Gokak Falls: ಯಾರದೋ ಎಡವಟ್ಟಿಗೆ ಇನ್ನ್ಯಾರೋ ‘ಹಣ್ಣು’ ತಿನ್ನುತ್ತಲೇ ಇರಬೇಕು

Auto Driver : “ನಿನ್ನ ಅಮ್ಮನ ಹೇಸರೇನು, ಎಲ್ಲಿ ಅಮ್ಮ?” ಎಂದೆ ಮೂರರ ಕೂಸಿಗೆ. ಆಟೋ ಡ್ರೈವರ್ ಥಟ್ಟನೆ ನನ್ನತ್ತ ತಿರುಗಿ, “ಅವರ ಅಮ್ಮ ತೀರಿ ಇವತ್ತಿಗೆ 22 ದಿನಗಳಾದವು. ಎರಡನೇ ಮಗು ಇನ್ನೂ ಆಸ್ಪತ್ರೆಯಲ್ಲಿದೆ ’’ ಎಂದ.

Gokak Falls: ಯಾರದೋ ಎಡವಟ್ಟಿಗೆ ಇನ್ನ್ಯಾರೋ ‘ಹಣ್ಣು’ ತಿನ್ನುತ್ತಲೇ ಇರಬೇಕು
Follow us
ಶ್ರೀದೇವಿ ಕಳಸದ
|

Updated on:Feb 23, 2022 | 10:51 AM

ಗೋಕಾಕ ಫಾಲ್ಸ್​ | Gokak Falls : ಹೊರಗೆ ರಣಬಿಸಿಲು ಒಳಗೆ ಎಂಥದೋ ಕುದಿತ ಎರಡೂ ಸ್ಪರ್ಧೆಗೆ ಬಿದ್ದಿದ್ದವು. ನಾನು ಎರಡಕ್ಕೂ ಲೆಕ್ಕಿಸದೇ ಹೊರಟೆ. ತುಸು ದೂರ ಹೆಜ್ಜೆ ಕ್ರಮಿಸುವುದರೊಳಗೆ ಕಣ್ಣಿಗೆ ಬಿದ್ದ ಆಟೋಗೆ ಕೈ ಮಾಡಿದೆ. ಒಳಹತ್ತಿ ಕುಳಿತುಕೊಳ್ಳುವಾಗ ನಿಜಕ್ಕೂ ಒಳಗೆ ಬೆಳದಿಂಗಳ ತಂಪೇ ಇತ್ತು; ನಗೆ ಬೀರುತ್ತ ಕೂಸೊಂದು ಅದಾಗಲೇ ಕುಳಿತಿತ್ತು. ಒಂದೇ ಕ್ಷಣದಲ್ಲಿ ನನ್ನ ಒಳಲೋಕದ ಬೆಂಕಿಯನ್ನೆಲ್ಲ ಆರಿ ಹಾಯೆನಿಸಿತು. ಡ್ರೈವರ್​ನ ಕಣ್ಣಾದೇಶಕ್ಕೆ ಸ್ಪಂದಿಸಿ ಅತ್ತಕಡೆ ಸರಿದು ಕುಳಿತಿದ್ದನ್ನು ನೋಡಿಯೇ ಅರ್ಥವಾಯಿತು, ಅದು ಡ್ರೈವರ್​ ಮಗು ಎಂದು. ಮೂರು ವರ್ಷದ್ದಿರಬಹುದು. ‘ನಿನ್ನ ಹೇಸರೇನು’ ಅಂದೆ. ಡ್ರೈವರ್, ‘ಕನ್ನಡ ಬರುವುದಿಲ್ಲ’ ಎಂದು ಹಿಂದಿಯಲ್ಲಿ ಹೇಳಿದಾಗ  ಕೊಂಚ ಕೋಪ ಬಂದಿತು. ಕರ್ನಾಟಕದಲ್ಲಿದ್ದು ಕನ್ನಡ ಬರಲ್ವಾ, ಅದೂ ಆಟೋ ಡ್ರೈವರ್ ಆಗಿ? ಎಂದು ನನ್ನೊಳಗೆ ಗೊಣಗಿಕೊಳ್ಳುತ್ತ, “ಬರಲ್ಲ ಅಂದ್ರೆ ಹೇಗೆ? ಕಲಿಬೇಕಲ್ಲ” ಎಂದು ಅವನದ್ದೇ ಭಾಷೆಯಲ್ಲಿ ಹೇಳಿದೆ. ಸುಷ್ಮಾ ಸವಸುದ್ದಿ, ಪತ್ರಿಕೋದ್ಯಮ ವಿದ್ಯಾರ್ಥಿನಿ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ

*

(ಹರಿವು 9)

ಆಟೋ ಡ್ರೈವರ್ ಸೌಜನ್ಯಪೂರ್ಣವಾಗಿ “ಹಾ ಕನ್ನಡ ಕಲಿತೀನಿ ಮೇಡಮ್. ನಾನು ಮೂಲತಃ ಹರಿಯಾಣದವನು ಇತ್ತೀಚೆಗಷ್ಟೇ ಇಲ್ಲಿಗೆ ಬಂದಿದ್ದೇನೆ. ಹಿಂದಿ-ಇಂಗ್ಲಿಷ್ ಎರಡೂ ಪರ್ಫೆಕ್ಟ್ ಆಗಿ ಮಾತಾಡತೀನಿ. ಕನ್ನಡ ಸ್ವಲ್ಪ-ಸ್ವಲ್ಪ ಅರ್ಥ ಆಗುತ್ತೆ’’ ಅಂದ. ಅವನಿಗೆ ಕನ್ನಡ ಕುರಿತಾಗಿ ಅಸಡ್ಡೆಯೇನಿಲ್ಲ ಎಂಬುದು ತಿಳಿದು ಸಮಾಧಾನವಾದೆ. ಆ ಮಗುವಿಗೆ ಅದರ ಭಾಷೆಯಲ್ಲೇ ಮಾತನಾಡಿಸಿದೆ ತುಂಬಾ ಚೂಟಿಯಾಗಿದ್ದ, ಕೇಳಿದ್ದಕ್ಕೆಲ್ಲ ಉತ್ತರಿಸುತ್ತಿದ್ದ. “ನಿನ್ನ ಅಮ್ಮನ ಹೇಸರೇನು, ಎಲ್ಲಿ ಅಮ್ಮ?” ಎಂದೆ. ಅದಕ್ಕವನು ಅಪ್ಪನ ಬಳಿ ಕತ್ತು ತಿರುಗಿಸಿದ. ಗಾಡಿ ಓಡಿಸುತ್ತಲೇ ಥಟ್ಟನೆ ನನ್ನನ್ನೊಮ್ಮೆ ನೋಡಿ, “ಅವರ ಅಮ್ಮ ತೀರಿ ಇವತ್ತಿಗೆ 22 ದಿನಗಳಾದವು’’ ಎಂದ. ಘಾಸಿಯಾಯಿತು ಎದೆಗೆ. ಕ್ಷಮೆ ಕೇಳಿ, ಏನಾಗಿತ್ತು ಅವರಿಗೆ ಎಂದೆ. ‘‘ಸರ್ಕಾರಿ ಆಸ್ಪತ್ರೆಯಲ್ಲಿ ಎರಡನೇ ಹೆರಿಗೆ ಸಿಝೆರಿಯನ್ ಮಾಡುವಾಗ ಕೊಟ್ಟ ಅರೆವಳಿಕೆ ಇಂಜೆಕ್ಷನ್ ಹೆಚ್ಚು ಕಡಿಮೆಯಾಗಿ ಆಕೆ ಬದುಕಲಿಲ್ಲ. ಆದರೆ ಮಗು ಮಾತ್ರ ಬದುಕಿದೆ. ಇನ್ನೂ ಆಸ್ಪತ್ರೆಯಲ್ಲಿದೆ. ನನ್ನಮ್ಮ ನೋಡಿಕೊಳ್ಳುತ್ತಿದ್ದಾರೆ. ಮನೆಯಲ್ಲಿ ಬೇರೆ ಯಾರೂ ಇರದಿರುವುದರಿಂದ ದೊಡ್ಡಮಗನನ್ನು ಜೊತೆಗೇ ಕರೆದುಕೊಂಡು ಓಡಾಡುತ್ತೇನೆ’’ ಎಂದ.

