ಆಗತಾನೇ ಋತುಮತಿಯಾದವರಿಗೆ ಏನೆಲ್ಲ ಆಹಾರ ಕೊಡಬೇಕು?- ಮುಟ್ಟಾದಾಗ ನೀರು ತುಂಬಿಕೊಂಡರೆ ಪರಿಹಾರ ಏನು? ಡಾ. ಎಚ್ ಎಸ್​ ​ಪ್ರೇಮಾ ನೀಡಿದ್ದಾರೆ ಸಲಹೆ

Menstrual Hygiene Day 2021: ಮುಟ್ಟು ನಿಲ್ಲುವುದು ಮಹಿಳೆಯ ದೇಹಕ್ಕೆ ಬೇಕಾಗಿರುವಂತಹ ಆರೋಗ್ಯಕರ ಕ್ರಿಯೆ. ಹೀಗಾಗಿ ನಿಲ್ಲುತ್ತಿರುವ ಮುಟ್ಟನ್ನು ಏನೇನೋ ಮಾಡಿ ಮುಂದುವರಿಸಿಕೊಂಡು ಹೋಗುವುದನ್ನು ಬಿಡಿ. ಅದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎನ್ನುತ್ತಾರೆ ಡಾ. ಪ್ರೇಮಾ.

ಆಗತಾನೇ ಋತುಮತಿಯಾದವರಿಗೆ ಏನೆಲ್ಲ ಆಹಾರ ಕೊಡಬೇಕು?- ಮುಟ್ಟಾದಾಗ ನೀರು ತುಂಬಿಕೊಂಡರೆ ಪರಿಹಾರ ಏನು? ಡಾ. ಎಚ್ ಎಸ್​ ​ಪ್ರೇಮಾ ನೀಡಿದ್ದಾರೆ ಸಲಹೆ
ಪ್ರಾತಿನಿಧಿಕ ಚಿತ್ರ
Follow us
preethi shettigar
| Updated By: Lakshmi Hegde

Updated on:May 28, 2021 | 1:41 PM

ಮುಟ್ಟು ಹೆಣ್ಣಿನಲ್ಲಿ ಆಗುವ ಸಹಜ ಪ್ರಕ್ರಿಯೆ. ಅದೋನೋ ದೊಡ್ಡ ಕಾಯಿಲೆ ಅಲ್ಲ. ಆದರೆ ಋತುಮತಿಯಾದವಳು ಹೇಗಿರಬೇಕು ಎಂಬುವುದರ ಬಗ್ಗೆ ಈಗಲೂ ನಮ್ಮಲ್ಲಿ ಹಲವು ಗೊಂದಲಗಳಿದೆ. ಆದರೆ ಗೊಂದಲ ನಿವಾರಣೆಗಿಂತ ಅವಳ ಮನಸ್ಸನ್ನು ಮತ್ತಷ್ಟು ಖಿನ್ನತೆಗೆ ದೂಡುವ ಪ್ರಯತ್ನಗಳು ಇಂದು ಆಗುತ್ತಿದೆ. ಅದರಲ್ಲೂ ಮುಟ್ಟಿನ ಕಾಲದಲ್ಲಿ ಆಹಾರ ಸೇವನೆ ಬಗ್ಗೆ ಒಬ್ಬೊಬ್ಬರಲ್ಲಿ ಒಂದೊಂದು ಅನುಮಾನ ಇದೆ. ಹೀಗಾಗಿ ಸರಿಯಾದ ಅರಿವು  ಮುಖ್ಯ. ಇದಕ್ಕೆ ಉತ್ತರ ನೀಡಲು ಟಿವಿ9 ಡಿಜಿಟಲ್​ ಜತೆ ಆಹಾರ ತಜ್ಞೆ ಡಾ. ಎಚ್​. ಎಸ್​ ಪ್ರೇಮಾ ಮುಕ್ತವಾಗಿ ಮಾತನಾಡಿದ್ದಾರೆ ಮತ್ತು ಮುಟ್ಟಿನ ಸಂದರ್ಭದಲ್ಲಿನ ಆಹಾರ ಪದ್ಧತಿಗಳ ಬಗ್ಗೆ ಒಂದಷ್ಟು ಮಾಹಿತಿ ನೀಡಿದ್ದಾರೆ.

