World Chocolate Day 2021 : ದಿಶಾಳ ‘ಪೆಟ್ಟಿಗೆ ಅಂಗಡಿ’ ನೀತೂಳ ‘ಔಷಧಿ ಬಾಟಲಿ‘

Chocolate Lovers : ಪಟಪಟಪಟ ಅಂತ ಮಾತನಾಡೋ ‘ಗಾಳಿಪಟ‘ದ ಹುಡುಗಿ ನೀತು ಶೆಟ್ಟಿ ಔಷಧಕ್ಕೂ ಚಾಕೋಲೇಟ್ ಮಿಕ್ಸ್ ಮಾಡಿ ಗುಳುಂ! ರಂಗಕಲಾವಿದೆ ದಿಶಾ ರಮೇಶ್​ಗೆ ಈಗಲೂ ಪೆಟ್ಟಿಗೆಯಂಗಡಿಯ ಗಾಜಿನ ಬಾಟಲಿಗಳೊಳಗಿನ ಚಾಕೋಲೇಟಂದ್ರೆ ಪ್ರಾಣ!

World Chocolate Day 2021 : ದಿಶಾಳ ‘ಪೆಟ್ಟಿಗೆ ಅಂಗಡಿ’ ನೀತೂಳ ‘ಔಷಧಿ ಬಾಟಲಿ‘
ರಂಗಕಲಾವಿದೆ ದಿಶಾ ರಮೇಶ ಮತ್ತು ಸಿನೆಮಾ ನಟಿ ನೀತು ಶೆಟ್ಟಿ
Follow us
ಶ್ರೀದೇವಿ ಕಳಸದ
|

Updated on:Jul 07, 2021 | 11:50 AM

ಒಮ್ಮೆ ನಿಮ್ಮ ಹಳೆಯ ಪುಸ್ತಕ ತೆಗೆದು ನೋಡಿ. ಪುಟಗಳ ನಡುವೆ ನಿಮ್ಮ ಪ್ರಿಯರು ಕೊಟ್ಟ ಚಾಕೋಲೇಟಿನ ರ್ಯಾಪರ್​ಗಳು ಈಗಲೂ ಸಿಕ್ಕರೂ ಸಿಗಬಹುದು. ಹಾಗೆಯೇ ಅದರೊಂದಿಗಿನ ನೆನಪುಗಳೂ, ಹುಚ್ಚುತನಗಳೂ, ಜಗಳಗಳೂ, ಹಟಗಳೂ, ಕೋಪದುಂಡೆಗಳು, ಸಿಹಿಕನಸುಗಳೂ… ಹೀಗೆ ಏನೇನೆಲ್ಲ  ನೆನಪುಗಳು ನಿಮ್ಮ ಮನಸ್ಸಿನಲ್ಲಿ ಗುಡ್ಡೆ ಹಾಕಿಕೊಳ್ಳಬಹುದು. ಚಾಕೋಲೇಟ್! ಆ ಶಬ್ದದ ಮೋಡಿಯೇ ಅಂಥದ್ದು. ಅದರ ನೆನಪು ಜಾರೋದು ನೇರ ಬಾಲ್ಯಕ್ಕೇ. ಈವತ್ತು ‘ವಿಶ್ವ ಚಾಕೋಲೇಟ್ ದಿನ- World Chocolate Day 2021’ ನಮ್ಮ ಕನ್ನಡ ಸಿನೆಮಾ ನಟಿ ನೀತು ಶೆಟ್ಟಿ ಮತ್ತು ರಂಗಕಲಾವಿದೆ ದಿಶಾ ರಮೇಶ ಅವರಿಗೆ ಚಾಕೋಲೇಟ್ ಎಂದಾಕ್ಷಣ ಈ ಕ್ಷಣಕ್ಕೆ ಏನು ನೆನಪಾಗುತ್ತಿದೆ ಎಂದು ಕೇಳಿದಾಗ ಒಂದೆರಡು ಎಳೆಗಳನ್ನವರು ಬಿಡಿಸಿಕೊಂಡು ಇಲ್ಲಿಗೆ ಕಳಿಸಿದರು. ನೀತುಗೆ ಈಗಲೂ ಕಿಟ್ ಕ್ಯಾಟ್ ಇಷ್ಟ. ದಿಶಾಗೆ ಪೆಟ್ಟಿಗೆಯಂಗಡಿಯ ಐವತ್ತು ಪೈಸೆ ಚಾಕೋಲೇಟೇ ಇಷ್ಟ. ಹಾಗಿದ್ದರೆ ನಿಮಗೆ ಯಾವ ಯಾವ ಚಾಕೋಲೇಟ್ ಇಷ್ಟ? ಈ ದಿನ ಒಂದು ತುಣುಕಾದರೂ ತಿಂದು ನಿಮ್ಮ ಬಾಲ್ಯವನ್ನು ನೆನಪಿಸಿಕೊಳ್ಳಿ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ನಿಮ್ಮ ಮನಸ್ಸನ್ನು ಫ್ರೆಷ್ ಮಾಡಿಕೊಳ್ಳಿ, ಜೀವನದಲ್ಲಿ ಜಂಜಾಟಗಳು ಮುಗಿಯುವಂಥವೆ? 

