ತಲೆಸ್ನಾನ ಮಾಡುವುದಕ್ಕೂ ನಿಮ್ಮ ಕೂದಲಿನ ರೀತಿಗೂ ಒಂದು ನಂಟಿದೆ. ನಿಮ್ಮ ಕೂದಲು ಯಾವ ಪ್ರಕಾರದ್ದು ಎಂಬ ಆಧಾರದಲ್ಲಿ ನೀವು ಎಷ್ಟು ದಿನಗಳಿಗೊಮ್ಮೆ ತಲೆಸ್ನಾನ ಮಾಡುವುದು ಒಳ್ಳೆಯದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ನುಣುಪಾಗಿರುವ ಕೂದಲು ಹೊಂದಿರುವವರಲ್ಲಿ ಎಣ್ಣೆಯುಕ್ತ ಪಸೆಯಂಶ ಹೆಚ್ಚು ಗೋಚರಿಸುತ್ತದೆ. ಅದೇ ಕಾರಣಕ್ಕೆ ಪ್ರತಿದಿನ ತಲೆಸ್ನಾನ ಮಾಡಬೇಕು ಎಂದೆನಿಸಬಹುದು, ಆದರೆ ಹಾಗೆ ಮಾಡಬೇಡಿ. ಯಾಕೆಂದರೆ ಪ್ರತಿದಿನ ತಲೆಸ್ನಾನ ಮಾಡುವುದರಿಂದಾಗಿ ಪರಿಸ್ಥಿತಿ ಇನ್ನೂ ಕ್ಲಿಷ್ಟವಾಗಬಹುದು. ಬದಲಾಗಿ ದಿನಬಿಟ್ಟು ದಿನ ನಿಮ್ಮ ಕೂದಲನ್ನು ಸೌಮ್ಯವಾಗಿ ಡ್ರೈ ಶಾಂಪೂ ಬಳಸಿ ಸ್ವಚ್ಛಗೊಳಿಸಿ. ಹೀಗೆ ಮಾಡುವುದರಿಂದಾಗಿ ನಿಮ್ಮ ಕೂದಲಿನ ಆರೋಗ್ಯವನ್ನು ಅಧಿಕಗೊಳಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.
ಪದೇ ಪದೇ ಕೂದಲು ತೊಳೆಯಬಹುದೇ?
ದಟ್ಟವಾದ ಕೂದಲು ಹೊಂದಿರುವವರು ಪದೇ ಪದೇ ಕೂದಲನ್ನು ತೊಳೆಯುತ್ತಲೇ ಇರಬೇಕು ಎಂದೇನಿಲ್ಲ. ದಟ್ಟವಾಗಿರುವ ಕೂದಲಿನ ಕಿರುಚೀಲಗಳು ವಿಸ್ತರಿಸುತ್ತವೆ ಮತ್ತು ತೆಳು ಕೂದಲಿನವರಿಗಿಂತ ಎಣ್ಣೆಯಾಂಶ ಉತ್ತಮವಾಗಿರುತ್ತದೆ. ಒಂದು ವೇಳೆ ನಿಮ್ಮ ಕೂದಲು ಹೆಚ್ಚು ಎಣ್ಣೆ ಜಿಡ್ಡು ಎಂದು ಅನ್ನಿಸದೇ ಇದ್ದಲ್ಲಿ ಈ ರೀತಿಯ ಕೂದಲಿರುವವರು ವಾರಕ್ಕೆ ಒಮ್ಮೆ ತಲೆಸ್ನಾನ ಮಾಡಿದರೂ ಸಾಕಾಗುತ್ತದೆ ಎನ್ನುತ್ತಾರೆ ಪ್ರಸಿದ್ಧ ಕೇಶ ವಿನ್ಯಾಸಕಿ ಸ್ಯಾಟ್ಸ್ ಮೈಲ್ಸ್ ಜೆಫ್ರಿಸ್. ಉರಿಯೂತ ಶಾಂತಗೊಳಿಸುವಟೀ ಟ್ರೀ ಆಯಿಲ್ ನಿಂದ ತಯಾರಿಸಿದ ಶಾಂಪೂ ಬಳಕೆಯು ನಿಮ್ಮ ಕೂದಲಿನ ಆರೋಗ್ಯವನ್ನು ಅಧಿಕಗೊಳಿಸುತ್ತದೆ.
ಕೂದಲಿಗೆ ಶಾಂಪು ಬಳಕೆ:
ದೊಡ್ಡ ದೊಡ್ಡ ಸುರುಳಿಯಾಕಾರದ ಕೂದಲು ಇರುವವರದ್ದು ಕೂದಲಿನ ವಿಚಾರದಲ್ಲಿ ಒಂದು ರೀತಿಯ ಹೋರಾಟವೆಂದೇ ಹೇಳಬಹುದು. ಗ್ರೀಸ್ ನಂತಾಗಿರುವ ಬೇರುಗಳು, ಶುಷ್ಕವಾಗಿ ಕಾಣುವ ತುದಿಕೂದಲು. ನಿಜಕ್ಕೂ ಇಂತಹ ಕೂದಲನ್ನು ನಿರ್ವಹಿಸುವುದು ಸಾಹಸದ ಕೆಲಸವೇ ಸರಿ. ಸ್ಕ್ಯಾಲ್ಪ್ ನಲ್ಲಿ ಎಣ್ಣೆಯಂಶವು ಇತರೆ ಕೂದಲಿನ ಪ್ರಕಾರದವರಿಗಿಂತ ಈ ರೀತಿಯ ಸುರಳಿ ಕೂದಲಿರುವವರಲ್ಲಿ ಸುಲಭದಲ್ಲಿ ಇಳಿಯದೇ ಇರುವುದರಿಂದಾಗಿ ಶುಷ್ಕತೆಯ ಭಾವನೆ ಇವರದಲ್ಲಿ ಹೆಚ್ಚಿರುತ್ತದೆ. ಹೆಚ್ಚುವರಿ ಸೇರಿಸಲಾಗುವ ತೇವಾಂಶದೊಂದಿಗೆ ಪ್ರತಿ ಮೂರು ದಿನಗಳಿಗೊಮ್ಮೆ ಈ ರೀತಿಯ ಕೂದಲಿರುವವರು ತಲೆಸ್ನಾನ ಮಾಡಬೇಕು. ಸಲ್ಫೇಟ್ ಮುಕ್ತವಾಗಿರುವ ಶಾಂಪೂ ಬಳಕೆ ಮಾಡಬೇಕು. ಪ್ರತಿ ಎರಡು ವಾರಗಳಿಗೊಮ್ಮೆ ಫಾರ್ಮ್ ಕ್ಲಾರಿಫೈಯಿಂಗ್ ನಂತಹ ಶಾಂಪೂ ಬಳಕೆ ಮಾಡಬೇಕು.
ನಿಮ್ಮ ಎಣ್ಣೆಯುಕ್ತ ನೆತ್ತಿಯ ಬೇರುಗಳನ್ನು ಹೆಚ್ಚೆಚ್ಚು ಎದುರಿಸುವುದಕ್ಕೆ ನೀವು ಪ್ರಯತ್ನಿಸಿದಂತೆ ನಿಮ್ಮ ನೆತ್ತಿಯು ಹೆಚ್ಚು ತೈಲವನ್ನು ಉತ್ಪತ್ತಿ ಮಾಡುತ್ತದೆ. ಯಾಕೆ ಗೊತ್ತಾ? ಈ ಸಂಗತಿ ನಿಮಗೆ ಆಶ್ಚರ್ಯವೆನ್ನಿಸಬಹುದು. ನಿಮ್ಮ ನೆತ್ತಿಯು ನಿರ್ಜಲೀಕರಣಗೊಂಡಾಗ ಕಳೆದು ಹೋಗಿರುವ ತೈಲಾಂಶವನ್ನು ಸರಿದೂಗಿಸಿಕೊಳ್ಳಲು ತೈಲ ಉತ್ಪಾದನೆಯನ್ನು ನೆತ್ತಿಯು ಅಧಿಕಗೊಳಿಸುತ್ತದೆ. ವಾರಕ್ಕೆ ನಾಲ್ಕಕ್ಕಿಂತ ಹೆಚ್ಚು ಬಾರಿ ಕೂದಲು ತೊಳೆಯುವುದನ್ನು ಆದಷ್ಟು ತಪ್ಪಿಸುವುದು ಒಳಿತು. ಡ್ರೈ ಶಾಂಪೂ ಬಳಕೆ ನಿಮ್ಮ ಕೂದಲಿನ ಹೊಸ ಸಂಗಾತಿಯಾದರೆ ಒಳ್ಳೆಯದು ಯಾಕೆಂದರೆ ಇವು ಕೇವಲ ಗ್ರೀಸಿಯಾಗಿರುವ ಬೇರುಗಳನ್ನು ಮರೆಮಾಚುವುದು ಮಾತ್ರವಲ್ಲ ಬದಲಾಗಿ ಹೊಸ ಕೂದಲು ಹುಟ್ಟಿ ನಿಮ್ಮ ಕೂದಲು ದಪ್ಪವಾಗುವಂತೆಯೂ ಮಾಡುತ್ತದೆ. ದಿನಬಿಟ್ಟು ದಿನ ತಲೆಸ್ನಾನ ಮಾಡಿ ಕೂದಲಿನ ಆರೈಕೆಯನ್ನು ಮಾಡುವುದು ಈ ರೀತಿಯ ಕೂದಲಿನ ಪ್ರಕಾರದವರಿಗೆ ಒಳ್ಳೆಯದು.
