Valentine’s Day | ಶುರುವಾಗುತ್ತಿದೆ ಪ್ರೇಮದ ವಾರ.. ಪ್ರೇಮಿಗಳ ದಿನಕ್ಕೆ ಆರಂಭವಾಗಲಿ ತಾಲೀಮು!

Valentine Day ಫೆಬ್ರವರಿ 7ರಿಂದ 14ರವರೆಗೂ ಪ್ರೇಮದ ವಾರ! ಗುಲಾಬಿ ದಿನ ಅರ್ಥಾತ್ Rose Day ಮೂಲಕ ಆರಂಭವಾಗುವ ಈ ವಿಶೇಷ ವಾರ 14ನೇ ತಾರೀಖಿನಂದು ಆಚರಿಸುವ ಪ್ರೇಮಿಗಳ ದಿನದ ಮೂಲಕ ಸುಖಾಂತ್ಯ (!?) ಕಾಣುತ್ತದೆ.

Valentine's Day | ಶುರುವಾಗುತ್ತಿದೆ ಪ್ರೇಮದ ವಾರ.. ಪ್ರೇಮಿಗಳ ದಿನಕ್ಕೆ ಆರಂಭವಾಗಲಿ ತಾಲೀಮು!
ಸಂಗ್ರಹ ಚಿತ್ರ
Follow us
Skanda
|

Updated on:Feb 15, 2021 | 2:13 PM

ಫೆಬ್ರವರಿ ಬಂತೆಂದರೆ ಹರೆಯದ ಮನಸ್ಸುಗಳಲ್ಲಿ ತುಮುಲ, ತಳಮಳ. ಫೆಬ್ರವರಿ ಹದಿನಾಲ್ಕನೇ ತಾರೀಖಿನಂದು ಆಚರಿಸಲಾಗುವ ಪ್ರೇಮಿಗಳ ದಿನಾಚರಣೆ ಹದಿಹರೆಯದವರನ್ನು ಅನಾಯಾಸವಾಗಿ ಆಕರ್ಷಿಸುವ ವಿಷಯ. ಹೊಸ ಪ್ರೇಮವನ್ನು ಬಯಸುವವರು, ಹಳೆ ಪ್ರೇಮಕ್ಕಾಗಿ ಕೊರಗುವವರು, ಸಿಗದ ಪ್ರೇಮಿಗಾಗಿ ಹಂಬಲಿಸುವವರು, ನವಜೋಡಿಗಳು, ಬದುಕಿನಲ್ಲಿ ಜಂಟಿಯಾಗಿ ಸುದೀರ್ಘ ಪಯಣ ನಡೆಸಿದವರು.. ಹೀಗೆ ಎಲ್ಲರಿಗೂ ಫೆ.14 ಕಡೆಗಣಿಸಲಾಗದ ದಿನ.

ನಮ್ಮಲ್ಲಿ ಫೆಬ್ರವರಿ 14ನ್ನು ಮಾತ್ರ ಪ್ರೇಮಿಗಳಿಗೆ ವಿಶೇಷ ದಿನವೆಂದು ಪರಿಗಣಿಸಲಾಗಿದೆ. ಆದರೆ, ವಾಸ್ತವವಾಗಿ ಫೆಬ್ರವರಿಯ ಒಂದಿಡೀ ವಾರವೇ ಪ್ರೇಮಕ್ಕೆ ಮೀಸಲಿದೆ ಎಂಬ ವಿಷಯ ನಿಮಗೆ ಗೊತ್ತಿದೆಯಾ? ಪ್ರೀತಿ, ಪ್ರೇಮದ ಜಗತ್ತಿಗೆ ಕಾಲಿಡುವವರಿಗೆ ಪ್ರೇಮಿಗಳ ದಿನಾಚರಣೆಗಿಂತಲೂ ಒಂದು ವಾರ ಮೊದಲೇ ತಾಲೀಮು ಶುರುವಾಗುತ್ತೆ. ತಾಲೀಮು ಎಂದ ಕೂಡಲೇ ಟ್ರಯಲ್​ ಅಂಡ್​ ಎರರ್ ಮಾದರಿಯಾ ಅಂತ ಮಾತ್ರ ಕೇಳಬೇಡಿ. ಏಕೆಂದರೆ ಇದು ಬೇರೆಯದ್ದೇ ವಿಚಾರ.

