ಸಂಜೆಯ ವೇಳೆ ಮಲಗಬಾರದು ಎಂದು ಹೇಳೋದೇಕೆ?

ಸಂಧ್ಯಾಕಾಲವನ್ನು ನಿರ್ಮಲ, ಪ್ರಶಾಂತ, ವಿಕಾರ ರಹಿತ, ವಿಶ್ರಾಂತಿಮಯ ಹಾಗೂ ಸೂಕ್ಷ್ಮ ಕಾಲ ಎನ್ನಲಾಗುತ್ತೆ. ಈ ಸಮಯದಲ್ಲಿ ಮನುಷ್ಯ ವಿಕಾರಗಳಿಂದ ನಿವೃತ್ತಿ ಹೊಂದಿದ ಮನಸ್ಸನ್ನು ಪಡೆಯಲು ಸಾಧ್ಯವಾಗುತ್ತೆ.

ಸಂಜೆಯ ವೇಳೆ ಮಲಗಬಾರದು ಎಂದು ಹೇಳೋದೇಕೆ?
ಸೌಜನ್ಯ : ಅಂತರ್ಜಾಲ
Follow us
ಆಯೇಷಾ ಬಾನು
|

Updated on: May 03, 2021 | 6:38 AM

ಹಿಂದೂ ಸಂಪ್ರದಾಯದ ಪ್ರಕಾರ ಇತ್ತ ಹಗಲೂ ಅಲ್ಲದ, ಅತ್ತ ಇರುಳೂ ಅಲ್ಲದ ಸಮಯವನ್ನು ಮುಸ್ಸಂಜೆ ಅಥವಾ ಸಂಧ್ಯಾಕಾಲ ಎನ್ನಲಾಗುತ್ತೆ. ಸಂಧ್ಯಾಕಾಲ ಬೆಳಗಿನ ಧಾವಂತ ಹಾಗೂ ರಾತ್ರಿಯ ವಿಕಾರ ಎರಡನ್ನೂ ಹೊಂದಿರುವುದಿಲ್ಲ ಅಂತಲೂ ಹೇಳಲಾಗುತ್ತೆ. ಕೆಲ ಪುರಾಣಗಳ ಪ್ರಕಾರ, ಸಂಧ್ಯಾ ತತ್ವವನ್ನು ಪರಬ್ರಹ್ಮ ತತ್ವ ಎನ್ನಲಾಗುತ್ತೆ. ಭಗವಂತನು ಪ್ರಪಂಚಕ್ಕೆ ಅಂಟಿಕೊಂಡಿರುವುದಿಲ್ಲ. ಆದ್ರೆ ಅಂಟಿಕೊಂಡವನಂತೆ ಪ್ರಪಂಚವನ್ನು ಪ್ರೀತಿಯಿಂದ ಪರಿಪಾಲಿಸುತ್ತಿದ್ದಾನೆ ಅಂತಾ ಕೆಲ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.

ಸಂಧ್ಯಾಕಾಲವನ್ನು ನಿರ್ಮಲ, ಪ್ರಶಾಂತ, ವಿಕಾರ ರಹಿತ, ವಿಶ್ರಾಂತಿಮಯ ಹಾಗೂ ಸೂಕ್ಷ್ಮ ಕಾಲ ಎನ್ನಲಾಗುತ್ತೆ. ಈ ಸಮಯದಲ್ಲಿ ಮನುಷ್ಯ ವಿಕಾರಗಳಿಂದ ನಿವೃತ್ತಿ ಹೊಂದಿದ ಮನಸ್ಸನ್ನು ಪಡೆಯಲು ಸಾಧ್ಯವಾಗುತ್ತೆ. ಆದ್ದರಿಂದಲೇ ಸಂಧ್ಯಾಕಾಲವನ್ನು ಸಾಧನೆಗೆ ಬಹಳ ಪ್ರಶಸ್ತವಾದ ಸಮಯ ಎನ್ನಲಾಗುತ್ತೆ. ಕೆಲ ಗ್ರಂಥಗಳ ಪ್ರಕಾರ, ಸಾಧನೆಗೆ ಕಾಲವು ಬಹಳ ಮುಖ್ಯ ಅಂತಾ ಹೇಳಲಾಗುತ್ತೆ. ಇದೇ ಕಾರಣಕ್ಕೆ ಸಾಧನೆಗೆ ಸೂಕ್ತವಾದ ಸಂಧ್ಯಾಕಾಲವನ್ನು ಅತ್ಯಂತ ಶ್ರೇಷ್ಠ ಎನ್ನಲಾಗುತ್ತೆ. ಪುರಾಣಗಳ ಪ್ರಕಾರ, ಸೂರ್ಯ ತೇಜೋಮಂಡಲ ಹಾಗೂ ಜ್ಯೋತಿರ್ಮಂಡಲ. ಇದೇ ಕಾರಣಕ್ಕೆ ಸೂರ್ಯನ ಹೆಸರನ್ನು ಭರ್ಗವಾ ಅಂತಾ ಕೂಡ ಕರೆಯಲಾಗುತ್ತೆ. ಸೂರ್ಯಮಂಡಲದಲ್ಲಿ ಅಂತರ್ಗತವಾದ ಭರ್ಗ ಅತ್ಯಂತ ಶ್ರೇಷ್ಠವಾದ ತೇಜಸ್ಸು ಎನ್ನಲಾಗುತ್ತೆ. ಆ ತೇಜಸ್ಸು ಸಂಧ್ಯಾ ಸಮಯದಲ್ಲಿ ಭೂಮಿಗಿಳಿದು ಬರುತ್ತೆ ಹಾಗೂ ಪ್ರಾಣಶಕ್ತಿ ಪ್ರಸರಣಕ್ಕೆ ಬೇಕಾದ ಚೈತನ್ಯವನ್ನು ಕೊಡುತ್ತೆ ಅಂತಾ ಕೆಲ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಇಂತಹ ಸಮಯದಲ್ಲಿ ಮಲಗುವುದು, ನಿದ್ದೆ ಮಾಡುವುದು, ಊಟ-ತಿಂಡಿಗಳನ್ನು ಮಾಡುವುದು ನಿಷಿದ್ಧ ಅಂತಾ ಶಾಸ್ತ್ರಗಳು ಹೇಳುತ್ತವೆ.

