Gokak Falls : ಇದು ಇಲ್ಲದಿರೋ ನೆಗಡಿ ನೆಪವೊಡ್ಡಿ ಮೂಗು ಕತ್ತರಿಸಲೇಬೇಕು ಎಂಬ ಹುನ್ನಾರ

Kannada : ‘ಒಂದು ವೇಳೆ ನಾವು ಈಗ ಎಲ್ಲರ ಕನ್ನಡ ಎನ್ನುವ ಹೆಸರಿನಲ್ಲಿ ಮಹಾಪ್ರಾಣ ತೆಗೆದುಹಾಕಿ ಬೇಕಾದವರು ಬೇಕಾದಂತೆ ಬರೆದುಕೊಂಡು ಹೋದರೆ ಈ ಹಿಂದೆ ಕುವೆಂಪು, ಜಿ.ಎಸ್.ಎಸ್, ಬೇಂದ್ರೆ, ತೇಜಸ್ವಿ, ಕಾರಂತ, ಸಿದ್ಧಲಿಂಗಯ್ಯ ಇವರೆಲ್ಲ ಬರೆದಿದ್ದನ್ನು ನಮ್ಮ ಮುಂದಿನ ಪಿಳಿಗೆ ಅರ್ಥೈಸಿಕೊಳ್ಳುವುದಾದರೂ ಹೇಗೆ?‘ ಸುಷ್ಮಾ ಸವಸುದ್ದಿ

Gokak Falls : ಇದು ಇಲ್ಲದಿರೋ ನೆಗಡಿ ನೆಪವೊಡ್ಡಿ ಮೂಗು ಕತ್ತರಿಸಲೇಬೇಕು ಎಂಬ ಹುನ್ನಾರ
Follow us
|

Updated on:Jan 12, 2022 | 10:41 AM

Gokak Falls | ಗೋಕಾಕ ಫಾಲ್ಸ್​ : ಮಹಾಪ್ರಾಣಗಳು ಸಂಸ್ಕೃತದಿಂದ ಬಂದವುಗಳು ಎಂಬ ಕಾರಣ ಇಟ್ಟುಕೊಂಡು ನಡೆಸುತ್ತಿರುವ ಈ ರಾಜಕೀಯ ಸಾಧಿಸಲು ಹೊರಟಿರುವುದಾದರೂ ಏನನ್ನು? ಅಷ್ಟಕ್ಕೂ ಕನ್ನಡ ಸಂಸ್ಕೃತ ಮೂಲವಲ್ಲ, ಅದು ದ್ರಾವಿಡ ಮೂಲ ಎಂದು ಭಾಷಾ ವಿಜ್ಞಾನಿಗಳು ಹೇಳಿ ಆಗಿದೆ. ಆದರೂ ಇಂತಹದೊಂದು ಅಸಂಬದ್ಧ ಪ್ರಯತ್ನ ಯಾಕೆ ಅಂತಲೇ ತಿಳಿಯುತ್ತಿಲ್ಲ. ಒಂದು ಚಿಕ್ಕ ದ್ವೀಪವೊಂದರಲ್ಲಿ ಡೈಲೆಟ್ (ಉಪಭಾಷೆ) ಆಗಿದ್ದ ಇಂಗ್ಲಿಷ್ ಇಂದು ಜಗತ್ತಿನಾದ್ಯಂತ ಒಳಗೊಳ್ಳಲು  ಕಾರಣ ಅದು ಎಲ್ಲ ಭಾಷೆಗಳಿಂದಲೂ ತನಗೆ ಅವಶ್ಯವಿರುವ ಪದಗಳನ್ನು ತನ್ನೊಳಗೆ ನುಸುಳಲು ಸಹಜ ದಾರಿ ಮಾಡಿಕೊಟ್ಟಿತು. ಆದರೆ ಸಂಸ್ಕೃತ ಹಾಗಲ್ಲ. ಅದು ಪರಭಾಷೆಯ ಪದಗಳನ್ನು ಅಷ್ಟು ಸುಲಭವಾಗಿ ತನ್ನೊಳಗೆ ಲೀನಗೊಳಿಸಿಕೊಳ್ಳದು. ಹಾಗಾಗಿಯೇ ಅದು ನಿಂತ ನೀರಾಯಿತು, ಜನರ ಬಳಕೆಯಿಂದ ದೂರ ಉಳಿಯಿತು. ಈಗ ನಾವು ಮಹಾಪ್ರಾಣಗಳು ನಮ್ಮವಲ್ಲ ಎಂಬ ನೆಪವೊಡ್ಡಿ ಅದನ್ನು ಹೊರಗಿಡಲು ಹೋದರೆ ಹರಿಯುವ ನದಿಯನ್ನು ಕೆರೆಯನ್ನಾಗಿಸುವ ಹುಚ್ಚು ಸಾಹಸ ಎಂದೆನಿಸುವುದಿಲ್ಲವೇ? ಸುಷ್ಮಾ ಸವಸುದ್ದಿ, ಪತ್ರಿಕೋದ್ಯಮ ವಿದ್ಯಾರ್ಥಿನಿ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ

*

ಮೊನ್ನೆ ಒಮ್ಮೆ ಸ್ಟೋರಿ ಪ್ಯಾಕೇಜ್‌ಗೆ Voice-over ಕೊಡುವಾಗ ಹೈರಾಣಾಗಿ ಹೋಯಿತು. ನಾನೇ ಬರೆದ ಸ್ಕ್ರಿಪ್ಟ್  ಸರಳವಾಗೇ ಇತ್ತಾದರೂ, ‘ಸಣ್ಣವರಿಂದ’ ಎಂಬ ಪದವೊಂದು ನನಗೆ ಉಚ್ಚರಿಸಲು ಆಗುತ್ತಲೇ ಇರಲಿಲ್ಲ. ಎಷ್ಟೇ ಪ್ರಯತ್ನಪಟ್ಟರೂ ಅದು ನನ್ನ ನಾಲಗೆಯಲ್ಲಿ ‘ಸನ್ನವರಿಂದ’ ಎಂದು ಹೊರಳುತ್ತಿತ್ತು. ನನಗೆ ಮಾತ್ರವಲ್ಲ ನನ್ನ ಜಿಲ್ಲೆಯ ಮತ್ತೊರ್ವಳಿಗೂ ಇದೇ ಸಮಸ್ಯೆ. ಕೊನೆಗೆ ಆ ಪದವನ್ನು ತೆಗೆದು ‘ಚಿಕ್ಕವರಿಂದ’ ಎಂದು ಬದಲಾಯಿಸಿದೆ.  ಇನ್ನೂ ನಮ್ಮಲ್ಲಿ ಬೇರೆ- ಬೇರೆ ಜಿಲ್ಲೆಗಳಿಂದ ಬಂದ ಹುಡುಗಿಯರಿಗೆ ಹೀಗೆ ಕೆಲವು ಅಕ್ಷರಗಳು ಹೊರಳುವುದಿಲ್ಲ. ಸಾಮಾನ್ಯವಾಗಿ ‘ಹ’ ಕಾರ ಬದಲು ‘ಅ’ ಕಾರ, ‘ಳ’ ಕಾರ ಬದಲು ‘ಲ’ ಕಾರಗಳಲ್ಲಿ ಇಂತಹ ಉಚ್ಛಾರಣಾ  ಗೊಂದಲಗಳಾಗುತ್ತವೆ. ಆದರೆ ಬರೆಯುವಾಗ ಯಾವತ್ತೂ ತಪ್ಪುವುದಿಲ್ಲ. ನನಗೆ ‘ಣ’ ಪದದ ಉಚ್ಛಾರ  ಕಷ್ಟವಾಗಬಹುದಾದರೂ ಅದನ್ನು ಯಾವತ್ತೂ ಕೈಬಿಡಬೇಕೆಂದಾಗಲಿ ಅಥವಾ ನಾನು ಉಚ್ಚರಿಸುವಂತೆಯೇ ಬರೆಯಬೇಕೆಂದಾಗಲೀ ಅನ್ನಿಸಿಲ್ಲ. ಒಂದು ವೇಳೆ ನಾನು ‘ಣ’ ಅಕ್ಷರ ಕಷ್ಟ ಎಂದು ‘ಅಣ್ಣ’ ಎಂಬ ಪದವನ್ನು ‘ಅನ್ನ’ ಎಂತಲೇ ಬರೆದರೆ ಅದು ತಪ್ಪು ಗ್ರಹಿಕೆಗೆ ಎಡೆ ಮಾಡಿಕೊಡುವುದಿಲ್ಲವೇ? ನಮ್ಮ ಭಾಷಾ ಸಂಪತ್ತು ವಿಶಾಲವಾಗಿರುವಾಗ ಅದನ್ನು ನಾವೇ ಸಂಕುಚಿತಗೊಳಿಸುವುದೇಕೆ?

