Sign In

By signing in or creating an account, you agree with Associated Broadcasting Company's Terms & Conditions and Privacy Policy.

Jamat Ul Vida 2021; ರಂಜಾನ್ ತಿಂಗಳ ಕೊನೇ ಶುಕ್ರವಾರದ ಮಹತ್ವವೇನು?

ಇಂದು ಈ ಪವಿತ್ರ ತಿಂಗಳ ಕೊನೇ ಶುಕ್ರವಾರ ಅಂದರೆ ಜಮಾತ್-ಉಲ್-ವಿದಾ (Jamat-ul-vida). ಇದು ಅರೇಬಿಕ್ ಪದವಾಗಿದ್ದು, ಇದನ್ನು ಇಂಗ್ಲಿಷ್‌ನಲ್ಲಿ 'ಫ್ರೈಡೇ ಆಫ್ ಫ್ರೈವೆಲ್' (Friday of Farewell) ಎಂದು ಅನುವಾದಿಸಲಾಗುತ್ತದೆ. ಇದು ರಂಜಾನ್ ತಿಂಗಳ ಕೊನೇ ಶುಕ್ರವಾರಕ್ಕೆ ವಿದಾಯ ಹೇಳುವ ದಿನ. ಈ ದಿನಕ್ಕೇ ಅದರದೇ ಆದ ವಿಶೇಷತೆಗಳಿವೆ.

Jamat Ul Vida 2021; ರಂಜಾನ್ ತಿಂಗಳ ಕೊನೇ ಶುಕ್ರವಾರದ ಮಹತ್ವವೇನು?
ಪ್ರಾತಿನಿಧಿಕ ಚಿತ್ರ
Follow us
ಆಯೇಷಾ ಬಾನು
|

Updated on: May 07, 2021 | 4:07 PM

ಮುಸ್ಲಿಮರು ಪವಿತ್ರ ರಂಜಾನ್ ತಿಂಗಳ ಸಂಭ್ರಮದಲ್ಲಿದ್ದಾರೆ. ಪವಿತ್ರ ರಂಜಾನ್ ತಿಂಗಳಲ್ಲಿ, ಪ್ರಪಂಚದಾದ್ಯಂತದ ಮುಸ್ಲಿಮರು ಉಪವಾಸ, ದಾನ, ಧರ್ಮ ಮಾಡುತ್ತ ದೇವರ ಪ್ರಾರ್ಥನೆಯಲ್ಲಿ ತಮ್ಮನ್ನು ಮರೆಯುತ್ತಾರೆ. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಆಚರಿಸುತ್ತಾರೆ. ಇಂದು ಈ ಪವಿತ್ರ ತಿಂಗಳ ಕೊನೇ ಶುಕ್ರವಾರ ಅಂದರೆ ಜಮಾತ್-ಉಲ್-ವಿದಾ (Jamat-ul-vida). ಇದು ಅರೇಬಿಕ್ ಪದವಾಗಿದ್ದು, ಇದನ್ನು ಇಂಗ್ಲಿಷ್‌ನಲ್ಲಿ ‘ಫ್ರೈಡೇ ಆಫ್ ಫ್ರೈವೆಲ್’ (Friday of Farewell) ಎಂದು ಅನುವಾದಿಸಲಾಗುತ್ತದೆ. ಇದು ರಂಜಾನ್ ತಿಂಗಳ ಕೊನೇ ಶುಕ್ರವಾರಕ್ಕೆ ವಿದಾಯ ಹೇಳುವ ದಿನ. ಈ ದಿನಕ್ಕೇ ಅದರದೇ ಆದ ವಿಶೇಷತೆಗಳಿವೆ.

ಸಾಮಾನ್ಯವಾಗಿ ಮುಸ್ಲಿಮರಿಗೆ ಪ್ರತೀ ಶುಕ್ರವಾರವೂ ವಿಶೇಷ ದಿನವಾಗಿರುತ್ತದೆ. ವರ್ಷವಿಡೀ ಬರುವ ಶುಕ್ರವಾರವನ್ನು (ಜುಮ್ಮಾ) ಇಸ್ಲಾಂ ಧರ್ಮದ ಪ್ರಕಾರ ವಾರದ ಅತ್ಯಂತ ಪವಿತ್ರವಾದ ದಿನವೆಂದು ಪರಿಗಣಿಸಲಾಗುತ್ತೆ. ಆದರೆ ರಂಜಾನ್‌ನ ಕೊನೆಯ ಶುಕ್ರವಾರವು ತನ್ನದೇ ಆದ ಮಹತ್ವವನ್ನು ಹೊಂದಿದೆ. ಜಮಾತ್-ಉಲ್-ವಿದಾ ದಿನದಂದು ಯಾರು ನಮಾಜ್ ಅರ್ಪಿಸುತ್ತಾರೋ ಅವರ ಪ್ರಾರ್ಥನೆ ನೆರವೇರುತ್ತದೆ ಎಂದು ನಂಬಲಾಗಿದೆ. ಅಲ್ಲದೆ ಇಂದು ಮೂರನೇ ತಾಖಿರಾತ್ ಅಂದರೆ ಮೂರನೇ ದೊಡ್ಡ ರಾತ್ರಿಯಾಗಿದ್ದು ಜಾಗರಣೆಗಳನ್ನು ಮಾಡಲಾಗುತ್ತೆ. ಅದಕ್ಕಾಗಿಯೇ ಜಮಾತ್-ಉಲ್-ವಿದಾವನ್ನು ಪೂಜಾ ದಿನ ಎಂದೂ ಸಹ ಕೆಲವೆಡೆ ಕರೆಯಲಾಗುತ್ತೆ.

