೇಲಿನ ನಿರ್ಬಂಧ ತೆಗೆದಾಗ ಗುರೂಜಿ ಕಾಶಿಗೆ ಬಂದರು. ಕಾಶಿ ನಗರ ಪಾಲಿಕೆ ಅವರಿಗೆ ನಾಗರಿಕ ಸನ್ಮಾನ ಆಯೋಜಿಸಿಲು ತೀರ್ಮಾನಿಸಿತ್ತು. ನಗರಪಾಲಿಕೆಯ ಅಧ್ಯಕ್ಷ ಮುಸ್ಲಿಂ ಆಗಿದ್ದರು. ಅವರು ಬಂದು ನಮ್ಮನ್ನು ಆಲಿಂಗಿಸಿದರು. ನಮಗೆ ನಮ್ಮ ಸ್ವಲ್ಪ ಭಯ ಹೋಗಿತ್ತು, ಸ್ವಲ್ಪ ಭಯ ಬಾಕಿ ಇತ್ತು. ಮುಸ್ಲಿಮರ ಸ್ಥಾನ ಯಾವುದು ಎಂಬ ಪ್ರಶ್ನೆಯನ್ನು ನಾನು ನಿಮ್ಮಲ್ಲಿ ಕೇಳಲು ಇಚ್ಛಿಸುತ್ತೇನೆ ಎಂಬ ಪ್ರಶ್ನೆಗೆ ಗುರೂಜಿ, ಇದನ್ನು ತೀರ್ಮಾನಿಸಲು ನಾನು ಯಾರು? ಮುಸಲ್ಮಾನರು ತೀರ್ಮಾನ ಮಾಡಬೇಕು ಅವರಿಗೆ ಯಾವ ಸ್ಥಾನ ಬೇಕು ಎಂಬುದು. ಪ್ರಾರ್ಥನಾ ಪದ್ದತಿಯಿಂದ ನಮಗೆ ಭಿನ್ನಾಭಿಪ್ರಾಯಗಳಿಲ್ಲ. ದೇವರನ್ನು ಅಲ್ಲಾಹ್ ಹೆಸರಲ್ಲಿ ಕರೆದು ಪರಮತತ್ವ ಪ್ರಾಪ್ತಿ ಪಡೆಯಬಹುದು. ಆದರೆ ಆರಾಧನಾ ಪದ್ದತಿಯನ್ನು ಬಿಟ್ಟು ಬಾಕಿ ಎಲ್ಲ ವಿಷಯಗಳಲ್ಲಿ ಅವರು ರಾಷ್ಟ್ರಕ್ಕೆ ಒಂದು ಆಕಾರ ಕೊಡಬೇಕಿದೆ. ನನ್ನ ಮಾತು ನಿಮಗೆ ಇಷ್ಟವಾಗದೇ ಇರಬಹುದು. ಅಲ್ಲಿ ಬ್ರಿಟಿಷರು ಆಳ್ವಿಕೆ ನಡೆಸುತ್ತಿದ್ದರು. ನಾವು ರಾಜಕೀಯ ಸ್ವಾಧೀನಕ್ಕಾಗಿ ನಾವು ಅವರನ್ನು ಇಲ್ಲಿಂದ ಓಡಿಸಿದೆವು. ಭಾರತಕ್ಕೆ ಇಸ್ಲಾಂ ಬಂತು. ಕೆಲವು ಪ್ರಚಾರ ಮಾರ್ಗದಲ್ಲಿ ಬಂತು, ಕೆಲವು ಖಡ್ಗದರೂಪದಲ್ಲಿ ಬಂತು. ಕೆಲವರು ಅವರ ಆರಾಧಿಸುವ ಪದ್ದತಿ ಇಷ್ಟ ಎಂದು ಇಸ್ಲಾಂ ಧರ್ಮ ಸ್ವೀಕರಿಸಿದರು ಕೆಲವರು ಬೇರೆ ಮಾರ್ಗ ಇಲ್ಲದೆ ಇಸ್ಲಾಂ ಧರ್ಮ ಸ್ವೀಕರಿಸಿದರು. ಅದನ್ನು ಸ್ವೀಕರಿಸದೇ ಇದ್ದರೆ ಅವರು ಸಾಯಬೇಕಾದ ಪರಿಸ್ಥಿತಿ ಎದುರಾದಾಗ ಅವರು ಆ ವ್ಯವಸ್ಥೆಯನ್ನು ಸ್ವೀಕರಿಸಿದರು. ನಾವು ರಾಜನೀತಿಯ ಗುಲಾಮಗಿರಿಯನ್ನು ಕಿತ್ತೆಸೆದೆವು. ಧಾರ್ಮಿಕ ಗುಲಾಮಗಿರಿಯನ್ನು ಬಿಡುವುದಾದರೆ ನಾವು ಅದನ್ನು ಸ್ವೀಕರಿಸುತ್ತೇವೆ.
