Women’s Day Special : ಮಹಿಳೆಯ ಶೋಷಣೆ ಆಕೆಯ ಸಾಧನೆಗೆ ಮಾರಕವಾಗಬಾರದು

Women's Day Special :ಕೆಲವು ದೌರ್ಜನ್ಯ ಮತ್ತು ಶೋಷಣೆಗಳು ಆಕೆಯ ಮೇಲೆ ನಡೆಯುತ್ತಲೇ ಇವೆ ಅತ್ಯಾಚಾರ , ಹೆಣ್ಣು ಭ್ರೂಣ ಹತ್ಯೆ , ವೇಶ್ಯಾವಾಟಿಕೆ ಹೀಗೆ ಆಕೆಯನ್ನು ಸಮಾಜ ಒಂದಲ್ಲ ಒಂದು ರೀತಿ ಶೋಷಿಸುತ್ತಲೇ ಬಂದಿದೆ

Women's Day Special : ಮಹಿಳೆಯ ಶೋಷಣೆ ಆಕೆಯ ಸಾಧನೆಗೆ ಮಾರಕವಾಗಬಾರದು
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 08, 2022 | 7:15 AM

ಯಾತ್ರಾನರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತ ಎನ್ನುವ ಮಾತು ಬಹಳ ವರ್ಷಗಳಿಂದ ಕೇಳುತ್ತಿರುವೆವು, ಎಲ್ಲಿ ಹೆಣ್ಣನ್ನು ಪೂಜಿಸಲಾಗುತ್ತದೆಯೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂದರ್ಥ ಆದರೆ ಈ ಮಾತಿಗೆ ಬೇರೆ ದೇಶಗಳಿಗಿಂತ ವಿಭಿನ್ನ ರೀತಿಯಲ್ಲಿ ಭಾರತವನ್ನು ಕಾಣಬಹುದು ನಮ್ಮಲ್ಲಿ ಸಂಸ್ಕೃತಿ ಕಲೆಗಳಿಗೆ ಮೊದಲಿನಿಂದಲೂ ಹೆಚ್ಚಿನ ಬೆಲೆ ಕೊಟ್ಟವರು ಮಹಿಳೆ ಸಂಸಾರದ ಕಣ್ಣು ಎಂದು ಕರೆಯುವುದು ಹೆಣ್ಣು ವಿಶಿಷ್ಟ ಶಕ್ತಿಗಳ ಸಂಗಮ ಮಮತೆ ಕರುಣೆ ವಾತ್ಸಲ್ಯ ಅಕ್ಕರೆ ಮತ್ತು ಭೂಮಿತೂಕದ ತಾಳ್ಮೆ ಯುಳ್ಳ ಮಹಿಳೆ ಒಂದು ದೇಶದ ಪ್ರಬಲ ಶಕ್ತಿ ಎನ್ನುವುದರಲ್ಲಿ ಅತಿಶಯೋಕ್ತಿಯಿಲ್ಲ ಆಕೆಯನ್ನು ಹಿಂದಿನಿಂದದಲೂ ಅಬಲೆ ಎಂದೇ ಕಾಣುತ್ತಿದ್ದರು ಆದರೆ ಇತ್ತೀಚೆಗೆ ಹಲವು ವರ್ಷಗಳಿಂದ ಆಕೆ ತಾನು ಅಬಲೆ ಅಲ್ಲ ಸಬಲೇ ಎಂದು ನಿರೂಪಿಸಿ ಆರ್ಥಿಕವಾಗಿ, ರಾಜಕೀಯವಾಗಿ ದೇಶವನ್ನು ಕಟ್ಟುವಲ್ಲಿ ಒಂದು ಸದೃಢವಾದ ದಿಟ್ಟ ಹೆಜ್ಜೆಯನ್ನು ಇಟ್ಟಿದ್ದಾಳೆ.