ಈ ಹಬ್ಬವನ್ನು ಜಗತ್ತಿನಾದ್ಯಂತ ಮುಸ್ಲಿಮರು ಆಚರಿಸುತ್ತಾರೆ. ಜನರು ಮಸೀದಿಗಳಲ್ಲಿ ಒಟ್ಟುಗೂಡುತ್ತಾರೆ ಮತ್ತು ಈ ದಿನದಂದು ಸರ್ವಶಕ್ತನಾದ ಅಲ್ಲಾಹ್ನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಆದರೆ ಕೊರೊನಾ ಹಿನ್ನೆಲೆಯಲ್ಲಿ ಕೆಲವು ನಿರ್ಬಂಧನೆಗಳನ್ನು ಹೇರಲಾಗಿದ್ದು ಈ ಸಂಭ್ರಮಕ್ಕೆ ಬ್ರೇಕ್ ಬಿದ್ದಿದೆ.

ಜುಮಾತ್-ಉಲ್-ವಿದಾ ಮಹತ್ವ ಶುಕ್ರವಾರ ಮಧ್ಯಾಹ್ನ ಪ್ರಾರ್ಥನೆಯ ಕಲ್ಪನೆಯನ್ನು ಹುಟ್ಟಿ ಹಾಕಿದ್ದು ಪ್ರವಾದಿ ಮುಹಮ್ಮದ್. ಇವರ ಪ್ರಕಾರ, ವಾರದ ಇತರ ದಿನಗಳಿಗಿಂತ ಶುಕ್ರವಾರ ಹೆಚ್ಚು ಪವಿತ್ರವಾದ ದಿನವಾಗಿದೆ. ಶುಕ್ರವಾರದಂದು ನಮಾಜ್ ಮಾಡುವುದು ಇತರ ದಿನಗಳಿಗಿಂತ ಹೆಚ್ಚಿನ ಮಹತ್ವವನ್ನು ಹೊಂದಿದೆ ಎಂದು ಅವರು ಪ್ರತಿಪಾದಿಸಿದರು. ಈ ಶುಭ ದಿನದಂದು ನಮಾಜ್ (ಪ್ರಾರ್ಥನೆ) ಮಾಡಿದರೆ ಅದು ಬೇಗ ದೇವರಿಗೆ ತಲುಪುತ್ತೆ. ಇಂದು ಬೇಡಿಕೊಂಡರೆ ಅಲ್ಲಾಹ್ ನಿಮ್ಮ ತಪ್ಪುಗಳನ್ನು ಮನ್ನಿಸುತ್ತಾನೆ ಎಂದು ಹೇಳಲಾಗುತ್ತೆ.

ಈ ದಿನ ಮುಂಜಾನೆ ಪ್ರಾರ್ಥನೆ ಮಾಡುವುದು ಮತ್ತು ಇಡೀ ದಿನ ಪವಿತ್ರ ಕುರಾನ್ ಪಠಿಸುವುದು ಮತ್ತು ದಾನ ಧರ್ಮಗಳನ್ನು ಮಾಡುವ ಸಂಪ್ರದಾಯವಿದೆ. ಜನರು ಆಹಾರ ಮತ್ತು ಅಗತ್ಯವಿರುವ ಇತರ ವಸ್ತುಗಳನ್ನು ಬಡವರಿಗೆ ಮತ್ತು ನಿರ್ಗತಿಕರಿಗೆ ನೀಡುತ್ತಾರೆ. ಶಾಂತಿ ಸಹಬಾಳ್ಗೆಯ ಪ್ರತೀಕವಾಗಿರುತ್ತೆ ಈ ದಿನ.

ರಂಜಾನ್ ಇಸ್ಲಾಮಿಕ್ ಕ್ಯಾಲೆಂಡರ್ನ ಒಂಬತ್ತನೇ ತಿಂಗಳು, ಮತ್ತು ಇಸ್ಲಾಮಿಕ್ ನಂಬಿಕೆಗಳ ಪ್ರಕಾರ, ರಂಜಾನ್ ತಿಂಗಳಲ್ಲಿ ಪವಿತ್ರ ಕುರಾನ್ ಅನ್ನು ಪ್ರವಾದಿ ಮುಹಮ್ಮದ್ ಅವರಿಗೆ ಬಹಿರಂಗಪಡಿಸಲಾಯಿತು ಎಂದು ಹೇಳಲಾಗುತ್ತೆ.

ಇದನ್ನೂ ಓದಿ: Sheer Khurma Recipe ರಂಜಾನ್ ವಿಶೇಷ ಶೀರ್ ಕುರ್ಮಾ ಈಗ ನಿಮ್ಮ ಮನೆಯಲ್ಲೂ ತಯಾರಿಸಿ

‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು
ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