ಗಂಡುಮಕ್ಕಳಿಗೂ ಇರಲಿ ಮುಟ್ಟಿನ ಬಗ್ಗೆ ತಿಳಿವಳಿಕೆ; ಅವರಿಗೆ ಅರ್ಥವಾಗುವಂತೆ ಸರಳವಾಗಿ ವಿವರಿಸುವ ವಿಧಾನ ಇಲ್ಲಿದೆ ನೋಡಿ..

Menstrual Hygiene Day 2021: ನಿಮ್ಮ ಬಾತ್​ರೂಂ ಅಥವಾ ಬೆಡ್​ರೂಂನಲ್ಲಿ ಸ್ಯಾನಿಟರಿ ಪ್ಯಾಡ್​, ಟಾಂಪೂನ್​ ಅಥವಾ ಮುಟ್ಟಿನ ಕಪ್​..ಯಾವುದಾದರೂ ವಸ್ತುವನ್ನು ನಿಮ್ಮ ಮಗ ನೋಡಿ, ಅದನ್ನು ಪ್ರಶ್ನಿಸಿದರೆ ಹೇಗೆ ಉತ್ತರ ಕೊಡಬಹುದು? ಹೆಚ್ಚಿನ ತಾಯಂದಿರು..ನಿನಗೆ ಯಾಕೆ? ಅದೆಲ್ಲ ಅರ್ಥವಾಗುವುದಿಲ್ಲ ಹೋಗು ಎಂದು ಸುಲಭಕ್ಕೆ ಹೇಳಿ ಕಳಿಸಿಬಿಡುತ್ತಾರೆ.

ಗಂಡುಮಕ್ಕಳಿಗೂ ಇರಲಿ ಮುಟ್ಟಿನ ಬಗ್ಗೆ ತಿಳಿವಳಿಕೆ; ಅವರಿಗೆ ಅರ್ಥವಾಗುವಂತೆ ಸರಳವಾಗಿ ವಿವರಿಸುವ ವಿಧಾನ ಇಲ್ಲಿದೆ ನೋಡಿ..
ಪ್ರಾತಿನಿಧಿಕ ಚಿತ್ರ
Follow us
Lakshmi Hegde
|

Updated on:May 28, 2021 | 8:35 PM

ಅದೇನೋ ಗೊತ್ತಿಲ್ಲ ‘ಋತುಚಕ್ರ’ದ ಸುತ್ತಲೂ ಒಂದಷ್ಟು ಮೌಢ್ಯಗಳು ಇವತ್ತಿಗೂ ತಿರುಗುತ್ತಿವೆ. ಬರೀ ಭಾರತ ಅಂತಲ್ಲ..ಜಗತ್ತಿನ ವಿವಿಧ ದೇಶಗಳಲ್ಲಿ ಇದು ಚಾಲ್ತಿಯಲ್ಲಿದೆ. ಇವತ್ತಿಗೂ ಸಹ ಅನೇಕರು ಮುಟ್ಟು ಗುಟ್ಟಾಗಿರಬೇಕು ಎಂದೇ ಅಂದುಕೊಳ್ಳುತ್ತಾರೆ. ಆಗಷ್ಟೇ ಋತುಚಕ್ರ ಪ್ರಾರಂಭವಾದ ಹುಡುಗಿಯರು ನಾಚಿಕೊಳ್ಳುತ್ತಾರೆ. ಹಾಗಾದಾಗ ಶಾಲೆಗೆ ಹೋಗಲು ಹಿಂಜರಿಯುತ್ತಾರೆ. ಹೊಟ್ಟೆನೋವು ಬಂದು ಸಹಿಸಲು ಸಾಧ್ಯವಾಗದ ಸ್ಥಿತಿ ಎದುರಾದರೂ ‘ನಾನು ಮುಟ್ಟಾಗಿದ್ದೇನೆ..ಹೊಟ್ಟೆ ನೋಯುತ್ತಿದೆ’ ಎಂದು ಹೇಳಿಕೊಳ್ಳಲು ಮುಜುಗರ ಮಾಡಿಕೊಳ್ಳುತ್ತಾರೆ. ಆದರೆ ಮುಟ್ಟು ಗುಟ್ಟು ಮಾಡುವ ವಿಚಾರವಲ್ಲ. ನಾಚಿಕೆ ಪಡುವ ವಿಷಯವೂ ಅಲ್ಲ ಎಂಬುದನ್ನು ಪ್ರತಿ ಮಹಿಳೆ, ಹುಡುಗಿಯರೂ ಅರ್ಥ ಮಾಡಿಕೊಳ್ಳಬೇಕು. ಈ ದಿನಗಳಲ್ಲಿ ಸ್ವಚ್ಛತೆ ಮತ್ತು ಆರೋಗ್ಯದ ಕಡೆಗಷ್ಟೇ ಗಮನ ಇರಬೇಕು ಎಂಬುದರ ಬಗ್ಗೆ ಅರಿವು ಮೂಡಿಸಲೆಂದೇ ಪ್ರತಿವರ್ಷ ಮೇ 28ರಂದು ಋತುಚಕ್ರ ನೈರ್ಮಲ್ಯ ದಿನವನ್ನು ಆಚರಿಸಲಾಗುತ್ತದೆ.

