AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನುಡಿ ನಮನ: ಹಲವು ಮೌಲಿಕ ತೀರ್ಪು ಕೊಟ್ಟ ನ್ಯಾಯಮೂರ್ತಿ ಜೆ.ಈಶ್ವರ ಪ್ರಸಾದ್

ಈಶ್ವರ ಪ್ರಸಾದ್ ಅವರ ಬದುಕಿನ ಪ್ರಮುಖ ಘಟ್ಟಗಳು ಮತ್ತು ದೇಶಕ್ಕೆ ಅವರು ನೀಡಿದ ಕೊಡುಗೆಗಳನ್ನು ನೆನಪಿಸಿಕೊಳ್ಳುವ ಪ್ರಯತ್ನ ಇಲ್ಲಿದೆ.

ನುಡಿ ನಮನ: ಹಲವು ಮೌಲಿಕ ತೀರ್ಪು ಕೊಟ್ಟ ನ್ಯಾಯಮೂರ್ತಿ ಜೆ.ಈಶ್ವರ ಪ್ರಸಾದ್
ಡಾ.ರಾಜ್​ಕುಮಾರ್ ಅವರೊಂದಿಗೆ ನ್ಯಾಯಮೂರ್ತಿ ಜೆ.ಈಶ್ವರ ಪ್ರಸಾದ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 23, 2021 | 8:29 PM

ಜಾತ್ಯತೀತವಾದ ಮತ್ತು ಸರ್ಕಾರದ ಜವಾಬ್ದಾರಿಯ ವಿಚಾರ ಪ್ರಸ್ತಾಪವಾಗುವಾಗ ನ್ಯಾಯಮೂರ್ತಿ ಜಸ್ತಿ ಈಶ್ವರ ಪ್ರಸಾದ್​ ಅವರ ಹೆಸರೂ ಸಹಜವಾಗಿಯೇ ನೆನಪಾಗುತ್ತದೆ. ಹತ್ತಾರು ಮೌಲಿಕ ತೀರ್ಪುಗಳನ್ನು ಕೊಟ್ಟ ನ್ಯಾಯಮೂರ್ತಿ ಈಶ್ವರ ಪ್ರಸಾದ್​ ಈಚೆಗೆ ನಿಧನರಾದರು. ದೇಶದ ಕಾನೂನು ಸುವ್ಯವಸ್ಥೆ, ಭದ್ರತೆ ಮತ್ತು ಆಸ್ತಿ ವಿವಾದಗಳಿಗೆ ಸಂಬಂಧಿಸಿದಂತೆ ತಮ್ಮ ವಿಶಿಷ್ಟ ಚಿಂತನೆಗಳಿಂದ ದೇಶದ ಗಮನ ಸೆಳೆದಿದ್ದರು. ಈಶ್ವರ ಪ್ರಸಾದ್ ಅವರ ಬದುಕಿನ ಪ್ರಮುಖ ಘಟ್ಟಗಳು ಮತ್ತು ದೇಶಕ್ಕೆ ಅವರು ನೀಡಿದ ಕೊಡುಗೆಗಳನ್ನು ನೆನಪಿಸಿಕೊಳ್ಳುವ ಪ್ರಯತ್ನ ಇಲ್ಲಿದೆ.

ನ್ಯಾಯಮೂರ್ತಿ ಜಸ್ತಿ ಈಶ್ವರ ಪ್ರಸಾದ್​ 4ನೇ ಆಗಸ್ಟ್ 1934ರಂದು ಜಸ್ತಿ ಸಾಂಬಶಿವ ರಾವ್ ಮತ್ತು ಸೀತಾಲಕ್ಷ್ಮೀ ದಂಪತಿಯ ಪುತ್ರನಾಗಿ ಜನಿಸಿದರು. ಜಸ್ತಿ ಸಾಂಬಶಿವ ರಾವ್​ ಜಿಲ್ಲಾ ಮತ್ತು ಸೆಷನ್ಸ್​ ನ್ಯಾಯಾಧೀಶರಾಗಿದ್ದರು. ಸೀತಾಲಕ್ಷ್ಮೀ ಸಹ ವಕೀಲರಾಗಿದ್ದರು. ಮಾತ್ರವಲ್ಲದೆ ಹಲವು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.

