Citizen Journalist : ‘ಹಾದಿಯೇ ತೋರಿದ ಹಾದಿ’ ಜ್ಯೋತಿ ಎಸ್​. ಅಂಕಣ ನಾಳೆಯಿಂದ ಪ್ರಾರಂಭ

Common Man : ‘ಸೋತು ಗೆಲ್ಲುವ, ಗೆದ್ದು ಸೋಲುವ ಈ ನಿತ್ಯಪಂದ್ಯದೊಳಗಿನ ಇಂಥವರ ಬದುಕಿನ ಸಂದೇಶ ಸಣ್ಣದಲ್ಲ. ದೂರ ನಿಂತು ನೋಡಿದವರಿಗೆ ಅವರ ತಪ್ಪುಗಳೇ ಕಾಣುತ್ತವೆ. ಆರೋಪಿಸುವುದು, ಶಿಕ್ಷಿಸುವುದು ಬಲುಸುಲಭ. ಆದರೆ ಒಮ್ಮೆ ಅವರನ್ನು ಹತ್ತಿರದಿಂದ ಕಾಣಿ. ತಪ್ಪುಗಳ ಮೂಲ ಅರ್ಥವಾಗದಿದ್ದರೆ ಹೇಳಿ.’ ಜ್ಯೋತಿ ಎಸ್.

Citizen Journalist : ‘ಹಾದಿಯೇ ತೋರಿದ ಹಾದಿ’ ಜ್ಯೋತಿ ಎಸ್​. ಅಂಕಣ ನಾಳೆಯಿಂದ ಪ್ರಾರಂಭ
Follow us
ಶ್ರೀದೇವಿ ಕಳಸದ
|

Updated on: Jan 12, 2022 | 5:48 PM

ಹಾದಿಯೇ ತೋರಿದ ಹಾದಿ | Haadiye Torida Haadi : ನಿತ್ಯದ ಪಡಿಪಾಟಲುಗಳನ್ನೇ ಉಸಿರಾಡುವ ಸಾಮಾನ್ಯರ ಬದುಕಿನ ಅಸಾಮಾನ್ಯ ಕಥನಗಳನ್ನು ಸಮಾಜದ ಮುಂದಿಡಬೇಕು ಮತ್ತು ಇದು ಯಾರಿಗಾದರೂ ಒಂದರೆಪಾವಿನಷ್ಟು ಸ್ಫೂರ್ತಿ ಸಿಗುವಂತಾಗಬೇಕು ಎನ್ನುವ ಆಶಯದಿಂದಲೇ ನಾನು ರಸ್ತೆಗಿಳಿದೆ. ‘ಟಿವಿ9 ಕನ್ನಡ ಡಿಜಿಟಲ್’ ಮೂಲಕವೇ ನನ್ನ ಈ ಪ್ರಯಾಣವನ್ನು ಆರಂಭಿಸಿ ಈತನಕ ಒಂದಿಷ್ಟು ರಸ್ತೆ-ಕಥನಗಳನ್ನು ಬಿಡಿಬಿಡಿಯಾಗಿ ಬರೆದೆ. ಈ ಅಕ್ಷರಗಳ ಸಾಂಗತ್ಯ ಮತ್ತು ಹೊರಪ್ರಯಾಣ ನನಗೆ ನನ್ನ ಅಸ್ತಿತ್ವದ ಬಗ್ಗೆ ಮೆಲ್ಲಗೆ ಅರಿವು ನೀಡುತ್ತಾ ಹೋಯಿತು. ಈವರೆಗಿನ ನಾನು ಬದುಕಿನ ಅರ್ಧಭಾಗ ಕಷ್ಟಗಳ ಕರಾಳತೆಯನ್ನೇ ಉಂಡುಟ್ಟವಳಾದ್ದರಿಂದ ನನ್ನ ಕಥನಗಳ ನಾಯಕ-ನಾಯಕಿಯರ ಬದುಕುಬವಣೆಗಳು ಬೇಗನೇ ಹತ್ತಿರವಾದವು. ಅವರ ನಗುಮುಖದ ಹಿಂದಿನ ಬಡತನ, ಅಸಹಾಯಕತೆ, ಅನೀರಿಕ್ಷಿತ ಆಘಾತಗಳು, ಒಳಗೇ ಇಂಗುವ ಕಣ್ಣೀರು ನನ್ನನ್ನು ತುಂಬಾ ಕಾಡುತ್ತ ಹೋದವು.  ಚಳಿ ಮಳೆ ಬಿಸಿಲು ಧೂಳು ಏನೇ ಇದ್ದರೂ ದಿನನಿತ್ಯದ ಹೆಚ್ಚಿನ ಸಂದರ್ಭಗಳು ಮನಸು ಮೈಗೆ ವಿರುದ್ಧವಾಗಿದ್ದರೂ ನಗುತ್ತಲೇ ಎಲ್ಲವನ್ನೂ ಎದುರಿಸುವ ಅವರ ದಿಟ್ಟತನದ ಮುಂದೆ ನನ್ನ ಕಷ್ಟಗಳು ಏನೂ ಅಲ್ಲವೆಂದೇ ಎನ್ನಿಸಿದವು. 