ಬರೀ ಹುಡುಗಿಯರಿಗಷ್ಟೇ ಅಲ್ಲ, ಹುಡುಗರಿಗೂ ಇರಲಿ ತಿಳಿವಳಿಕೆ ಋತುಚಕ್ರ ನಿಸರ್ಗ ಸಹಜ ಕ್ರಿಯೆ. ಹೆಣ್ಣಾಗಿ ಹುಟ್ಟಿದ ಮೇಲೆ ಮುಟ್ಟನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಪ್ರತಿ ತಾಯಿ ತನ್ನ ಮಗಳು ವಯಸ್ಸಿಗೆ ಬರುತ್ತಿದ್ದಂತೆ ಮುಟ್ಟಿನ ಬಗ್ಗೆ ಸರಿಯಾದ ಶಿಕ್ಷಣವನ್ನು ಕೊಡಲೇಬೇಕು. ಆದರೆ ದುರಂತವೆಂದರೆ ಕೆಲವು ಅಮ್ಮಂದಿರುವ ಮೌಢ್ಯಗಳನ್ನು ನಂಬಿ, ಮಕ್ಕಳಲ್ಲೂ ಅದನ್ನೇ ಬಿತ್ತುತ್ತಾರೆ. ಆದರೆ ಮತ್ತೊಂದಷ್ಟು ಅಮ್ಮಂದಿರು ತಮ್ಮ ಗಂಡುಮಕ್ಕಳಿಗೂ ಈ ವಿಷಯದಲ್ಲಿ ಶಿಕ್ಷಣ ಕೊಡಲು ಮುಂದಾಗುತ್ತಿದ್ದಾರೆ. ಗಂಡುಮಕ್ಕಳಿಗೂ ಸಹ ಮುಟ್ಟಿನ ವಿಚಾರದಲ್ಲಿ ಸಹಜವಾಗಿಯೇ ಕುತೂಹಲ ಇರುತ್ತದೆ. ತಿಂಗಳ ಮುಟ್ಟು ಹೇಗಾಗುತ್ತದೆ? ಯಾಕಾಗುತ್ತದೆ? ಆ ಸಮಯದಲ್ಲಿ ಹೆಣ್ಣಿನ ದೈಹಿಕ-ಮಾನಸಿಕ ಸ್ಥಿತಿಗತಿಗಳು ಹೇಗಿರುತ್ತವೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಹುಡುಗರಿಗೂ ತಿಳಿವಳಿಕೆ ನೀಡಬೇಕು. ಹೀಗೆ ಮಾಡುವುದರಿಂದ ಅವರ ಸಹೋದರಿಯರು, ತಾಯಿ, ಸ್ನೇಹಿತೆಯರ ಬಗ್ಗೆ ಸಹಾನುಭೂತಿ ಬೆಳೆಯುತ್ತದೆ. ಅವರ ಪೀರಿಯಡ್ಸ್​ ದಿನಗಳಲ್ಲಿ ಅವರ ಅಗತ್ಯವನ್ನು ಪೂರೈಸಲು ಮುಂದಾಗುತ್ತಾರೆ ಎನ್ನುತ್ತಾರೆ ಬ್ಲಾಗರ್​ ಡಾನಾ ಮಾರ್ಲೋ. ಇದೇ ಅಭಿಪ್ರಾಯವನ್ನು ಹಲವು ತಜ್ಞರೂ ಕೂಡ ವ್ಯಕ್ತಪಡಿಸಿದ್ದಾರೆ.