ಮುಟ್ಟಾದಾಗ ಹೇಗಿರಬೇಕು ಆಹಾರ ಪದ್ಧತಿ? ಮುಟ್ಟಿನ ಸಂದರ್ಭದಲ್ಲಿ ಭಾವನೆಗಳಲ್ಲಿ ಏರುಪೇರು ಇರುತ್ತದೆ. ಎಲ್ಲರ ಜತೆ ಖುಷಿಯಿಂದ ಮಾತನಾಡುವುದಕ್ಕೆ ಮನಸ್ಸು ಇರುವುದಿಲ್ಲ. ಒಟ್ಟಾರೆ ಹೇಳಬೇಕು ಎಂದರೆ ಲವಲವಿಕೆ ಇರುವುದಿಲ್ಲ. ಈ ಸಂದರ್ಭದಲ್ಲಿ ಜಂಕ್​ ಫುಡ್ ತಿಂದರೆ ಹೆಚ್ಚಿನ ಕಿರಿಕಿರಿ ಉಂಟಾಗುತ್ತದೆ. ಜಂಕ್​ ಆಹಾರಗಳು ಅಥವಾ ರಸಾಯನಿಕಗಳು ಮತ್ತು ಅದರಲ್ಲಿನ ರಾಸಾಯನಿಕಗಳು  ಖಿನ್ನತೆಗೆ ಕಾರಣವಾಗುತ್ತವೆ. ಮುಟ್ಟಿನ ಸಂದರ್ಭದಲ್ಲಿ ಮೊದಲೇ ಸರಿಯಾದ ಮನಸ್ಥಿತಿ ಇರುವುದಿಲ್ಲ. ಇನ್ನು ಈ ಕಾಲದಲ್ಲಿ ನೀವು ಜಂಕ್ ಫುಡ್​ ತಿಂದರೆ ಉರಿಯುವ ಬೆಂಕಿಗೆ ತುಪ್ಪ ಸುರಿದ ರೀತಿಯಾಗುತ್ತದೆ. ಹೀಗಾಗಿ ಭಾವನೆಗಳಲ್ಲಿನ ಅಡಚಣೆ​ ದೂರ ಮಾಡಲು ಮುಟ್ಟಿನ ಸಂದರ್ಭದಲ್ಲಿ ಜಂಕ್​ ಫುಡ್​ನಿಂದ ದೂರವಿರಿ ಎನ್ನುತ್ತಾರೆ ಆಹಾರ ತಜ್ಞೆ ಡಾ. ಎಚ್​. ಎಸ್​ ಪ್ರೇಮಾ.

ಜಂಕ್​ ಫುಡ್​ನಲ್ಲಿ ಇರುವ ರಾಸಾಯನಿಕಗಳು​ ನಮ್ಮ ಹಾರ್ಮೋನ್​​ಗಳಲ್ಲಿ ಬದಲಾವಣೆ ಉಂಟುಮಾಡುತ್ತದೆ.​ ಜಂಕ್​ ಫುಡ್​ನಲ್ಲಿರುವ ಕೆಮಿಕಲ್ಸ್​ ಮುಖ್ಯವಾಗಿ ಈಸ್ಟ್ರೋಜನ್​ ಹಾರ್ಮೋನ್​ ​ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದರಿಂದಾಗಿ ಅನಿಯಮಿತ ಮುಟ್ಟು ಶುರುವಾಗಬಹುದು. ಅಲ್ಲದೇ ವಿಪರಿತವಾಗಿ ರಕ್ತಸ್ರಾವವಾಗುವ ಸಾಧ್ಯತೆ ಇದೆ ಎಂದು ಡಾ. ಹೆಚ್​. ಎಸ್​ ಪ್ರೇಮ ತಿಳಿಸಿದ್ದಾರೆ.