ಕೊನೆಗೆ ನಗರಾಧ್ಯಕ್ಷರು ಧನ್ಯವಾದ ಅರ್ಪಿಸಿದಾಗ ಹೇಳಿದ್ದು, ಗುರೂಜಿ ಹೇಳಿದ ವಿಷಯಕ್ಕೆ ನಮ್ಮ ಅಭ್ಯಂತರವೇನೂ ಇಲ್ಲ ಎಂದು. ಯಾರ ಒಳಿತಿಗಾಗಿಯಾದರೂ ಧರ್ಮ ಪರಿವರ್ತನೆ ಆಗಿದ್ದರೆ ಅದನ್ನು ಒಪ್ಪಿಕೊಳ್ಳಬೇಕು. ಆದರೂ ಗುರೂಜಿಯನ್ನು ಜನರು ಮುಸ್ಲಿಂ ವಿರೋಧಿ ಎನ್ನುತ್ತಿದ್ದರು. ಅವರು ಮುಸ್ಲಿಂ ವಿರೋಧಿಯೇ? ಮುಸ್ಲಿಂ ವಿರೋಧಿ ಆಗಿದ್ದಾರೆ ಎಂಬುದನ್ನು ಹೇಳಲು ಯಾರೂ ಸಿದ್ಧರಿರಲಿಲ್ಲ. ನಮ್ಮಲ್ಲಿ ಭಯ ಇದೆ ಎಂದು ಹೇಳುತ್ತಿದ್ದರು. ಭಯ ಅದ್ದರೆ ಮುಖಾಮುಖಿಯಾಗುವುದರಿಂದ ಆ ಭಯ ದೂರವಾಗುತ್ತಿತ್ತು. ಗುರೂಜಿ ನಿಕಟ ಸಂಪರ್ಕಕ್ಕೆ ಬಂದವರು ಪ್ರಭಾವಿತರಾಗಿಯೇ ಮರಳಿದರು. ಅವರಿಗೆ ಯಾವುದೇ ವರ್ಗದ ವಿರುದ್ಧ ಹಗೆತನ ಇರಲಿಲ್ಲ. ಅವರ ವಿಚಾರ ಬಗ್ಗೆ ರಾಷ್ಟ್ರೀಯ ಏಕತಾ ಪರಿಷತ್ತಿನಲ್ಲಿ ಭಾರೀ ಚರ್ಚೆಯಾಗಿತ್ತು. ಪ್ರಧಾನಿ ಅಧ್ಯಕ್ಷರಾಗಿದ್ದರು. ನಾನು ಅದರ ಸದಸ್ಯನಾಗಿದ್ದೆ. ಫಕ್ರುದ್ದೀನ್ ಅಲಿ ಅಹಮ್ಮದ್ ಅಲಿಗಡ್ ವಿವಿ ಉಪ ಕುಲಪತಿ, ಗುರೂಜಿ ವಿಚಾರಧಾರೆಯ ಪುಸ್ತಕ ಅಲ್ಲಿ ಮಂಡನೆ ಆದಾಗ ವಾಜಪೇಯಿಜೀ ಅದರ ಸಾರವನ್ನು ನೀವು ವಿವರಿಸಿ ಎಂದು ಪ್ರಧಾನಿಗಳು ಹೇಳಿದರು. ನೀವು ಅದನ್ನು ಅರ್ಥ ಮಾಡಿಕೊಳ್ಳಬೇಕಾದರೆ ಗುರೂಜಿ ಅವರನ್ನೇ ಇಲ್ಲಿ ಕರೆದುಕೊಂಡು ಬನ್ನಿ ಎಂದೆ. ಆಗ ಅವರು ಹೇಳಿದರು ಇದು ನಿಮ್ಮ ಭಿನ್ನಾಭಿಪ್ರಾಯ ಅಲ್ಲವೇ? ನಾನು ಹೇಳಿದೆ ನನಗೇನೂ ಭಿನ್ನಾಭಿಪ್ರಾಯ ಇಲ್ಲ. ನಾನು ಅದನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇನೆ. ಆದರೆ ನಾನು ವ್ಯಾಖ್ಯಾನಿಸಲಾರೆ, ವಿವರಿಸುವೆ ಅದರೆ ಅದರಲ್ಲಿ ಏನಾದರೂ ಕೊರತೆ ಬರಬಹುದು ನೀವು ಇಷ್ಟು ದೊಡ್ಡ ನೇತಾರರು ಇಲ್ಲಿದ್ದೀರಲ್ಲಾ ಯಾವುದೂ ಕಡಿಮೆ ಆಗಬಾರದು.
ಆಗ ಪ್ರಧಾನಿ ಹೇಳಿದರು ಅವರನ್ನು ಕರೆಯುವುದು ಕಷ್ಟ. ಪ್ರಧಾನಿ ಗುರೂಜಿಯ ಪ್ರಶಂಸೆ ಮಾಡುತ್ತಿದ್ದರು. ಈ ಮಾತು ಕೇಳಿದರೆ ನಿಮಗೆ ವಿಚಿತ್ರ ಎನಿಸಬಹುದು. ನಾನು ಅವರೊಂದಿಗೆ ತುಂಬಾ ಚರ್ಚೆ ಮಾಡಿದ್ದೆ. ಗುರೂಜಿ ತಮ್ಮ ವಿಚಾರದ ಬಗ್ಗೆ ಅಚಲರಾಗಿದ್ದರು. ಅದಕ್ಕಾಗಿಯೇ ನೀವು ಅವರಲ್ಲಿ ಮಾತನಾಡಿ ನೀವೂ ಅವರ ಮಾತಿನಿಂದ ಪ್ರಭಾವಿತರಾದರೂ ಆಗಬಹುದು ನಿಮ್ಮಲ್ಲಿರುವ ದೌರ್ಬಲ್ಯಗಳೂ ದೂರವಾಗಬಹುದು ಎಂದೆ. ಆಗ ಅವರು ಹೇಳಿದರು ಅವರ ವಿಚಾರಗಳನ್ನು ಬದಲಿಸಲಾಗುವುದಿಲ್ಲ. ಅವರಲ್ಲಿ ಮಾತನಾಡಿದ ನಂತರ ತೀರ್ಮಾನಿಸಿ ಅದನ್ನು ಬದಲಿಸಬೇಕಾ? ಅಥವಾ ಬದಲಾಗಬೇಕಾದುದು ಏನು? ಅವರನ್ನು ಕರೆಯುವುದು ಸರಿಯಲ್ಲ. ಅವರಿಗೆ ನೀವು ಕೇಳಿ ಹಿಂದೂಸ್ತಾನದಲ್ಲಿ ಮುಸಲ್ಮಾನರಿಗೆ ಜಾಗವಿಲ್ಲವೇ ಎಂದು? ನಾನು ಕೇಳಿದೆ ಎಲ್ಲಿ ಬರೆದಿದೆ ಎಂದು. ಅದಕ್ಕೆ ಅವರು ಮುಸ್ಲಿಮರನ್ನು ರಾಷ್ಟ್ರದ ಮುಖ್ಯವಾಹಿನಿಗೆ ಬರಲು ವಿಲೀನವಾಗಬೇಕಿದೆ ಎಂದು. ಹೌದು ಹಾಗೆ ಬರೆಯಲಾಗಿದೆ. ನಿಮಗೆ ಕೇಳಿ ಅಚ್ಚರಿಯಾಗಬಹುದು. ಪ್ರಧಾನಿ ಒಂದು ಮಾತು ಹೇಳಿದರು. ರಾಷ್ಟ್ರ ಜೀವನದ ಮುಖ್ಯವಾಹಿನಿ ಯಾವುದು? ನಾನು ಹೇಳಿದೆ ಈ ಮತಬೇಧ ಇದ್ದರೆ ಯಾರೂ ಒಂದಾಗಲ್ಲ. ಈ ದೇಶದ ಜನ್ಮ 1947ರಲ್ಲಿ ಆಗಿಲ್ಲ. ಇದು ಪುರಾತನ ರಾಷ್ಟ್ರ, ಪ್ರಾಚೀನ ರಾಷ್ಟ್ರ. ಇಲ್ಲಿ ಮುಸಲ್ಮಾನರು ಬರುವುದಕ್ಕಿಂತ ಮುಂಚೆಯೇ ಇದು ರಾಷ್ಟ್ರವಾಗಿತ್ತು. ಕ್ರೈಸ್ತರು ಬರುವುದಕ್ಕಿಂತ ಮುಂಚೆಯೂ ಇದು ರಾಷ್ಟ್ರವಾಗಿತ್ತು. ಅಥರ್ವ ವೇದದಲ್ಲಿ ನಾವು ಪೃಥ್ವಿ ನಮ್ಮ ಮಾತೆ ಎಂದು ಹೇಳಿದ್ದೇವೆ. ನಾವು ಅದರ ಪುತ್ರರು ಎಂದು. ಅದೇ ಹೊತ್ತಲ್ಲಿ ರಾಷ್ಟ್ರೀಯತೆಯ ಉದ್ಭವನವಾಗಿದ್ದು. ಅದೇ ರಾಷ್ಟ್ರದ ಮುಖ್ಯವಾಹಿನಿ. ಹಲವಾರು ನದಿಗಳು ಒಟ್ಟು ಗೂಡುತ್ತವೆ. ಗಂಗಾದೊಂದಿಗೆ ಯಮುನಾ ಸೇರುತ್ತದೆ. ಪಟನಾದಲ್ಲಿ ಸೇರಿದರೂ ಗಂಗೆ ಗಂಗೆಯೇ ಆಗಿದೆ. ಗಂಗಾ ಜಮುನಾ ಆಗಿಲ್ಲ. ನಮ್ಮ ರಾಷ್ಟ್ರದ ಮುಖ್ಯವಾಹಿನಿಯಲ್ಲಿ ಎಲ್ಲವೂ ವಿಲೀನವಾಗಬೇಕು. ನಮ್ಮ ಸಂಸ್ಕೃತಿ ವೈವಿಧ್ಯತೆಯನ್ನು ಬಿಂಬಿಸುತ್ತದೆ. ನಾವು ಅದನ್ನು ಒಗ್ಗೂಡಿಸಬೇಕು.
ಶರೀರವನ್ನು ಸ್ವಸ್ಥವಾಗಿರಿಸಬೇಕಾದರೆ ಕಬ್ಬಿಣ ಅಗತ್ಯ. ವೈದ್ಯರು ಕಬ್ಬಿಣದಅಂಶ ಅಗತ್ಯ ಅಂತಾರೆ. ಅದನ್ನು ವಿಟಾಮಿನ್ ರೂಪದಲ್ಲಿ ಖರೀದಿ ಮಾಡಲು ಹೋದರೆ ಖರ್ಚು ಜಾಸ್ತಿ. ವೆಚ್ಚವೂ ಜಾಸ್ತಿ ಆಗಿದೆ ವಿಟಾಮಿನ್ ತುಟ್ಟಿ ಆಗಿದೆ. ಜನರು ಖರೀದಿಸುವ ಶಕ್ತಿಯೂ ಕಡಿಮೆಯಾಗಿದೆ. ಹಾಗೆಂದು ಜನರಿಗೆ ನೇರಾನೇರಾ ಅನ್ನದಲ್ಲಿ ಬೆರೆಸಿ ಕಬ್ಬಿಣ ತಿನ್ನಿಸಲು ಆಗುತ್ತದೆಯೇ. ಜನರಿಗೆ ಕಬ್ಬಿಣದ ಅಗತ್ಯವಿದೆ, ಆದರೆ ನೇರಾನೇರಾ ಅಲ್ಲ. ನೇರಾನೇರಾ ಕಬ್ಬಿಣ ತಿಂದರೆ ಹೊಟ್ಟೆ ಒಡೆದು ಹೋಗುತ್ತದೆ. ಕಬ್ಬಿಣ ಬೇಕು, ಅದು ಹಸಿರು ತರಕಾರಿ ಜತೆ ಬೇಕು. ಶರೀರಕ್ಕೆ ರಕ್ತಕ್ಕೆ ಸೇರಬೇಕು. ಈ ರಾಷ್ಟ್ರವಾದದಲ್ಲಿ ಎಲ್ಲರೂ ರಕ್ತದಂತೆ ಬೆರೆತು ಬಿಡಬೇಕು. ಗುರೂಜಿ ಹೇಳುತ್ತಿದ್ದರೂ ಯಾರೊಂದಿಗೂ ಮತ ಬೇಧ ಮಾಡಬಾರದು.
