World Menstrual Hygiene Day 2021: ಮುಟ್ಟಿನ ಬಗ್ಗೆ ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡಿ, ಅರ್ಥ ಮಾಡಿಸಿ..

ಹುಡುಗಿಯರು 10 ರಿಂದ 15 ವರ್ಷ ವಯಸ್ಸಿನವರಾಗಿದ್ದಾಗ ಮೊದಲು ಋತುಮತಿಯಾಗುತ್ತಾರೆ. ಸರಾಸರಿ ವಯಸ್ಸು 12, ಆದರೆ ಪ್ರತಿ ಹುಡುಗಿಯ ದೇಹವು ತನ್ನದೇ ಆದ ಬದಲಾವಣೆಗಳನ್ನು ಹೊಂದಿರುತ್ತದೆ. ಹೀಗಾಗಿ ಅದಕ್ಕೆ ಹೊಂದಿಕೊಂಡಂತೆ ಮುಟ್ಟಾಗುತ್ತದೆ.

World Menstrual Hygiene Day 2021: ಮುಟ್ಟಿನ ಬಗ್ಗೆ ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡಿ, ಅರ್ಥ ಮಾಡಿಸಿ..
ಪ್ರಾತಿನಿಧಿಕ ಚಿತ್ರ
Follow us
preethi shettigar
| Updated By: Lakshmi Hegde

Updated on: May 28, 2021 | 4:16 PM

ಪೋಷಕರು ಮಕ್ಕಳ ಜತೆಗೆ ಮುಟ್ಟಿನಂತಹ ವೈಯಕ್ತಿಕ ವಿಷಯಗಳ ಬಗ್ಗೆ ಮಾತನಾಡುವುದಕ್ಕೆ ಮುಜುಗರ ಪಡುತ್ತಾರೆ. ಆದರೆ ಮಕ್ಕಳಿಗೆ ಈ ಕುರಿತು ವಿಶ್ವಾಸಾರ್ಹ ಮಾಹಿತಿ ಬೇಕು. ನಿಮ್ಮ ಮಕ್ಕಳಿಗೆ ಅವರ ದೇಹದಲ್ಲಾಗುವ ಬದಲಾವಣೆಗಳ ಬಗ್ಗೆ ಅರ್ಥಮಾಡಿಕೊಳ್ಳಲು ಸಹಾಯ ಮಾಡುವುದು ಮತ್ತು ಆರೋಗ್ಯದ ಬಗ್ಗೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸೂಚಿಸುವುದು ಅವಶ್ಯಕ ಎನ್ನುವುದು ಮೊದಲು ಪೋಷಕರು ಅರ್ಥ ಮಾಡಿಕೊಳ್ಳಬೇಕು.

ಮುಟ್ಟಿನ ಬಗ್ಗೆ ಮಕ್ಕಳೊಂದಿಗೆ ಯಾವಾಗ ಮಾತನಾಡಬೇಕು? ನಿರ್ದಿಷ್ಟ ವಯಸ್ಸಿನಲ್ಲಿ ಮಕ್ಕಳೊಂದಿಗೆ ಮುಟ್ಟಿನ ವಿಷಯವನ್ನು ಮಾತನಾಡಬೇಕು ಎನ್ನುವ ಯಾವ ನಿರ್ಬಂಧವು ಇಲ್ಲ. ತಿಳುವಳಿಕೆ ಬಂದ ನಂತರ ಯಾವ ಸಮಯದಲ್ಲಾದರೂ ಈ ಕುರಿತು ಸಂವಾದವನ್ನು ಆರಂಭಿಸಬಹುದು. ಋತುಮತಿ ಆದ ನಂತರದಲ್ಲಿಯೇ ಮಾತನಾಡುವುದಕ್ಕಿಂತ ಮುಂಚಿತವಾಗಿ ಈ ಬಗ್ಗೆ ಮಕ್ಕಳಿಗೆ ಮಾಹಿತಿ ಇರಬೇಕಾಗುತ್ತದೆ. ಮುಟ್ಟಿನ ವಿಚಾರದಲ್ಲಿ ಮಾತನಾಡುವಾಗ ಗಂಡು – ಹೆಣ್ಣು ಎಂಬ ಭಾವನೆ ಬೇಡ ಮಕ್ಕಳು ಗಂಡಾಗಿರಲಿ ಅಥವಾ ಹೆಣ್ಣಾಗಿರಲಿ ಇಬ್ಬರಿಗೂ ಈ ವಿಷಯದ ಪರಿಕಲ್ಪನೆ ಇರುವುದು ಸೂಕ್ತ.