ಜ್ಯೋತಿ ಎಸ್. ಬೆಂಗಳೂರು, ಸಿಟಿಝೆನ್ ಜರ್ನಲಿಸ್ಟ್​

* ಇತ್ತೀಚೆಗಷ್ಟೇ ಪತ್ರಿಕೋದ್ಯಮದಲ್ಲಿ ಡಿಪ್ಲೊಮೊ ಪಡೆದಿರುವ ಜ್ಯೋತಿ ಎಸ್. ಬೆಂಗಳೂರು ನಿವಾಸಿ. ಇವರ ಛಲ, ಉತ್ಸಾಹ ಮತ್ತು ಅಕ್ಷರಪ್ರೀತಿ ಅಗಾಧ. ಇವರ ‘ಹಾದಿಯೇ ತೋರಿದ ಹಾದಿ’ ಅಂಕಣ ಪ್ರತೀ ಗುರುವಾರ ಪ್ರಕಟವಾಗಲಿದೆ. ಅಂಕಣದ ಆಶಯ ನಿಮ್ಮ ಓದಿಗೆ.

*

ಪತ್ರಿಕೆಗಳಲ್ಲಿ, ಟಿವಿಗಳಲ್ಲಿ ರಾಜಕಾರಣಿಗಳು, ಸಿನಿಮಾನಟರು ಹೀಗೆ ಪ್ರತಿಷ್ಠಿತ ವ್ಯಕ್ತಿಗಳ ಸಣ್ಣ ಸುದ್ದಿಯೂ ದೊಡ್ಡದಾಗಿ ಪ್ರಕಟವಾಗುತ್ತದೆ. ಸಾಮಾನ್ಯರ ಸುದ್ದಿಗಳು ಹೇಳಹೆಸರಿಲ್ಲದೆ ಗೌಣವಾಗಿರುತ್ತವೆ. ಆದರೆ ಡಿಜಿಟಲ್​ ಮಾಧ್ಯಮ ಇದಕ್ಕೆ ಅಪವಾದವೆಂಬಂತಿದೆ. ಜನಸಾಮಾನ್ಯರ ಬದುಕು ಬವಣೆ ಕನಸು ಆಶಯಗಳಿಗೆ ಇಲ್ಲಿ ಖಂಡಿತಾ ಅವಕಾಶವಿದೆ, ಸ್ಪಂದನೆ ಇದೆ ಎನ್ನುವುದು ಬರೆಯುತ್ತಾ ಹೋದಂತೆ ತಿಳಿಯಿತು. ಬೀದಿ, ಬಸ್​ ಸ್ಟ್ಯಾಂಡ್, ದೇವಸ್ಥಾನ, ಫುಟ್ ಪಾತ್ ಹೀಗೆ ಎಲ್ಲೆಂದರಲ್ಲಿ ದಿನದ ತುತ್ತಿಗಾಗಿ ಸ್ವಾಭಿಮಾನದಿಂದ ಬದುಕುವವರ ನಂಟು ಕೇವಲ ಬರಹಕ್ಕಷ್ಟೇ ಸೀಮಿತವಾಗಿಲ್ಲ, ಭಾವನಾತ್ಮಕವಾಗಿ ಬೆಸೆದಿಟ್ಟಿದ್ದಾರೆ. ಹೀಗಾಗಿ ಈತನಕವೂ ಒಂದು ರೀತಿಯ ಆತ್ಮೀಯ ಒಡನಾಟ ನನ್ನ ಮತ್ತು ಅವರ ನಡುವೆ ಇದ್ದೇ ಇದೆ.

