Valentine’s Day: ಊಹಿಸಿರಲಿಲ್ಲ ನಿನ್ನ ನೋಡುವ ತನಕ, ಒಂದು ಭಾವನೆ ಇಷ್ಟು ತೀವ್ರವೆಂದು..

My Love Story: ಇದುವರೆಗೆ ಒಂದು ಬಾರಿಯೂ ನನ್ನ ಹೆಸರಿನಿಂದ ಎದುರು ಕರೆಯದ ನಿನಗೆ ನನ್ನ ಹೆಸರಾದರೂ ನೆನಪಿದೆಯಾ? ಇಲ್ಲಾ ಮರೆತು ಹೋಗಿದೆಯಾ? ಎಂದು ಆಗಾಗ ನಿನ್ನ ಕೆಣಕುವ ಖುಷಿಯನ್ನು ನೀನು ಒದಗಿಸಿದ್ದರಲ್ಲಿ ಭಿನ್ನ.

Valentine's Day: ಊಹಿಸಿರಲಿಲ್ಲ ನಿನ್ನ ನೋಡುವ ತನಕ, ಒಂದು ಭಾವನೆ ಇಷ್ಟು ತೀವ್ರವೆಂದು..
ವಾಸ್ತವ ಎಂಬ ಕಲ್ಪನೆಯ ಭಿನ್ನ ಹುಡುಗನೇ..
Follow us
Skanda
|

Updated on: Feb 13, 2021 | 3:33 PM

ಒಂದು ದಿನ ನಾನೂ ಪ್ರೇಮ ಪತ್ರ ಬರೆಯುತ್ತೇನೆ ಎಂದು ಊಹಿಸಿಯೂ ಇರಲಿಲ್ಲ. ಆದರೂ ನನ್ನಂತವಳ ಕೈಯಲ್ಲಿ ಪ್ರೇಮ ಪತ್ರ ಬರೆಸುತ್ತಿರುವ ನಿನಗೆ ಮೊದಲು ನನ್ನದೊಂದು ಶುಭಾಶಯ. ಎಲ್ಲರಂತೆ ನೀನಲ್ಲ ಎಂಬ ವಿಶೇಷ ಹೆಮ್ಮೆಯೊಂದಿಗೆ ಈ ಪತ್ರ ಬರೆಯುತ್ತಿದ್ದೇನೆ. ಮೊದಲ ಬಾರಿ ಎಲ್ಲರೂ ಹುಡುಗಿಯರ ಮುಖವನ್ನು ನೇರವಾಗಿ ನೋಡುತ್ತಾರೆ ಆದರೆ, ಅತಿ ಹೆಚ್ಚು ಸಂಕೋಚ ಸ್ವಭಾವದ ನೀನು ತಲೆ ಎತ್ತಿ ಹುಡುಗಿಯರನ್ನು ನೋಡುವವನೇ ಅಲ್ಲ ಎಂಬುದು ನನಗೆ ತಿಳಿದಿತ್ತು. ನಿನ್ನ ಕಣ್ಣಿನೊಳಗೆ ಬೀಳುವ ಹಂಬಲ ನನಗೂ ಇತ್ತು. ಆದರೂ ನಿನ್ನೆದುರು ಸುಳಿದು ಸುತ್ತಿ ನಾನು ಈ ಪ್ರಯತ್ನದಲ್ಲಿ ಸೋತು ಹೋಗಿದ್ದೆ. ಹೇಗೋ ಅಚಾನಕ್ ಆಗಿ ಮೊದಲು ನನ್ನನ್ನು ಕ್ಯಾಮೆರಾ ಕಣ್ಣಿನಿಂದ ನೋಡಿ ನೀನು ಇಷ್ಟಪಡುವಂತಾಗಿದ್ದು ಭಿನ್ನ.

ಮೊದಲ ಬಾರಿ ಏನು ಉಡುಗೊರೆ ತರಬೇಕು ಎಂದು ನೀನು ಕೇಳಿದಾಗ ಏನಾದರೂ ಆಗುತ್ತೆ ಎಂದು ಹೇಳಿದ್ದೆ. ಆದರೂ ಒತ್ತಾಯಿಸಿ ಕೇಳಿದಾಗ ಒಂದು ಬ್ರೇಸ್ಲೈಟ್ ಕೇಳಿದ್ದೆ. ಇದುವರೆಗೂ ತನ್ನ ತಂಗಿಗೂ ಅಂಥದನ್ನು ಕೊಡಿಸಿರದ ಕಾರಣ ಅದೇನು ಎಂಬುದನ್ನೇ ಅರಿಯದೆ. ವಿಧವೆಯರು ಕೈಯಿಂದಲೇ ತಯಾರಿಸಿದ ಮೌಲ್ಯಯುತ ಖಾದಿ ಕರವಸ್ತ್ರ ತಂದದ್ದು ಇನ್ನು ಜೋಪಾನವಾಗಿದೆ. ಇದುವರೆಗೆ ಒಂದು ಬಾರಿಯೂ ನನ್ನ ಹೆಸರಿನಿಂದ ಎದುರು ಕರೆಯದ ನಿನಗೆ ನನ್ನ ಹೆಸರಾದರೂ ನೆನಪಿದೆಯಾ? ಇಲ್ಲಾ ಮರೆತು ಹೋಗಿದೆಯಾ? ಎಂದು ಆಗಾಗ ನಿನ್ನ ಕೆಣಕುವ ಖುಷಿಯನ್ನು ನೀನು ಒದಗಿಸಿದ್ದರಲ್ಲಿ ಭಿನ್ನ.