ಇತ್ತೀಚೆಗೆ ಫೇಸ್​ಬುಕ್​ನಲ್ಲಿ  ಒಂದು ಲೇಖನ ಓದುವಾಗ ನನಗಂತೂ ಸಾಕಾಗಿ ಹೋಯ್ತು. ಆ ಮಹಾಶಯನ ಲೇಖನದಲ್ಲಿ ಮಹಾಪ್ರಾಣಗಳೇ ಇರಲಿಲ್ಲ. ‘ಷ’ ಬಳಸುವಲ್ಲಿ ಎಲ್ಲ ‘ಶ’ ಬಳಕೆ ‘ಖ’ ಬದಲಾಗಿ ‘ಕ’, ‘ಳ’ ಬಳಕೆಯೇ ಇಲ್ಲ. ಯಾವ ಪುಣ್ಯಾತ್ಮ ಇದನ್ನು ಬರೆದದ್ದು, ಈತನನ್ನು ನಮ್ಮ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರ ಬಳಿ ಕಳುಹಿಸಬೇಕು ಅನ್ನಿಸಿತು.  ಒಂದೇ ಒಂದು ದೀರ್ಘ, ಒತ್ತಕ್ಷರ, ಮಹಾಪ್ರಾಣ ಮಿಸ್ ಆದರೂ ಗಂಟೆಗಟ್ಟಲೆ ಪಾಠ ಮಾಡುತ್ತಾರೆ ಅಂಥದ್ದರಲ್ಲಿ ಈ ಮಾರಾಯ ಅವರ ಕೈಗೆ ಸಿಕ್ಕರೆ ಅಷ್ಟೇ! ಎಂದು ಸ್ನೇಹಿತೆಗೆ ಹೇಳಿ ನಕ್ಕೆ. ಆಗ ಆಕೆ ಹೇಳಿದ್ದು, ಅದು ‘ಎಲ್ಲರ ಕನ್ನಡ’ ಎಂದು. ಇದೆಂಥ ಎಲ್ಲರ ಕನ್ನಡವೋ ಏನೋ. ಇದು ಎಲ್ಲರ ಕನ್ನಡ ಅಲ್ಲ ಅವರವರ ಕನ್ನಡ. ನನಗಂತೂ ಇದು ಅಕ್ಷರಶಃ ಹುಚ್ಚು ಪ್ರಯತ್ನ ಎನಿಸಿತು. ಅಲ್ಲ ಮಾರಾಯಾ ನಿನಗೆ ಮಾತನಾಡಲು ಆಗಲಿಲ್ಲವಾದರೆ ಪರ್ವಾಗಿಲ್ಲ ಬಿಡು. ಬರೆಯೋದರಲ್ಲಿ ಸಮಸ್ಯೆ ಏನಪ್ಪಾ? ‘ಳ’ ಉಚ್ಛಾರ ಕಷ್ಟವೆಂದು ‘ಹೇಳು’ ಎಂಬಲ್ಲಿ ‘ಲ’ ಬರೆದರೆ ಅದು ಎಷ್ಟು ಅಪಹಾಸ್ಯ!