ಇನ್ನೊಂದು ಸಂಗತಿ ಇದೆ ಅದರ ಬಗ್ಗೆ ಭಾರೀ ಚರ್ಚೆ ಆಗುತ್ತದೆ. ನಮ್ಮ ಕೆಲವು ಗೆಳೆಯರು ಹೇಳುತ್ತಾರೆ ಪೂಜ್ಯ ಗುರೂಜಿ ವರ್ಣ ವ್ಯವಸ್ಥೆಯನ್ನು ಸಮರ್ಥಿಸುತ್ತಿದ್ದರು ಎಂದು. ಅವರು ಸವರ್ಣೀಯರು ಮತ್ತು ಶೂದ್ರರಲ್ಲಿ ಭೇದಭಾವ ಕಾಣುತ್ತಿದ್ದರು ಎಂದು. ನಾವು ಹಾಗೆ ಯಾರನ್ನೂ ನೋಡಿಲ್ಲ. ಆರ್ಎಸ್ಎಸ್ನಲ್ಲಿ ಯಾರು ಯಾರ ಹತ್ತಿರ ಕುಳಿತು ಊಟ ಮಾಡುತ್ತಿದ್ದಾರೆ ಎಂಬುದನ್ನು ನಾವು ನೋಡಿಲ್ಲ. ಯಾರು (ಯಾವ ಹಿನ್ನೆಲೆಯವರು) ಎಂಬುದು ಗೊತ್ತಿಲ್ಲ, ಅವರ ಹೆಸರಷ್ಟೇ ಗೊತ್ತಿರುತ್ತಿತ್ತು. ಅವರು ಯಾವ ಶಾಖೆಯವರು ಎಂಬುದು ಗೊತ್ತಿತ್ತು. ಅವರು ಯಾವ ಕುಲ, ಯಾವ ಜಾತಿ ಎಂಬುದು ನಮಗೆ ಗೊತ್ತಿರಲಿಲ್ಲ.
ಗುರೂಜಿ ಹೇಳುತ್ತಿದ್ದರು ಪ್ರಾಚೀನ ಕಾಲದಲ್ಲಿ ನಾವೊಂದು ವ್ಯವಸ್ಥೆ ಮಾಡಿದ್ದೆವು. ಅದರಲ್ಲಿ ಬೇರೆಬೇರೆ ಕೆಲಸಗಳ ವಿಭಜನೆ ಇತ್ತು. ಆ ವ್ಯವಸ್ಥೆ ಪರಕೀಯರ ಆಕ್ರಮಣದ ವೇಳೆ ನಮಗೆ ಸಹಕಾರಿ ಆಯಿತು. ಆದರೆ ಕಾಲಕ್ರಮೇಣ ಅದರಲ್ಲಿ ದೋಷಗಳೂ ತಲೆದೋರಿದವು. ಈಗ ಬೇರೆಬೇರೆ ವರ್ಣಗಳಿಲ್ಲ ಎಲ್ಲರಿಗೂ ಒಂದೇ ವರ್ಣ ಇರುವುದು. ಮೇಲು ಕೀಳು ಎಂಬುದು ನಿಲ್ಲಬೇಕು, ಅಸ್ಪೃಶ್ಯತೆಗೆ ಇಲ್ಲಿ ಜಾಗವಿಲ್ಲ ಎಂಬುದು. ಈ ವಿಚಾರದಲ್ಲಿ ಭಿನ್ನಾಭಿಪ್ರಾಯ ಎಲ್ಲಿದೆ? ಸಂಸತ್ತಿನಲ್ಲಿ ಒಬ್ಬ ಮಹೋದಯರು ಎದ್ದು ನಿಂತು ಹೇಳಿದ್ದರು ಗುರೂಜಿ ಅಸ್ಪೃಶ್ಯತೆಯನ್ನು ಬೆಂಬಲಿಸುತ್ತಿದ್ದಾರೆ ಎಂದು. ನಾನು ಕೇಳಿದೆ ನೀವು ಯಾವತ್ತಾದರೂ ಅವರನ್ನು ಭೇಟಿ ಮಾಡಿದ್ದೀರಾ? ಅವರು ಹೇಳಿದರು ಇಲ್ಲ. ಹಾಗಾದರೆ ನಿಮಗೆ ಹೇಗೆ ಗೊತ್ತು ಎಂದು ನಾನು ಕೇಳಿದೆ. ನಾನು ಆ ಬಗ್ಗೆ ಓದಿದೆ ಎಂದು ಅವರು ಹೇಳಿದರು. ವರ್ಣ ವ್ಯವಸ್ಥೆ ಆರಂಭವಾದಾಗ ಅದೊಂದು ಪದ್ದತಿ ಆಗಿತ್ತು. ನಾವು ಆಗ ಮಹಾತ್ಮ ಗಾಂಧಿ ಒಂದು ಮಾತನ್ನು ಉಲ್ಲೇಖಿಸಿ ಮಹಾತ್ಮಗಾಂಧಿಯೂ ತಪ್ಪು ಹೇಳುತ್ತಿದ್ದರೇ? ಎಂದು ಕೇಳಿದಾಗ ಅವರು ಗಾಂಧೀಜಿ ಮಾತು