ಕೊರೊನಾ ಹೊಡೆತದಿಂದ ಸಂಕಷ್ಟಕ್ಕೆ ಸಿಲುಕಿದ ರಾಜ್ಯದ ಆರ್ಥಿಕ ಪರಿಸ್ಥಿತಿ!
ಬೆಂಗಳೂರು: ಕೊರೊನಾ ವಿಶ್ವದೆಲ್ಲೆಡೆ ಸೃಷ್ಟಿಸುತ್ತಿರುವ ಅವಾಂತರ ಒಂದೆರಡಲ್ಲ. ದೊಡ್ಡ ದೊಡ್ಡ ರಾಷ್ಟ್ರಗಳೇ ಕೊರೊನಾದ ಹೊಡೆತಕ್ಕೆ ಸಿಲುಕಿ ಪರದಾಡುತ್ತಿವೆ. ಆರ್ಥಿಕತೆಗೆ ಕೊರೊನಾ ಇನ್ನಿಲ್ಲದ ಕಾಟ ಕೊಟ್ಟಿದೆ. ಲಾಕ್‌ಡೌನ್ ಪರಿಣಾಮವಾಗಿ ವ್ಯಾಪಾರ ವಹಿವಾಟು ಬಂದ್ ಆಗಿದೆ. ಉದ್ದಿಮೆಗಳು ಬಾಗಿಲು ಮುಚ್ಚಿವೆ. ಸಂಕಷ್ಟಕ್ಕೆ ಸಿಲುಕಿದ ರಾಜ್ಯದ ಆರ್ಥಿಕ ಪರಿಸ್ಥಿತಿ! ಕರ್ನಾಟಕದ ದೇಶದಲ್ಲಿ ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ರಾಜ್ಯಗಳಲ್ಲಿ ಒಂದು. ಆದ್ರೆ ಕೊರೊನಾದ ಕಾರಣಕ್ಕೆ ಎದುರಾದ ಲಾಕ್‌ಡೌನ್ ಕರ್ನಾಟಕದ ಆರ್ಥಿಕತೆಗೆ ಇನ್ನಿಲ್ಲದ ಹೊಡೆತ ಕೊಟ್ಟಿದೆ. ಇದನ್ನು ರಾಜ್ಯದ ಆರ್ಥಿಕ ಇಲಾಖೆಯ ಇತ್ತೀಚಿನ ಆದೇಶವೊಂದರಲ್ಲಿ ಸ್ಪಷ್ಟವಾಗಿ […]
ಬೆಂಗಳೂರು: ಕೊರೊನಾ ವಿಶ್ವದೆಲ್ಲೆಡೆ ಸೃಷ್ಟಿಸುತ್ತಿರುವ ಅವಾಂತರ ಒಂದೆರಡಲ್ಲ. ದೊಡ್ಡ ದೊಡ್ಡ ರಾಷ್ಟ್ರಗಳೇ ಕೊರೊನಾದ ಹೊಡೆತಕ್ಕೆ ಸಿಲುಕಿ ಪರದಾಡುತ್ತಿವೆ. ಆರ್ಥಿಕತೆಗೆ ಕೊರೊನಾ ಇನ್ನಿಲ್ಲದ ಕಾಟ ಕೊಟ್ಟಿದೆ. ಲಾಕ್‌ಡೌನ್ ಪರಿಣಾಮವಾಗಿ ವ್ಯಾಪಾರ ವಹಿವಾಟು ಬಂದ್ ಆಗಿದೆ. ಉದ್ದಿಮೆಗಳು ಬಾಗಿಲು ಮುಚ್ಚಿವೆ.
