AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ದಲ್ಲಿ ಎನ್.ಎಸ್. ಶ್ರೀಧರಮೂರ್ತಿ

‘ವೈದೇಹಿಯವರಿಗೆ ನಾದದ ಜೊತೆಗೆ ಮುಳುಗಿ ಹೋಗುವ ತನ್ಮಯತೆ ಬೇಡ. ಹಾಡನ್ನು ಮುರಿದು ನೋವನ್ನು ಹುಡುಕುವುದು ಬೇಕು. ಇಲ್ಲಿನ ಭಾವಲಹರಿ ಮೋಹನ ಮುರುಳಿಗೆ ಒಲಿದಿದ್ದಲ್ಲ ಶಿವನ ಡಮರುಗಕ್ಕೆ ಸ್ಪಂದಿಸಿದ್ದು. ಆದರೆ ಅದರ ಅಬ್ಬರ ಇಲ್ಲಿಲ್ಲ. ತೀವ್ರವಾಗಿ ತಾಕಿ ಕಾಡುತ್ತಾ ಭಾವಲೋಕಕ್ಕೆ ಇಳಿದು ಅಂತರಂಗವನ್ನು ಕಲಕುವ ಗುಣ ಇಲ್ಲಿನ ಬಹುತೇಕ ಎಲ್ಲಾ ಕವಿತೆಗಳಲ್ಲಿಯೂ ಕಾಣುತ್ತದೆ.‘ ಎನ್​. ಎಸ್​. ಶ್ರೀಧರಮೂರ್ತಿ.

ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ದಲ್ಲಿ ಎನ್.ಎಸ್. ಶ್ರೀಧರಮೂರ್ತಿ
ಲೇಖಕ ಎನ್​. ಎಸ್​. ಶ್ರೀಧರಮೂರ್ತಿ
TV9 Web
| Updated By: ganapathi bhat|

Updated on:Apr 06, 2022 | 11:09 PM

Share

ನಮ್ಮ ಮಾತಿಗೆ, ಮೌನಕ್ಕೆ, ಆಲಿಸುವಿಕೆಗೆ, ನೋಟಕ್ಕೆ, ಸ್ಪರ್ಶಕ್ಕೆ ಮಿಗಿಲಾದುದರ ಹುಡುಕಾಟ ಮತ್ತು ತಣಿಕೆಗಾಗಿಯೇ ನಾವು ಮತ್ತೆ ಮತ್ತೆ ಅಕ್ಷರಲೋಕದ ಸಾಂಗತ್ಯಕ್ಕೆ ಬೀಳುವುದು. ಅದು ಉಸಿರಿನಷ್ಟೇ ಸಹಜ. ಭಾವಕ್ಕೂ ಬುದ್ಧಿಗೂ ಬೇಕಾದ ಈ ಆಮ್ಲಜನಕಕ್ಕಾಗಿ ನಾವು ಜಂಜಡಗಳ ಮಧ್ಯೆಯೇ ಹೆಚ್ಚೆಚ್ಚು ಆತುಕೊಳ್ಳುತ್ತಲು ನೋಡುತ್ತಿರುತ್ತೇವೆ. ಈ ವರ್ಷ ಆವರಿಸಿದ ಮಹಾಶೂನ್ಯದೊಂದಿಗೇ ನಾವು ಏನು ಓದಿದೆವು?

‘tv9 ಕನ್ನಡ ಡಿಜಿಟಲ್ ವರ್ಷಾಂತ್ಯ ವಿಶೇಷ 2020: ಓದಿನಂಗಳ’ ಸರಣಿಗಾಗಿ ಕನ್ನಡದ ಹಿರಿ-ಕಿರಿಯ ಕಥೆಗಾರರು, ಕಾದಂಬರಿಕಾರರು, ಕವಿಗಳು ಮತ್ತು ಗಂಭೀರ ಓದುಗರು ಈ ವರ್ಷ ತಾವು ಓದಿ ಮೆಚ್ಚಿದ ಎರಡು ಪುಸ್ತಕಗಳ ಬಗ್ಗೆ ಪುಟ್ಟ ಟಿಪ್ಪಣಿ ನೀಡಿದ್ದಾರೆ. ಪತ್ರಕರ್ತ, ಲೇಖಕ ಎನ್​. ಎಸ್​. ಶ್ರೀಧರಮೂರ್ತಿ ಅವರ ಆಯ್ಕೆಗಳು ಹೀಗಿವೆ.