ಬದಲಾಗಿ ಸಂಧ್ಯಾ ಸಮಯದಲ್ಲಿ ಸೂರ್ಯನನ್ನು ಆರಾಧಿಸಿದ್ರೆ ಸೂರ್ಯನ ಶಕ್ತಿ ಹಾಗೂ ತೇಜಸ್ಸು ಪ್ರಾಪ್ತಿಯಾಗುತ್ತೆ ಎನ್ನಲಾಗುತ್ತೆ. ಯಾಕಂದ್ರೆ ಸಂಧ್ಯಾಕಾಲದ ಆರಾಧ್ಯದೇವತೆ ಸಂಧ್ಯಾ. ಆದಿತ್ಯನಲ್ಲಿರುವ ಚೈತನ್ಯ ಶಕ್ತಿಯೇ ಸಂಧ್ಯಾರೂಪಳಾದ ಸಂಧ್ಯಾದೇವಿ ಎನ್ನಲಾಗುತ್ತೆ. ಸಂಧ್ಯಾ ಸಮಯ ಎಂತಹ ಪ್ರಶಸ್ತವಾದ ಸಮಯವೆಂದರೆ, ಈ ಸಮಯದಲ್ಲಿ ಸಂಧ್ಯಾದೇವಿ ಜೊತೆಗೆ ಇತರೆ ದೇವತೆಗಳನ್ನೂ ಆರಾಧಿಸಿದ್ರೆ ಆ ದೈವಗಳ ಕೃಪೆ ನಮ್ಮ ಮೇಲಾಗುತ್ತೆ ಅಂತಾ ಪುರಾಣಗಳು ಹೇಳುತ್ತವೆ. ಸಂಧ್ಯಾ ಸಮಯದಲ್ಲಿ ಯಾವುದೇ ದಿವ್ಯ ಮಂತ್ರವನ್ನು ಉಚ್ಚರಿಸಿದರೆ ಆ ಮಂತ್ರದೇವತೆಯ ಅನುಗ್ರಹ ಪ್ರಾಪ್ತಿಯಾಗುತ್ತೆ. ಇದಿಷ್ಟೇ ಅಲ್ಲದೇ, ಸಂಧ್ಯಾಕಾಲದಲ್ಲಿ ಉಪಾಸನೆ ಮಾಡುವುದರಿಂದ ನಮ್ಮ ಅಸಲಿ ಸ್ವರೂಪವೇನು ಅನ್ನೋದು ತಿಳಿಯುತ್ತೆ ಅಂತಾ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗೇ ಸಂಧ್ಯಾ ಸಮಯದಲ್ಲಿ ಊಟ-ತಿಂಡಿ, ನಿದ್ರೆ ವಿಷಯವನ್ನು ಮರೆತು, ಧ್ಯಾನದಲ್ಲಿ ತಲ್ಲೀನರಾಗಬೇಕು. ನಂತರ ಆ ಸಮಯದಲ್ಲಿ ಸಂಧ್ಯಾದೇವಿಯನ್ನೋ ಅಥವಾ ತಮ್ಮ ಇಷ್ಟದೈವವನ್ನೋ ಆರಾಧಿಸಬೇಕು ಎನ್ನಲಾಗುತ್ತೆ. ಸಕಾಲದಲ್ಲಿ ಬಿತ್ತಿದ ಬೀಜ ಫಲ ಕೊಡುವಂತೆ ಸಂಧ್ಯೋಪಾಸನೆ ಬಹು ಫಲಪ್ರದವಾದದ್ದು ಅಂತಾ ನಮ್ಮ ಧರ್ಮಶಾಸ್ತ್ರ ಹೇಳುತ್ತೆ.

ಇದನ್ನೂ ಓದಿ: ದೇವರ ಸ್ತೋತ್ರವನ್ನು ಪಠಿಸಿದ್ರೆ ಆಗುವ ಅನುಕೂಲವೇನು?

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