ಉದಾಹರಣೆಗೆ, ನಿಮ್ಮ 4 ವರ್ಷದ ಮಗು ಒಂದು ಟ್ಯಾಂಪೂನ್ ನೋಡಿದರೆ ಮತ್ತು ಅದು ಏನು ಎಂದು ಕೇಳಿದರೆ, ನೀವು ಉತ್ತರಿಸಬಹುದು. ಈ ಉತ್ತರ ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತೆ ಇರಲಿ. ಮಹಿಳೆಯರಿಗೆ ಪ್ರತಿ ತಿಂಗಳು ಯೋನಿಯಿಂದ ಸ್ವಲ್ಪ ರಕ್ತಸ್ರಾವವಾಗುತ್ತಾದೆ. ಇದನ್ನು ಮುಟ್ಟಾಗುವುದು ಎಂದು ಕರೆಯಲಾಗುತ್ತದೆ. ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ. ಇದು ಮಗುವನ್ನು ಪಡೆಯಲು ಒಂದು ಹೆಣ್ಣನ್ನು ಸಿದ್ಧಪಡಿಸುತ್ತದೆ. ಹೀಗಾಗಿ ಹೊರಹೋಗುವ ರಕ್ತವನ್ನು ಹಿಡಿದಿಡಲು ಟ್ಯಾಂಪೂನ್ ಅನ್ನು ಒಳ ಉಡುಪುಗಳಲ್ಲಿ ಬಳಸಲಾಗುತ್ತದೆ ಎಂದು ಮಾಹಿತಿ ನೀಡಿ ಮತ್ತು ನೀವು ಇದಕ್ಕೆ ಸಿದ್ಧರಾಗಿರಿ ಎಂದು ತಿಳಿಸಿ.

ನಿಮ್ಮ ಮಗು ಮುಟ್ಟಿನ ಬಗ್ಗೆ ಪ್ರಶ್ನೆಗಳನ್ನು ಕೇಳದರೆ ಮುಕ್ತವಾಗಿ ಮಾತನಾಡಿ, ಮಕ್ಕಳ 6 ಅಥವಾ 7 ವರ್ಷ ವಯಸ್ಸಿನ ಹೊತ್ತಿಗೆ, ಮುಟ್ಟಿನ ಬಗೆಗಿನ ಮೂಲಭೂತ ಅಂಶಗಳನ್ನು ಅರ್ಥಮಾಡಿಕೊಳ್ಳಬಹುದು. ಇನ್ನು ಮುಟ್ಟಿನ ಬಗ್ಗೆ ಮಾತನಾಡುವಾಗ ಸನ್ನಿವೇಶಗಳನ್ನು ಅರ್ಥ ಮಾಡಿಕೊಳ್ಳಿ.

  • ಮಕ್ಕಳು ಪ್ರೌಢಾವಸ್ಥೆ ಅಥವಾ ದೇಹದಲ್ಲಾಗುವ ಬದಲಾವಣೆಗಳ ಬಗ್ಗೆ ಕೇಳಿದಾಗ
  • ಶಿಶುಗಳು ದೇಹದ ಯಾವ ಭಾಗದಿಂದ ಬರುತ್ತದೆ ಎಂದು ಕೇಳಿದರೆ
  • ನೀವು ಪ್ಯಾಡ್ ಅಥವಾ ಟ್ಯಾಂಪೂನ್ ಖರೀದಿಸುವ ಅಂಗಡಿಗೆ ಬಂದಾಗ ಅದರ ಬಗ್ಗೆ ಮಾಹಿತಿ ನೀಡಿ.

