AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Stunning restoration in Tutankhamun: ಈಜಿಪ್ಟ್​​ನ ಟುಟಾನಖಮೆನ್ ಗೋರಿಯಲ್ಲಿ ಸಾವಿರಾರು ವರ್ಷ ಹಳೆಯ ಚಪ್ಪಲಿಗಳು ಪತ್ತೆ!

ಇದನ್ನು ಚರ್ಮದಿಂದ ತಯಾರಿಸಲಾಗಿದ್ದು, ಚಿನ್ನ ಲೇಪಿತವಾಗಿದೆ! ಫಳಫಳ ಹೊಳೆಯುವ, ಟೆರ್ರಾಕೋಟದಿಂದ ಮಾಡಲಾದ ಚಪ್ಪಲಿಗಳು ಇವಾಗಿವೆ. ಇವುಗಳನ್ನು ಪ್ರಸ್ತುತ ಈಜಿಪ್ಟ್​ನ ಮ್ಯೂಸಿಯಂನಲ್ಲಿ ಸಂರಕ್ಷಿಸಿಡಲಾಗಿದೆ. ಇದು ಕ್ರಿಸ್ತಪೂರ್ವ 1341– 1323 BC ಕಾಲದ್ದು ಎಂದು ಗುರುತಿಸಲಾಗಿದೆ.

Stunning restoration in Tutankhamun: ಈಜಿಪ್ಟ್​​ನ ಟುಟಾನಖಮೆನ್ ಗೋರಿಯಲ್ಲಿ ಸಾವಿರಾರು ವರ್ಷ ಹಳೆಯ ಚಪ್ಪಲಿಗಳು ಪತ್ತೆ!
ಈಜಿಪ್ಟ್​​ನ ಟುಟಾನಖಮೆನ್ ಗೋರಿಯಲ್ಲಿ ಸಾವಿರಾರು ವರ್ಷ ಹಳೆಯ ಚಪ್ಪಲಿಗಳು ಪತ್ತೆ!
TV9 Web
| Edited By: ಸಾಧು ಶ್ರೀನಾಥ್​|

Updated on:Nov 04, 2021 | 10:11 AM

Share

ಈಜಿಪ್ಟ್​​: ಸಾವಿರಾರು ವರ್ಷಗಳ ಇತಿಹಾಸವಿರುವ ಗೋರಿಗಳು, ಸಮಾಧಿಗಳು ಈಜಿಪ್ಟ್​ನಲ್ಲಿ ಸಾಮಾನ್ಯ. ಅಲ್ಲಿ ನಿರಂತರವಾಗಿ ಪುರಾತತ್ವ ಸಂಶೋಧಕರು ತಮ್ಮನ್ನು ಶೋಧ ಕಾರ್ಯದಲ್ಲಿ ತೊಡಗಿಸಿಕೊಂಡಿರುತ್ತಾರೆ. ಶತಮಾನಗಳ ಇತಿಹಾಸದ ರಹಸ್ಯಗಳನ್ನು ಭೂತಗನ್ನಡಿ ಹಾಕಿ, ಹುಡುಕಿ ತೆಗೆದು ಜಗತ್ತಿಗೆ ತೋರಿಸುತ್ತಾರೆ. ಆಗಾಗ ಏನಾದರೊಂದು ಹೊಸದನ್ನು ಜಗತ್ತಿಗೆ ಪರಿಚಯಿಸುವ ಉಮೇದಿ ಆ ಪುರಾತತ್ವ ಸಂಶೋಧಕರದ್ದು. ಇತ್ತೀಚೆಗೆ ಇಂತಹುದೇ ವಸ್ತುವನ್ನುಶೋಧ ಮಾಡಿ, ಅದರ ಮೇಲೆ ಬೆಳಕು ಚೆಲ್ಲಿದ್ದಾರೆ. ಇದರೊಂದಿಗೆ ಮಾನವರ ಬಗೆಗಿನ ಕುತೂಹಲಕಾರಿ ಸಂಗತಿಯೊಂದನ್ನು ಪರಿಚಯಿಸಿದ್ದಾರೆ. ಈಜಿಪ್ಟ್​​ನ ಟುಟಾನಖಮೆನ್ (Tutankhamun) ಬಳಿಯಿರುವ ಗೋರಿಯಲ್ಲಿ ಸಾವಿರಾರು ವರ್ಷಗಳಷ್ಟು ಹಳೆಯದಾದ ಒಂದು ಜೊತೆ ಚಪ್ಪಲಿ ದೊರೆತಿದೆ.