ಎಲ್ಲರಿಗೂ ತಿರುಗೋಕೆ ಪಾರ್ಕ್ ಒಂದು ಸೂಕ್ತ ಜಾಗವೆನಿಸಿದರೆ. ಗ್ರಂಥಾಲಯ ಸೂಕ್ತ ಎಂದು ಸೂಚಿಸುವ ನಿನ್ನ ಆಲೋಚನೆ ಭಿನ್ನ. ಈ ತಂತ್ರಜ್ಞಾನದ ಕಾಲದಲ್ಲಿಯೂ ಪೋಸ್ಟ್​ ಮೂಲಕ ಪತ್ರ ಕಳಿಸುವ ನಿನ್ನ ಪ್ರೀತಿ ಭಿನ್ನ. ಸದಾಕಾಲ ಹರಟುತ್ತಲೇ ಕಾಲ ಕಳೆಯ ಬೇಕೆಂದೇನಿಲ್ಲ ಒಬ್ಬರ ಏಳ್ಗೆಯಲ್ಲಿ ಇನ್ನೊಬ್ಬರು ಖುಷಿ ಕಂಡು ಕೊಳ್ಳೋಣ ಎಂಬ ಮಾತುಗಳಲ್ಲಿನ ನಿನ್ನ ಪ್ರಬುಧ್ದತೆ ಭಿನ್ನ. ಈ ಎಲ್ಲ ಭಿನ್ನತೆಗಳೊಡನೆ ನನಗೆ ಸಾಮ್ಯವಾಗಿರುವ ನೀನು ಖುಷಿಯಾಗಿರು. ಹಿಂದಿಗಿಂತ ಇಂದಿಗೆ ನೀನು ಎಷ್ಟು ಭಿನ್ನವಾಗಿದ್ದೀಯ ಎನ್ನುವುದಕ್ಕೆ ಉದಾಹರಣೆಯೆಂದರೆ.. ಎಂದಿಗೂ ಅಂಗಿಯ ತೋಳುಗಳನ್ನು ಮಡಿಸದ ನೀನು ನನ್ನ ಒತ್ತಾಯಕ್ಕೆ ಮಣಿದು ಮೊಣಕೈವರೆಗೆ ತೋಳು ಮಡಿಸುತ್ತೀಯ. ಗಡಿಯಾರ ಕಟ್ಟದ ಕೈಗಳು ಇಂದು ಸಮಯ ನೋಡಲು ಸಿದ್ದವಾಗಿವೆ. ನಗುವೇ ಬಾರದವನಂತೆ ಪೋಟೋಗಳಿಗೆ ಪೋಸ್ ನೀಡುತ್ತಿದ್ದ ನಿನ್ನ ಮುಖ ಈಗೀಗ ಕ್ಯಾಮರಾ ಎದುರಾದರೆ ನಗುವ ಹವ್ಯಾಸ ಬೆಳೆಸಿಕೊಂಡಿವೆ. ಈ ಎಲ್ಲಾ ಕಾರಣಕ್ಕೆ ನೀನು ನನಗೆ ಇನ್ನೂ ಹತ್ತಿರವಾಗಿದ್ದೀಯ.

ನಾನು ಅತ್ತಾಗ ಸಮಾಧಾನ ಪಡಿಸಿ, ನಕ್ಕಾಗ ನನ್ನ ನಗುವಲ್ಲಿ ಬೆರೆತು, ಅತಿಯಾಗಿ ಹಿಗ್ಗಿದಾಗ ಎಚ್ಚರಿಕೆ ನೀಡಿ, ಕುಗ್ಗಿ ಹೋದಾಗ ಎತ್ತಿಹಿಡಿದು ಸಂತೈಸುವ ನೀನು ನನ್ನ ಪ್ರೀತಿ. ಕದ್ದು ಕದ್ದು ಕನಸು ಕಾಣುವ ಮನದ ಮೂಲೆಯಲ್ಲಿ ಕೆಲವೊಮ್ಮೆ ಹೊಸ ಸಂಚಲನ ಸೃಷ್ಟಿಸುವ ನಿನ್ನ ಇರುವಿಕೆಯು ಕಠಿಣ ಸಂದರ್ಭದಲ್ಲಿಯೂ ಮನಸಿಗೆ ಮುದ ನೀಡುತ್ತದೆ‌. ನಾನು ಈಗ ಪ್ರೀತಿಯಲ್ಲಿ ಬೀಳಬೇಕು, ನನಗೂ ಒಬ್ಬ ಗೆಳೆಯ ಬೇಕು ಎಂಬ ಹಾಡಿನಲ್ಲಿ ಮುಳುಗುವ ಮೊದಲೇ, ಕಾಯ್ಕಿಣಿಯವರ ಊಹಿಸಿರಲಿಲ್ಲ ನಿನ್ನ ನೋಡುವ ತನಕ, ಒಂದು ಭಾವನೆ ಇಷ್ಟು ತೀವ್ರವೆಂದು. ಊಹಿಸಿರಲಿಲ್ಲ ನಿನ್ನ ಕಾಣುವ ತನಕ ಹಾಡಿನಲ್ಲಿಯೇ ನಾನು ಮುಳುಗಿಹೋಗಿದ್ದೇನೆ.

ಸುಮಾ ಕಂಚೀಪಾಲ

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