ಹೇಳ್ಬಡಿ ಗುರೂಜಿ ಮಾತು ಮಾತ್ರ ಹೇಳಿ ಎಂದರು. ವರ್ಣ ವ್ಯವಸ್ಥೆ ಇರುವುದು ಮೇಲು ಕೀಳನ್ನು ಇರಿಸುವುದಕ್ಕಾಗಿ ಅಂತಲ್ಲ. ಹಾಗೊಂದು ವ್ಯವಸ್ಥೆ ಇತ್ತು. ಭವಿಷ್ಯದಲ್ಲಿಯೂ ಇರಬಹುದು. ಅದರಲ್ಲಿ ಅಸ್ಪೃಶ್ಯತೆ ಇರಲ್ಲ, ಮೇಲು ಕೀಳು ಇರಲ್ಲ. ಯಾರೂ ಮೇಲು ಕೀಳು ಅಲ್ಲ. ಆದರೆ ಕೆಲಸದ ಆಧಾರದಲ್ಲಿ ಈಗಲೂ ಕ್ಲಾಸ್ ಎಂದು ವರ್ಗೀಕರಿಸಲಾಗುತ್ತದೆ. ಇದನ್ನು built socialism ಎಂದು ಹೇಳಲಾಗುತ್ತದೆ. ಅದರಲ್ಲೂ ವರ್ಗವಾಗಿ ವಿಂಗಡಿಸಲಾಗುತ್ತದೆ. ಲೇಬರ್, ಮ್ಯಾನೇಜರ್, ಎಕ್ಸ್ ಪರ್ಟ್. ಇವರೆಲ್ಲರೂ ಹುಟ್ಟಿನಿಂದ ಅಲ್ಲ, ಕರ್ಮದಿಂದ (ಕೆಲಸದ ಸ್ವರೂಪ) ವ್ಯವಸಾಯದಿಂದ ವರ್ಗೀಕರಿಸಲಾಗಿದೆ. ಕೆಲಸ ಬೇರೆಬೇರೆ ಆದರೂ ಸಮಾಜಕ್ಕೆ ಎಲ್ಲ ಕೆಲಸಗಳೂ ಒಂದೇ. ಎಲ್ಲರ ಕೆಲಸಗಳೂ ಅಗತ್ಯವಾಗಿವೆ. ಇಲ್ಲಿ ಯಾವುದೇ ಕೆಲಸ ಮಾಡುವುದನ್ನು ಕೀಳು ಎಂದು ಪರಿಗಣಿಸುವುದಿಲ್ಲ.
ಇನ್ನೊಬ್ಬರು ವಿತಂಡವಾದ ಮಾಡಿದರು. ಕೆಲವರು ಅವರನ್ನು (ಗುರೂಜಿಯನ್ನು) ತಪ್ಪಾಗಿ ಬಿಂಬಿಸುವ ಪ್ರಯತ್ನ ಮಾಡಿದರು. ಆದರೆ ಅವರು ಅದನ್ನು ಖಂಡಿಸಲಿಲ್ಲ. ಅವರು ಹೇಳುತ್ತಿದ್ದರು ಖಂಡನೆ ಮಾಡುವಲ್ಲಿ ಎಷ್ಟು ಶಕ್ತಿ ವ್ಯಯಿಸುತ್ತೇವೋ ಅಷ್ಟು ಶಕ್ತಿಯನ್ನು ಮಂಡನೆ ಮಾಡಲು ವಿನಿಯೋಗಿಸಿ ಎಂದು. ಖಂಡನೆ ಮಾಡುವವರು ತನ್ನಿಂತಾನೆ ಸುಮ್ಮನಾಗುತ್ತಾರೆ. ಅವರು ಹೆಡ್ಗೆವಾರ್ ಅವರ ಮಾತಿನ ಉಲ್ಲೇಖ ಮಾಡುತ್ತಿದ್ದರು. ಆನೆ ತನ್ನದೇ ದಾರಿಯಲ್ಲಿ ನಡೆಯುತ್ತದೆ ನಾಯಿ ಬೊಗಳುತ್ತಲೇ ಇರುತ್ತದೆ. ಆನೆ ಮುಂದೆ ನಡೆಯುತ್ತಲೇ ಇರುತ್ತದೆ. ಇದು ಹೀಗೆ ಮುಂದುವರಿಯಲಿ. ಚಂದನದಂತೆ ತೇಯಲಿ. ಶರೀರ ಸುಸ್ತಾಗಲಿ, ಸಮಾಜ ರೂಪಗೊಳ್ಳಲಿ, ಭಿನ್ನಾಭಿಪ್ರಾಯ ದೂರವಾಗಲಿ. ಗಾಂಧಿ ಹತ್ಯೆಯ ಆರೋಪ ಬಂದಾಗ ಅವರ ವಿರುದ್ಧ ದಾವೆ ಹೂಡಿ ಎಂದು ನಾವು ಹೇಳಿದೆವು. ಅವರು ಹೇಳಿದರು ಇದಕ್ಕೆ ಮಹತ್ವವನ್ನೇ ಕೊಡಬೇಡಿ. ಅದು ಕ್ರಮೇಣ ಕಡಿಮೆಯಾಗುತ್ತಾ ಬಂತು.