‘‘ಆಸ್ಪತ್ರೆಯವರ ಮೇಲೆ ಕೇಸು ದಾಖಲಿಸಬೇಕಿತ್ತಲ್ಲ?’’ ಅಂದೆ. ಅದಕ್ಕವನು ಅಸಹಾಯಕತೆಯಿಂದ, ‘‘ಅದಾಗಲೇ ಅವರು ಸಹಿ ಮಾಡಿಸಿಕೊಂಡಿದ್ದರು. ನಮಗೆ ಇಲ್ಲಿ ಯಾರೂ ಪರಿಚಯದವರೂ ಇಲ್ಲ, ಭಾಷೆಯ ಸಮಸ್ಯೆ ಬೇರೆ” ಎಂದ. ನಿಮಗೆ ಹರಿಯಾಣ ಬಿಟ್ಟು ಇಲ್ಲಿಗೆ ಬರುವ ಅಗತ್ಯವಾದರೂ ಏನಿತ್ತು? ಎಂದೆ. ಅದಕ್ಕವನು, “ನಾನು ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತೇನೆ. ನನ್ನ ಪೋಸ್ಟಿಂಗ್ ಇಂಡಿಯಾದಲ್ಲಿ ಎಲ್ಲಿಯಾದರೂ ಆಗಬಹುದು. ಇಷ್ಟು ದಿನ ಹರಿಯಾಣದಲ್ಲೇ ಇತ್ತು. ಈಗ ಇಲ್ಲಿಗೆ ಬಂದೆ. ಆಸ್ಪತ್ರೆಯಲ್ಲಿ ನನಗೆ ನೈಟ್ ಶಿಫ್ಟ್ ಇರುತ್ತೆ. ಹಗಲೊತ್ತು ಖಾಲಿ ಇರುವುದರಿಂದ ಆಟೋ ಓಡಿಸುತ್ತೇನೆ’’ ಎಂದ. ಮನಸ್ಸು ಭಾರವಾಯಿತು. ಕಣ್ಣಾಲಿ ತುಂಬಿದವು. ಆದರೆ ಈ ಸಲ ಸ್ವಂತ ನೋವಿಗಲ್ಲ. ಅಪರಿಚಿತರ ನೋವಿಗೆ. ಅವರ ನೋವಿನ ಮುಂದೆ ನನ್ನದೆಲ್ಲ ಗೌಣವೆನಿಸಿತು.

ದೇಹ ಹೊರಗೆ ಹೇಗೇ ಸುತ್ತಿದರೂ ಅದರ ಸಾವಿರಪಟ್ಟು ವೇಗದಲ್ಲಿ ಒಳಮನಸ್ಸು ಸುತ್ತುತ್ತಿರುತ್ತದೆ. ಡ್ರೈವರ್​ನ ಕಥೆ ಕೇಳುತ್ತಿದ್ದಂತೆ ನನ್ನ ಮನಸ್ಸು ಓಡಿದ್ದು ನಮ್ಮನೆ ಬೀದಿಯ ಕೊನೇಮನೆಯ ವೈಶಾಲಿ ಆಂಟಿ ಮನೆ ಬಾಗಿಲಿಗೆ. ಅವರಿಗೆ ಸುಮಾರು ಐವತ್ತು ದಾಟಿರಬೇಕು, ಯಾವಾಗಲೂ ನಗುಮುಖದ ಚಿಲುಮೆ. ಒಂದಿಲ್ಲೊಂದು ಕೆಲಸದಲ್ಲಿ ಮಗ್ನರಾಗಿರುತ್ತಾರೆ. ನಾನೆಂದರೆ ಅವರಿಗೆ ವಿಶೇಷ ಪ್ರೀತಿ. ಅಂಗನವಾಡಿ ಕಾರ್ಯಕರ್ತೆಯಾದ ಅವರು ಸ್ಲಮ್ ಮಕ್ಕಳನ್ನೆಲ್ಲ ಕರೆದುಕೊಂಡು ಬಂದು ಊಟ-ಪಾಠ-ಆಟದಲ್ಲಿ ತೊಡಗಿಕೊಳ್ಳುತ್ತಾರೆ. ನೋಡಿದ ಯಾರಿಗೂ ಅವರ ಕಥೆ ಅರಿವಿಗೆ ಬಾರದಂತಿರುತ್ತಾರೆ; ತಾನು ಪ್ರೀತಿಸಿದವರನ್ನು ಮದುವೆಯಾಗಲು ಮನೆಯವರನ್ನೆಲ್ಲ ಒಪ್ಪಿಸಿದರು. ನಂತರ ಐದು ತಿಂಗಳ ಹೆಣ್ಣುಮಗುವಾಯಿತು. ಆದರೆ ಗಂಡ ಇದ್ದಕ್ಕಿದ್ದಂತೆ ಹೊಟ್ಟೆ ನೋವು ಎಂದು ಆಸ್ಪತ್ರೆ ಸೇರಿದರು. ವೈದ್ಯರ ಎಡವಟ್ಟಿನಿಂದ ಕಣ್ಣುಮುಚ್ಚಿಬಿಟ್ಟರು. ಆಸ್ಪತ್ರೆ ಮೇಲೆ ಕೇಸು ದಾಖಲಿಸಿದರೂ ಯಾವ ಪ್ರಯೋಜನವೂ ಆಗಲಿಲ್ಲ.