ದಿನಬಿಟ್ಟು ದಿನ ತಲೆಸ್ನಾನ:
ದಿನಬಿಟ್ಟು ದಿನ ತಲೆಸ್ನಾನ ನಿಮ್ಮ ಕೂದಲು ದಪ್ಪನೆಯದ್ದೂ ಅಲ್ಲ, ಕರ್ಲಿಯಾಗಿಯೂ ಇಲ್ಲ, ದಪ್ಪವಾಗಿಯೂ ಇಲ್ಲ, ಎಣ್ಣೆ ಜಿಡ್ಡಿನಿಂದಲೂ ಕೂಡಿಲ್ಲ, ತೀರಾ ನುಣುಪಾದ ಕೂದಲೂ ಅಲ್ಲ ಎಂದರೆ ನಿಮ್ಮ ಕೂದಲು ಮಧ್ಯಮ ಪ್ರಕಾರ ಸಹಜ ಕೂದಲು ಎಂದು ಪರಿಗಣಿಸಲ್ಪಡುತ್ತದೆ. ಅಂದರೆ ನೀವು ನಿಮ್ಮ ಕೂದಲಿಗೆ ಮಧ್ಯಮ ಪ್ರಕಾರದ ಶಾಂಪೂವನ್ನೇ ಬಳಕೆ ಮಾಡಬೇಕಾಗುತ್ತದೆ. ಕಠಿಣವಾಗಿರುವ ಸಲ್ಫೇಟ್ ಅಥವಾ ಘಾಸಿಗೊಳಿಸುವ ರಾಸಾಯನಿಕ ಇಲ್ಲದ ಶಾಂಪೂ ಬಳಕೆ ಮಾಡಿ ದಿನ ಬಿಟ್ಟು ದಿನ ನಿಮ್ಮ ಕೂದಲನ್ನು ತೊಳೆಯುವುದು ಈ ರೀತಿಯ ಕೂದಲಿನ ಪ್ರಕಾರದವರಿಗೆ ಒಳಿತು. ಟು-ಇನ್-ಒನ್ ಸೂತ್ರ ಎಂದು ಹೇಳುವುದಿಲ್ಲವೇ ಹಾಗೆ ಎರಡೂ ಗುಣಗಳು ಒಂದರಲ್ಲೇ ಇರುವಂತ ಶಾಂಪೂ ಬಳಕೆ ಮಾಡಬೇಕಾಗುತ್ತದೆ. ಆ ಕಡೆ ಕೂದಲು ಅತಿಯಾದ ಶುಷ್ಕತೆಗೂ ಒಳಗಾಗಬಾರದು,ಈ ಕಡೆ ಎಣ್ಣೆ ಜಿಡ್ಡಿನಂತೆಯೂ ಆಗಬಾರದು. ಸಹಜವಾಗಿರುವ ಕೂದಲನ್ನು ಸಹಜವಾಗಿರುವಂತೆಯೇ ನೋಡಿಕೊಳ್ಳಬೇಕು ಎಂದರೆ ಆರೈಕೆ ಬಹಳ ಮುಖ್ಯವಾಗಿರುತ್ತದೆ. ಈ ಮೇಲಿನವುಗಳಲ್ಲಿ ನಿಮ್ಮದು ಯಾವ ಪ್ರಕಾರದ ಕೂದಲು ಎಂಬುದನ್ನು ಗಮನಿಸಿ ಮತ್ತು ಅದಕ್ಕೆ ಸರಿಹೊಂದುವಂತೆ ತಲೆಸ್ನಾನ ಮಾಡುವ ಅಭ್ಯಾಸ ರೂಢಿಸಿಕೊಂಡರೆ ಕೂದಲಿನ ಆರೋಗ್ಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವುದಕ್ಕೆ ಖಂಡಿತ ಸಾಧ್ಯವಾಗುತ್ತದೆ.
Published On - 10:36 am, Thu, 31 October 19