Republic Day 2022 Speech: ಗಣರಾಜ್ಯೋತ್ಸವ ದಿನಕ್ಕೆ ಮಕ್ಕಳ ಭಾಷಣ; ಏನು ಮಾತಾಡುವುದು? ತಯಾರಿ ಹೇಗೆ?

Republic Day Speech: ಗಣರಾಜ್ಯೋತ್ಸವ ದಿನದ ಅಂಗವಾಗಿ ನಡೆಯುವ ಭಾಷಣ ಸ್ಪರ್ಧೆಯಲ್ಲಿ ಏನು ಮಾತನಾಡುವುದು? ಹೇಗೆ ಭಾಷಣ ಮಾಡುವುದು? ಯಾವ ವಿಷಯ ಆರಿಸುವುದು ಎಂಬ ಗೊಂದಲ ಇದ್ದರೆ ಇಲ್ಲಿನ ವಿವರಣೆ ನೋಡಿ ತಯಾರಿ ನಡೆಸಬಹುದು.

Republic Day 2022 Speech: ಗಣರಾಜ್ಯೋತ್ಸವ ದಿನಕ್ಕೆ ಮಕ್ಕಳ ಭಾಷಣ; ಏನು ಮಾತಾಡುವುದು? ತಯಾರಿ ಹೇಗೆ?
ಗಣರಾಜ್ಯೋತ್ಸವ ಸಂಭ್ರಮ (ಪ್ರಾತಿನಿಧಿಕ ಚಿತ್ರ)
Follow us
ganapathi bhat
|

Updated on:Jan 23, 2022 | 3:15 PM

Republic Day Speech in Kannada | ಗಣರಾಜ್ಯೋತ್ಸವ ದಿನ, ಸ್ವಾತಂತ್ರ್ಯ ದಿನಾಚರಣೆ ಹೀಗೆ ರಾಷ್ಟ್ರೀಯ ಹಬ್ಬ, ಆಚರಣೆಗಳು ಬಂದಾಗೆಲ್ಲಾ ದೇಶವೇ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತದೆ. ಅದರಲ್ಲೂ ಮಕ್ಕಳಿಗೆ ಗಣರಾಜ್ಯ, ಸ್ವಾತಂತ್ರ್ಯ ದಿನ ಅಂದರೆ ಇನ್ನಿಲ್ಲದ ಸಂಭ್ರಮ. ಶಾಲೆ, ಕಾಲೇಜಿನಲ್ಲಿ ಶಿಸ್ತಿನ ಸಿಪಾಯಿಗಳಂತೆ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸುವುದು. ಪಥಸಂಚಲನ ಮಾಡುವುದು. ಸಿಹಿ ಹಂಚುವುದು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವುದು ಇತ್ಯಾದಿ ಇರುತ್ತದೆ. ಮಕ್ಕಳ ಜೊತೆಗೆ ಹೆತ್ತವರಿಗೂ ಸಂಭ್ರಮ ಹೆಚ್ಚೇ ಆಗುತ್ತದೆ. ಮಕ್ಕಳಿಗೆ ಬೇಕಾದ ಬಟ್ಟೆ, ಬಾವುಟ, ಕೈಗೆ, ತಲೆಗೆ ರಿಬ್ಬನ್​ಗಳು, ಅಂಗಿಯ ಮೇಲೆ ಚುಚ್ಚಲೊಂದು ಸಣ್ಣ ಬಾವುಟ ಹೀಗೆ ಮಕ್ಕಳ ಹಬ್ಬ, ಆಚರಣೆ ಇನ್ನಿಲ್ಲದ ಖುಷಿ ತಂದುಕೊಡುತ್ತದೆ. ಈ ಹಬ್ಬಕ್ಕೆ ವಾರಕ್ಕೂ ಮೊದಲೇ ತಯಾರಿ ಶುರು ಮಾಡುವುದು, ಮಕ್ಕಳು ಸಿದ್ಧವಾಗುವುದು ಇದನ್ನೆಲ್ಲಾ ಎಷ್ಟು ವಿವರಿಸಿದರೂ ಸಾಲದು.