ಗುರೂಜಿ ಇಲ್ಲವಾದಾಗ ಸಾಮಾನ್ಯ ಮನುಷ್ಯನಿಂದ ಹಿಡಿದು ರಾಷ್ಟ್ರಪತಿವರೆಗೆ ಜನರು ಶೋಕೋದ್ಗಾರ ಮಾಡಿದರು. ಭಿನ್ನಾಭಿಪ್ರಾಯಗಳು ಇರಬಹುದು, ಮನೆಯಲ್ಲಿಯೂ ಭಿನ್ನಾಭಿಪ್ರಾಯ ಇರುತ್ತದೆ. ಇವತ್ತು ಅಪ್ಪ ಮಗನಲ್ಲಿಯೂ ಭಿನ್ನಾಭಿಪ್ರಾಯಗಳಿರುತ್ತವೆ. ಜನರೇಷನ್ ಗ್ಯಾಪ್. ಮೊದಲಿನ ಕಾಲದಲ್ಲಿ ಜನರೇಷನ್ ಗ್ಯಾಪ್ ಇರುತ್ತಿರಲಿಲ್ಲ. ಮಗ ಬೇಗ ಹುಟ್ಟಿ ಬಿಡುತ್ತಿದ್ದ ಇಲ್ಲವೇ ಅಪ್ಪ ಬೇಗ ಸತ್ತು ಹೋಗುತ್ತಿದ್ದ. ಈಗಂತೂ ಜನರೇಷನ್ ಗ್ಯಾಪ್ ಇದ್ದೇ ಇರುತ್ತದೆ. ನಮ್ಮಲ್ಲಿ ಏನು ಹೇಳುತ್ತೇವೆ ಎಂದರೆ ಮಗ ಸ್ವಲ್ಪ ದೊಡ್ಡವಾನಾದರೆ ಮಿತ್ರನಂತೆ ವ್ಯವಹರಿಸು. ಇದನ್ನು ಯಾರೂ ಪಾಲಿಸುವುದಿಲ್ಲ. ಪಾಲಿಸುವವರಿಗೆ ಕಷ್ಟ ಆಗುವುದಿಲ್ಲ. ಹೀಗಿರುವಾಗಲೂ ಗೌರವ ಬೇಕು. ಭಾರತೀಯ ಸಂಸ್ಕೃತಿಯನ್ನು ಆರ್ಥಿಕ, ಸಾಂಸ್ಕೃತಿಕ, ಸಾಮಾಜಿಕವಾಗಿ ಸಬಲ, ಶಕ್ತವಾಗಿರುವಂತೆ ಮಾಡುವ ದೇಶದ ನಿರ್ಮಾಣ ಮಾಡಬಯಸುತ್ತಿದ್ದರು ಗುರೂಜಿ. ಆರ್ಥಿಕ ವಿಚಾರದಲ್ಲಿ ಅವರ ನಿಲುವು ಕ್ರಾಂತಿಕಾರಿಯಾಗಿದ್ದವು. ಅಗತ್ಯಕ್ಕಿಂತ ಹೆಚ್ಚು ಸಂಪತ್ತು ಇರಿಸುವುದು ಸರಿಯಲ್ಲ. ಜನರಿಗೆ ಗೊತ್ತಿದೆ ನಾವು ಎಲ್ಲವನ್ನೂ ಉಲ್ಲೇಖಿಸಲಾಗುವುದಿಲ್ಲ. ನೀವು ರಾತ್ರಿ ಯಾಕೆ ಊಟ ಮಾಡುವುದಿಲ್ಲ ಎಂಬ ವಿಷಯ ಆಗಾಗ ಚರ್ಚೆಯಾಗುತ್ತಿತ್ತು. ನಾನು ಹುಟ್ಟಿದ ದೇಶದಲ್ಲಿ ಕೋಟಿ ಜನರು ಒಂದು ಹೊತ್ತಿನ ಊಟಕ್ಕೆ ಕಷ್ಟ ಪಡುತ್ತಿದ್ದಾರೆ. ನಾನು ಎರಡು ಬಾರಿ ಊಟ ಮಾಡಲಾರೆ (ಎನ್ನುತ್ತಿದ್ದರು ಅವರು). ಇದು ಸಮಾಜವಾದದ ಘೋಷಣೆ ಅಲ್ಲ, ಗರೀಬಿ ಹಟಾವೋ ಎಂಬ ಯೋಜನೆ ಅಲ್ಲ, ಚುನಾವಣೆಯಲ್ಲಿ ಕೊಡುವ ಆಕರ್ಷಕ ಆಶ್ವಾಸನೆ ಅಲ್ಲ. ಒಂದು ಹೊತ್ತಿನ ಊಟ ಬಿಟ್ಟೆ ಎಂಬುದು ಗುರೂಜಿ ಅವರ ಉತ್ತರ ಆಗಿತ್ತು.
ಅವರು ಬಿಟ್ಟು ಹೋದ ಮೇಲೆ ಜನರು ಚರ್ಚೆ ಮಾಡುವಂತೆ ಅವರು ಬದುಕಿರುವಾಗ ಚರ್ಚೆ ಮಾಡುವ ಸಾಹಸವನ್ನು ನಾವು ಮಾಡುವುದಿಲ್ಲ. ಯಾಕೆಂದರೆ ಅವರು ಸಮಾಜವನ್ನು ಪರಮಾತ್ಮ ಮತ್ತು ಬಡವರನ್ನು ನಾರಾಯಣನ ರೂಪದಲ್ಲಿ ಆರಾಧಿಸಿದ್ದರು. ಆರ್ಥಿಕ ಕ್ಷೇತ್ರದ ವಿಚಾರದಲ್ಲಿ ಕಾಂತಿಕಾರಿಯಾದ ನಿಲುವು ಅವರದ್ದಾಗಿತ್ತು. ವಿದೇಶಿ ವಿಚಾರಧಾರೆಯಿಂದ ದೂರವಿರಿ ಎಂದು ಹೇಳುತ್ತಿದ್ದರು. ಅಧಿಕಾರದ ಗದ್ದುಗೆಯಲ್ಲಿ ಸಮಾಜವಾದದ ಭವನ ನಿರ್ಮಿಸಬೇಡಿ ಎಂದು ಹೇಳುತ್ತಿದ್ದರು. ನಾವು ಹಿಂದೆ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ. ಯಾವತ್ತಾದರೂ ಅಧಿಕಾರ ಬದಲಾದರೆ ದೆಹಲಿಯಲ್ಲಿರುವ ಆಡಳಿತ ಪಕ್ಷ ಬದಲಾದರೆ ಒಂದು ಕಂಬ ಬಿದ್ದಾಗ ಇನ್ನುಳಿದ ಕಂಬಗಳು ಉಳಿದಿರಬೇಕು. ಸಮಾಜ ಅಮರವಾಗಬೇಕು ಪ್ರಾಚೀನಕಾಲದಲ್ಲಿಯೂ ಅಧಿಕಾರ ಬದಲಾಗಿತ್ತು. ದೆಹಲಿಯ ಸಿಂಹಾಸನದಲ್ಲಿ ಅನೇಕರು ಕುಳಿತರು. ನಮ್ಮ ತಪೋವನ ಮುಂದುವರಿಯಿತು, ಗುರುಕುಲ, ಪಂಚಾಯಿತಿ ಎಲ್ಲವೂ ಸರಾಗವಾಗಿ ನಡೆಯುತ್ತಾ ಬಂತು. ಸಮಾಜದಲ್ಲಿನ ನಮ್ಮ ಏಕತೆ ಮುಂದುವರಿಯುತ್ತಾ ಬಂತು. ಹಾಗಾಗಿ ನಾವು ಬದುಕಿದೆವು. ಭಾರತ ವೇದಕಾಲದಿಂದ ಈಗಲೂ ಜೀವಂತವಿದೆ. ಅನಂತಕಾಲದವರೆಗೂ ಜೀವಂತವಾಗಿರುತ್ತದೆ.