ಹರಿವು 7 : Gokak Falls : ಇದು ಇಲ್ಲದಿರೋ ನೆಗಡಿ ನೆಪವೊಡ್ಡಿ ಮೂಗು ಕತ್ತರಿಸಲೇಬೇಕು ಎಂಬ ಹುನ್ನಾರ

Face the Problems Gokak Falls by Kannada Writer Sushma Savasuddi

ಗಂಡ ಸತ್ತ ನಂತರ ತವರುಮನೆ ಪಾಲಾದರು. ಅಲ್ಲಿ ಅಣ್ಣಂದಿರ ಕುಟುಂಬದೊಂದಿಗೆ ಹೊಂದಾಣಿಕೆ ಸಾಧ್ಯವಾಗದಿದ್ದಾಗ ಬೇರೆ ಬಾಡಿಗೆ ಮನೆ ಮಾಡಿಕೊಂಡು ಅಲ್ಲಿ-ಇಲ್ಲಿ ಕೆಲಸ ಮಾಡಿ, ಕೊನೆಗೆ ಅಂಗನವಾಡಿ ಕಾರ್ಯಕರ್ತರಾದರು. ಮಗಳು ಎಂಜಿನಿಯರಿಂಗ್ ಓದಿದಳು. ಮನೆಯನ್ನೂ ಕಟ್ಟಿಸಿದರು. ತನ್ನ ತಾಯಿಯನ್ನು ಅಣ್ಣಂದಿರು ಸರಿಯಾಗಿ ನೋಡಿಕೊಳ್ಳದ ಕಾರಣ ಅವರನ್ನೂ ತನ್ನೊಂದಿಗೇ ಇರಿಸಿಕೊಂಡರು. ಅವರ ದಿನಚರಿ ಶುರುವಾಗುವುದು ಬೆಳಗಿನ ನಾಲ್ಕಕ್ಕೆ. ಅಮ್ಮನ ಆರೈಕೆ, ಮನೆಗೆಲಸ, ಅಂಗನವಾಡಿ ಕೆಲಸ, ಮಕ್ಕಳು, ಊರು ಸುತ್ತಿ ಜನರಿಗೆ ಜಾಗೃತಿ ಮೂಡಿಸುವುದು… ರಾತ್ರಿ 11ಕ್ಕೆ ಮಲಗುವುದು. ಆದರೆ, ಈತನಕವೂ ಅವರ ಮುಖದಲ್ಲಿ ಬೇಸರ, ಆಯಾಸವನ್ನು ಕಂಡಿದ್ದೇ ಇಲ್ಲ.