ಪ್ರತಿ 10-12 ಕಿ.ಮಿಗೆ ಭಾಷೆ ಬದಲಾಗುತ್ತದೆ. ನಮ್ಮಲ್ಲಿ ಎಷ್ಟು ಕನ್ನಡಗಳು ಅಸ್ತಿತ್ವದಲ್ಲಿಲ್ಲ? ಮೈಸೂರು ಕನ್ನಡ, ಬೆಂಗಳೂರು ಕನ್ನಡ, ಬೆಳಗಾವಿ ಕನ್ನಡ, ಹುಬ್ಬಳ್ಳಿ ಕನ್ನಡ, ತುಳು ಕನ್ನಡ, ಬ್ಯಾರಿ ಕನ್ನಡ ಹೀಗೆ ಎಷ್ಟೊಂದು ವೈವಿಧ್ಯತೆಗಳಿವೆ. ಈ ವೈವಿಧ್ಯತೆಗಳೇ ಅಲ್ಲವೆ ಭಾಷಾ ಸೌಂದರ್ಯವನ್ನು ಹೆಚ್ಚಿಸುವುದು. ಭಾಷೆಯೂ ನದಿಯಂತೆ ಎಲ್ಲವನ್ನೂ ತನ್ನೊಳಗೆ ಲೀನವಾಗಿಸಿಕೊಂಡು ಹರಿಯುತ್ತಲೇ ಇರುತ್ತದೆ. ಅದನ್ನು ಅದರ ಪಾಡಿಗೆ ಹರಿಯಲು ಬಿಡಿ. ಒತ್ತಾಯಪೂರ್ವಕವಾಗಿ ಅದರ ಪಾತ್ರ ಬದಲಿಸುವುದು ಆತಂಕದ ಸೂಚನೆಯಲ್ವ? ಬದಲಾವಣೆ ಜಗದ ನಿಯಮ. ಈ ನಿಯಮಕ್ಕೆ ಭಾಷೆಯೂ ಒಳಗೊಳ್ಳುತ್ತದೆ. ಆದರೆ ಆ ಬದಲಾವಣೆ ತನ್ನಿಂದ ತಾನಾಗಿಯೇ ಆಗಬೇಕಾದದ್ದು ಕಾಲದಿಂದ ಕಾಲಕ್ಕೆ. ಹಳೆಗನ್ನಡದಿಂದ – ನಡುಗನ್ನಡ, ನಡುಗನ್ನಡದಿಂದ – ಹೊಸಗನ್ನಡವಾಗಿ ಬೆಳೆದದ್ದು ಹೀಗೇ ತಾನೆ? ಇಲ್ಲಿ ಯಾವ ಚಳವಳಿ, ಪ್ರತಿಭಟನೆ, ಅಭಿಯಾನಗಳು ನಡೆದಿರಲಿಲ್ಲ. ಅದೆಲ್ಲ ತಾನಾಗಿಯೇ ಕಾಲಚಕ್ರದ ಸುಳಿಗೆ ಸಿಲುಕಿ ಬಂದದ್ದು.

Gokak Falls column Sushma Savasuddi discussed Ellara Kannada Nammellara Kannada

ಇದೆಲ್ಲವೂ ನಿಮಗೆ ಕೇಳಿಸುತ್ತಿದೆಯೇ?