ಇದೀಗ ಕಳೆದ ಎರಡು ವರ್ಷಗಳಿಂದ ಕೊರೊನಾ ಸಾಂಕ್ರಾಮಿಕ ಸೋಂಕು ಒಂದು ರೀತಿ ಈ ಎಲ್ಲಾ ಸಂಭ್ರಮಗಳಿಗೆ ತಣ್ಣೀರು ಎರಚಿದೆ. ಶಾಲೆ, ಕಾಲೇಜು ರಜೆ ಇರುವುದು. ತರಗತಿ ಇದ್ದರೂ ಕೊವಿಡ್ ನಿಯಮಗಳಂತೆ ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ, ಆಚರಣೆಯ ಸಂಭ್ರಮಕ್ಕೆ ಕತ್ತರಿ ಬೀಳುವುದು ಹೀಗೆ ಅಡಚಣೆ ಸುಮಾರಷ್ಟು ಬಂದಿದೆ. ಇದೆಲ್ಲವನ್ನೂ ಮೀರಿ ಈ ಬಾರಿ ಕೊರೊನಾ ನಿಯಮಗಳು ಈ ಬಾರಿ ಕೊಂಚ ಸಡಿಲವಾಗಿದೆ. ಬಹುತೇಕ ಕಡೆಗಳಲ್ಲಿ ಶಾಲೆ, ಕಾಲೇಜುಗಳು ನಡೆಯುತ್ತಾ ಇದೆ. ಒಂದು ವೇಳೆ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನೇರವಾಗಿ ಭಾಗವಹಿಸುವ ಅವಕಾಶ ಇಲ್ಲದಿದ್ದರೂ ಆನ್​ಲೈನ್ ಮೂಲಕ ಕೆಲವು ಕಾರ್ಯಕ್ರಮ ಆದರೂ ಇದ್ದೇ ಇರಬಹುದು.

ಈ ಆಚರಣೆಗಳ ವೇಳೆ ಭಾಷಣ ಸ್ಪರ್ಧೆ (Republic Day Speech in Kannada) ಒಂದು ಮುಖ್ಯ ಅಂಶ. ಆನ್​ಲೈನ್ ವಿಧಾನ ಮೂಲಕವಾದರೂ ನಡೆಸಬಹುದಾದ ಈ ಸ್ಪರ್ಧೆಯನ್ನು ಹಲವು ಶಾಲೆಗಳು ನಡೆಸಲು ಯೋಜಿಸಿರಬಹುದು. ಈಗಾಗಲೇ ಭಾಷಣ ಸ್ಪರ್ಧೆ ಇದೆ ಎಂದು ಮಕ್ಕಳು ಹೆತ್ತವರನ್ನು ಪೀಡಿಸುತ್ತಲೂ ಇರಬಹುದು. ಗಣರಾಜ್ಯೋತ್ಸವ ದಿನದ ಅಂಗವಾಗಿ ನಡೆಯುವ ಭಾಷಣ ಸ್ಪರ್ಧೆಯಲ್ಲಿ ಏನು ಮಾತನಾಡುವುದು? ಹೇಗೆ ಭಾಷಣ ಮಾಡುವುದು? ಯಾವ ವಿಷಯ ಆರಿಸುವುದು ಎಂಬ ಗೊಂದಲ ಇದ್ದರೆ ಇಲ್ಲಿನ ವಿವರಣೆ ನೋಡಿ ತಯಾರಿ ನಡೆಸಬಹುದು.

  • ಗಣರಾಜ್ಯೋತ್ಸವ ದಿನದ ಇತಿಹಾಸ, ಹಿನ್ನೆಲೆಯ ಬಗ್ಗೆ ವಿಷಯ ಸಂಗ್ರಹಿಸಿ ಮಾತನಾಡಬಹುದು
  • ಭಾರತೀಯ ಸಂವಿಧಾನದ ವಿಶೇಷತೆಗಳೇನು ಎಂಬ ಬಗ್ಗೆ ಮಾತನಾಡಬಹುದು
  • ದೇಶದ ಸ್ವಾತಂತ್ರ್ಯಕ್ಕಾಗಿ ಜೀವತೆತ್ತ ರಾಷ್ಟ್ರನಾಯಕರ ತ್ಯಾಗ, ಬಲಿದಾನ, ನಿಸ್ವಾರ್ಥ ಸೇವೆಯನ್ನು ಉಲ್ಲೇಖಿಸಿ ಭಾಷಣ ಮಾಡಬಹುದು
  • ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಜೀವನದ ಬಗ್ಗೆ ಮಾತುಗಳನ್ನು ಆಡಬಹುದು
  • ಒಟ್ಟಾರೆ ಗಣರಾಜ್ಯೋತ್ಸವ ದಿನಾಚರಣೆಯ ವಿಷಯ ಪ್ರಸ್ತಾವಿಸಬಹುದು

ಭಾಷಣ ಮಾಡುವುದು ಹೇಗೆ? ತಯಾರಿ ಹೇಗೆ?

ವಿಷಯ ಆಯ್ಕೆ: ಭಾಷಣ ಮಾಡಲು ಮಕ್ಕಳಿಗೆ ಸೂಕ್ತ ತಯಾರಿ ಮಾಡಿಕೊಡಬೇಕಾಗುತ್ತದೆ. ಮೊದಲನೆಯದಾಗಿ ಮಕ್ಕಳಿಗೆ ಮಾತನಾಡಬೇಕಿರುವ ವಿಷಯ ಆರಿಸಿ ಕೊಡಬೇಕು. ಅವರನ್ನೂ ಕೇಳಿ ಒಂದು ನಿಗದಿತ ವಿಷಯ ಆಯ್ಕೆ ಮಾಡಬೇಕು. ಅಥವಾ ಸಂಬಂಧಪಟ್ಟವರು ವಿಷಯ ನೀಡಿದ್ದರೆ ಅದಕ್ಕಾಗಿ ಮುಂದಿನ ಸಿದ್ಧತೆ ಮಾಡಿಕೊಳ್ಳಬಹುದು. ಕೆಲ ವಿಷಯಗಳ ಉದಾಹರಣೆ ಮೇಲೆ ನೀಡಲಾಗಿದೆ.

ವಿಷಯ ಸಂಗ್ರಹ, ಅಧ್ಯಯನ: ಭಾಷಣದ ವಿಷಯ ಅಂತಿಮವಾದ ಬಳಿಕ ಅದರ ಬಗ್ಗೆ ವಿಷಯ ಸಂಗ್ರಹ ಮಾಡಬೇಕು. ಇಸವಿಗಳು, ಹೆಸರುಗಳ ಉಲ್ಲೇಖ ಇದ್ದರೆ ಅದರಲ್ಲಿ ತಪ್ಪು ಇರದಂತೆ ನೋಡಿಕೊಳ್ಳಬೇಕು.

ಭಾಷಣದ ಸ್ವರೂಪ: ಸಂಗ್ರಹಿಸಿದ ವಿಷಯವನ್ನು ಭಾಷಣದಲ್ಲಿ ಮೂರು ಹಂತವಾಗಿ ವಿಂಗಡಣೆ ಮಾಡಬಹುದು. ಮೊದಲನೆಯದಾಗಿ ಎಲ್ಲರಿಗೂ ವಂದಿಸಿ ವಿಷಯವನ್ನು ಆರಂಭಿಸುವುದು. ಅಥವಾ ಮಾತಿಗೆ ಪೀಠಿಕೆ ಹಾಕುವುದು. ಎರಡನೆಯದಾಗಿ ಮಾತನಾಡುವ ವಿಷಯವನ್ನು ವಿಸ್ತರಿಸುವುದು. ಕೊನೆಯದಾಗಿ ಮಾತು ಮುಗಿಸಿ, ಉಪಸಂಹಾರ ಮಾಡಿ ಧನ್ಯವಾದ ಹೇಳುವುದು.