ಆಟೋವಾಲಾ ಮತ್ತವನ ಮಗ, ವೈಶಾಲಿ ಆಂಟಿ ಇವರೆಲ್ಲರನ್ನೂ ನಿಧಾನ ಮನಸ್ಸಿನಿಂದ ಇಳಿಸಿ ಒಂದೆರಡು ‘ಐತಿಹಾಸಿಕ ಸ್ಥಳ’ಗಳಿಗೆ ಭೇಟಿ ನೀಡಿದೆ. ಮರದ ಕೆಳಗೆ ಸಂಡಿಗೆ ಮಾರುತ್ತ ಕುಳಿತ ಅಜ್ಜಿಯ ಬಳಿ ಹೋಗಿ ಕುಳಿತೆ. ‘ಎಷ್ಟಮ್ಮ, ವ್ಯಾಪಾರ ಜೋರಾ?’ ಎಂದೆ. ಅಲ್ಲೂ ಒಂದು ಕಥೆ ಹುಟ್ಟಿತ್ತು. “ಏನೋ ಚಹಾ-ಪಾನಿಗೆ ಆದ್ರೆ ಸಾಕಮ್ಮ, ಹೆಚ್ಚೇನೂ ಲಾಭ ಬರಲ್ಲ. ಮಗ ಬಿಟ್ಟು ಹೋಗಿ ಎರಡು ವರುಷವಾಯ್ತು. ಗಂಡ ವಾಚಮನ್ ಇದ್ದ, ಈಗ ಅನಾರೋಗ್ಯ ಅಂತ ಹಾಸಿಗೆ ಹಿಡಿದಿದ್ದಾನೆ. ಈ ಸಂಡಿಗೆ ಬಿಟ್ರೆ ಬೇರೆ ವಿಧಿಯಿಲ್ಲ’’ ಎಂದು ತನ್ನ ಸೆರಗಿಂದ ಕಣ್ಣೀರು  ಒರೆಸಿಕೊಂಡಳು.

ಬೇಸರದಿಂದಲೇ ಅವಳಿಗೆ ವಿದಾಯ ಹೇಳಿ ಬಸ್​ಗಾಗಿ ಫುಟ್​ಪಾತ್ ಮೇಲೆ ಹೋಗುವಾಗ ಕೇಸರಿ ಬಟ್ಟೆ ತೊಟ್ಟು, ಒಂದೆರಡು ದೇವರ ಪುಸ್ತಕ ಹಿಡಿದು, ಕೈಚಿತ್ರ ಇಟ್ಟುಕೊಂಡು ಕುಳಿತಿದ್ದ ಅಜ್ಜ, ಜೋತಿಷ್ಯ ಹೇಳುವೆ ಬಾ ಎಂದು ಕರೆದ. ಇಲ್ಲಿ ಮತ್ತಿನ್ನ್ಯಾವ ಕಥೆ ಹುಟ್ಟುವುದೋ ಏನೋ ಎಂದು, ಆಗಿದ್ದಾಗಲಿ ಕೇಳಿಯೇ ಬಿಡುವಾ ಎಂದು ಎಡಗೈ ಚಾಚಿದೆ. ‘‘ಅಯ್ಯೋ ತಾಯಿ! ಇಷ್ಟು ಚಿಕ್ಕವಯಸ್ಸಿಗೆ ನೀನು ಎಂತೆಂಥಾ ಸಮಸ್ಯೆಗಳ ಸುಳಿಯಲಿ ಸಿಲುಕಿ ಒದ್ದಾಡುತ್ತಿದ್ದಿ, ಮುಂದೆ ಇದಕ್ಕಿಂತ ದೊಡ್ಡ ಸಮಸ್ಯೆಗಳು ಬರಲಿವೆ’’ ಎಂದ. ಪರಿಹಾರ ಬೇಕೆಂದು ಮುಖಸಣ್ಣ ಮಾಡುವುದನ್ನು ನಿರೀಕ್ಷಿಸುತ್ತಿದ್ದನೋ ಏನೋ? ನನಗೆ ಜೋರಾಗಿ ನಗುಬಂದುಬಿಟ್ಟಿತು. ನಕ್ಕುಬಿಟ್ಟೆ. ಅವ ಗಾಬರಿಯಿಂದ ನನ್ನ ನೋಡುತ್ತಿದ್ದ. ದೂರದಲ್ಲಿ ಘಟಪ್ರಭೆಯಂತೂ ಗಹಗಹಿಸಿ ನಗುತ್ತಿದ್ದಳು.

(ಮುಂದಿನ ಹರಿವು : 9.3.2022)

ಹಿಂದಿನ ಹರಿವು : Periods: Gokak Falls; ನಿಮ್ಮ ಮಗನಿಗೆ ‘ಪಿರಿಯಡ್ಸ್​ ಪಾಠ’ ಮಾಡಿದ್ದೀರಾ? ಇಲ್ಲವೆಂದಲ್ಲಿ ತಕ್ಷಣವೇ ತೊಡಗಿಕೊಳ್ಳಿ

Published On - 10:36 am, Wed, 23 February 22

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