ಜೀವನ ಶಕ್ತಿಯ ಅಸ್ತ್ರ. ಈ ಶಕ್ತಿ ನೀಡಿದ್ದು ಅಧಿಕಾರ ಅಲ್ಲ. ರಾಜ್ಯ ನಾವೇ ಮಾಡಿಕೊಂಡಿದ್ದು,. ರಾಜ್ಯದ ನಿರ್ಮಾಣ ಅಗತ್ಯವಿದೆ. ರಾಜ್ಯದ ಸಂಚಾಲನೆ ಮಾಡುವವರು ಇತಿಹಾಸ ಅರಿತರಬೇಕು. ಅದೂ ಅವಶ್ಯಕವಾಗಿದೆ. ಆದರೆ ಸಮಾಜದ ಎಲ್ಲ ಸೂತ್ರಗಳನ್ನು ರಾಜ್ಯಕ್ಕೆ ಬೆರೆಸಬೇಡಿ. ಅದೆಲ್ಲಿಯಾದರೂ ಮುರಿದು ಹೋದರೆ ಸಮಾಜ ಅಭಿವೃದ್ಧಿಯಾಗಲ್ಲ. ಆದ್ದರಿಂದಲೇ ಸಂಸ್ಕೃತಿ, ಸಂಸ್ಕಾರ, ಶಿಕ್ಷಣ, ಗುರುಕುಲ, ಪಂಚಾಯತಿ ಸಮಾಜದ ಸಂಘಟನೆಗಳು, ಸ್ವಾವಂಲಂಬಿ ಸಮಾಜ, ಪರಕೀಯ ಆಕ್ರಮಣದ ಸವಾಲುಗಳನ್ನು ದೇಶದ ಒಳಗಿನ ವಿಘಟನೆಯ ಸವಾಲುಗಳನ್ನು ಎದುರಿಸಲು ಶಕ್ತವಾಗಲಿ. ಸಮಾಜ ಒಡೆದುಹೋಗಬಾರದು.
ಗುರೂಜಿ ಈಗ ನಮ್ಮೊಂದಿಗೆ ಇಲ್ಲ. ಅವರ ಕನಸಿನ ಹಿಂದೂಸ್ತಾನ ಮಾಡುವುದು ಬಾಕಿ ಇದೆ. ಈ ಕನಸಿನ ಜವಾಬ್ದಾರಿ ಇದೆ. ನಾವು ಅವರ ದಾರಿಯಲ್ಲಿ ನಡೆಯುತ್ತೇವೆ. ಅವರು ಒಂದು ಬಾರಿ ಹೀಗೂ ಹೇಳುತ್ತಿದ್ದರು. ಬರೀ ಅವರ ದಾರಿಯಲ್ಲಿ ನಡೆದರೆ ಸಾಕಾಗುವುದಿಲ್ಲ. ನಾವು ಯಾರ ದಾರಿಯನ್ನು ಅನುಸರಿಸಿ ಹೋಗುತ್ತಿದ್ದೇವೋ ಆ ವ್ಯಕ್ತಿ ಅ ಇಲ್ಲವಾದರೆ ಯಾವ ದಾರಿಯಲ್ಲಿ ಹೋಗಬೇಕು ಎಂದು ಗೊತ್ತಾಗುವುದಿಲ್ಲ. ಹಾಗಾಗಿ ನೀವು ಕಣ್ಣು ಮುಚ್ಚಿ ಇನ್ನೊಬ್ಬರ ಹಾದಿಯಲ್ಲಿ ನಡೆಯಬೇಡಿ. ಕಣ್ಣು ತೆರೆದು ಜೀವನದಿಂದ ಸ್ಪೂರ್ತಿ ಪಡೆಯಿರಿ. ವೈಯಕ್ತಿಕ ಜೀವನದಲ್ಲಿ ಪಾವಿತ್ರ್ಯ, ಸಾರ್ವಜನಿಕ ಜೀವನದಲ್ಲಿ ಸೇವಾ ಮನೋಭಾವ, ದೇಶದ ಬಗ್ಗೆ ಅನನ್ಯ ನಿಷ್ಠೆ ,ಸಮಾಜದ ಪರ ಸಂಕಲ್ಪ, ಈ ಗುಣ ಜವಾಬ್ದಾರಿಯದ್ದು. ಇದನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಈ ಕಾರ್ಯಕ್ರಮಕ್ಕೆ ನನ್ನನ್ನು ಯಾಕೆ ಕರೆಸಿದ್ದೀರಿ ಎಂಬುದು ನನಗೆ ಗೊತ್ತಿಲ್ಲ. ಇಲ್ಲಿರುವವರು ನನ್ನನ್ನು ಹೊಗಳುತ್ತಿದ್ದರು. ನಾನು ಈ ಕಾರ್ಯಕ್ರಮಕ್ಕೆ ಬರಬೇಕಾದರೆ ನನಗೆ ಇದ್ದ ಯೋಗ್ಯತೆ ಎಂದರೆ ನಾನು ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿದ್ದೇನೆ ಎಂಬುದು. ನನಗೆ ಗುರೂಜಿಯ ಚರಣದಲ್ಲಿರಲು ಸೌಭಾಗ್ಯ ದಕ್ಕಿತ್ತು ಎನ್ನುವುದು. 