ಅಭ್ಯಾಸ, ಕಂಠಪಾಠ: ಇದೇ ರೂಪದಲ್ಲಿ ಭಾಷಣವನ್ನು ತಪ್ಪಿಲ್ಲದೆ ಬರೆದುಕೊಳ್ಳಬೇಕು. ಪುಟ್ಟ ಮಕ್ಕಳಿಗೆ ಆದಾಗ ಬರೆಯದೇ ಹಾಗೇ ಹೇಳಿಕೊಟ್ಟರೆ ಮಾತನಾಡುವುದು ಕಷ್ಟ ಆಗಬಹುದು. ಹಾಗಾಗಿ ಭಾಷಣ ಬರೆದುಕೊಂಡು ಅದನ್ನು ಅವರಿಂದ ತಪ್ಪಿಲ್ಲದೆ ಹೇಳಿಸಬೇಕು. ಕೆಲವು ಬಾರಿ ಜೋರಾಗಿ ಓದಿಸಿ ಕಂಠಪಾಠ ಮಾಡಿಸಬಹುದು. ಅದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ.

ಭಾಷಣ ಮಾಡುವುದು: ಈ ವೇಳೆ ಮಕ್ಕಳು ಯಾವುದೇ ತಪ್ಪು ಉಚ್ಛಾರ ಮಾಡದಂತೆ, ಅಂಜದೆ, ಅಳುಕದೆ ಜೋರಾಗಿ ಮಾತನಾಡುವಂತೆ ಪ್ರೋತ್ಸಾಹಿಸಬೇಕು. ಮನೆಯಲ್ಲೇ ಎಲ್ಲರ ಮುಂದೆ ಜೋರಾಗಿ ಭಾಷಣ ಮಾಡುವಂತೆ ಹೇಳಿ ಕಲಿಸಬಹುದು. ಅಕ್ಷರಗಳನ್ನು, ವಾಕ್ಯಗಳನ್ನು ನುಂಗದಂತೆ, ಸ್ಪಷ್ಟವಾಗಿ ಮಾತನಾಡಲು ಹೇಳಬೇಕು. ವೇದಿಕೆಯಲ್ಲಿ ಹೇಗೆ ನಿಲ್ಲಬೇಕು, ನೆಲ ನೋಡಬಾರದು, ಮೇಲಕ್ಕೆ ಆಕಾಶವನ್ನೂ ನೋಡುತ್ತಾ ಮಾತನಾಡುವುದು ಅಲ್ಲ. ಮುಂದಿನ ಕೇಳುಗರನ್ನು ನೋಡಿ ಮಾತನಾಡಬೇಕು ಎಂದು ತಿಳಿಸಬೇಕು.

ಸಮಯದ ಮಿತಿ: ಎಲ್ಲಕ್ಕೂ ಹೆಚ್ಚಾಗಿ ಸಮಯ ಮಿತಿ ಇದ್ದರೆ ಅದನ್ನು ಪಾಲಿಸಬೇಕು. ಎಷ್ಟು ಸಮಯ ಅವಕಾಶ ಇರುತ್ತದೋ ಅದಕ್ಕೆ ಸರಿ ಹೊಂದುವಂತೆ ಭಾಷಣ ಇರಬೇಕು.

ಇದನ್ನೂ ಓದಿ: Republic Day 2022: ಗಣರಾಜ್ಯೋತ್ಸವದ ಹಿನ್ನೆಲೆ, ಸಂವಿಧಾನದ ಬಗ್ಗೆ ಈ ವಿಚಾರಗಳನ್ನು ತಿಳಿದುಕೊಳ್ಳಲೇಬೇಕು

ಇದನ್ನೂ ಓದಿ: Republic Day 2022 Parade: ಗಣರಾಜ್ಯೋತ್ಸವ ಪಥಸಂಚಲನಕ್ಕೆ ಪೂರ್ವಾಭ್ಯಾಸ; ಈ ಬಾರಿಯ ಪರೇಡ್​ನ ವಿಶೇಷತೆಗಳೇನು?

Published On - 3:04 pm, Sun, 23 January 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