AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಟ್ಟ ಕನಸು ಬೀಳದಿರಲು ಏನು ಮಾಡಬೇಕು?

ಕನಸು ಕಾಣದವರಿಲ್ಲ. ಪುಟ್ಟ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕರವರೆಗೂ ಎಲ್ಲರೂ ಕನಸಿನ ಲೋಕದಲ್ಲಿ ವಿಹರಿಸುವವರೇ. ಕನಸುಗಳನ್ನು ಭವಿಷ್ಯದ ಸಂಕೇತಗಳು ಎನ್ನಲಾಗುತ್ತೆ. ಮನಃಶಾಸ್ತ್ರದಲ್ಲೂ ಕನಸಿನ ಲೋಕದ ಬಗ್ಗೆ ಸಾಕಷ್ಟು ಸಂಶೋಧನೆಗಳೇ ನಡೆದಿವೆ. ವಿಜ್ಞಾನದ ಪ್ರಕಾರ, ಮಲಗಿದ್ದಾಗ ಆತ್ಮ ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ. ಅದು ಎಚ್ಚರದ ಸ್ಥಿತಿಯಲ್ಲೇ ಇರುತ್ತೆ. ಮನಸ್ಸು ದೇಹ ವಿಶ್ರಾಂತಿಯ ಸ್ಥಿತಿಯಲ್ಲಿದ್ದಾಗ ಪಂಚೇಂದ್ರಿಯಗಳು ಶಾಂತ ಸ್ಥಿತಿಯಲ್ಲಿರುತ್ತವೆ. ಆಗ ಅನುಭವವಾಗುವ ಜೀವನಕ್ಕೆ ಸಂಬಂಧಿಸಿದ ಸಂಗತಿಗಳೇ ಕನಸುಗಳು. ಕನಸು ಅರ್ಥಾತ್ ಸ್ವಪ್ನಗಳಿಗೂ ಭೂತ, ಭವಿಷ್ಯ, ವರ್ತಮಾನಕ್ಕೂ ಸಂಬಂಧವಿದೆಯೇ ಎಂಬುದನ್ನು ಜ್ಯೋತಿಷ್ಯ […]

ಕೆಟ್ಟ ಕನಸು ಬೀಳದಿರಲು ಏನು ಮಾಡಬೇಕು?
ಸಾಧು ಶ್ರೀನಾಥ್​
|

Updated on:Jan 03, 2020 | 3:38 PM

Share

ಕನಸು ಕಾಣದವರಿಲ್ಲ. ಪುಟ್ಟ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕರವರೆಗೂ ಎಲ್ಲರೂ ಕನಸಿನ ಲೋಕದಲ್ಲಿ ವಿಹರಿಸುವವರೇ. ಕನಸುಗಳನ್ನು ಭವಿಷ್ಯದ ಸಂಕೇತಗಳು ಎನ್ನಲಾಗುತ್ತೆ. ಮನಃಶಾಸ್ತ್ರದಲ್ಲೂ ಕನಸಿನ ಲೋಕದ ಬಗ್ಗೆ ಸಾಕಷ್ಟು ಸಂಶೋಧನೆಗಳೇ ನಡೆದಿವೆ. ವಿಜ್ಞಾನದ ಪ್ರಕಾರ, ಮಲಗಿದ್ದಾಗ ಆತ್ಮ ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ. ಅದು ಎಚ್ಚರದ ಸ್ಥಿತಿಯಲ್ಲೇ ಇರುತ್ತೆ. ಮನಸ್ಸು ದೇಹ ವಿಶ್ರಾಂತಿಯ ಸ್ಥಿತಿಯಲ್ಲಿದ್ದಾಗ ಪಂಚೇಂದ್ರಿಯಗಳು ಶಾಂತ ಸ್ಥಿತಿಯಲ್ಲಿರುತ್ತವೆ.

ಆಗ ಅನುಭವವಾಗುವ ಜೀವನಕ್ಕೆ ಸಂಬಂಧಿಸಿದ ಸಂಗತಿಗಳೇ ಕನಸುಗಳು. ಕನಸು ಅರ್ಥಾತ್ ಸ್ವಪ್ನಗಳಿಗೂ ಭೂತ, ಭವಿಷ್ಯ, ವರ್ತಮಾನಕ್ಕೂ ಸಂಬಂಧವಿದೆಯೇ ಎಂಬುದನ್ನು ಜ್ಯೋತಿಷ್ಯ ವಿಜ್ಞಾನದಲ್ಲೂ ಸಾಕಷ್ಟು ವಿವರಣೆ ಇದೆ. ಕನಸಿನಲ್ಲಿ ಕಂಡ ವಸ್ತುಗಳಿಗೂ ಭವಿಷ್ಯದಲ್ಲಿ ನಡೆಯಬಹುದಾದ ಘಟನೆಗಳಿಗೂ ಇರುವ ತಾಳಮೇಳವನ್ನು ಜ್ಯೋತಿಷ್ಯಶಾಸ್ತ್ರ ಹೀಗೆ ಹೇಳುತ್ತೆ.

ಕೆಟ್ಟ ಕನಸು ಬೀಳದಿರಲು ಸರಳ ಉಪಾಯಗಳು: -ಸ್ವಲ್ಪ ಏಲಕ್ಕಿ ತೆಗೆದುಕೊಂಡು ಒಂದು ಸ್ವಚ್ಛವಾದ ಬಟ್ಟೆಯಲ್ಲಿ ಸುತ್ತಿ. ಆ ವಸ್ತ್ರವನ್ನು ನಿಮ್ಮ ದಿಂಬಿನ ಪಕ್ಕ ಇಟ್ಟುಕೊಳ್ಳಿ. ಇದರಿಂದ ನಿದ್ದೆ ಚೆನ್ನಾಗಿ ಬರುತ್ತೆ. -ಚೆಂಬು, ಪಾತ್ರೆ, ಗ್ಲಾಸ್‌ನಲ್ಲಿ ನೀರು ತುಂಬಿಸಿಡಬೇಕು. ಬಳಿಕ ಅದನ್ನು ದಿಂಬಿನ ಪಕ್ಕ ಟೇಬಲ್ ಮೇಲೆ ಇಟ್ಟುಕೊಂಡು ನಿದ್ರಿಸಬೇಕು. ಆದರೆ ಈ ರೀತಿ ಇಟ್ಟುಕೊಂಡ ನೀರನ್ನು ಕುಡಿಯಬಾರದು. ಗಿಡಗಳಿಗೆ ಹಾಕಬೇಕು. -ನಿದ್ದೆ ಮಾಡುವ ಮೊದಲು 5 ರಿಂದ 10 ನಿಮಿಷಗಳ ಕಾಲ ಧ್ಯಾನ ಮಾಡಿದರೆ ಉತ್ತಮ ಫಲ ಸಿಗುತ್ತೆ. ಅಥವಾ ಕಣ್ಣು ಮುಚ್ಚಿ ಸುಮ್ಮನೇ ಕುಳಿತು ಯಾವುದೇ ಯೋಚನೆ ಮಾಡಬೇಡಿ. ಉಸಿರಾಡುತ್ತಾ ಮನಸ್ಸನ್ನು ಕೇಂದ್ರೀಕರಿಸಿ. -ಮಲಗುವಾಗ ದಕ್ಷಿಣದ ಕಡೆಗೆ ತಲೆ ಹಾಕಿ, ಉತ್ತರದ ಕಡೆಗೆ ಕಾಲು ಇಟ್ಟು ನಿದ್ರಿಸಿದರೆ ಚೆನ್ನಾಗಿ ನಿದ್ದೆ ಬರುತ್ತೆ. ಆರೋಗ್ಯದಲ್ಲೂ ನಿಮಗೆ ಯಾವುದೇ ಸಮಸ್ಯೆ ಬರುವುದಿಲ್ಲ ಎಂದು ವೈದ್ಯರು ಧೃಡಪಡಿಸಿದ್ದಾರೆ.

ನಿದ್ರಿಸುವ ಹಾಸಿಗೆ ಸಮೀಪವೇ ಚಪ್ಪಲಿ, ಶೂಗಳನ್ನು ಬಿಡಬಾರದು. ಅದೇ ರೀತಿ ಅವುಗಳನ್ನು ಇಡುವ ರ್‍ಯಾಕ್​ಗಳೂ ಸಹ ಹಾಸಿಗೆಯಿಂದ ದೂರ ಇರಬೇಕು. ಅವುಗಳನ್ನು ಬೆಡ್ ಪಕ್ಕದಲ್ಲಿ ಇಟ್ಟುಕೊಳ್ಳಬಾರದು. ಒಂದು ವೇಳೆ ಹಾಸಿಗೆ ಪಕ್ಕದಲ್ಲಿ ಇಟ್ಟರೆ ನೆಗೆಟಿವ್ ಎನರ್ಜಿ ಪ್ರಸಾರವಾಗುತ್ತೆ. ಅದು ವಾಸ್ತುದೋಷವನ್ನು ಉಂಟುಮಾಡುತ್ತೆ. ಇದರಿಂದ ನಿದ್ದೆಗೆ ಭಂಗವಾಗುತ್ತೆ. ದುಃಸ್ವಪ್ನಗಳು ಬೀಳುತ್ತವೆ. ಜೊತೆಗೆ ಕಣ್ಣು ಮುಚ್ಚಿಕೊಂಡು ಯಾವುದಾದರೂ ಒಂದು ವಸ್ತುವಿನ ಮೇಲೆ ದೃಷ್ಟಿ ಕೇಂದ್ರೀಕರಿಸಬೇಕು. ಮನಸ್ಸನ್ನು ಕೂಡ ಆ ವಸ್ತುವಿನ ಮೇಲೆ ಕೇಂದ್ರೀಕರಿಸಬೇಕು. ಮನಸ್ಸಿನಲ್ಲಿ ಯಾವುದೇ ಇತರೆ ಆಲೋಚನೆ ಬರಲು ಬಿಡಬಾರದು. ಇದರಿಂದ ಮನಸ್ಸು ಪ್ರಶಾಂತವಾಗಿ, ಒಳ್ಳೆಯ ನಿದ್ದೆ ಬರುತ್ತೆ.

Published On - 3:36 pm, Fri, 3 January 20

ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