ಮಹಾಪ್ರಾಣಗಳು ಸಂಸ್ಕೃತದಿಂದ ಬಂದವುಗಳು ಎಂಬ ಕಾರಣ ಇಟ್ಟುಕೊಂಡು ನಡೆಸುತ್ತಿರುವ ಈ ರಾಜಕೀಯ ಸಾಧಿಸಲು ಹೊರಟಿರುವುದಾದರೂ ಏನನ್ನು? ಅಷ್ಟಕ್ಕೂ ಕನ್ನಡ ಸಂಸ್ಕೃತ ಮೂಲವಲ್ಲ, ಅದು ದ್ರಾವಿಡ ಮೂಲ ಎಂದು ಭಾಷಾ ವಿಜ್ಞಾನಿಗಳು ಹೇಳಿ ಆಗಿದೆ. ಆದರೂ ಇಂತಹದೊಂದು ಅಸಂಬದ್ಧ ಪ್ರಯತ್ನ ಯಾಕೆ ಅಂತಲೇ ತಿಳಿಯುತ್ತಿಲ್ಲ. ಒಂದು ಚಿಕ್ಕ ದ್ವೀಪವೊಂದರಲ್ಲಿ ಡೈಲೆಟ್ ಆಗಿದ್ದ ಇಂಗ್ಲಿಷ್ ಇಂದು ಜಗತ್ತಿನಾದ್ಯಂತ ಒಳಗೊಳ್ಳಲು  ಕಾರಣ ಅದು ಎಲ್ಲ ಭಾಷೆಗಳಿಂದಲೂ ತನಗೆ ಅವಶ್ಯವಿರುವ ಪದಗಳನ್ನು ತನ್ನೊಳಗೆ ನುಸುಳಲು ಸಹಜ ದಾರಿ ಮಾಡಿಕೊಟ್ಟಿತು. ಆದರೆ ಸಂಸ್ಕೃತ ಹಾಗಲ್ಲ. ಅದು ಪರಭಾಷೆಯ ಪದಗಳನ್ನು ಅಷ್ಟು ಸುಲಭವಾಗಿ ತನ್ನೊಳಗೆ ಲೀನಗೊಳಿಸಿಕೊಳ್ಳದು. ಹಾಗಾಗಿಯೇ ಅದು ನಿಂತ ನೀರಾಯಿತು, ಜನರ ಬಳಕೆಯಿಂದ ದೂರ ಉಳಿಯಿತು. ಈಗ ನಾವು ಮಹಾಪ್ರಾಣಗಳು ನಮ್ಮವಲ್ಲ ಎಂಬ ನೆಪವೊಡ್ಡಿ ಅದನ್ನು ಹೊರಗಿಡಲು ಹೋದರೆ ಹರಿಯುವ ನದಿಯನ್ನು ಕೆರೆಯನ್ನಾಗಿಸುವ ಹುಚ್ಚು ಸಾಹಸ ಎಂದೆನಿಸುವುದಿಲ್ಲವೇ? ಒಂದು ವೇಳೆ ನಾವು ಈಗ ಎಲ್ಲರ ಕನ್ನಡ ಎನ್ನುವ ಹೆಸರಿನಲ್ಲಿ ಮಹಾಪ್ರಾಣ ತೆಗೆದುಹಾಕಿ ಬೇಕಾದವರು ಬೇಕಾದಂತೆ ಬರೆದುಕೊಂಡು ಹೋದರೆ ಈ ಹಿಂದೆ ಕುವೆಂಪು, ಜಿ.ಎಸ್.ಎಸ್, ಬೇಂದ್ರೆ, ತೇಜಸ್ವಿ, ಕಾರಂತ, ಸಿದ್ಧಲಿಂಗಯ್ಯ ಇವರೆಲ್ಲ ಬರೆದಿದ್ದನ್ನು ನಮ್ಮ ಮುಂದಿನ ಪಿಳಿಗೆ ಅರ್ಥೈಸಿಕೊಳ್ಳುವುದಾದರೂ ಹೇಗೆ?