34 ವರ್ಷದ ಹಿಂದೆ ನಾನು ಗುರೂಜಿ ಅವರನ್ನು ನೋಡಿದ್ದೆ. ನಾನು ಬಾಲ ಸ್ವಯಂಸೇವಕ ಆಗಿದ್ದೆ. ಗುರೂಜಿ ಪಂಜಾಬ್ ಮೇಲ್ನಲ್ಲಿ ಪಂಜಾಬ್ ಗೆ ಹೋಗುತ್ತಿದ್ದರು. ನಾವು ಚಿಕ್ಕ ಚಿಕ್ಕ ಸ್ವಯಂ ಸೇವಕರು ಪ್ಲಾಟ್ ಫಾರಂನಲ್ಲಿ ಸೇರಿದ್ದೆವು. ಮೂರನೇ ದರ್ಜೆಯ ಬೋಗಿಯಲ್ಲಿ ಸಿಕ್ಕಾಪಟ್ಟೆ ಜನರು ಇದ್ದರು. ಹೊರಗೆ ಬರುವುದು ಕಷ್ಟ ಆಗಿತ್ತು. ಅವರು ಹೊರಗೆ ಬಂದಾಗ ಸ್ವಯಂಸೇವಕರನ್ನು ಭೇಟಿ ಮಾಡಿದರು. ಕೆಲವರ ತಲೆಗೆ ಕೈಯಿಟ್ಟು ಆಶೀರ್ವಾದ ಮಾಡಿದರು, ಇನ್ನು ಕೆಲವರನ್ನು ಪ್ರೀತಿಯಿಂದ ನೇವರಿಸಿದರು. ಅದು ನಾನು ನೋಡಿದ ಮೊದಲ ನೋಟ ಆಗಿತ್ತು. ಬಾಲ ಸ್ವಯಂ ಸೇವಕ್ಗೆ ಸಿಕ್ಕ ಮೊದಲ ಝಲಕ್ ಅದಾಗಿತ್ತು. ಆದಾಗಿ ಈಗ ಅಂತಿಮ ದರ್ಶನದ ದೃಶ್ಯ.
34 ವರ್ಷದಲ್ಲಿ ಹಲವಾರು ಬಾರಿ ಅವರಲ್ಲಿ ಮಾತನಾಡಿದೆ, ಭೇಟಿಯಾದೆ, ಸಲಹೆ ಪಡೆದೆ. ಕೆಲವೊಮ್ಮೆ ಹೇಳಿ ನೇತಾಜಿ ಎಂದು ನಮ್ಮನ್ನು ಸಂಬೋಧಿಸುತ್ತಿದ್ದರೆ ನಾವು ಕರಗಿ ಬಿಡುತ್ತಿದ್ದೆವು. ಗುರೂಜಿ ಯಾವತ್ತೂ ನಮ್ಮೊಂದಿಗೆ ಇರುತ್ತಾರೆ ಕಾಲವನ್ನೇ ಗೆದ್ದ ವ್ಯಕ್ತಿತ್ವ, ಸಾಧನೆ ನಮಗೆ ಸ್ಪೂರ್ತಿ, ಅವರ ಪವಿತ್ರ ಜೀವನ ನಮಗೆ ದಾರಿ ತೋರಿಸುತ್ತದೆ. ಕತ್ತಲು ಆವರಿಸಿದೆ, ಸುಸ್ತಾದರೆ, ದುರ್ಬಲವಾಗಿದ್ದೇವೆ ಎಂದು ಅನಿಸಿದರೆ ಅವರ ಅಖಂಡ ಸಾಧನೆಯ ಜೀವನ ನಮ್ಮ ಎಲ್ಲ ಸುಸ್ತು, ದೌರ್ಬಲ್ಯಗಳನ್ನು ನಿವಾರಿಸುತ್ತದೆ. ಮತ್ತೆ ನಾವು ಅವರನ್ನು ನೆನೆದು ನಮ್ಮ ಕರ್ತವ್ಯದಲ್ಲಿ ತೊಡಗುತ್ತೇವೆ. ಅವರ ವ್ಯಕ್ತಿತ್ವ ಒಂದು ಜಾಗದಲ್ಲಿ ಅಲ್ಲ ಹೃದಯದಲ್ಲಿ ನೆಲೆಯೂರಿದೆ. ಆ ನಂದಾದೀಪ ಪ್ರತಿಯೊಂದು ಹೃದಯದಲ್ಲಿ ಪ್ರಜ್ವಲಿಸುತ್ತಿದೆ. ಆ ಪ್ರಕಾಶದಿಂದ ನಾವು ರಾಷ್ಟ್ರವನ್ನು ಒಗ್ಗೂಡಿಸುತೇವೆ. ಲೋಹಿಯಾ ಅವರು ಗುರೂಜಿಯವರನ್ನು ಭೇಟಿಯಾದಾಗ ಹೇಳಿದ್ದರು ಗುರೂಜಿ ನಿಮ್ಮ ಜತೆ ಇರುವ ಕಾರ್ಯಕರ್ತರು ನಮ್ಮಲ್ಲಿ ಇದ್ದಿದ್ದರೆ ನಾನು ಈ ದೇಶವನ್ನು ಬದಲಿಸಿ ಬಿಡುತ್ತಿದ್ದೆ. ಅದಕ್ಕೆ ಗುರೂಜಿ, ಹಿಂದೂಸ್ತಾನ್ ಎಲ್ಲಿ ಇದೆಯೋ ಅಲ್ಲಿಯೇ ಇರಲಿ ಎಂದಿದ್ದರು.
Published On - 8:04 pm, Fri, 25 December 20