ಫೆಬ್ರವರಿ 7ರಿಂದ 14ರವರೆಗೂ ಪ್ರೇಮದ ವಾರ! ಗುಲಾಬಿ ದಿನ ಅರ್ಥಾತ್ Rose Day ಮೂಲಕ ಆರಂಭವಾಗುವ ಈ ವಿಶೇಷ ವಾರ 14ನೇ ತಾರೀಖಿನಂದು ಆಚರಿಸುವ ಪ್ರೇಮಿಗಳ ದಿನದ ಮೂಲಕ ಸುಖಾಂತ್ಯ (!?) ಕಾಣುತ್ತದೆ. ಪ್ರೇಮಿಗಳ ವಾರದಲ್ಲಿ ಯಾವ ದಿನದಂದು ಏನು ವಿಶೇಷ ಎಂಬ ಬಗ್ಗೆ ಇಲ್ಲಿ ಮಾಹಿತಿ ನೀಡ್ತಿದ್ದೇವೆ.

ಫೆಬ್ರವರಿ 7, 2021 ಭಾನುವಾರ: ರೋಸ್​ ಡೇ ಪ್ರೇಮಿಗಳ ವಾರದ ಮೊದಲ ದಿನ ರೋಸ್​ ಡೇ ಅಥವಾ ಗುಲಾಬಿ ದಿನ. ಗುಲಾಬಿ ಹೂವು ಪ್ರೇಮದ ಸಂಕೇತವಾಗಿರುವುದರಿಂದ ಈ ದಿನಾಚರಣೆಗೆ ವಿಶೇಷ ಮಹತ್ವವಿದೆ.

ಫೆಬ್ರವರಿ 8, 2021 ಸೋಮವಾರ: ಪ್ರಪೋಸ್​ ಡೇ ಈ ದಿನವನ್ನು ಅತ್ಯಂತ ರೊಮ್ಯಾಂಟಿಕ್​ ದಿನವೆಂದು ಪರಿಗಣಿಸಲಾಗುತ್ತೆ. ಇಷ್ಟಪಟ್ಟವರಿಗೆ ಈ ದಿನದಂದು ಪ್ರೇಮ ನಿವೇದನೆ ಮಾಡಿಕೊಳ್ಳುವ ಮೂಲಕ ಮನದಾಳದ ಮಾತನ್ನು ತಲುಪಿಸಬಹುದಾಗಿದೆ.

ಫೆಬ್ರವರಿ 9, 2021 ಮಂಗಳವಾರ: ಚಾಕೊಲೇಟ್ ದಿನ ಪ್ರೇಮ ನಿವೇದನೆಯ ನಂತರ ಬಾಯಿ ಸಿಹಿ ಮಾಡಿಕೊಳ್ಳಲು ಮೀಸಲಾಗಿರುವ ದಿನವಿದು. ನಿಮ್ಮ ಜೋಡಿಗೆ ಅವರು ಇಷ್ಟಪಡುವ ಸಿಹಿ ತಿನಿಸು ಅಥವಾ ಚಾಕೊಲೇಟ್ ನೀಡುವ ಮೂಲಕ, ಸಂಬಂಧವನ್ನು ಮತ್ತಷ್ಟು ಸಿಹಿಗೊಳಿಸುವಂತಾಗಲಿ ಎನ್ನುವುದು ಈ ದಿನದ ವಿಶೇಷ.

ಫೆಬ್ರವರಿ 10, 2021 ಬುಧವಾರ: ಟೆಡ್ಡಿ ಡೇ ಮುದ್ದುಮುದ್ದಾದ ಟೆಡ್ಡಿ ಬೇರ್​ ಪ್ರೇಮಕ್ಕೆ ವಿಶಿಷ್ಟ ಮೆರಗು ನೀಡುತ್ತವೆ. ