AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್​​ಕುಮಾರ್​ ಜೊತೆ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಶನಿ ಮಹದೇವಪ್ಪ

ಕನ್ನಡದಲ್ಲಿ 500ರಕ್ಕೂ ಹೆಚ್ಚು ಚಿತ್ರಗಳಲ್ಲಿ ಶನಿ ಮಹದೇವಪ್ಪ ಅಭಿನಯಿಸಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ನಟರುಗಳ ಜೊತೆ ತೆರೆ ಹಂಚಿಕೊಂಡ ಖ್ಯಾತಿ ಇವರಿಗಿದೆ.

ರಾಜ್​​ಕುಮಾರ್​ ಜೊತೆ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಶನಿ ಮಹದೇವಪ್ಪ
ಶನಿ ಮಹಾದೇವಪ್ಪ
Follow us
ರಾಜೇಶ್ ದುಗ್ಗುಮನೆ
|

Updated on:Jan 03, 2021 | 7:41 PM

ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ ಡಾ. ರಾಜ್​ಕುಮಾರ್​. ಇವರ ಜೊತೆ ಒಂದಲ್ಲ ಎರಡಲ್ಲ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಹ ಕಲಾವಿದನಾಗಿ ನಟಿಸಿದ ಖ್ಯಾತಿ ಶನಿ ಮಹದೇವಪ್ಪ ಅವರಿಗಿದೆ. ಇಂಥ ಕಲಾವಿದನನ್ನು ನಾವು ಇಂದು ಕಳೆದುಕೊಂಡಿದ್ದೇವೆ.

ಕನ್ನಡದಲ್ಲಿ 500ರಕ್ಕೂ ಹೆಚ್ಚು ಚಿತ್ರಗಳಲ್ಲಿ ಶನಿ ಮಹದೇವಪ್ಪ ಅಭಿನಯಿಸಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ನಟರುಗಳ ಜೊತೆ ತೆರೆ ಹಂಚಿಕೊಂಡ ಖ್ಯಾತಿ ಇವರಿಗಿದೆ. ಪೋಷಕ ಪಾತ್ರದಲ್ಲಿ ಬಣ್ಣ ಹಚ್ಚಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿ ಹೆಸರು ಮಾಡಿದ ಖ್ಯಾತಿ ಶನಿ ಮಹಾದೇವಪ್ಪ ಅವರದ್ದು.

ಸಿನಿಮಾ ಪಟ್ಟಿ

1978ರಲ್ಲಿ ತೆರೆಕಂಡ ಶಂಕರ ಗುರು, 1983ರಲ್ಲಿ ರಿಲೀಸ್​ ಆಗಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದ ಕವಿರತ್ನ ಕಾಳಿದಾಸ, ಶ್ರೀನಿವಾಸ ಕಲ್ಯಾಣ, ಶಿವಶಂಕರ್, ಗುರು ಬ್ರಹ್ಮ ಚಿತ್ರಗಳಲ್ಲಿ ಶನಿ ಮಹದೇವಪ್ಪ ಬಣ್ಣ ಹಚ್ಚಿದ್ದಾರೆ. 2008ರ ಮೂರನೇ ಕ್ಲಾಸ್​ ಮಂಜ ಬಿ.ಕಾಮ್​ ಭಾಗ್ಯ ಚಿತ್ರದಲ್ಲಿ ಇವರು ಕೊನೆಯದಾಗಿ ಬಣ್ಣ ಹಚ್ಚಿದ್ದರು.

ಗೌರಿ ಗಣೇಶ (1991), ಆತ್ಮ ಬಂಧನ (1992), ಮನ ಮೆಚ್ಚಿದ ಸೊಸೆ (1992), ಶಿವಶಂಕರ್ (1990), ರಾಮರಾಜ್ಯದಲ್ಲಿ ರಾಕ್ಷಸರು (1990), ಒಂಟಿ ಸಲಗ (1989), ಜಯ ಸಿಂಹ (1987), ಸತ್ಯಮ್​ ಶಿವಂ ಸುಂದರಂ (1987), ಜೀವನ ಜ್ಯೋತಿ (1987), ಮದುವೆ ಮಾಡು ತಮಾಶೆ ನೋಡು (1986), ಪ್ರೇಮದ ಕಾಣಿಕೆ (1976), ತ್ರಿಮೂರ್ತಿ (1975) ಇವು ಇವರು ನಟಿಸಿದ ಪ್ರಮುಖ ಚಿತ್ರಗಳಾಗಿವೆ.

ಅರಸಿ ಬಂದಿತ್ತು ಪ್ರಶಸ್ತಿ ಶನಿ ಮಹದೇವಪ್ಪ ಅವರು ಕನ್ನಡ ಚಿತ್ರರಂಗಕ್ಕೆ ನಿರಂತರವಾದ ಕೊಡುಗೆ ನೀಡಿದ್ದಾರೆ. ಅವರ ಕಲೆಗೆ ಗೌರವ ನೀಡುವ ಉದ್ದೇಶದಿಂದ ಶನಿ ಮಹದೇವಪ್ಪ ಅವರಿಗೆ ಎರಡು ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ‘ವರದರಾಜು ಅವಾರ್ಡ್​ 2009’, ‘ರಾಜ್​ಕುಮಾರ್​ ಸೌಹಾರ್ದ ಅವಾರ್ಡ್​’ ದೊರೆತಿದೆ.

ಈ ಹೆಸರು ಬರಲು ಕಾರಣವೇನು ಗೊತ್ತಾ? ಇವರಿಗೆ ಶನಿ ಮಹದೇವಪ್ಪ ಎನ್ನುವ ಹೆಸರು ಬರಲೂ ಒಂದು ಕಾರಣವಿದೆ. ಇವರ ಹುಟ್ಟಿನ ಹೆಸರು ಮಹದೇವಪ್ಪ ಎಂದು. ರಾಜವಿಕ್ರಮ ನಾಟಕದಲ್ಲಿ ಸತತವಾಗಿ ಮಹದೇವಪ್ಪ ಶನಿ ದೇವರ ಪಾತ್ರ ನಿರ್ವಹಿಸಿದ್ದರು. ಹೀಗಾಗಿ, ಅವರನ್ನು ಎಲ್ಲರೂ ಪ್ರೀತಿಯಿಂದ ಶನಿ ಮಹದೇವಪ್ಪ ಎಂದು ಕರೆಯಲು ಆರಂಭಿಸಿದ್ದರು.

ಕೊನೆಯ ಸಮಯದಲ್ಲಿ ಎದುರಾಗಿತ್ತು ಸಂಕಷ್ಟ ಕನ್ನಡ ಚಿತ್ರರಂಗ ಬೆಳೆಯುತ್ತಾ ಬಂದಂತೆ ಮಹದೇವಪ್ಪ ಅವರಿಗೆ ಅವಕಾಶ ಕಡಿಮೆ ಆಗುತ್ತಾ ಬಂದಿತ್ತು. ಕಮರ್ಷಿಯಲ್​ ಸಿನಿಮಾಗಳ ಅಬ್ಬರ ಹೆಚ್ಚಾದಂತೆ, ಇವರಿಗೆ ಸಿನಿಮಾಗಳಲ್ಲಿ ನಟಿಸಲು ಯಾರೂ ಆದ್ಯತೆ ನೀಡಿಲ್ಲ. ನಟನೆಯನ್ನೇ ಉಸಿರಾಗಿಸಿಕೊಂಡಿದ್ದ ಇವರಿಗೆ ಕೊನೆಯ ದಿನಗಳಲ್ಲಿ ಸಮಯ ಸಾಗಿಸೋದು ಕಷ್ಟವಾಗಿತ್ತು.