ನಿಮ್ಮ ಮಗುವಿಗೆ ಮುಟ್ಟಿನ ಬಗ್ಗೆ ತಿಳಿದಿದೆಯೇ ಎಂದು ಕೇಳಿ. ಆ ನಂತರ, ನೀವು ಮೂಲಭೂತ ಮಾಹಿತಿಯನ್ನು ಹಂಚಿಕೊಳ್ಳಬಹುದು, ಉದಾಹರಣೆಗೆ ಹುಡುಗಿ ಮಹಿಳೆಯಾಗಿ ಬೆಳೆದಂತೆ, ಅವಳ ದೇಹವು ಕೆಲವೊಂದು ಬದಲಾವಣೆಗಳನ್ನು ಕಂಡುಕೊಳ್ಳುತ್ತದೆ. ಆದ್ದರಿಂದ ಅವಳು ದೊಡ್ಡವಳಾದ ಮೇಲೆ ಮಗುವನ್ನು ಹೊಂದಬಹುದು. ಮುಟ್ಟಿನ ಒಂದು ಭಾಗವು ಮಗುವಿಗೆ ತಾಯಿಯ ದೇಹದೊಳಗೆ ಬೆಳೆಯಲು ಸ್ಥಳವನ್ನು ಸಿದ್ಧಪಡಿಸುತ್ತದೆ. ಮಗು ಬೆಳೆಯುವ ಸ್ಥಳವನ್ನು ಗರ್ಭಾಶಯ ಎಂದು ಕರೆಯಲಾಗುತ್ತದೆ. ಮುಟ್ಟಿನ ಸಂದರ್ಭದಲ್ಲಿ ರಕ್ತವು ಮಹಿಳೆಯ ಯೋನಿಯಿಂದ ಹೊರಬರುತ್ತದೆ.

ಯಾವುದೇ ಪ್ರಶ್ನೆಗಳಿಗೆ ಸರಳವಾಗಿ ಮತ್ತು ನೇರವಾಗಿ ಉತ್ತರಿಸಿ ನೀವು ಮಾತನಾಡುವುದು ನಿಮ್ಮ ಮಗುವಿನ ವಯಸ್ಸು ಮತ್ತು ಅಭಿವೃದ್ಧಿಯ ಮಟ್ಟವನ್ನು ಅವಲಂಬಿಸಿರುತ್ತದೆ. ಹೆಚ್ಚಿನ ಮಕ್ಕಳು ಈ ರೀತಿಯ ಪ್ರಶ್ನೆಗಳನ್ನು ಕೇಳಬಹುದು.

ಹುಡುಗಿಯರಲ್ಲಿ ಋತುಚಕ್ರ ಪ್ರಾರಂಭ ಯಾವಾಗ? ಹುಡುಗಿಯರು 10 ರಿಂದ 15 ವರ್ಷ ವಯಸ್ಸಿನವರಾಗಿದ್ದಾಗ ಮೊದಲು ಋತುಮತಿಯಾಗುತ್ತಾಳೆ. ಸರಾಸರಿ ವಯಸ್ಸು 12, ಆದರೆ ಪ್ರತಿ ಹುಡುಗಿಯ ದೇಹವು ತನ್ನದೇ ಆದ ಬದಲಾವಣೆಗಳನ್ನು ಹೊಂದಿರುತ್ತದೆ. ದೇಹ ಪ್ರೌಢವಾಗುವುದರ ಮೇಲೆ ಈ ಮುಟ್ಟಿನ ಅವಧಿಯೂ ಅವಲಂಬಿತವಾಗಿರುತ್ತದೆ.

ಹುಡುಗಿ ತನ್ನ ಮುಟ್ಟನ್ನು ಪಡೆಯಲು ಸರಿಯಾದ ವಯಸ್ಸು ಇಲ್ಲವಾದರೂ, ಇಂತಹ ಸಮಯಕ್ಕೆ ಮುಟ್ಟಾಗುತ್ತದೆ ಎಂಬ ಕೆಲವು ಸುಳಿವುಗಳಿವೆ. ಹೆಣ್ಣಿನ ಸ್ತನಗಳು ಬೆಳೆಯಲು ಪ್ರಾರಂಭಿಸಿದ ಸುಮಾರು 2 ವರ್ಷಗಳ ನಂತರ ಋತುಮತಿಯಾಗುತ್ತಾಳೆ. ಮತ್ತೊಂದು ಚಿಹ್ನೆ ಎಂದರೆ ಯೋನಿಯಿಂದ ಬಿಳಿ ದ್ರವ (ಲೋಳೆಯಂತಹ) ಹೊರ ಬರುತ್ತದೆ. ಈ ವಿಸರ್ಜನೆಯು ಸಾಮಾನ್ಯವಾಗಿ ಹುಡುಗಿ ತನ್ನ ಮೊದಲ ಮುಟ್ಟು ಪಡೆಯುವ ಮೊದಲು ಸುಮಾರು 6 ತಿಂಗಳಿಂದ ಒಂದು ವರ್ಷದವರೆಗೆ ಪ್ರಾರಂಭವಾಗುತ್ತದೆ.

