ಮೂರು ದಶಕದ ಹಿಂದೆ ದೂರದರ್ಶನದಲ್ಲಿ ಪ್ರಸಾರವಾಗಿದ್ದ ರಾಮಾಯಣ ಧಾರಾವಾಹಿ ಆಗಲೇ ಭಾರೀ ಜನಪ್ರಿಯತೆ ಗಳಿಸಿತ್ತು. ಈಗ ಕೊರೊನಾ ಕಾಲದಲ್ಲಿ ಮತ್ತೊಮ್ಮೆ ಪ್ರಸಾರವಾಗಿ ಮತ್ತೆ ಖ್ಯಾತಿಯ ಉತ್ತುಂಗಕ್ಕೆ ಏರಿತು. ಅಷ್ಟೇ ಅಲ್ಲ.. ಈ ನಡುವೆ ಕೆಲ ಕಲಾವಿದರು ರಾಮಾಯಣದ ಖ್ಯಾತಿಯಿಂದ ತಮ್ಮ ಜೀವನದಲ್ಲಿ ಆದ ಬದಲಾವಣೆಗಳನ್ನು ಮೆಲುಕು ಹಾಕಿದ್ದಾರೆ.
ದೀಪಿಕಾ ಮೊದಲ ಚಿತ್ರ ‘ಸುನ್ ಮೇರಿ ಲೈಲಾ’ ಹೇಮಂತ್ ಅವರನ್ನು ಭೇಟಿ ಮಾಡಲು ಕಾರಣವಾಯಿತಂತೆ. ದೀರ್ಘಕಾಲದ ನಂತರ ಏಪ್ರಿಲ್ 28, 1991 ರಂದು ಮತ್ತೊಮ್ಮೆ ದೀಪಿಕಾ ಮತ್ತು ಹೇಮಂತ್ ಟೋಪಿವಾಲಾ ಭೇಟಿಯಾದ್ರು. ಆ ವೇಳೆ ಸುಮಾರು 2 ಗಂಟೆಗಳ ಕಾಲ ಇಬ್ಬರೂ ಮಾತನಾಡಿದರಂತೆ. ಆಗಲೇ ಗೊತ್ತಾಗಿದ್ದು, ಇಬ್ಬರೂ ಪರಸ್ಪರ ಪ್ರೀತಿಯಲ್ಲಿದ್ದಾರೆಂದು!
‘ಶಿಂಗಾರ್’ ಬನ್ ಗಯಾ ಸೀತಾ ಕಿ ಮಾತೆ ಕಿ ಸಿಂಧೂರ್!
ಹೇಮಂತ್ ಅವರ ಕುಟುಂಬ ಆ ಕಾಲದಲ್ಲಿ ಹೆಣ್ಣುಮಕ್ಕಳ ನೆಚ್ಚಿನ ಸಂಗಾತಿಯೇ ಆಗಿದ್ದ ‘ಶೃಂಗಾರ’ ಎಂಬ ಸಾಂಪ್ರದಾಯಿಕ ಸೌಂದರ್ಯವರ್ಧಕಗಳನ್ನು 1961 ರಿಂದ ತಯಾರಿಸುವ ಕಂಪನಿ ಹೊಂದಿತ್ತು. ಆಗಿನ ಕಾಲಕ್ಕೆ ಅತಿ ಹೆಚ್ಚು ಜನಪ್ರಿಯ ಹೊಂದಿದ ಬ್ರಾಂಡ್ ಇದಾಗಿತ್ತು. ಮುಂದೆ ಅದೇ ‘ಶಿಂಗಾರ್’ ಕಂಪನಿಯ ಕುಲತಿಲಕವೇ ಸೀತಾ ಮಾತೆ ಯಾನಿ ದೀಪಿಕಾರ ಹಣೆಕುಂಕುಮವಾಗಿ ಶೃಂಗಾರಗೊಂಡಿತು.
Published On - 11:54 am, Wed, 3 June 20