ಋತುಚಕ್ರದ ಹೊಟ್ಟೆನೋವು ವಿಭಿನ್ನ ಆಹಾರ ತಿಂದಿದ್ದು ಹೆಚ್ಚಾಗಿ ಅಜೀರ್ಣವಾಗಿ ಹೊಟ್ಟೆ ನೋವು ಬರುವುದು ಬೇರೆ..ಮುಟ್ಟಾದಾಗ ಬರುವ ಹೊಟ್ಟೆ ನೋವೇ ಬೇರೆ.  ಸಾಮಾನ್ಯವಾಗಿ ಮುಟ್ಟಿನ ಸಂದರ್ಭದಲ್ಲಿ ಮನೆಯಲ್ಲಿ ಸಹಜವಾಗಿ ತಯಾರಿಸಿದ ಎಲ್ಲಾ ಆಹಾರವನ್ನು ಸೇವಿಸಬಹುದು. ಅದಕ್ಕೆ ಯಾವುದೇ ನಿರ್ಬಂಧ ಇಲ್ಲ. ಆದರೆ ಜಂಕ್​ ಫುಡ್ ತಿನ್ನಬಾರದು. ಇನ್ನು ವಿಪರಿತ ಹೊಟ್ಟೆ ನೋವಾದಾಗ ಕೆಲವರಿಗೆ ವಾಕರಿಕೆ, ವಾಂತಿಯಾಗುತ್ತದೆ. ಅಂಥವರು ಸ್ವಲ್ಪ ನೀರಿಗೆ ಉಪ್ಪು ಮತ್ತು ಲಿಂಬೆಹಣ್ಣಿನ ರಸ ಬೆರೆಸಿ ಕುಡಿಯಬೇಕು ಎಂದು ಡಾ. ಪ್ರೇಮಾ ಸಲಹೆ ನೀಡಿದ್ದಾರೆ.

ಮುಟ್ಟಿನ ಕಾಲದಲ್ಲಿ ಕೆಲವರಿಗೆ ನೀರು ತುಂಬಿಕೊಳ್ಳುವುದು ಇರುತ್ತದೆ. ಇದರಿಂದಾಗಿ ಮುಖ ಊದುವುದು, ಹೊಟ್ಟೆ ಉಬ್ಬರಿಸುತ್ತದೆ. ಆದರೆ ಮುಟ್ಟು ಕಳೆದ ನಂತರದಲ್ಲಿ ಇದು ಕೂಡ ತಾನಾಗಿಯೇ ಹೋಗುತ್ತದೆ. ಹೀಗಾಗಿ ಇದಕ್ಕೆ ಭಯಪಡುವ ಅಗತ್ಯ ಇಲ್ಲ. ಇದಕ್ಕೋಸ್ಕರ ಉಪ್ಪು ಕಡಿಮೆ ತಿನ್ನಬೇಕು. ನೀರನ್ನು ಕಡಿಮೆ ಕುಡಿಯಬೇಕು ಎನ್ನುವುದು ಏನೂ ಇಲ್ಲ. ಬೇರೆ ದಿನಗಳಂತೆ ಆಹಾರ ಪದ್ಧತಿ ಇರಲಿ ಅಷ್ಟೇ. ಇನ್ನು ಸುಮ್ಮನೆ ಜನರನ್ನು ಮುಟ್ಟಿನ ಹೆಸರಿನಲ್ಲಿ ಹೆದರಿಸಬಾರದು. ಮುಟ್ಟು ಒಂದು ಕಾಯಿಲೆ ಅಲ್ಲ. ಇದೊಂದು ಸಹಜ ಪ್ರಕ್ರಿಯೆ.

ಆಗತಾನೇ ಮುಟ್ಟಾದವರಿಗೆ ಏನು ಕೊಡಬೇಕು? ಇನ್ನು ವಯಸ್ಸಿಗೆ ತಕ್ಕಂತೆ ಮುಟ್ಟಿನ ಕಾಲದಲ್ಲಿ ಆಹಾರ ಪದ್ಧತಿ ಇರಬೇಕಾ ಎಂಬ ಪ್ರಶ್ನೆಗೆ ಉತ್ತರಿಸಿದ ಡಾ. ಪ್ರೇಮಾ, ಆ ರೀತಿ ಏನೂ ಇಲ್ಲ, ಎಲ್ಲರಿಗೂ ಆಹಾರ ಸೇವನೆ ಒಂದೇ ರೀತಿ ಇರುತ್ತದೆ. ಆದರೆ, ಮೊದಲ ಬಾರಿಗೆ ಋತುಮತಿಯಾದ ಹುಡುಗಿಯರಿಗೆ  ಆ ಸಮಯದಲ್ಲಿ  ಪೌಷ್ಟಿಕ ಆಹಾರವನ್ನು ಕೊಡಬೇಕಾಗುತ್ತದೆ. ಹಸುವಿನ ತುಪ್ಪ, ಎಲ್ಲಾ ತರಹದ ಸೊಪ್ಪುಗಳು, ಕಿತ್ತಳೆ ಹಣ್ಣು ಮತ್ತು ಮುಸಂಬಿ ಹಣ್ಣನ್ನು ನೀಡಬೇಕು.