ಮದ್ರಾಸ್ ಮತ್ತು ಆಂಧ್ರ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದ ಈಶ್ವರ ಪ್ರಸಾದ್, 1959ರಲ್ಲಿ ಆಂಧ್ರ ಪ್ರದೇಶ ಹೈಕೋರ್ಟ್​ ವಕೀಲರಾಗಿ ನೋಂದಾಯಿಸಿಕೊಂಡರು. ಹೈಕೋರ್ಟ್​ ಮತ್ತು ಸುಪ್ರೀಂಕೋರ್ಟ್​ಗಳಲ್ಲಿ ಸಾಂವಿಧಾನಿಕ ನಿಷ್ಕರ್ಷೆ, ಸಿವಿಲ್ ಮತ್ತು ತೆರಿಗೆ ಸಂಬಂಧಿದ ವಿಚಾರಗಳಲ್ಲಿ ಸವಾಲೆನಿಸುವ ಹಲವು ಪ್ರಕರಣಗಳನ್ನು ನಿರ್ವಹಿಸಿ ಖ್ಯಾತರಾದರು. ಇವರು ವಕೀಲರಾಗಿದ್ದ ಹಲವು ಪ್ರಕರಣಗಳಲ್ಲಿ ಮೈಲಿಗಲ್ಲೆನಿಸುವಂಥ ತೀರ್ಪುಗಳು ಬಂದವು. ನ್ಯಾಯವಾದಿಯಾಗಿ 31 ವರ್ಷಗಳ ಸುದೀರ್ಘ ಅನುಭವ ಪಡೆದುಕೊಂಡ ನಂತರ ಅವರನ್ನು ಆಂಧ್ರ ಪ್ರದೇಶ ಹೈಕೋರ್ಟ್​ನ ನ್ಯಾಯಪೀಠಕ್ಕೆ ಮಾರ್ಚ್​ 1990ರಂದು ನೇಮಿಸಲಾಯಿತು.

ಮಾರ್ಚ್ 1990ರಿಂದ ಏಪ್ರಿಲ್ 1994ರವರೆಗೆ ಆಂಧ್ರ ಪ್ರದೇಶ ಹೈಕೋರ್ಟ್​ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದರು. ಕರ್ನಾಟಕ ಹೈಕೋರ್ಟ್​ನಲ್ಲಿ ಏಪ್ರಿಲ್ 1994ರಿಂದ ನಿವೃತ್ತರಾಗುವವರೆಗೆ, ಅಂದರೆ ಆಗಸ್ಟ್​ 1996ರವರೆಗೆ ನ್ಯಾಯಾಧೀಶರಾಗಿದ್ದರು. ಸಾಂವಿಧಾನಿಕ ವಿಚಾರಗಳು, ಸಿವಿಲ್, ತೆರಿಗೆ ವ್ಯಾಜ್ಯ ಮತ್ತು ಕ್ರಿಮಿನಲ್ ಪ್ರಕರಣಗಳಲ್ಲಿ ಅವರು ನೀಡಿದ ಹಲವು ತೀರ್ಪುಗಳು ದೇಶವ್ಯಾಪಿ ಸುದ್ದಿಯಾದವು. ಈಶ್ವರ ಪ್ರಸಾದ್​ ಅವರ ಪ್ರತಿಷ್ಠೆಯನ್ನೂ ಹೆಚ್ಚಿಸಿದವು. ಜಾತ್ಯತೀತವಾದ ಮತ್ತು ಸರ್ಕಾರದ ಪಾತ್ರ ವಿಚಾರವಾಗಿ ಅವರು ನೀಡಿದ ತೀರ್ಪು ಇಂದಿಗೂ ಮೌಲಿಕವಾದುದು. ಧರ್ಮ ಮತ್ತು ಸರ್ಕಾರದ ಪಾತ್ರದ ಕುರಿತು ತೀರ್ಪು ನೀಡುವಾದ ಹೈಕೋರ್ಟ್​ ಸಂವಿಧಾನದ ಆಶಯಗಳನ್ನು ಆಳವಾಗಿ ವಿಶ್ಲೇಷಿಸಿತ್ತು. ಅವರ ಹಲವು ತೀರ್ಪುಗಳು ಮಾಧ್ಯಮದ ಗಮನ ಸೆಳೆದದ್ದು ಮಾತ್ರವಲ್ಲ, ದೇಶವ್ಯಾಪಿ ಚರ್ಚೆಗೆ ಗ್ರಾಸವಾಗಿತ್ತು.