ಮುಟ್ಟಿಗೆ ಕಾರಣವೇನು? ದೇಹದಲ್ಲಿನ ಹಾರ್ಮೋನ್​ಗಳಲ್ಲಿನ ಬದಲಾವಣೆಯಿಂದಾಗಿ ಮುಟ್ಟು ಸಂಭವಿಸುತ್ತದೆ. ಹಾರ್ಮೋನ್​ಗಳು ರಾಸಾಯನಿಕ ಸಂದೇಶವಾಹಕವಾಗಿರುತ್ತದೆ. ಅಂಡಾಶಯಗಳು ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಎಂಬ ಎರಡು ಹಾರ್ಮೋನ್​ಗಳನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡುತ್ತವೆ. ಈ ಹಾರ್ಮೋನ್​ಗಳು ಗರ್ಭಾಶಯದ (ಅಥವಾ ಗರ್ಭ) ಒಳಪದರವನ್ನು ನಿರ್ಮಿಸಲು ಕಾರಣವಾಗುತ್ತವೆ.

ಮುಟ್ಟು ಪ್ರಾರಂಭವಾದ ದಿನಗಳಲ್ಲಿ ಸರಿಯಾದ ಪ್ರಕ್ರಿಯೆ ಸಂಭವಿಸುತ್ತವೆಯೇ? ಹುಡುಗಿಯರು ತನ್ನ ಮುಟ್ಟನ್ನು ಪ್ರಾರಂಭಿಸಿದ ಮೊದಲ ಕೆಲವು ವರ್ಷಗಳವರೆಗೆ, ನಿಯಮಿತವಾಗಿ ಈ ಪ್ರಕ್ರಿಯೆ ನಡೆಯುವುದಿಲ್ಲ. ಸುಮಾರು 2-3 ವರ್ಷಗಳ ನಂತರ ತಿಂಗಳಿಗೊಮ್ಮೆ ಸರಿಯಾಗಿ ಮುಟ್ಟಾಗುತ್ತಾರೆ.

ಹುಡುಗಿ ತನ್ನ ಮುಟ್ಟು ಪ್ರಾರಂಭವಾದ ತಕ್ಷಣ ಗರ್ಭಿಣಿಯಾಗಬಹುದೇ? ಹೌದು, ಒಂದು ಹುಡುಗಿ ತನ್ನ ಮುಟ್ಟು ಪ್ರಾರಂಭವಾದ ತಕ್ಷಣ ಗರ್ಭಿಣಿಯಾಗುವ ಸಾಮರ್ಥ್ಯ ಹೊಂದುತ್ತಾಳೆ. ಕೆಲವೊಮ್ಮೆ ತನ್ನ ಮೊದಲ ಮುಟ್ಟಿಗೆ ಮುಂಚೆಯೇ ಗರ್ಭಿಣಿಯಾಗಬಹುದು. ಹುಡುಗಿಯ ಹಾರ್ಮೋನ್​ಗಳು ಈಗಾಗಲೇ ಸಕ್ರಿಯವಾಗಿದ್ದರೆ ಇದು ಸಾಧ್ಯವಾಗುತ್ತದೆ. ಹಾರ್ಮೋನ್​ಗಳು ಅಂಡೋತ್ಪತ್ತಿ (ಅಂಡಾಶಯದಿಂದ ಮೊಟ್ಟೆಯನ್ನು ಬಿಡುಗಡೆ ಮಾಡುವುದು) ಮತ್ತು ಗರ್ಭಾಶಯದ ಗೋಡೆಯ ನಿರ್ಮಾಣಕ್ಕೆ ಕಾರಣವಾಗಬಹುದು. ಒಂದು ಹುಡುಗಿ ಮುಟ್ಟಾಗದೆ ಇದ್ದರೂ ಕೂಡ ಲೈಂಗಿಕತೆಯನ್ನು ಹೊಂದಿದ್ದರೆ, ಆಕೆ ಗರ್ಭಿಣಿಯಾಗಬಹುದು. ಮುಟ್ಟು ಸಾಮಾನ್ಯವಾಗಿ ಸುಮಾರು 5 ದಿನಗಳವರೆಗೆ ಇರುತ್ತವೆ. ಆದರೆ ಒಂದು ಮುಟ್ಟು ಕಡಿಮೆ ಅಥವಾ ಇನ್ನೊಂದು ಹೆಚ್ಚು ಕಾಲ ಉಳಿಯುತ್ತದೆ.  ಬಹುತೇಕರು 3 ವಾರಗಳಿಗೆ ಒಮ್ಮೆ ಮುಟ್ಟಾಗುತ್ತಾರೆ. ಆದರೆ ಇನ್ನೂ ಹಲವರ ಋತುಚಕ್ರ ಆರು ವಾರಗಳಿಗೊಮ್ಮೆ ಇರುತ್ತದೆ.

