ಬಾಲಿವುಡ್ ನಟ ರೇಂಜ್ ರೋವರ್ ಕಾರನ್ನೇ ಮಾರಾಟಕ್ಕಿಟ್ಟ, ಅದೂ ಅಗ್ಗದ ಬೆಲೆಗೆ!
ಬಾಲಿವುಡ್ನ ಖ್ಯಾತ ನಟ ಶಹೀದ್ ಕಪೂರ್ ತನ್ನ ಐಷಾರಾಮಿ ರೇಂಜ್ ರೋವರ್ ಕಾರನ್ನೇ ಮಾರಾಟಕ್ಕೆ ಇಟ್ಟಿದ್ದಾನೆ. ಅದೂ ಅಗ್ಗದ ಬೆಲೆಗೆ! ಹೀಗೆ ಯಾಕೆ ಎಂದು ಕೇಳುವ ಮುನ್ನ ಶಹೀದ್ ಕಪೂರ್ನ ಅಚ್ಚುಮೆಚ್ಚಿನ, ಭಾರೀ ಮಹತ್ವದ ರೇಂಜ್ ರೋವರ್ ಕಾರಿನಲ್ಲಿ ಒಂದು ಸುತ್ತು ಹಾಕಿಬರೋಣ ಬನ್ನಿ! ಚುಪ್ ಚುಪ್ ಕೆ, ಜಬ್ ವಿ ಮೆಟ್, ಹೈದರ್, ಉಡ್ತಾ ಪಂಜಾಬ್ ಮತ್ತು ಲೇಟೆಸ್ಟ್ ಆಗಿ.. ಕಬೀರ್ ಸಿಂಗ್ ಅಂತಹ ಜನಪ್ರಿಯ ಸಿನಿಮಾಗಳಲ್ಲಿ ನಟಿಸಿರುವ ಶಹೀದ್ ಕಪೂರ್ ಇನ್ನೂ ಬೇಡಿಕೆಯಲ್ಲಿದ್ದಾರೆ. ಅವರಿಗೇನೂ […]
ಬಾಲಿವುಡ್ನ ಖ್ಯಾತ ನಟ ಶಹೀದ್ ಕಪೂರ್ ತನ್ನ ಐಷಾರಾಮಿ ರೇಂಜ್ ರೋವರ್ ಕಾರನ್ನೇ ಮಾರಾಟಕ್ಕೆ ಇಟ್ಟಿದ್ದಾನೆ. ಅದೂ ಅಗ್ಗದ ಬೆಲೆಗೆ! ಹೀಗೆ ಯಾಕೆ ಎಂದು ಕೇಳುವ ಮುನ್ನ ಶಹೀದ್ ಕಪೂರ್ನ ಅಚ್ಚುಮೆಚ್ಚಿನ, ಭಾರೀ ಮಹತ್ವದ ರೇಂಜ್ ರೋವರ್ ಕಾರಿನಲ್ಲಿ ಒಂದು ಸುತ್ತು ಹಾಕಿಬರೋಣ ಬನ್ನಿ!
ಚುಪ್ ಚುಪ್ ಕೆ, ಜಬ್ ವಿ ಮೆಟ್, ಹೈದರ್, ಉಡ್ತಾ ಪಂಜಾಬ್ ಮತ್ತು ಲೇಟೆಸ್ಟ್ ಆಗಿ.. ಕಬೀರ್ ಸಿಂಗ್ ಅಂತಹ ಜನಪ್ರಿಯ ಸಿನಿಮಾಗಳಲ್ಲಿ ನಟಿಸಿರುವ ಶಹೀದ್ ಕಪೂರ್ ಇನ್ನೂ ಬೇಡಿಕೆಯಲ್ಲಿದ್ದಾರೆ. ಅವರಿಗೇನೂ ಕರೋನಾ ಎಫೆಕ್ಟ್ ಬಾಧಿಸಿಲ್ಲ! ಕಾರು ಪ್ರಿಯ ಶಹೀದ್ ಬಳಿ ಈ ಹಿಂದೆ Jaguar XKR-S ಕಾರು ಇತ್ತು. ಈಗ Mercedes-Benz GLE43 AMG ಎಂಬ ಮತ್ತೊಂದು ಕಾರೂ ಇದೆ.