ಕನ್ನಡ ಭಾಷೆಯ ಕುರಿತಾದ ಈ ಬೆಳವಣಿಗೆಯನ್ನು ಕೆಲವರು ಇದು ನೆಗಡಿಗೆ ಮೂಗು ಕತ್ತರಿಸುವಂತೆ ಎಂದರು. ಆದರೆ ನನಗೇಕೋ ಇದು ಇಲ್ಲದಿರೋ ನೆಗಡಿ ನೆಪವೊಡ್ಡಿ ಮೂಗು ಕತ್ತರಿಸಲೇಬೇಕು ಎಂಬ ಹುನ್ನಾರ ಸೃಷ್ಟಿಸಿದಂತೆ ಕಾಣುತ್ತಿದೆ. ನಿಜವಾಗಿಯೂ ಸುಧಾರಿಸುವ ಮನಸ್ಸಿದ್ದರೆ, ಪ್ರಗತಿಪರ ಧೋರಣೆಗಳಿದ್ದರೆ ಸುತ್ತಲೂ ಒಮ್ಮೆ ಕಣ್ಣಾಡಿಸಿ ನೋಡಿ ಎಷ್ಟೊಂದು ವಿಚಾರಗಳು ಇನ್ನೂ ಮೂಲೆಯಲ್ಲಿ ಉಸಿರುಗಟ್ಟಿ ಬಿದ್ದಿವೆ. ನಮ್ಮ ಹಳದಿಗೆಂಪು ಬಾವುಟ ಇನ್ನೂ ಅಧಿಕೃತಗೊಂಡಿಲ್ಲ. ಬೆಳಗಾವಿ ಗಡಿಯಲ್ಲಿ ಆಗಾಗ ಭುಗಿಲೇಳುವ ಗದ್ದಲಗಳ ಕಡೆ ಗಮನಹರಿಸಿ. ಹಿಂದಿ ಹೇರಿಕೆಗೆ ನಮ್ಮ ಭಾಷೆ ಬಲಿಯಾಗದಂತೆ ನೋಡಿಕೊಳ್ಳಿ, ಇಂಗ್ಲಿಷ್ ಪ್ರತಿಷ್ಠೆಗೆ ಸಿಲುಕಿ ನರಳಾಡದಂತೆ ಎಚ್ಚರವಹಿಸಿ.

ಮುಂದಿನ ಹರಿವು : 26.1.2022 (ಈ ಅಂಕಣ ಶುಕ್ರವಾರದ ಬದಲಾಗಿ ಹದಿನೈದು ದಿನಕ್ಕೊಮ್ಮೆ ಬುಧವಾರ ಪ್ರಕಟವಾಗುತ್ತದೆ)

ಹಿಂದಿನ ಹರಿವು : Gokak Falls : ಕಿತ್ತು ತಿನ್ನುವ ಬಡತನ ಇದ್ದಾಗಲೂ ಕೊಟ್ಟು ತಿನ್ನುವ ಗುಣ ರೈತನ ರಕ್ತನಾಳಗಳಲ್ಲೇ ಹುದುಗಿದೆ

Published On - 10:40 am, Wed, 12 January 22

ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ
ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ರಾಜಕೀಯ, ಉಗ್ರಂ ಮಂಜು ಸೂತ್ರಧಾರಿ?
ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ರಾಜಕೀಯ, ಉಗ್ರಂ ಮಂಜು ಸೂತ್ರಧಾರಿ?
ರಾಜ್ಯ ರಾಜಕೀಯಕ್ಕೆ ಒಳಿತಾಗುವ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ: ಕುಮಾರಸ್ವಾಮಿ
ರಾಜ್ಯ ರಾಜಕೀಯಕ್ಕೆ ಒಳಿತಾಗುವ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ: ಕುಮಾರಸ್ವಾಮಿ
ಮಳೆ ನಿಂತರೂ ನಿಲ್ಲದ ಅವಾಂತರ: ಸೋರುತ್ತಿದೆ ಬಾಗೇಪಲ್ಲಿಯ ತಹಶೀಲ್ದಾರ್ ಕಚೇರಿ
ಮಳೆ ನಿಂತರೂ ನಿಲ್ಲದ ಅವಾಂತರ: ಸೋರುತ್ತಿದೆ ಬಾಗೇಪಲ್ಲಿಯ ತಹಶೀಲ್ದಾರ್ ಕಚೇರಿ