ಖಾಲೀ ಹೊಟ್ಟೆಯಲ್ಲಿದ್ದರೂ ಕನಸುಗಳನ್ನು ಹಾಗೇ ಜೋಪಾನಿಸಿಕೊಂಡವರು, ಹರಿದ ಬಟ್ಟೆಯಲ್ಲಿಯೂ ಆತ್ಮಗೌರವಕ್ಕಾಗಿ ಜೀವಹಿಡಿದು ಕುಳಿತವರು, ಭಿಕ್ಷೆ ಕೊಟ್ಟರೂ ದುಡಿದು ತಿನ್ನಬೇಕೆಂಬ ಛಲವುಳ್ಳವರು, ಪ್ರತಿಭೆ, ಅರ್ಹತೆ ಇದ್ದರೂ ವಿಷಘಳಿಗೆಗೆ ಎಲೆಮರೆಯ ಕಾಯಂತೆ ಇರುವವರು… ಹೆಜ್ಜೆಹೆಜ್ಜೆಗೂ ಸ್ಫೂರ್ತಿಯ ಚಿಲುಮೆಗಳಂತೆ ಬದುಕುತ್ತಿದ್ದಾರೆ. ‘ನಮ್ಮ ದನಿಗೆ ಕಿವಿಯಾದವರು ಯಾರೂ ಇರಲಿಲ್ಲ, ಒಂದೆರಡು ಮಾತಾಡಿ ಹೆಚ್ಚೆಂದರೆ ಫೋಟೋ ತೆಗೆದುಕೊಂಡು ಹೋಗುತ್ತಿದ್ದರು. ನೀವು ನಮ್ಮ ಧ್ವನಿಯನ್ನು ಜಗತ್ತಿಗೆ ತಲುಪಿಸಿದ್ದೀರಿ’ ಎಂದು ಅವರೆಲ್ಲ ಹೇಳುವಾಗೆಲ್ಲ ಕಣ್ಣಂಚು ಒದ್ದೆಯಾಗಿದ್ದಿದೆ, ಸಾರ್ಥಕಭಾವ ಮೂಡಿದ್ದಿದೆ.

ಬರೆಯುವುದಕ್ಕಾಗಿ ವಿಷಯಗಳನ್ನು ಹುಡುಕಾಡಿಕೊಂಡು ಹೋಗಬೇಕಂತಿಲ್ಲ. ಮನಸ್ಸು ತೆರೆದಿಟ್ಟುಕೊಂಡು ಚಲಿಸಿದರೆ ವಿಷಯಗಳೇ ನಮ್ಮ ಬಳಿಗೆ ಬರುತ್ತವೆ. ಇದಕ್ಕೆ ಉದಾಹರಣೆ ನಾದಸ್ವರದ ವೆಂಕಟರಮಣಪ್ಪ. ಇವರ ಜಾಡನ್ನು ಹಿಡಿದು ಇವರ ಗುಡಿಸಲುಗಳಿಗೆ ತೆರಳಿದಾಗ ಕೊರೊನಾ ನಂತರ ಅಲೆಮಾರಿ ಜನಾಂಗದ ಮಕ್ಕಳಿಗೆ ಒಂದು ಪುಟ್ಟ ಶೆಡ್ಡಿನ ಶಾಲೆ ಕಣ್ಬಿಟ್ಟ ವಿಷಯ ತಿಳಿದಿದೆ. ಆ ಬಗ್ಗೆ ಸ್ಟೋರಿ ಪ್ರಕಟವಾದ ನಂತರ ಆ ಮಕ್ಕಳಿಗೆ ಸಮವಸ್ತ್ರ, ಪಠ್ಯಪುಸ್ತಕಗಳ ಸಹಾಯವೂ ಸ್ಥಳೀಯರಿಂದ, ಸಂಘಸಂಸ್ಥೆಗಳಿಂದ ದೊರಕಿದೆ. ಇನ್ನು ತಾವರೆಯ ಹೂವನ್ನು ಮಾರುವವರ ಬಗ್ಗೆ ಬರೆದಾಗ  ಸಾಕಷ್ಟು ಓದುಗರು ಅವರ ನಂಬರ್ ಪಡೆದು ಸಹಾಯ ಮಾಡಿದರು. ಅಂಗವಿಕಲರನ್ನು ಇನ್ನೂ ಭಿಕ್ಷುಕರಂತೆ ಕಾಣುವ ನಮ್ಮ ಸಮಾಜದ ಬಗ್ಗೆ ಏನು ಹೇಳುವುದು? ಎರಡು ಕಾಲುಗಳನ್ನು ಕಳೆದುಕೊಂಡಿದ್ದರೂ ಮೊಹಿದ್ದೀನ್​ಗೆ ದುಡಿದು ತಿನ್ನುವ ಛಲ. ಈ ಬಗ್ಗೆ ಬರೆದಾಗ, ಯಾವುದ್ಯಾವುದೋ ಊರುಗಳಿಂದ ಅವರಿಗೆ ಸಹಾಯ ಮಾಡುವುದಾಗಿ ಹಲವಾರು ಕರೆಗಳು ನನ್ನನ್ನು ತಲುಪಿದವು. ಇಂಥ ಹಲವಾರು ಜೀವಂತಕಥನಗಳ ಮೂಲಕ ಮಾನವೀಯತೆ ಮತ್ತಷ್ಟು ಪಸರಿಸಿದಲ್ಲಿ ಬರೆವಣಿಗೆ ಸಾರ್ಥಕ.