ಡಾನಾ ಮಾರ್ಲೋ ಅಮೆರಿಕದ ಸಾಮಾಜಿಕ ಕಾರ್ಯಕರ್ತೆ. I Support ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಅದೆಷ್ಟೋ ಬಡ, ಅನಾಥ ಹೆಣ್ಣುಮಕ್ಕಳಿಗೆ ಬ್ರಾ, ಮುಟ್ಟಿನ ದಿನಗಳಲ್ಲಿ ಬಳಸುವ ಸಾಮಗ್ರಿಗಳನ್ನು ಪೂರೈಸುತ್ತಿದ್ದಾರೆ. ಅವರು ಹೀಗೆ ಮುಟ್ಟಿನ ದಿನಗಳಲ್ಲಿ ಬಳಸುವ ವಸ್ತುಗಳನ್ನು ಮನೆಯಲ್ಲಿ ತಂದಿಟ್ಟುಕೊಂಡಾಗ ಮಗ ಪ್ರಶ್ನಿಸುವುದು ಸಾಮಾನ್ಯವಾಗಿತ್ತು. ಹಾಗಾಗಿ ಅವನಿಗೆ ಅರ್ಥವಾಗುವ ರೀತಿಯಲ್ಲಿ ವಿವರಿಸುವುದು ಅನಿವಾರ್ಯವಾಗಿತ್ತು ಎನ್ನುತ್ತಾರೆ ಮಾರ್ಲೋ.

ಮಕ್ಕಳು ತೀರ ಚಿಕ್ಕವರಿದ್ದಾಗ ಅವರಿಗೆ ಅರ್ಥವಾಗುವುದಿಲ್ಲ. ಆದರೆ ಬೆಳೆಯುತ್ತ ಹೋದಂತೆ ಈ ಮುಟ್ಟಿನ ಬಗ್ಗೆ ಅರಿವು ಕೊಡಲು ಶುರು ಮಾಡಬೇಕು. ಹೀಗಾದಾಗ ಅವರು ಶಾಲೆ-ಕಾಲೇಜುಗಳಿಗೆ ಹೋದಾಗ ಅಲ್ಲಿ ತಮ್ಮ ತರಗತಿಯ ಹೆಣ್ಣುಮಕ್ಕಳು-ಸ್ನೇಹಿತೆಯರ ಕಷ್ಟವನ್ನು ಅರಿತುಕೊಳ್ಳುತ್ತಾರೆ. ಹೆಣ್ಣುಮಕ್ಕಳಲ್ಲಿ ಉಂಟಾಗುವ ಮುಜುಗರವನ್ನು ಹೋಗಲಾಡಿಸಲು ಸಹಾಯ ಮಾಡುತ್ತಾರೆ ಎಂಬುದನ್ನು ನಾನು ಬಲವಾಗಿ ನಂಬುತ್ತೇನೆ ಎಂಬುದು ಮಾರ್ಲೋ ಅಭಿಪ್ರಾಯ.

ಋತುಚಕ್ರದ ಬಗ್ಗೆ ಸರಿಯಾಗಿ ಅರಿವಿಲ್ಲದ ಹುಡುಗರು ಆ ವಿಷಯದಲ್ಲಿ ಟೀಕೆ ಮಾಡುತ್ತಾರೆ. ತಮ್ಮ ಸಹೋದರಿ, ಅಮ್ಮ, ಸ್ನೇಹಿತೆಯನ್ನು ಆಡಿಕೊಂಡು ನಗುವುದನ್ನೂ ನಾನು ನೋಡಿದ್ದೇನೆ. ಅದನ್ನು ತಪ್ಪಿಸಬೇಕು. ಮಹಿಳೆಯರ ಮುಟ್ಟು ಎಂಬುದು ಪುರುಷರಿಗೂ ತುಂಬ ಮುಖ್ಯ ಎಂಬುದು ಅವರಿಗೆ ಗೊತ್ತಿರಬೇಕು. ಇದನ್ನು ಪ್ರತಿ ಗಂಡುಮಕ್ಕಳ ತಾಯಂದಿರೂ ಅರ್ಥ ಮಾಡಿಕೊಳ್ಳಬೇಕು ಎನ್ನುತ್ತಾರೆ.