ಜನವರಿ 1997ರಲ್ಲಿ ಆಂಧ್ರ ಪ್ರದೇಶ ಭೂ ಕಬಳಿಕೆ ನಿಗ್ರಹ ಕಾಯ್ದೆಯ ಅನ್ವಯ ರಚಿಸಲಾಗಿದ್ದ ವಿಶೇಷ ನ್ಯಾಯಾಧಿಕರಣದ ಅಧ್ಯಕ್ಷರಾಗಿದ್ದರು. ಈ ಅವಧಿಯಲ್ಲಿ ಹಲವು ಪ್ರಕರಣಗಳನ್ನು ಸ್ವಯಂಪ್ರೇರಿತರಾಗಿ ದಾಖಲಿಸಿಕೊಂಡು ಸರ್ಕಾರಿ ಭೂ ಕಬಳಿಕೆ ಪ್ರಯತ್ನಗಳನ್ನು ತಡೆದರು. ನಂತರ ರಾಷ್ಟ್ರೀಯ ಮೇಲ್ಮನವಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿ ವಿದೇಶಿ ವಿನಿಮಯದಲ್ಲಿ ಅಕ್ರಮ, ಮಾದಕ ವಸ್ತು ಸಾಗಣೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಕಟ್ಟುನಿಟ್ಟಿನ ಆದೇಶಗಳು ಜಾರಿಯಾಗುವಂತೆ ನೋಡಿಕೊಂಡರು.

ದೇಶದ ವಿವಿಧ ಭಾಗಗಳಲ್ಲಿ ಪ್ರಾಧೀಕಾರದ ವಿಚಾರಣೆ ಪ್ರಕ್ರಿಯೆಗಳನ್ನು ನಡೆಸುವ ಮೂಲಕ ಕಾನೂನು ಜಾಗೃತಿ ಮೂಡಿಸಲು ಯತ್ನಿಸಿದರು. ಆಸ್ತಿಮುಟ್ಟುಗೋಲು ಹಾಕಿಕೊಳ್ಳುವುದು, ಕಳ್ಳಸಾಗಣೆ ತಡೆಯುವುದು ಸೇರಿದಂತೆ ಹಲವು ಕ್ರಮಗಳ ಮೂಲಕ ಭಯೋತ್ಪಾದನೆಯನ್ನು ಹೇಗೆ ತಡೆಗಟ್ಟಬಹುದು ಎಂಬುದನ್ನು ಹಲವು ವಿಚಾರ ಸಂಕಿರಣಗಳ ಮೂಲಕ ವಿವರಿಸಿದ್ದರು. ಕಾನೂನಿನಲ್ಲಿರುವ ಲೋಪದೋಷಗಳನ್ನು ಸರಿಪಡಿಸಲು ಹಲವು ತಿದ್ದುಪಡಿಗಳನ್ನು ಸಲಹೆ ಮಾಡಿದ್ದರು. ಇವರ ಸಲಹೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿತ್ತು, ಹಲವು ಸಲಹೆಗಳು ಕಾರ್ಯರೂಪಕ್ಕೂ ಬಂದವು. ಭಾರತದ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಮತ್ತು ನರೇಂದ್ರ ಮೋದಿ, ಉಪ ಪ್ರಧಾನಿಯಾಗಿದ್ದ ಲಾಲ್ ಕೃಷ್ಣ ಅಡ್ವಾಣಿ ನ್ಯಾಯಮೂರ್ತಿ ಈಶ್ವರ ಪ್ರಸಾದ್ ಅವರ ಕೊಡುಗೆಗಳನ್ನು ಶ್ಲಾಘಿಸಿದ್ದರು.