ಸಂಕಷ್ಟಕ್ಕೆ ಸಿಲುಕಿದ ರಾಜ್ಯದ ಆರ್ಥಿಕ ಪರಿಸ್ಥಿತಿ! ಕರ್ನಾಟಕದ ದೇಶದಲ್ಲಿ ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ರಾಜ್ಯಗಳಲ್ಲಿ ಒಂದು. ಆದ್ರೆ ಕೊರೊನಾದ ಕಾರಣಕ್ಕೆ ಎದುರಾದ ಲಾಕ್‌ಡೌನ್ ಕರ್ನಾಟಕದ ಆರ್ಥಿಕತೆಗೆ ಇನ್ನಿಲ್ಲದ ಹೊಡೆತ ಕೊಟ್ಟಿದೆ. ಇದನ್ನು ರಾಜ್ಯದ ಆರ್ಥಿಕ ಇಲಾಖೆಯ ಇತ್ತೀಚಿನ ಆದೇಶವೊಂದರಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆರ್ಥಿಕ ಇಲಾಖೆಯ ಮೇ ತಿಂಗಳಿಗೆ ಸಂಬಂಧಿಸಿದ ಹಣಕಾಸು ನಿರ್ವಹಣೆಯ ಆದೇಶದಲ್ಲಿರುವ ಉಲ್ಲೇಖ ಹೀಗಿದೆ.
ಆದಾಯಕ್ಕೆ ತೀವ್ರ ತೊಂದರೆ! ಕೊವಿಡ್-19ನ ಲಾಕ್‌ಡೌನ್‌ನಿಂದ ಸೃಷ್ಟಿಯಾಗಿರುವ ಕೆಟ್ಟ ಪರಿಸ್ಥಿತಿಯಲ್ಲಿ ರಾಜ್ಯದ ಆದಾಯಕ್ಕೆ ತೀವ್ರ ತೊಂದರೆ ಎದುರಾಗಿದೆ. ಇದೇ ಕಾರಣದಿಂದಾಗಿ ರಾಜ್ಯ ಸರ್ಕಾರ ತನ್ನ ಖರ್ಚುಗಳನ್ನು ವಿಚಾರದಲ್ಲಿ ಕಡ್ಡಾಯವಾಗಿ ಅತ್ಯಂತ ಅವಶ್ಯಕವಾಗಿರುವ ಸಂಬಳ, ಪಿಂಚಣಿ, ಸಾಮಾಜಿಕ ಭದ್ರತೆಯ ಪಿಂಚಣಿ, ಆಹಾರ ಭದ್ರತೆ ಮತ್ತು ಕನಿಷ್ಠ ಆಡಳಿತಾತ್ಮಕ ವೆಚ್ಚಗಳಿಗೆ ಮಾತ್ರ ಸೀಮಿತಗೊಳಿಸಿದೆ. ಕೊವಿಡ್-19 ವಿರುದ್ಧದ ಹೋರಾಟಕ್ಕೆ ಬೇಕಿರುವ ಖರ್ಚಿಗೆ ಪ್ರಥಮ ಆದ್ಯತೆ ನೀಡಿರುವುದನ್ನು ವಿವರಿಸಬೇಕಿಲ್ಲ.
ಹೀಗಂತ ಆರ್ಥಿಕ ಇಲಾಖೆ ಮೇ ತಿಂಗಳಲ್ಲಿ ಮಾಡಬೇಕಿರುವ ಖರ್ಚುಗಳ ಬಗ್ಗೆ ನೀಡಿರುವ ಆದೇಶದಲ್ಲಿ ಉಲ್ಲೇಖಿಸಿದೆ. ಅಂದರೆ ರಾಜ್ಯದ ಆರ್ಥಿಕ ಪರಿಸ್ಥಿತಿ ಎಲ್ಲಿಗೆ ಬಂದು ನಿಂತಿದೆ ಎನ್ನುವುದು ಅರ್ಥವಾಗುತ್ತಿದೆ. ಇಷ್ಟಕ್ಕೂ ರಾಜ್ಯದ ಆರ್ಥಿಕ ಪರಿಸ್ಥಿತಿ ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲೇ ಹಲವು ಸವಾಲುಗಳನ್ನು ಎದುರಿಸುತ್ತಿತ್ತು. ಯಾಕಂದ್ರೆ ಕಳೆದ ವರ್ಷದ ಆಗಸ್ಟ್ ತಿಂಗಳಿನ ಮಹಾಪ್ರವಾಹದಿಂದಾಗಿ ಅರ್ಧ ಕರ್ನಾಟಕ ಮುಳುಗಡೆಯಾಗಿ ರಾಜ್ಯಕ್ಕೆ ಅಪಾರ ನಷ್ಟ ಸೃಷ್ಟಿಸಿತ್ತು. ಇದರ ನಡುವೆ ಕೇಂದ್ರ ಸರ್ಕಾರದಿಂದ ಬರಬೇಕಿದ್ದ ತೆರಿಗೆ ಹಂಚಿಕೆಯಲ್ಲೂ ಕೊರತೆ ಎದ್ದು ಕಾಣುತ್ತಿತ್ತು.