ನಮ್ಮಲ್ಲಿರುವ ಮುಖ್ಯ ದೇವರುಗಳು ಸಹ ಸ್ತ್ರೀ ದೇವತೆಗಳು ಲಕ್ಷ್ಮಿ ,ಸರಸ್ಪತಿ, ಪಾರ್ವತಿ ಮತ್ತು ನಮ್ಮ ದೇಶದಲ್ಲಿ ಹರಿಯುವ ನದಿಗಳಿಗು ಸಹ ಹೆಣ್ಣಿ ನ ಹೆಸರಿಟ್ಟಿರುವುದೇ ಭಾರತ ಹೆಣ್ಣನ್ನು ಗೌರವಿಸುವ ರೀತಿ ಕಾಣಬಹುದು , ಹೆಣ್ಣು ಇಷ್ಟೆಲ್ಲ ಸಬಲೇ ಆಗಿದ್ದರು ಇಂದು ಆಕೆಯನ್ನು ಸಮಾಜ ನೋಡುವ ರೀತಿ ಭಿನವಾಗಿದೆ ಮತ್ತು ಕೆಲವು ದೌರ್ಜನ್ಯ ಮತ್ತು ಶೋಷಣೆಗಳು ಆಕೆಯ ಮೇಲೆ ನಡೆಯುತ್ತಲೇ ಇವೆ ಅತ್ಯಾಚಾರ , ಹೆಣ್ಣು ಭ್ರೂಣ ಹತ್ಯೆ , ವೇಶ್ಯಾವಾಟಿಕೆ ಹೀಗೆ ಆಕೆಯನ್ನು ಸಮಾಜ ಒಂದಲ್ಲ ಒಂದು ರೀತಿ ಶೋಷಿಸುತ್ತಲೇ ಬಂದಿದೆ, ಇವೆಲ್ಲದರಿಂದ ಮುಕ್ತಗೊಳಿಸಲು ಕಾನೂನುಗಳು ಬಂದರು ಅದರಿಂದ ಉಪಯೋಗವಾಗುತ್ತಿಲ್ಲ ಇನ್ನಷ್ಟು ಕಠಿಣ ಕ್ರಮಗಳ ಮೂಲಕ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ನಿರ್ಮೂಲನೆ ಮಾಡಬೇಕು.

ಶೋಷಿತ ಹೆಣ್ಣುಮಕ್ಕಳಿಗೆ ದೈರ್ಯವನ್ನು ತುಂಬುವಂತಹ ಕೆಲಸಗಳು ಆಗಬೇಕು, ಸ್ತ್ರೀಯನ್ನು ನೋಡುವ ದೃಷ್ಟಿಕೋನ ಬದಲಾಗಬೇಕು, ಸಂಸ್ಕೃತಿ ಹೆಸರಲ್ಲಿ ಆಕೆಯನ್ನು ಕಟ್ಟಿ ಹಾಕುವ ಪದ್ದತಿ ಬದಲಾವಣೆ ಆದರೆ ಮಾತ್ರ ಸದೃಢ ಭಾರತ ನಿರ್ಮಾಣ ಮಾಡಲು ಸಾದ್ಯ,ಭಾರತದ ಪ್ರಧಾನಿ ಯಾಗಿ ದೇಶದ ಆಡಳಿತ ನಡೆಸಿದ ಧೀಮಂತ ಮಹಿಳೆ ನಮಗೆ ಒಂದು ನಿದರ್ಶನವಾಗಿಯಿದೆ, ಮಹಿಳೆಯರು ಇಂದು ಸಾಧನೆಯ ಹಾಡಿಯಲ್ಲಿದ್ದರು ಈ ದೌರ್ಜನ್ಯಗಳು ಆಕೆಯ ಸಾಧನೆಗೆ ಮಾರಕವಾಗಿದೆ , ಹಾಗಾಗಿ ಈ ಬಾರಿಯ ಮಹಿಳಾ ದಿನಾಚರಣೆ ಶೋಷಿತ ಮಹಿಳೆಯರಿಗೆ ಧೈರ್ಯ ಸ್ಪೂರ್ತಿಯನ್ನು ತುಂಬಲಿ.

ಐಶ್ವರ್ಯ ಕೆ ಆರ್  ವಿಜಯನಗರ