ಅಧ್ಮಾತ್ಮ ಪ್ರವೃತ್ತಿಯ ಈಶ್ವರ ಪ್ರಸಾದ್, ಹಲವು ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ನ್ಯಾಯಾಧೀಶರಾಗುವವರೆಗೂ, ಸುಮಾರು 23 ವರ್ಷಗಳ ಕಾಲ ಆಂಧ್ರ ಪ್ರದೇಶದ ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಯಲ್ಲಿ ಸಕ್ರಿಯಾಗಿದ್ದರು. ಉಚಿತ ವೈದ್ಯಕೀಯ ನೆರವು, ಶಿಕ್ಷಣ, ಗ್ರಾಮೀಣ ಅಭಿವೃದ್ಧಿ, ಅಧ್ಯಾತ್ಮಿಕ ಕಅರ್ಯಕ್ರಮಗಳು, ಸಾಂಸ್ಕೃತಿಕ ಮತ್ತು ನೈತಿಕ ಮೌಲ್ಯಗಳ ಕಾರ್ಯಕ್ರಮಗಳನ್ನು ಸಂಘಟಿಸಿದ್ದರು. ಕೋಮು ಸೌಹಾರ್ದ ಕಾಪಾಡಲು ಹಲವು ಮೌಲಿಕ ಸಲಹೆಗಳನ್ನು ನೀಡಿದ್ದರು.

6ನೇ ಜುಲೈ 2021ರಂದು ತಮ್ಮ 87ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನ್ಯಾಯಮೂರ್ತಿ ಈಶ್ವರ ಪ್ರಸಾದ್​ ನಿಧನರಾದರು. ಪತ್ನಿ, ಮಕ್ಕಳು ಮತ್ತು ಮೊಮ್ಮಕ್ಕಳು ಇದ್ದಾರೆ. ಬೆಂಗಳೂರಿನ ಕರ್ನಾಟಕ ಹೈಕೋರ್ಟ್​ನಲ್ಲಿ ಶುಕ್ರವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ದಿವಂಗತ ನ್ಯಾಯಮೂರ್ತಿ ಜಸ್ತಿ ಈಶ್ವರ ಪ್ರಸಾದ್​ ಅವರ ಗುಣಗಳನ್ನು ಸ್ಮರಿಸಲಾಯಿತು. ಮುಖ್ಯ ನ್ಯಾಯಮೂರ್ತಿ ಎ.ಎಸ್.ಒಕಾ ಮತ್ತು ಇತರ ನ್ಯಾಯಮೂರ್ತಿಗಳು, ಹಿರಿಯ ವಕೀಲರ ಸಭಾಂಗಣದಲ್ಲಿ ಹಾಜರಿದ್ದರು.

(Profile of Justice Late J Eswara Prasad known for many landmark judgements)

ಇದನ್ನೂ ಓದಿ: Explainer: ಭಾರತದಲ್ಲಿ ಕಣ್ಗಾವಲು ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕಾದ 7 ಪ್ರಮುಖ ವಿಷಯಗಳು

ಇದನ್ನೂ ಓದಿ: ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಅಸಂವಿಧಾನಿಕ ಹಲ್ಲೆ: ಪೆಗಾಸಸ್ ಹಸ್ತಕ್ಷೇಪದ ಬಗ್ಗೆ ಸುಪ್ರೀಂಕೋರ್ಟ್​ ನಿಗಾ ತನಿಖೆಗೆ ಎಡಿಟರ್ಸ್​ ಗಿಲ್ಡ್​ ಆಗ್ರಹ

‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್
‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್
ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್