ಇದನ್ನು ಚರ್ಮದಿಂದ ತಯಾರಿಸಲಾಗಿದ್ದು, ಚಿನ್ನ ಲೇಪಿತವಾಗಿದೆ! ಫಳಫಳ ಹೊಳೆಯುವ, ಟೆರ್ರಾಕೋಟದಿಂದ ಮಾಡಲಾದ ಚಪ್ಪಲಿಗಳು ಇವಾಗಿವೆ. ಇವುಗಳನ್ನು ಪ್ರಸ್ತುತ ಈಜಿಪ್ಟ್​ನ ಮ್ಯೂಸಿಯಂನಲ್ಲಿ (Grand Egyptian Museum) ಸಂರಕ್ಷಿಸಿಡಲಾಗಿದೆ. ಇದು ಕ್ರಿಸ್ತಪೂರ್ವ 1341– 1323 BC ಕಾಲದ್ದು ಎಂದು ಗುರುತಿಸಲಾಗಿದೆ. ಈಜಿಪ್ಟ್​ನ 18ನೆಯ ರಾಜಮನೆತನದ ಆಳ್ವಿಕೆಯ ಅಂತ್ಯ ಕಾಲದ ರಾಜ ಟುಟ್​ (King Tut) ಕಾಲದ್ದು ಎಂದು ಪತ್ತೆಹಚ್ಚಲಾಗಿದೆ.

pair of sandals restored from tomb of tutankhamun in Valley of Kings in egypt

ಶತಶತಮಾನಗಳ ಹಿಂದಿನ ಈಜಿಪ್ಟ್​ ರಾಜರುಗಳ ಗೋರಿಗಳು ಇರುವ ಕಣಿವೆಗಳಲ್ಲಿ ದೊರೆತ ಸಮಾಧಿಯಲ್ಲಿ ಈ ಚಪ್ಪಲಿಗಳು ಪತ್ತೆಯಾಗಿವೆ.

ಶತಶತಮಾನಗಳ ಹಿಂದಿನ ಈಜಿಪ್ಟ್​ ರಾಜರುಗಳ ಗೋರಿಗಳು ಇರುವ ಕಣಿವೆಗಳಲ್ಲಿ ದೊರೆತ ಸಮಾಧಿಯೊಂದರಲ್ಲಿ ಈ ಚಪ್ಪಲಿಗಳು ಪತ್ತೆಯಾಗಿವೆ. ಸುಮಾರು 10 ವರ್ಷಗಳ ನಿಧಾನಗತಿಯ, ಅಪಾರ ಕಾಳಜಿಯ ಸಂಶೋಧನೆಯ ಫಲವಾಗಿ ಈ ಚಪ್ಪಲಿಗಳು ಇಂದಿನ ಜಗತ್ತಿಗೆ ಸಿಕ್ಕಿದೆ. ಈ ಗೋರಿಯಲ್ಲಿ ಇನ್ನೂ ಅನೇಕಾನೇಕ ಅಮೂಲ್ಯ ವಸ್ತುಗಳು ಪತ್ತೆಯಾಗಿವೆ. ಜೊತೆಗೆ ಅಂದಿನ ಇತಿಹಾಸದ ಮೇಲೆ ಬೆಳಕು ಚೆಲ್ಲಬಹುದಾದ ಗೋಡೆಬರಹಗಳು ಆ ಸಮಾಧಿಯ ಗೋಡೆಗಳ ಮೇಲೆ ಕೆತ್ತಿರುವುದು ಕಂಡುಬಂದಿದೆ. ಈ ಸಂರಕ್ಷಣಾ ಯೋಜನೆಯ ಉಸ್ತುವಾರಿ ಹೊತ್ತಿರುವ Getty Conservation Institute ಮೊದಲ ಬಾರಿಗೆ ಇವುಗಳನ್ನು ಸಾರ್ವಜನಿಕರಿಗೆ ತೆರೆದಿಟ್ಟಿದೆ.

(Stunning restoration: pair of sandals restored from tomb of Tutankhamun in Valley of Kings in egypt)

Published On - 8:44 am, Thu, 4 November 21

Follow Us
TV9 Web
TV9 Web

TV9 Kannada

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್