ಪಿಎಂಎಸ್ ಎಂದರೇನು? ಪಿಎಂಎಸ್ (ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್) ಎಂದರೆ ಹೆಣ್ಣು ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ಕೆಲವೊಂದು ಬದಲಾವಣೆಗಳನ್ನು ಕಾಣುತ್ತಾಳೆ. ಅದು ಅವಳ ಮುಟ್ಟಿಗೆ ಮೊದಲು ಅಥವಾ ಆ ಸಮಯದಲ್ಲಿ ಸಂಭವಿಸುತ್ತದೆ. ಈ ರೋಗಲಕ್ಷಣಗಳೆಂದರೆ ಇದು ದುಃಖ, ಆತಂಕ ಹೆಚ್ಚಿಸುತ್ತದೆ. ಮುಖ ದಪ್ಪವಾಗುವುದು ಮತ್ತು ಮೊಡವೆಗಳನ್ನು ಹೆಚ್ಚು ಮಾಡುತ್ತದೆ. ಮುಟ್ಟಿನ ನಂತರದಲ್ಲಿ ಇದು ದೂರವಾಗುತ್ತದೆ.

ಮುಟ್ಟಿನ ಬಗ್ಗೆ ನನ್ನ ಮಕ್ಕಳೊಂದಿಗೆ ಮಾತನಾಡಲು ನನಗೆ ತೊಂದರೆ ಇದ್ದರೆ? ನಿಮ್ಮ ಮಕ್ಕಳೊಂದಿಗೆ ಮುಟ್ಟಿನ ಬಗ್ಗೆ ಮಾತನಾಡಲು ನಿಮಗೆ ಮುಜುಗರವಾದರೆ, ಈ ಮಾಹಿತಿಯನ್ನು ಪಡೆಯಲು ಅವರಿಗೆ ಇನ್ನೊಂದು ಮಾರ್ಗವಿದೆ ಎಂಬುವುದನ್ನು ತಿಳಿಸಿ. ಬಹುಶಃ ವಿಡಿಯೋ ನೋಡುವುದು ಅಥವಾ ಪುಸ್ತಕವನ್ನು ಓದುವುದರ ಮೂಲಕ ಈ ಬಗ್ಗೆ ಸುಲಭವಾಗಿ ಅರ್ಥ ಮಾಡಿಸಿ. ಇಲ್ಲವಾದರೆ ನಿಮ್ಮ ಮಗುವಿನೊಂದಿಗೆ ಈ ವಿಷಯವಾಗಿ ಮಾತನಾಡಲು ವೈದ್ಯರು, ವಿಶ್ವಾಸಾರ್ಹ ಕುಟುಂಬ ಸದಸ್ಯರನ್ನು ಕೂಡ ನೀವು ಅವಲಂಬಿಸಬಹುದು.

ಯಾವಾಗ ವೈದ್ಯರನ್ನು ಕರೆಯಬೇಕು? ಹೆಚ್ಚಿನ ಹುಡುಗಿಯರು ತಮ್ಮ ಮುಟ್ಟಿನಲ್ಲಿ ಯಾವುದೇ ಸಮಸ್ಯೆಗಳನ್ನು ಹೊಂದಿರುವುದಿಲ್ಲ. ಒಂದು ವೇಳೆ ನಿಮ್ಮ ಮಗಳು ಈ ಕೆಳಗಿನ ತೊಂದರೆಯಲ್ಲಿದ್ದರೆ ವೈದ್ಯರಿಗೆ ಕರೆ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