Land Rover Range Rover Vogue S ಕಾರನ್ನು ಈಗ ಸೆಕೆಂಡ್ ಹ್ಯಾಂಡಲ್ ಮಾರುಕಟ್ಟೆಯಲ್ಲಿ ಚೀಪ್ ರೇಟಿಗೆ ಮಾರಾಟಕ್ಕೆ ಇಡಲಾಗಿದೆ. ಈ ಕಾರು ಶಹೀದ್ ಬಳಿ 10 ವರ್ಷಗಳಿಂದ ಇತ್ತು. ಇದು ನಟ ಶಹೀದ್ ಲಕ್ಕಿ ಕಾರು ಸಹ! ಅಷ್ಟೇ ಅಲ್ಲ ಇದು ಆತನಿಗೆ ಪ್ರತಿಷ್ಠೆಯ ಸಂಕೇತದಂತಿತ್ತು. ಏಕೆಂದ್ರೆ ಆಟೋಮೊಬೈಲ್ ಇಂಡಸ್ಟ್ರಿಯ ದೊಡ್ಡ ಉದ್ಯಮಿ, ಅಪ್ಪಟ ಭಾರತೀಯ ರತನ್ ಟಾಟಾ ಅವರೇ ಖರೀದಿ ವೇಳೆ ನಟ ಶಹೀದ್ಗೆ ಖುದ್ದಾಗಿ Range Rover ಕಾರಿನ ಕೀ ಹಸ್ತಾಂತರಿಸಿದ್ದರು. ಪ್ರಸ್ತುತ ಆ Range Rover ಕಾರು ಸಂತಾಕ್ರೂಜ್ ನಲ್ಲಿರುವ ಲಕ್ಕಿ ಮೋಟಾರ್ಸ್ ಎಂಬ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಸಂಸ್ಥೆಯಲ್ಲಿದೆ! MY2010 Land Rover Range Rover Vogue S ಕಾರನ್ನು ನಟ ಶಹೀದ್ ಇದುವರೆಗೂ 37 ಸಾವಿರ ಕಿ.ಮೀ. ಮಾತ್ರವೇ ಓಡಿಸಿರುವುದು.
2009ರಲ್ಲಿ ಈ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾಗ ಅದರ ಬೆಲೆ 99 ಲಕ್ಷ ರೂ ನಷ್ಟಿತ್ತು. ಆದ್ರೆ ಇದರ ಬೆಲೆ ಈಗ 40 ಲಕ್ಷವನ್ನೂ ದಾಟಿಲ್ಲ! ಇನ್ನೂ ಕಡಿಮೆ ಬೆಲೆಗೆ ಮಾರಾಟ ಆಗುವ ಸಾಧ್ಯತೆಯೂ ಇದೆ. ಆದ್ರೆ ಇದು ಪ್ರತಿಷ್ಠಿತ ಬಾಲಿವುಡ್ ನಟನ ಕಾರು ಅಂತಾ ಯಾರಾದರೂ ಇನ್ನು ಸ್ವಲ್ಪ ಹೆಚ್ಚಿನ ರೇಟಿಗೆ ಖರೀದಿಸಬಹುದಷ್ಟೇ ಹೊರತು.. ತೀರಾ ಜಾಸ್ತಿ ರೇಟು ನಿರೀಕ್ಷಿಸಬೇಡಿ ಎಂದು ಲಕ್ಕಿ ಮೋಟಾರ್ಸ್ ಸಂಸ್ಥೆ ಅದಾಗಲೇ ನಟ ಶಹೀದ್ಗೆ ಹೇಳಿಬಿಟ್ಟಿದೆ. ಆತನೂ ಅಷ್ಟೇ.. ಅಯ್ಯೋ ಬಂದಷ್ಟು ಬರಲೀ ಅಂದಿದ್ದಾರೆ.
ಈ ಕಾರಿನ ಮತ್ತೂ ಒಂದು ವಿಶೇಷ ಇದೆ -ಸ್ವತಃ ರತನ್ ಟಾಟಾ ಅವರೇ ಕಾರು ಕೀ ನೀಡಿದ್ದರು ಎಂದೂ, ಬಾಲಿವುಡ್ನ ಜನಪ್ರಿಯ ನಟನೊಬ್ಬ ಅದರ ಮಾಲೀಕ ಎಂದೂ.. ಈ ಕಾರಿಗೆ 700 ಎಂಬ VIP ನೋಂದಣಿ ಸಂಖ್ಯೆ ದಯಪಾಲಿಸಲಾಗಿತ್ತು! ಇನ್ನೂ ಇಂಟರೆಸ್ಟಿಂಗ್ ಅಂದ್ರೆ ಕೇವಲ 43 ಲಕ್ಷ ರೂ.ಗೆ ಇದಕ್ಕಿಂತ ಹೆಚ್ಚು ಫೀಚರ್ಸ್ ಹೊಂದಿರುವ, ಲೇಟೆಸ್ಟ್ Toyota Fortuner ಕಾರನ್ನೇ ಖರೀದಿಸಬಹುದು. ಏನಂತೀರಾ!?