AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Balamani Amma: ಕಲೆ ಮತ್ತು ಸಂಸ್ಕೃತಿ ಲೋಕದಲ್ಲಿ ಅಲೆ ಎಬ್ಬಿಸಿದ್ದ ಕವಿ ನಲಪಾತ್​ ಬಾಲಮನಿ ಅಮ್ಮನವರ ಜನ್ಮದಿನ: ಗೂಗಲ್ ಡೂಡಲ್​ ಮೂಲಕ ವಿಶೇಷ ಗೌರವ

Google Doodle Today: ಮಲಯಾಳಂ ಕಾವ್ಯದ ಅಜ್ಜಿ ಎಂದೇ ಖ್ಯಾತರಾಗಿರುವ ದೇಶದ ಕಲೆ ಮತ್ತು ಸಂಸ್ಕೃತಿ ಲೋಕದಲ್ಲಿ ಅಲೆ ಎಬ್ಬಿಸಿದ ಕವಯತ್ರಿ ಬಾಲಮನಿ ಅಮ್ಮ ಅವರ 113ನೇ ಜನ್ಮದಿನದಂದು ಗೂಗಲ್ ಮಂಗಳವಾರ ತನ್ನ ಡೂಡಲ್ ಮೂಲಕ ಗೌರವ ಸಲ್ಲಿಸಿದೆ.

Balamani Amma: ಕಲೆ ಮತ್ತು ಸಂಸ್ಕೃತಿ ಲೋಕದಲ್ಲಿ ಅಲೆ ಎಬ್ಬಿಸಿದ್ದ ಕವಿ ನಲಪಾತ್​ ಬಾಲಮನಿ ಅಮ್ಮನವರ ಜನ್ಮದಿನ: ಗೂಗಲ್ ಡೂಡಲ್​ ಮೂಲಕ ವಿಶೇಷ ಗೌರವ
ನಳಪಾತ್ ಬಾಲಮಣಿ ಅಮ್ಮ
TV9 Web
| Updated By: Rakesh Nayak Manchi|

Updated on:Jul 19, 2022 | 10:56 AM

Share

ಮಲಯಾಳಂ ಕಾವ್ಯದ ಅಜ್ಜಿ ಎಂದೇ ಖ್ಯಾತರಾಗಿರುವ ದೇಶದ ಕಲೆ ಮತ್ತು ಸಂಸ್ಕೃತಿ ಲೋಕದಲ್ಲಿ ಅಲೆ ಎಬ್ಬಿಸಿದ ಕವಯತ್ರಿ ನಲಪಾತ್​ ಬಲಮನಿ ಅಮ್ಮ (Nalapat Balamani Amma) ಅವರ 113ನೇ ಜನ್ಮದಿನದಂದು ಗೂಗಲ್ ಮಂಗಳವಾರ ತನ್ನ ಡೂಡಲ್ ಮೂಲಕ ಗೌರವ ಸಲ್ಲಿಸಿದೆ. ಬಾಲಮನಿ ಅಮ್ಮನ ಜೀವನ ಮತ್ತು ಕಾರ್ಯಗಳನ್ನು ವರ್ಣರಂಜಿತವಾಗಿ ಗೂಗಲ್ ಡೂಡಲ್​ನಲ್ಲಿ ಬಿಡಿಸಲಾಗಿದೆ. ಬಾಲ್ಯದಲ್ಲಿ ಯಾವುದೇ ಔಪಚಾರಿಕ ಶಿಕ್ಷಣವನ್ನು ಹೊಂದಿರದ ಬಾಲಮನಿ ಅವರು ಮುಂದೆ ಪ್ರಸಿದ್ಧ ಕವಿಯಾಗಿದ್ದು ಹೇಗೆ? ಮತ್ತು ಅವರ ಜೀವನ ಚಿರಿತ್ರೆ ತಿಳಿದುಕೊಳ್ಳುವ ಕುತೂಹಲ ನಿಮ್ಮಲ್ಲಿದ್ದರೆ ಈ ಸುದ್ದಿಯನ್ನು ಓದಿ.

ನಲಪತ್ ಬಾಲಮನಿ ಅಮ್ಮ ಜುಲೈ 19, 1909 ರಂದು ಮಲಬಾರ್ ಜಿಲ್ಲೆಯ ಪೊನ್ನಾನಿ ತಾಲೂಕಿನ ಪುನ್ನಾಯುರ್ಕುಲ್ಲಂನಲ್ಲಿ ಜನಿಸಿದರು. ಬಾಲ್ಯದಲ್ಲಿ ಯಾವುದೇ ಔಪಚಾರಿಕ ಶಿಕ್ಷಣವನ್ನು ಹೊಂದಿರಲಿಲ್ಲ. ಅದಾಗ್ಯೂ ಬಾಲಮನಿಯವರು ತನ್ನ ತಾಯಿಯ ಚಿಕ್ಕಪ್ಪನಿಂದ ಅಕ್ಷರ ಜ್ಞಾನವನ್ನು ಪಡೆದರು. ಅವರ ಚಿಕ್ಕಪ್ಪ ನಲಪ್ಪಟ್ ನಾರಾಯಣ ಮೆನನ್‌ ಜನಪ್ರಿಯ ಮಲಯಾಳಿ ಕವಿಯೂ ಆಗಿದ್ದರು. ನಾರಾಯಣ ಮೆನನ್ ಅವರು ನೀಡಿದ ಶಿಕ್ಷಣವು ಬಾಲಮನಿಯವರ ಜೀವನದ ದಿಕ್ಕನ್ನೇ ಬದಲಾಯಿಸುವಂತೆ ಮಾಡಿತು.

ಬರವಣಿಗೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ಬಾಲಮನಿ ಅಮ್ಮನವರು, ವಿವಿಧ ಪುಸ್ತಕಗಳನ್ನು ಸಂಗ್ರಹಿಸಿದ್ದರು. ಇದು ಅವರ ಜ್ಞಾನವನ್ನು ಇನ್ನಷ್ಟು ಹೆಚ್ಚಿಸುವಂತೆ ಮಾಡಿತು. ಮುಂದೆ ಪ್ರಸಿದ್ಧ ಕವಿಯಾಗಿ ಹೊರಹೊಮ್ಮಿದರು. ಅಲ್ಲದೆ ವಿಶ್ವದ ಅತ್ಯಂತ ಪ್ರಸಿದ್ಧ ಕವಿಗಳಲ್ಲಿ ಒಬ್ಬರಾದರು.

19ನೇ ವಯಸ್ಸಿನಲ್ಲಿ ಅವರು ಮಲಯಾಳಂ ಪತ್ರಿಕೆಯಾದ ಮಾತೃಭೂಮಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ವ್ಯವಸ್ಥಾಪಕ ಸಂಪಾದಕರಾದ ವಿ.ಎಂ ನಾಯರ್ ಅವರನ್ನು ವಿವಾಹವಾದರು. ಕವಿತೆಗಳ ಮೂಲಕ ಬಾಲಮನಿಯವರು ಲೆಕ್ಕವಿಲ್ಲದಷ್ಟು ಪ್ರಶಸ್ತಿಗಳು ಪಡೆದುಕೊಂಡರು. ರಾಷ್ಟ್ರದ ಅತ್ಯಂತ ಗೌರವಾನ್ವಿತ ಸಾಹಿತ್ಯ ಪ್ರಶಸ್ತಿಗಳಲ್ಲಿ ಒಂದಾಗಿರುವ ಸರಸ್ವತಿ ಸಮ್ಮಾನ್ ಪ್ರಶಸ್ತಿ ಮತ್ತು ಭಾರತದ 2ನೇ ಅತಿದೊಡ್ಡ ನಾಗರಿಕ ಪ್ರಶಸ್ತಿ ಪದ್ಮವಿಭೂಷಣ ಲಭಿಸಿದವು.

ಬಾಲಮನಿ ಅಮ್ಮ ಅವರು 1930ರಲ್ಲಿ ತಮ್ಮ 21ನೇ ವಯಸ್ಸಿನಲ್ಲಿ ಕೂಪ್ಪುಕೈ ಎಂಬ ಶೀರ್ಷಿಕೆಯ ತನ್ನ ಮೊದಲ ಕವನವನ್ನು ಪ್ರಕಟಿಸಿದರು. ಕವಯಿತ್ರಿಯಾಗಿ ಅವರ ಮೊದಲ ಮನ್ನಣೆಯು ಸಾಮ್ರಾಜ್ಯದ ಮಾಜಿ ಆಡಳಿತಗಾರರಿಂದ ಬಂದಿತು. ಮಲಯಾಳಂನಲ್ಲಿ ಬರೆದಿರುವ ಬಾಲಮಣಿಯವರ ಕವಿತೆಗಳು ದಕ್ಷಿಣ ಭಾರತದಾದ್ಯಂತ ಜನಪ್ರೀಯತೆಯನ್ನು ಪಡೆದುಕೊಂಡಿತು. ಅಮ್ಮ (ತಾಯಿ), ಮುತ್ತಸ್ಸಿ (ಅಜ್ಜಿ), ಮತ್ತು ಮಜುವಿಂತೆ ಕಥಾ (ಕೊಡಲಿಯ ಕಥೆ) ಅವರು ಬರೆದಿರುವ ಅತ್ಯಂತ ಜನಪ್ರೀಯ ಕವಿತೆಗಳಲ್ಲಿ ಒಂದಾಗಿವೆ.

ಬಾಲಮನಿಯವರು 1984ರಲ್ಲಿ ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಕಮಲಾ ದಾಸ್ ಅವರ ತಾಯಿಯೂ ಆಗಿದ್ದಾರೆ. ಅಲ್ಲದೆ ಬಾಲಮನಿಯವರ ಮಗ ಕಮಲಾ ಸೂರಯ್ಯ ಅವರು ಕೂಡ ಬರಹಗಾರರಾಗಿದ್ದಾರೆ. ಅವರ ತಾಯಿಯ ಕವನಗಳಲ್ಲಿ ಒಂದಾದ ‘ದಿ ಪೆನ್’ ಅನ್ನು ಅನುವಾದಿಸಿದರು. ಈ ಕೃತಿಯು ತಾಯಿಯ ನೋವನ್ನು ವಿವರಿಸುವ ಕೆಲವು ರೋಚಕ ಸಾಲುಗಳನ್ನು ಹೊಂದಿದೆ.

Published On - 10:29 am, Tue, 19 July 22