*

ಔಷಧಕ್ಕೂ ಚಾಕೋಲೇಟ್!

ನಾನು ಮಧ್ಯಮ ವರ್ಗದ ಹಿನ್ನೆಲೆಯಿಂದ ಬಂದವಳು. ನಮ್ಮ ಅತ್ತಾವರದ ಮನೆಯಲ್ಲಿ ನಾನು ಮತ್ತು ತಂಗಿ ಏನಾದರೂ ಕೆಲಸ ಮಾಡಿ ಅಮ್ಮನಿಂದ ಪ್ರಶಂಸೆ ತೆಗೆದುಕೊಂಡರೆ ಮಾತ್ರ ನಮಗಾಗ ಚಾಕೋಲೇಟ್ ಸಿಗುತ್ತಿತ್ತು. ಆಗಷ್ಟೇ ಕಿಟ್​ ಕ್ಯಾಟ್ ಬಂದಿತ್ತು. ಟಿವಿಯಲ್ಲಿ ಅದರ​ ಅಡ್ವರ್ಟೈಸ್​ಮೆಂಟ್ ನೋಡಿ ಆಸೆಯಾಗೋದು. ಆ ಕೆಂಪು ಬಣ್ಣದ ರ್ಯಾಪರ್, ಅದರೊಳಗಿನ ವೇಫರ್, ಚಾಕೋ ಲೇಯರ್… ಅಷ್ಟೊತ್ತಿಗೆಲ್ಲ ಚಿಕ್ಕಪುಟ್ಟ ಚಾಕೋಲೇಟ್ ತಿಂತಿದ್ದೆವಾದರೂ ಅದರೊಳಗೆ ಕೋಕೋ ಇರುತ್ತಿರಲಿಲ್ಲ. ಹಾಗಾಗಿ ಕಿಟ್​ ಕ್ಯಾಟ್ ಬಂದಾಗ ಸಖತ್ ಥ್ರಿಲ್ ಆಗಿತ್ತು. ಅಮ್ಮ ಆಫೀಸಿನಿಂದ ಬರುವಾಗ ಪ್ಲಾಸ್ಟಿಕ್​ ಕವರಿನಲ್ಲಿ ಹಾಕಿಕೊಂಡು ನಮಗೆ ಗೊತ್ತಿಲ್ಲದ ಹಾಗೆ ತಂದಿಡಲು ಪ್ರಯತ್ನಿಸುತ್ತಿದ್ದರು. ಆದರೆ, ಆ ರ್ಯಾಪರ್ ನೋಡ್ತಿದ್ದ ಹಾಗೆ ನಮಗೆ ಗೊತ್ತಾಗಿ ಖುಷಿ ಆಗೋದು. ಅದಕ್ಕಾದರೂ ಅಮ್ಮ ಹೇಳಿದ ಕೆಲಸ ಮಾಡಬೇಕು ಅಂತ ಮಾಡಿ ಮುಗಿಸುತ್ತಿದ್ದೆವು. ಬರ್ತಾ ಬರ್ತಾ ಎಲ್ಲದರಲ್ಲಿಯೂ ಚಾಕೋಲೇಟ್. ನಾನಂತೂ ಔಷಧಿ ಕುಡಿಯೋವಾಗ ಕಹಿಯಿಂದ ತಪ್ಪಿಸಿಕೊಳ್ಳೋದಕ್ಕೆ ಚಾಕೋಲೇಟ್ ಮಿಕ್ಸ್ ಮಾಡಿಕೊಂಡು ಕುಡಿದಿದ್ದಿದೆ! ಈಗಲೂ ತಿಂತೀನಿ. ಆದರೆ ಮೊದಲಿನಷ್ಟಲ್ಲ. ಮನಸ್ಸು ಕುಗ್ಗಿದಾಗ ಮೂಡ್​ ಸರಿ ಮಾಡಿಕೊಳ್ಳೋದಕ್ಕೆ ಒಂದೇ ಒಂದು ಸ್ಲೈಸ್ ತಿಂತೀನಿ. ನೀತು ಶೆಟ್ಟಿ, ಸಿನೆಮಾ ನಟಿ