ಗಂಡುಮಕ್ಕಳಿಗೆ ಹೇಗೆ ಅರಿವು ಮೂಡಿಸಬಹುದು? ನಿಮ್ಮ ಬಾತ್​ರೂಂ ಅಥವಾ ಬೆಡ್​ರೂಂನಲ್ಲಿ ಸ್ಯಾನಿಟರಿ ಪ್ಯಾಡ್​, ಟಾಂಪೂನ್​ ಅಥವಾ ಮುಟ್ಟಿನ ಕಪ್​..ಯಾವುದಾದರೂ ವಸ್ತುವನ್ನು ನಿಮ್ಮ ಮಗ ನೋಡಿ, ಅದನ್ನು ಪ್ರಶ್ನಿಸಿದರೆ ಹೇಗೆ ಉತ್ತರ ಕೊಡಬಹುದು? ಹೆಚ್ಚಿನ ತಾಯಂದಿರು..ನಿನಗೆ ಯಾಕೆ? ಅದೆಲ್ಲ ಅರ್ಥವಾಗುವುದಿಲ್ಲ ಹೋಗು ಎಂದು ಸುಲಭಕ್ಕೆ ಹೇಳಿ ಕಳಿಸಿಬಿಡುತ್ತಾರೆ. ಆದರೆ ಹಾಗೆ ಮಾಡುವ ಬದಲು ತುಂಬ ಸಕಾರಾತ್ಕವಾಗಿ, ಸರಳವಾಗಿ ವಿವರಿಸಿ.

‘ನೋಡು.. ಪ್ರತಿ ಹೆಣ್ಣಿನ ದೇಹದ ಒಳಗೆ ಗರ್ಭಕೋಶ ಎಂಬ ಅಂಗ ಇರುತ್ತದೆ. ಅದು ಮಗು ಬೆಳೆಯುವ ಜಾಗ.. ನೀನೂ ಕೂಡ ಅಲ್ಲೇ ಬೆಳೆದಿದ್ದು. ಪ್ರತಿ ತಿಂಗಳೂ ಈ ಗರ್ಭಕೋಶ ಮಗುವನ್ನು ತಯಾರಿಸಲು ತನ್ನ ಒಳಪದರವನ್ನು ದಪ್ಪ ಮಾಡಿಕೊಳ್ಳುತ್ತದೆ. ಆದರೆ ಮಗು ತಯಾರಾಗದೆ ಹೋದಾಗ ಆ ದಪ್ಪವಾದ ಭಾಗ ಅದರಷ್ಟಕ್ಕೇ ಕಿತ್ತು, ರಕ್ತದ ರೂಪದಲ್ಲಿ ಜನನಾಂಗದ ಮೂಲಕ..ಅಂದರ ಮೂತ್ರ ವಿಸರ್ಜನೆ ಮಾಡುವ ಜಾಗದಿಂದ ಹೊರಹೋಗುತ್ತದೆ. ಇದು ಪ್ರತಿತಿಂಗಳೂ ಆಗುತ್ತದೆ. ಅದನ್ನೇ ಮುಟ್ಟು ಎಂದು ಕರೆಯುತ್ತಾರೆ. ಹೀಗೆ ಮುಟ್ಟಾದಾಗ ರಕ್ತ ಹೊರಬರುವ ಕಾರಣ ಹತ್ತಿಯುಳ್ಳ ಸ್ಯಾನಿಟರಿ ನ್ಯಾಪ್​ಕಿನ್​, ಕಾಟನ್​ ಬಟ್ಟೆಗಳನ್ನು ಆ ಜಾಗದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ’ ಹೀಗೆ ವಿವರಿಸಿದರೆ ಸಾಕು.