ಇನ್ನು ಮುಟ್ಟಾದ ನಂತರದಲ್ಲಿ ಎಳ್ಳು ಮತ್ತು ಸೂರ್ಯಕಾಂತಿ ಬೀಜವನ್ನು ಸೇವಿಸಬೇಕು. ಎಕೆಂದರೆ ಈ ಎರಡು ಆಹಾರ ಪದಾರ್ಥಗಳು ಹೆಣ್ಣಿನ ಹಾರ್ಮೋನ್ ಮೇಲೆ ಅದರಲ್ಲೂ ಈಸ್ಟ್ರೋಜನ್ ಮೇಲೆ ಒಳ್ಳೆಯ ಪ್ರಭಾವವನ್ನು ಬೀರುತ್ತವೆ. ಇದು ನಮ್ಮಲ್ಲಿ ಬಹಳ ಹಿಂದಿನಿಂದ ನಡೆದುಕೊಂಡು ಬಂದ ಅಭ್ಯಾಸ. ಎಳ್ಳು ಉಂಡೆ ಮಾಡಿಕೊಡುವುದನ್ನು ಆಗಿನವರು ಅಭ್ಯಾಸದಿಂದ ತಿಳಿದಿದ್ದರು. ಈಗ ನಾವು ಅದನ್ನು ಸಂಶೋಧನೆಯ ಮೇಲೆ ಹೇಳುತ್ತಿದ್ದೇವೆ  ಎನ್ನುತ್ತಾರೆ  ಡಾ. ಡಾ. ಎಚ್​. ಎಸ್ ಪ್ರೇಮಾ.

ಮುಟ್ಟು ನಿಲ್ಲುವ ಹಂತ ಆರೋಗ್ಯ ಈಗ ಮಾರುಕಟ್ಟೆ ಆಧಾರಿತವಾಗಿದೆ. ಆದರೆ ಯಾವುದನ್ನು ಅತಿಯಾಗಿ ಭಯ ಪಡಿಸುವಂತೆ ಹೇಳುವುದು ಬೇಡ. ಹೆಣ್ಣಿನ ಜೀವನದಲ್ಲಿ ಸಹಜವಾಗಿ ಆಗುವ ಕ್ರಿಯೆ ಮುಟ್ಟು ನಿಲ್ಲುವುದು. ಆಗ ಮಾನಸಿಕವಾಗಿ ಮತ್ತು ದೈಹಿಕ ಆರೋಗ್ಯದಲ್ಲಿ ಕೆಲವೊಂದು ಅಡಚಣೆ ಉಂಟಾಗುತ್ತದೆ. ಮುಖ್ಯವಾಗಿ ಮುಟ್ಟು ನಿಂತ ಸಂದರ್ಭದಲ್ಲಿ ಈಸ್ಟ್ರೋಜನ್ ಕಡಿಮೆಯಾಗುತ್ತದೆ. ಕ್ಯಾಲ್ಶಿಯಂ, ಚಯಾಪಚಯ ಕ್ರಿಯೆಗಳು ಕುಂಠಿತವಾಗುತ್ತವೆ.  ಇದರಿಂದಾಗಿ ಮಹಿಳೆಯರಿಗೆ ಮೂಳೆಗಳು ಅಶಕ್ತವಾಗುತ್ತದೆ. ಇದನ್ನು ಸರಿಪಡಿಸಿಕೊಳ್ಳಲು ಅವರು ರಾಗಿ, ಸಜ್ಜೆ ಈ ತರಹದ ಆಹಾರಗಳನ್ನು ಸೇವಿಸಬೇಕು. ಇನ್ನು ತುಂಬಾ ತೀವ್ರವಾಗಿದೆ ಎಂದಾಗ ಕ್ಯಾಲ್ಶಿ ಯಮ್ ಸಪ್ಲಿಮೆಂಟ್​ಗಳನ್ನು ಸೇವಿಸಬೇಕಾಗುತ್ತದೆ ಎಂಬುದು ಡಾ.ಪ್ರೇಮಾ ಅವರ ಸಲಹೆ.