ಕೊರೊನಾ ಸೋಂಕಿನಿಂದ ಚಂದನವನದ ಹಿರಿಯ ಕಲಾವಿದ ಶನಿ ಮಹದೇವಪ್ಪ ವಿಧಿವಶ

Published On - 7:31 pm, Sun, 3 January 21

ಸಿಟಿಲೈಟ್ಸ್: ದುನಿಯಾ ವಿಜಯ್ ಪುತ್ರಿ ಮೋನಿಷಾ ನಟನೆಯ ಸಣ್ಣ ಝಲಕ್ ಇಲ್ಲಿದೆ
ಸಿಟಿಲೈಟ್ಸ್: ದುನಿಯಾ ವಿಜಯ್ ಪುತ್ರಿ ಮೋನಿಷಾ ನಟನೆಯ ಸಣ್ಣ ಝಲಕ್ ಇಲ್ಲಿದೆ
Live: ವಿದೇಶಾಂಗ ಇಲಾಖೆಯಿಂದ ತುರ್ತು ಸುದ್ದಿಗೋಷ್ಠಿ
Live: ವಿದೇಶಾಂಗ ಇಲಾಖೆಯಿಂದ ತುರ್ತು ಸುದ್ದಿಗೋಷ್ಠಿ
ಸೀಸನ್​ ಮಧ್ಯ ನಾಯಕನನ್ನು ಬದಲಿಸಿದ್ದ ಆರ್​ಸಿಬಿ
ಸೀಸನ್​ ಮಧ್ಯ ನಾಯಕನನ್ನು ಬದಲಿಸಿದ್ದ ಆರ್​ಸಿಬಿ
ಪಾಕಿಸ್ತಾನದಿಂದ ಕದನವಿರಾಮ ಉಲ್ಲಂಘನೆ; ಪೇಶಾವರದಲ್ಲಿ ಭಾರತ ಪ್ರತಿದಾಳಿ
ಪಾಕಿಸ್ತಾನದಿಂದ ಕದನವಿರಾಮ ಉಲ್ಲಂಘನೆ; ಪೇಶಾವರದಲ್ಲಿ ಭಾರತ ಪ್ರತಿದಾಳಿ
ಜಮ್ಮುವಿನಲ್ಲಿ ಪಾಕ್​ನಿಂದ ಶೆಲ್ ದಾಳಿ; ಓರ್ವ ಯೋಧ ಸಾವು, 7 ಸೈನಿಕರಿಗೆ ಗಾಯ
ಜಮ್ಮುವಿನಲ್ಲಿ ಪಾಕ್​ನಿಂದ ಶೆಲ್ ದಾಳಿ; ಓರ್ವ ಯೋಧ ಸಾವು, 7 ಸೈನಿಕರಿಗೆ ಗಾಯ
ಕದನ ವಿರಾಮ ಉಲ್ಲಂಘನೆ: ಪಾಕಿಸ್ತಾನದಿಂದ ಭಾರತದ ಮೇಲೆ ಮತ್ತೆ ದಾಳಿ
ಕದನ ವಿರಾಮ ಉಲ್ಲಂಘನೆ: ಪಾಕಿಸ್ತಾನದಿಂದ ಭಾರತದ ಮೇಲೆ ಮತ್ತೆ ದಾಳಿ
ಭಾರತೀಯ ಸೇನೆ ಸಂವಿಧಾನಿಕ ಮೌಲ್ಯಗಳಲ್ಲಿ ವಿಶ್ವಾಸ ಹೊಂದಿದೆ: ಸೋಫಿಯಾ ಖುರೇಷಿ
ಭಾರತೀಯ ಸೇನೆ ಸಂವಿಧಾನಿಕ ಮೌಲ್ಯಗಳಲ್ಲಿ ವಿಶ್ವಾಸ ಹೊಂದಿದೆ: ಸೋಫಿಯಾ ಖುರೇಷಿ
ಯುದ್ಧ ಬೇಡ ಅಂತ ನಾನು ಹೇಳಿದ್ದಕ್ಕೆ ದೊಡ್ಡ ಯುದ್ಧವೇ ಆಗಿತ್ತು: ಸಿದ್ದರಾಮಯ್ಯ
ಯುದ್ಧ ಬೇಡ ಅಂತ ನಾನು ಹೇಳಿದ್ದಕ್ಕೆ ದೊಡ್ಡ ಯುದ್ಧವೇ ಆಗಿತ್ತು: ಸಿದ್ದರಾಮಯ್ಯ
ಒಂದನ್ನು ಜೈಸಲಮ್ಮೇರ್​ನಲ್ಲಿ ಪುಡಿಗಟ್ಟಿದರೆ ಮತ್ತೊಂದನ್ನು ಸಿರ್ಸಾದಲ್ಲಿ
ಒಂದನ್ನು ಜೈಸಲಮ್ಮೇರ್​ನಲ್ಲಿ ಪುಡಿಗಟ್ಟಿದರೆ ಮತ್ತೊಂದನ್ನು ಸಿರ್ಸಾದಲ್ಲಿ
ಎಲ್ಲ ಸರಿಯಾದ ಬಳಿಕ ಊರಿಗೆ ವಾಪಸ್ಸು ಬರುತ್ತೇವೆ ಎನ್ನುತ್ತಿರುವ ಜನ
ಎಲ್ಲ ಸರಿಯಾದ ಬಳಿಕ ಊರಿಗೆ ವಾಪಸ್ಸು ಬರುತ್ತೇವೆ ಎನ್ನುತ್ತಿರುವ ಜನ