ಇದು ಕೂಡ ತೀರ ಚಿಕ್ಕ ಮಗುವಿಗೆ ಹೇಳಿದರೆ ಅರ್ಥವಾಗುವುದಿಲ್ಲ. 12 ವರ್ಷದ ನಂತರದ ಮಕ್ಕಳಿಗೆ ಇದನ್ನು ಸುಲಭವಾಗಿ ತಿಳಿಸಬಹುದು. ಪ್ರತಿತಿಂಗಳೂ ನಿನ್ನ ಅಮ್ಮ, ಸಹೋದರಿಯರಿಗೆ ಹೀಗೆ ರಕ್ತಸ್ರಾವ ಆಗುತ್ತದೆ ಎಂಬುದನ್ನು ಪುತ್ರನಿಗೆ ಹೇಳಬೇಕು. ಹಾಗೇ ಅದು ಯಾವುದೇ ಕಾಯಿಲೆಯಲ್ಲ. ಸಹಜ ಪ್ರಕ್ರಿಯೆ ಎಂಬುದನ್ನೂ ತಿಳಿಸಬೇಕು. ಹೀಗೆ ಪ್ರತಿ ತಿಂಗಳೂ ಮುಟ್ಟಾಗದಿದ್ದರೆ ಮಗು ಹುಟ್ಟುವುದಿಲ್ಲ. ಹಾಗಾಗಿ ಇದೊಂದು ಸುಂದರ ಪ್ರಕ್ರಿಯೆ ಎಂಬುದನ್ನೂ ತಿಳಿಸಿ. ಇಲ್ಲದಿದ್ದರೆ ಅವರು ಹೆದರಿಕೊಳ್ಳುವ ಸಾಧ್ಯತೆಯೂ ಇರುತ್ತದೆ.

ಮುಟ್ಟು ಗಲೀಜಲ್ಲ.. ಋತುಚಕ್ರದ ಬಗ್ಗೆ ಸರಿಯಾಗಿ ಅರ್ಥ ಮಾಡಿಕೊಳ್ಳದ ಹುಡುಗರು ಅದೊಂದು ಗಲೀಜು, ಅನೈರ್ಮಲ್ಯದ ವಿಚಾರ ಎಂದುಕೊಳ್ಳುತ್ತಾರೆ. ಆದರೆ ತಾಯಂದಿರು ಈ ವಿಷಯವನ್ನೂ ಮಕ್ಕಳಿಗೆ ಸ್ಪಷ್ಟಪಡಿಸಬೇಕು. ಹೀಗೆ ರಕ್ತಸ್ರಾವ ಆದ ತಕ್ಷಣ ಅದು ಗಲೀಜು ಎಂದಲ್ಲ. ಹಾಗೇ ನಾಚಿಕೆ, ಮುಜುಗರ ಪಡುವ ವಿಷಯವೂ ಅಲ್ಲ ಎಂಬುದನ್ನು ಅವರಿಗೆ ಹೇಳಬೇಕು.

ಇನ್ನು ಮುಟ್ಟಿನ ಸಮಯದಲ್ಲಿ ಮಹಿಳೆಯರು ಮಾನಸಿಕವಾಗಿಯೂ ದುರ್ಬಲರಾಗಿರುತ್ತಾರೆ. ದೈಹಿಕವಾಗಿಯೂ ಅವರಲ್ಲಿ ಸುಸ್ತು ಇರುತ್ತದೆ ಎಂಬ ವಿಷಯವನ್ನು ಗಂಡುಮಕ್ಕಳಿಗೂ ಹೇಳಿದರೆ ಅವರಿಗೆ ಸಹಜವಾಗಿಯೇ ಮಹಿಳೆಯರ ಮೇಲೆ ಕನಿಕರ ಮೂಡುತ್ತದೆ. ಆ ದಿನಗಳಲ್ಲಿ ನಿಮ್ಮ ಗಂಡುಮಕ್ಕಳೂ ನಿಮ್ಮ ಬಗ್ಗೆ ಕಾಳಜಿ ವಹಿಸಲು ಶುರು ಮಾಡುತ್ತಾರೆ.

ಇದನ್ನೂ ಓದಿ: Menstrual Hygiene Day 2021: ಸ್ಯಾನಿಟರಿ ಪ್ಯಾಡ್​​ಗಳೆಷ್ಟು ಸುರಕ್ಷಿತ..? ಮುಟ್ಟಿನಲ್ಲಿ ಸ್ವಚ್ಛತೆ ನಿರ್ಲಕ್ಷ್ಯ ಮಾಡಿದರೆ ಕ್ಯಾನ್ಸರ್ ಅಪಾಯ!

World Menstrual Hygiene Day 2021 special story educate your son about Menstruation

Published On - 11:57 am, Fri, 28 May 21

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್