ಫೆಬ್ರವರಿಯಲ್ಲಿ ಎಷ್ಟಿತ್ತು ತೆರಿಗೆ ಸಂಗ್ರಹ? ವಾಣಿಜ್ಯ ತೆರಿಗೆ- 54,429 ಅಬಕಾರಿ- 19886 ಮೋಟಾರು ವಾಹನ ತೆರಿಗೆ- 6,172 ಮುಂದ್ರಾಂಕ ಮತ್ತು ನೋಂದಣಿ- 10,292 ಕೇಂದ್ರದ ತೆರಿಗೆ ಹಂಚಿಕೆ- 26,599
ಎಷ್ಟಾಗಬೇಕಿತ್ತು ಏಪ್ರಿಲ್‌ನಲ್ಲಿ ತೆರಿಗೆ ಸಂಗ್ರಹ? ವಾಣಿಜ್ಯ ತೆರಿಗೆ- ₹6,870 ಕೋಟಿ ಮುಂದ್ರಾಂಕ ಮತ್ತು ನೋಂದಣಿ- ₹1,054 ಕೋಟಿ ಅಬಕಾರಿ- ₹1890 ಕೋಟಿ ಮೋಟಾರು ವಾಹನ ತೆರಿಗೆ- ₹593 ಕೋಟಿ
ಆದ್ರೆ ಮಾರ್ಚ್ 24ರಿಂದ ಲಾಕ್‌ಡೌನ್ ಆದ ಕಾರಣಕ್ಕೆ ಸರ್ಕಾರಕ್ಕೆ ಬರಬೇಕಿದ್ದ ಬಹುಪಾಲು ತೆರಿಗೆ ಸಂಗ್ರಹಕ್ಕೆ ಶೂನ್ಯಕ್ಕೆ ಇಳಿದಿದೆ. ಇದರ ನಡುವೆ ಸರ್ಕಾರಕ್ಕೆ ಬರಬೇಕಿದ್ದ ಕೇಂದ್ರದ ಪಾಲಿನಲ್ಲಿ ಅಲ್ಪ ಹಣ ಸಂದಾಯವಾಗಿದೆ.
₹4,700 ಕೋಟಿ ಬಾಕಿಯಲ್ಲಿ ₹1,536 ಕೋಟಿ ಕೇಂದ್ರ ಬಿಡುಗಡೆ: ಹೌದು.. ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಿದ್ದ ಜಿಎಸ್‌ಟಿ ಪಾಲಿನ ಹಂಚಿಕೆಯಲ್ಲಿ ಡಿಸೆಂಬರ್-ಜನವರಿ ತಿಂಗಳಲ್ಲಿ ಬಾಕಿ ಉಳಿಸಿಕೊಂಡಿದ್ದ 4,700 ಕೋಟಿ ರುಪಾಯಿ ಬಾಕಿಯಲ್ಲಿ 1536 ಕೋಟಿ ರುಪಾಯಿಗಳನ್ನು ಏಪ್ರಿಲ್ ಮೊದಲ ವಾರದಲ್ಲಿ ಬಿಡುಗಡೆ ಮಾಡಿದೆ. ಹೀಗೆ ರಾಜ್ಯದ ಆರ್ಥಿಕತೆ ತೀವ್ರ ಕುಸಿತ ಕಂಡಿರುವ ಕಾರಣಕ್ಕೆ ಸರ್ಕಾರ ಖರ್ಚಿನ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಯಾವುದಕ್ಕೆ ಸಿಗುತ್ತೆ.. ಯಾವುದಕ್ಕೆ ಇಲ್ಲ? ನೌಕರರ ಸಂಬಳ, ಪಿಂಚಣಿ, ಸಾಮಾಜಿಕ ಭದ್ರತೆಯ ಪಿಂಚಣಿಗೆ ಹಣ ಕೊಡಲು ಸರ್ಕಾರದ ಬಳಿ ಕೊರತೆಯಿಲ್ಲ. ಆಹಾರ ಭದ್ರತೆ, ಕೃಷಿ ಚಟುವಟಿಕೆಗಳಿಗೆ ಸರ್ಕಾರದಿಂದ ನೆರವು ನೀಡಲು ಸರ್ಕಾರ ಹಿಂದೆ ಬೀಳುವುದಿಲ್ಲ. ಕೊವಿಡ್-19 ವಿರುದ್ಧದ ಸಮರಕ್ಕೆ ಹಣದ ಕೊರತೆಯಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಬರ ನಿರ್ವಹಣೆಗೆ ಅಗತ್ಯವಿರುವ ಹಣ ಒದಗಿಸಲು ಸರ್ಕಾರ ಕ್ರಮ ಕೈಗೊಂಡಿದೆ.
ನಿಗಮ-ಮಂಡಳಿ, ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಸಂಬಳ ಮಾತ್ರ ನೀಡಲು ಅವಕಾಶ ಕಲ್ಪಿಸಲಾಗಿದೆ. ರಸ್ತೆ ರಿಪೇರಿ, ಒಡೆದ ಕಾಲುವೆ ರಿಪೇರಿಗೆ ಸದ್ಯ ಹಣವಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಹೊಸ ಯೋಜನೆಗಳನ್ನು ಜಾರಿಗೊಳಿಸಲು ಸರ್ಕಾರದ ಬಳಿ ಹಣವಿಲ್ಲ ಎನ್ನುವುದು ಎದ್ದುಕಾಣುತ್ತಿದೆ. ಬಾಕಿ ಉಳಿದಿರುವ ದೊಡ್ಡ ಕಾಮಗಾರಿಗಳ ಕೆಲಸ ಮುಂದೂಡಿಕೆ ಮಾಡಲು ಸರ್ಕಾರ ಮುಂದಾಗಿದೆ.
ಏನೇ ಆದ್ರೂ ಸದ್ಯ ಸಿಎಂ ಯಡಿಯೂರಪ್ಪ ಅವರ ಪಾಲಿಗೆ ರಾಜ್ಯದ ಆರ್ಥಿಕತೆಯ ನಿರ್ವಹಣೆ ಅಕ್ಷರಶಃ ತಂತಿ ಮೇಲಿನ ನಡಿಗೆಯಂತಾಗಲಿದೆ. ಈ ಪರಿಸ್ಥಿತಿಯಿಂದ ಹೊರಬರಲು ಅಕ್ರಮ ಸಕ್ರಮ, ಕಾರ್ನರ್ ಸೈಟ್ ಹರಾಜಿನಂತಹ ಸಂಪನ್ಮೂಲ ಕ್ರೋಡೀಕರಣದ ಮಾರ್ಗ ಹುಡುಕುತ್ತಿದ್ದರೂ ಅದೆಲ್ಲಾ ಕಾರ್ಯರೂಪಕ್ಕೆ ಬರುವುದು ಅಷ್ಟು ಸುಲಭವಿಲ್ಲ. ಮೇ ತಿಂಗಳಲ್ಲೂ ಲಾಕ್‌ಡೌನ್ ಮುಂದುವರಿಕೆಯಾದ್ರೆ ಜೂನ್ ತಿಂಗಳಲ್ಲಿ ಸಂಬಳ ನೀಡುವುದೂ ಸರ್ಕಾರಕ್ಕೆ ಸವಾಲಾದರೂ ಅಚ್ಚರಿಪಡಬೇಕಿಲ್ಲ.