ಕೃ: ದೀಪದೊಳಗಿನ ದೀಪ (ಕವಿತೆಗಳು) ಲೇ: ವೈದೇಹಿ ಪ್ರ: ವಿಕಾಸ ಪ್ರಕಾಶನ

ಕಥೆಗಾರ್ತಿಯಾಗಿ ಹೆಸರು ಮಾಡಿರುವ ವೈದೇಹಿ ಅನ್ಯಶಿಸ್ತುಗಳಲ್ಲಿಯೂ ಕೂಡ ಆಸಕ್ತಿ ಇಟ್ಟು ಕೊಂಡವರೇ. ಕವಿತೆಗಳಲ್ಲಿ ಕೂಡ ಅವರದು ತಮ್ಮದೇ ಆದ ಅನನ್ಯತೆ. ಇದು ವೈದೇಹಿಯವರ ನಾಲ್ಕನೇ ಕವನ ಸಂಕಲನ. ಇಲ್ಲಿನ ಕವಿತೆಗಳಲ್ಲಿ ಕಾಣುವ ಬಹುಮುಖ್ಯವಾದ ವಿನ್ಯಾಸವೆಂದರೆ ಸಾಮಾಜಿಕ ಪ್ರಶ್ನೆಗಳಿಗೆ ತೀವ್ರವಾಗಿ ಸ್ಪಂದಿಸುವಾಗ ಕೂಡ ಸಂವೇದನಾಶೀಲತೆಯನ್ನು ಬಿಡದೇ ಇರುವುದು.

ಅವರಿಗೆ ನಾದದ ಜೊತೆಗೆ ಮುಳುಗಿ ಹೋಗುವ ತನ್ಮಯತೆ ಬೇಡ. ಹಾಡನ್ನು ಮುರಿದು ನೋವನ್ನು ಹುಡುಕುವುದು ಬೇಕು. ಇಲ್ಲಿನ ಭಾವಲಹರಿ ಮೋಹನ ಮುರುಳಿಗೆ ಒಲಿದಿದ್ದಲ್ಲ ಶಿವನ ಡಮರುಗಕ್ಕೆ ಸ್ಪಂದಿಸಿದ್ದು. ಆದರೆ ಅದರ ಅಬ್ಬರ ಇಲ್ಲಿಲ್ಲ. ತೀವ್ರವಾಗಿ ತಾಕಿ ಕಾಡುತ್ತಾ ಭಾವಲೋಕಕ್ಕೆ ಇಳಿದು ಅಂತರಂಗವನ್ನು ಕಲಕುವ ಗುಣ ಇಲ್ಲಿನ ಬಹುತೇಕ ಎಲ್ಲಾ ಕವಿತೆಗಳಲ್ಲಿಯೂ ಕಾಣುತ್ತದೆ. ಅನ್ಯಾಯವನ್ನು ಕಂಡು ಮನ ಕೆರಳಿದರೂ ಅದು ಘೋಷಣೆಯನ್ನು ತಲಪುವುದಿಲ್ಲ. ಅಂತರಂಗದ ಸಹಜತೆಯನ್ನು ಬಿಟ್ಟು ಕೊಡದೆ ಕವಿತೆ ಸಹನೆ, ಪ್ರೀತಿಗಳ ಕುರಿತ ತನ್ನ ವಿಶ್ವಾಸವನ್ನು ಕಳೆದು ಕೊಂಡಿಲ್ಲ. ಹೊಗೆ, ಅಮ್ಮಚ್ಚಿಯ ಹಾಡು, ದೀಪ ಹಚ್ಚು, ವಿದಾಯಗೀತೆ ಅಂತಹ ಸಂಕಲನದ ಪ್ರಮುಖ ಕವಿತೆಗಳಲ್ಲಿ ಈ ಗುಣವನ್ನು ಪ್ರಮುಖವಾಗಿ ಗುರುತಿಸ ಬಹುದು. ಕಾಣುವ ದೀಪದೊಳಗೆ ಜ್ಯೊತಿಯಾಗಿ ಉರಿಯುವ ಕಾಣ್ಕೆ ಇದೆ. ಅದರೊಳಗೆ ಕಾಣದ ಇನ್ನೊಂದು ದೀಪ ಸಂವೇದನಾಶೀಲವಾಗಿ ಇದ್ದೇ ಇದೆ. ಮನುಕುಲಕ್ಕೆ ಬೇಕಾದ ಅದನ್ನು ಹುಡುಕುವ ತೀವ್ರತೆ, ಸಂವೇದನಾಶೀಲತೆ ಇರುವುದರಿಂದಲೇ ಈ ಸಂಕಲನ ನನ್ನನ್ನು ಬಹುವಾಗಿ ಕಾಡಿ ಈ ವರ್ಷ ನಾನು ಓದಿದ ಅತ್ಯುತ್ತಮ ಕೃತಿ ಎನ್ನಿಸಿಕೊಂಡಿದ್ದು.

ಕೃ: ಮಾಸ್ತಿ ವೆಂಕಟೇಶ ಅಯ್ಯಂಗಾರ್ ಲೇ: ಎಸ್.ಆರ್.ವಿಜಯಶಂಕರ್ ಪ್ರ: ಕೇಂದ್ರ ಸಾಹಿತ್ಯ ಅಕಾಡೆಮಿ

ಕನ್ನಡ ಸಾಹಿತ್ಯಕ್ಕೆ ವಿಪುಲ ಕೊಡುಗೆಯನ್ನು ನೀಡಿದವರು ಮಾಸ್ತಿ ವೆಂಕಟೇಶ್ ಅಯ್ಯಂಗಾರ್. 126 ಕೃತಿಗಳಲ್ಲಿ ಸುಮಾರು ಇಪ್ಪತ್ತು ಸಾವಿರ ಪುಟಗಳಷ್ಟು ಹರಡಿಕೊಂಡಿರುವ ಅವರ ಸಾಹಿತ್ಯವನ್ನು ಅಧ್ಯಯನ ಮಾಡುವುದು ಬಹು ದೊಡ್ಡ ಸವಾಲೇ ಸರಿ. ವಿಜಯಶಂಕರ್ ಅವರ ಈ ಕೃತಿ ಆ ಸವಾಲನ್ನು ದಿಟ್ಟವಾಗಿ ಎದುರಿಸುವುದರ ಜೊತೆಗೆ ಸಾಕಷ್ಟು ಒಳನೋಟಗಳನ್ನು ಕೂಡ ನೀಡುತ್ತದೆ.

ಈ ಕೃತಿಯ ಮಹತ್ವವೆಂದರೆ ಇದು ಮಾಸ್ತಿಯವರ ಸಾಹಿತ್ಯವನ್ನು ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ, ಆರ್ಥಿಕ ಹೀಗೆ ಬಹುಮುಖಿ ನೆಲೆಯಲ್ಲಿ ಶೋಧಿಸುವದರ ಜೊತೆಗೆ ಅದರ ಅನನ್ಯತೆಯನ್ನು ನಿಚ್ಚಳವಾಗಿ ಗುರುತಿಸುತ್ತದೆ. ಇದರ ಜೊತೆಗೆ ಅಗತ್ಯವಾದಲ್ಲೆಲ್ಲಾ ತೌಲನಿಕ ಅಧ್ಯಯನ ಕೃತಿಯಲ್ಲಿ ಮೂಡಿ ಬಂದಿದ್ದು ಈ ಮೂಲಕ ಮಾಸ್ತಿಯವರ ಬರಹದ ವ್ಯಾಪಕತೆಯೂ ಗುರುತಿಸಲ್ಪಟ್ಟಿದೆ. ಸಾಹಿತ್ಯೇತರ ಶಿಸ್ತುಗಳನ್ನು ಅಧ್ಯಯನದಲ್ಲಿ ಯಶಸ್ವಿಯಾಗಿ ಬಳಸಿ ಕೊಂಡಿರುವ ವಿಜಯಶಂಕರ್ ಆ ಮೂಲಕ ಮಾಸ್ತಿಯವರ ಮಹತ್ವವನ್ನು ಗುರುತಿಸಿದ್ದಾರೆ. ರೂಪಕ ಅವರ ಚಿಂತನೆ, ಕಥನ ಅದರ ಸಹಜ ಸ್ವರೂಪ ಎನ್ನುವ ಅವರು ಮಾಸ್ತಿಯವರ ವಿಚಾರಗಳನ್ನು ಸ್ಪಷ್ಟವಾಗಿ ಹಿಡಿದಿಡುವದರ ಜೊತೆಗೆ ಕನ್ನಡ ವಿಮರ್ಶೆಯಲ್ಲಿ ತಪ್ಪುಗ್ರಹಿಕೆಯಿಂದ ಆಗಿರುವ ದೋಷಗಳಿಗೂ ಉತ್ತರಿಸಲು ಪ್ರಯತ್ನಿಸಿದ್ದಾರೆ. ಈ ಕಾರಣದಿಂದ ನನಗೆ ಈ ಕೃತಿ ಮಾಸ್ತಿಯವರ ಕುರಿತ ಮಹತ್ವದ ಕೃತಿ ಆಗುವುದರ ಜೊತೆಗೆ ವಿಮರ್ಶಾಕ್ರಮದ ನವಾನ್ವೇಷಣೆ ಎಂದೂ ಕೂಡ ಅನ್ನಿಸಿತು. ಈ ಎಲ್ಲಾ ಕಾರಣದಿಂದ ಇದನ್ನು ಈ ವರ್ಷ ನಾನು ಓದಿದ ಮಹತ್ವದ ಕೃತಿ ಎಂದು ಕರೆಯಲು ಬಯಸುತ್ತೇನೆ.

ವರ್ಷಾಂತ್ಯ ವಿಶೇಷ 2020: ’ಓದಿನಂಗಳ’ದಲ್ಲಿ ಡಾ. ವಸುಂಧರಾ ಭೂಪತಿ

Published On - 11:18 am, Thu, 31 December 20

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