ಮುಟ್ಟು ನಿಲ್ಲುವುದು ಮಹಿಳೆಯ ದೇಹಕ್ಕೆ ಬೇಕಾಗಿರುವಂತಹ ಆರೋಗ್ಯಕರ ಕ್ರಿಯೆ. ಹೀಗಾಗಿ ನಿಲ್ಲುತ್ತಿರುವ ಮುಟ್ಟನ್ನು ಏನೇನೋ ಮಾಡಿ ಮುಂದುವರಿಸಿಕೊಂಡು ಹೋಗುವುದನ್ನು ಬಿಡಿ. ಅದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಮುಟ್ಟು ನಿಲ್ಲಬೇಕಾಗಿರುವುದೇ ಆರೋಗ್ಯ. ಅದು ಮಹಿಳೆಯಲ್ಲಿ ಆಗಲೇಬೇಕಾದ ಬೆಳವಣಿಗೆ. ಪರಿಮೆನೋಪಾಸ್ಟ್​ನ ಕಾಲದಲ್ಲಿ ದೊಡ್ಡ ಹಿಂಸೆ ಎಂದರೆ ದೇಹದಲ್ಲಿ ಹಾಟ್ ಫ್ಲಾಶಸ್ ಬರತ್ತೆ. ಆಗ ತರ್ಮನಲ್ ರೆಗ್ಯೂಲೇಷನ್ ವೇರಿಯಾಗತ್ತದೆ. ಋತು ನಿಲ್ಲುತ್ತದೆ ಎನ್ನುವ ಕಾಲ ಕೆಲವರಿಗೆ ಆರು ತಿಂಗಳು ಇರುತ್ತದೆ. ಇನ್ನು ಕೆಲವರಿಗೆ ಹೆಚ್ಚು ಕೂಡ ಆಗಬಹುದು ಆಗ ಜಂಕ್​ ಫುಡ್ ಸಂಪೂರ್ಣವಾಗಿ ಬಿಡಬೇಕು. ನೀರು ಹೆಚ್ಚಾಗಿ ಕುಡಿಯಬೇಕು. ನೀರಿನ ಜೊತೆಗೆ ಲಿಂಬೆ ಹಣ್ಣಿನ ರಸ ಹಾಕಿ ಸೇವಿಸಿದರೆ ಒಳ್ಳೆಯದು.

ಇನ್ನು ಮುಟ್ಟು ಮುಗಿಯುವ ಕಾಲದಲ್ಲಿ ಆಗುವ ಈ ಏರುಪೇರುಗಳು ಇರುವುದು ಜನೆಸ್ಟಿಕ್ ಟೆಂಡೆನ್ಸಿ ಮತ್ತು ಬೊಜ್ಜು ಇದ್ದಾಗ. ಇದು ಅತಿ ತೂಕ ಇದ್ದ ಮಹಿಳೆಯರಲ್ಲಿ ಹೆಚ್ಚಾಗಿ ಇದು ಕಂಡುಬರುತ್ತದೆ. ಹೀಗಾಗಿ ಅವರಿಗೆ ಮುಟ್ಟು ನಿಲ್ಲುವ ಕಾಲದಲ್ಲಿ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗುತ್ತದೆ. ಸ್ವಲ್ಪ ತೂಕವನ್ನು ಇಳಿಸಿಕೊಳ್ಳುವುದು ಒಳ್ಳೆಯದು ಇದು ಅತಿರೇಕದ ತೊಂದರೆಯಿಂದ ದೂರ ಮಾಡುತ್ತದೆ ಎನ್ನುತ್ತಾರೆ ಡಾ. ಎಚ್​. ಎಸ್​ ಪ್ರೇಮಾ ಹೇಳಿದ್ದಾರೆ.

(ಎಚ್. ಎಸ್. ಪ್ರೇಮಾ, ಡಯಟೀಷಿಯನ್ ಮತ್ತು ನ್ಯೂಟ್ರಿಷಿಯನ್)

ಇದನ್ನೂ ಓದಿ: Fact Check: ಋತುಚಕ್ರದ ಸಮಯದಲ್ಲಿ ಮಹಿಳೆಯರು ಕೊವಿಡ್ ಲಸಿಕೆ ಪಡೆಯಬಾರದು ಎಂಬುದು ವದಂತಿ, ನಂಬಬೇಡಿ

Published On - 1:40 pm, Fri, 28 May 21

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