Haadiye Torida Haadi Column By Citizen Journalist Jyothi S

ಜ್ಯೋತಿ ಸ್ಟೋರಿಯ ಸಣ್ಣ ಫಲಶ್ರುತಿ

ಸೋತು ಗೆಲ್ಲುವ, ಗೆದ್ದು ಸೋಲುವ ಈ ನಿತ್ಯಪಂದ್ಯದೊಳಗಿನ ಇಂಥವರ ಬದುಕಿನ ಸಂದೇಶ ಸಣ್ಣದಲ್ಲ. ದೂರ ನಿಂತು ನೋಡಿದವರಿಗೆ ಅವರ ತಪ್ಪುಗಳೇ ಕಾಣುತ್ತವೆ. ಆರೋಪಿಸುವುದು, ಶಿಕ್ಷಿಸುವುದು ಬಲುಸುಲಭ. ಆದರೆ ಒಮ್ಮೆ ಅವರನ್ನು ಹತ್ತಿರದಿಂದ ಕಾಣಿ. ತಪ್ಪುಗಳ ಮೂಲ ಅರ್ಥವಾಗದಿದ್ದರೆ ಹೇಳಿ. ಇಂಥ ಸರಿತಪ್ಪುಗಳನ್ನು, ಖುಷಿ ಸಂಕಟಗಳನ್ನು, ಕನಸು-ಛಲಗಳನ್ನು ನಿಮ್ಮೆಲ್ಲರಿಗೆ ದಾಟಿಸುವುದಷ್ಟೇ ನನ್ನ ಪ್ರಯತ್ನ. ಎಂದಿನಂತೆ ನಿಮ್ಮ ಪ್ರೋತ್ಸಾಹ, ಸ್ಪಂದನೆ ಮುಂದೆಯೂ ಇರುತ್ತದೆಂಬ ಆಶಾಭಾವನೆಯಿಂದ ಪ್ರತೀ ಗುರುವಾರ ಈ ಅಂಕಣದೊಂದಿಗೆ ನಿಮ್ಮನ್ನು ಭೇಟಿಯಾಗಲಿದ್ದೇನೆ. ಕಾಯುತ್ತೀರಲ್ಲ?

ಜ್ಯೋತಿ ಅಕ್ಷರ ಪ್ರಪಂಚಕ್ಕೆ ಕಾಲಿಟ್ಟಿದ್ದು ಇಲ್ಲಿದೆ : Journalism : ‘ನನ್ನ ಮೂರು ಮಕ್ಕಳೊಂದಿಗೆ ನಾನೂ ಓದುತ್ತ ಬರೆಯುತ್ತ ಬೆಳೆಯುತ್ತಿದ್ದೇನೆ’

ಇದನ್ನೂ ಓದಿ : Old Age Homes : ‘ಒಂದೆರಡು ಸಾವಿರ ನಿಮ್ಮ ಅಕೌಂಟಿಗೆ ಹಾಕ್ತೀವಿ, ಕಾರ್ಯ ಮಾಡಿ ಮುಗಿಸಿಬಿಡಿ‘

ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್