* ಈಗಲೂ ಪೆಟ್ಟಿಗೆಯಂಗಡಿ ಚಾಕೋಲೇಟ್ ಇಷ್ಟ

ಚಾಕೋಲೇಟ್ ಅನ್ನೋ ಪದಾನೇ ಖುಷಿ ಕೊಡುವಂಥದ್ದು. ಎಂಥಾ ಸಂದರ್ಭದಲ್ಲೂ ಒಂದು ಚಾಕೋಲೇಟ್ ಬಾಯಿಗೆ ಹಾಕಿಕೊಂಡ ತಕ್ಷಣ ಒಂಥರಾ ಶಕ್ತಿ ಕೊಡುತ್ತೆ. ಚಿಕ್ಕವಯಸ್ಸಿನಿಂದಲೂ ಇಪ್ಪತ್ತೈದು ಪೈಸೆ ಚಾಕೋಲೇಟ್​ನಿಂದ ಫಾರಿನ್ ಚಾಕೋಲೇಟ್​ಗಳನ್ನೆಲ್ಲಾ ತಿಂದುಕೊಂಡು ಬಂದಿದೀನಿ. ಈಗಲೂ ಚಾಕೋಲೇಟ್ ಅಂದ್ರೆ ನಮ್ಮ ಸ್ಕೂಲ್ ಹತ್ತಿರ ಪೆಟ್ಟಿಗೆ ಅಂಗಡಿಗಳಲ್ಲಿ ಸಿಗುತ್ತಿದ್ದ ಚಾಕೋಲೇಟ್​ಗಳೇ ಇಷ್ಟ. ಈಗಲೂ ಬಾಯಲ್ಲಿ ನೀರು ಬರುತ್ತೆ. ಅಪ್ಪ ಆಗಲಿ ನಾನಾಗಲೀ ಫಾರಿನ್​ಗೆ ಹೋಗಿ ಬರೋವಾಗ ಒಂದಷ್ಟು ಚಾಕೋಲೇಟ್ ತರ್ತೀವಿ, ಸ್ನೇಹಿತರಿಗೆ ಸಂಬಂಧಿಕರಿಗೆ ಕೊಡೋದಕ್ಕೆ.

ನಮ್ಮ ಅಪ್ಪ, ಅಮ್ಮ ಮತ್ತೆ ನಾನು ಬೇರೆಬೇರೆಯಾಗಿ ಚಾಕೋಲೇಟ್​ಗಳನ್ನು ತೆಗೆದಿಟ್ಟುಕೊಳ್ತೀವಿ. ಅಂದರೆ ನಮಗೆ ಬೇಕಾದವರಿಗೆ ಕೊಡೋದಕ್ಕೆ ಅಂತ. ಆದರೆ ನಾನೊಬ್ಬಳೇ ಜಾಸ್ತಿ ತೆಗೆದಿಟ್ಟುಕೊಳ್ತೀನಿ ಅನ್ಕೊಂಬಿಟ್ಟಿದ್ದೆ. ಆದರೆ ಕ್ರಮೇಣ ಗೊತ್ತಾಗ್ತಾ ಹೋಯ್ತು. ನಮ್ಮ ಅಪ್ಪನ ಪರ್ಸ್​ನಲ್ಲಿ, ಅಮ್ಮನ ಡ್ರೆಸ್ಸಿಂಗ್ ಟೇಬಲ್​ನಲ್ಲಿ ಕೂಡ ಎಕ್ಸ್ಟ್ರಾ ಚಾಕೋಲೇಟ್ ಇರ್ತಾವೆ ಅಂತ. ಇವರಿಗೂ ಇಷ್ಟು ಹುಚ್ಚು ಇದೆ ಆದರೆ ಹೇಳ್ಕೊಳ್ತಿಲ್ಲ ಅಂತ ಗೊತ್ತಾಗ್ತಾ ಹೋಯ್ತು. ಇಷ್ಟೆಲ್ಲಾ ಇದ್ದರೂ ನನಗೆ ಯಾವ ಕ್ಷಣಕ್ಕೂ ಇಷ್ಟ ಆಗೋದು ಐವತ್ತು ಪೈಸೆ ಚಾಕೋಲೇಟ್. ಒಂದುರೂಪಾಯಿಗೆ ಎರಡು ಬರೋದು. ಅದರ ಮಜಾನೇ ಬೇರೆ. ಹತ್ತು ವರ್ಷಗಳ ಹಿಂದೆ ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದರು. ಬೆಳಗ್ಗೆ ಎದ್ದು ಬಾಗಿಲು ತೆಗೆದಾಗ ಐವತ್ತು ಪೈಸೆ ಚಾಕೋಲೇಟ್​ಗಳನ್ನು ಗುಡ್ಡೆ ಹಾಕಿಬಿಟ್ಟಿದ್ರು. ಬಾಗಿಲು ತೆಗೆದಾಗ ಕಣ್ಮುಂದೆ ಚೆಂದದ ಸರ್ಪ್ರೈಝ್ ಇತ್ತು. ಈಗಲೂ ಪೆಟ್ಟಿಗೆ ಅಂಗಡಿ ಹುಡುಕಿಕೊಂಡು ಹೋಗ್ತೀನಿ ಆ ಚಾಕೋಲೇಟ್​ಗಳಿಗೆ. ದಿಶಾ ರಮೇಶ, ರಂಗಕಲಾವಿದೆ

ಇದನ್ನೂ ಓದಿ : ಮಕ್ಕಳ ಪೌಷ್ಟಿಕತೆ ಹೆಚ್ಚಿಸಲು ತಯಾರಾಗ್ತಿದೆ ವಿಶೇಷ ಚಾಕೋಲೇಟ್!

Published On - 11:46 am, Wed, 7 July 21

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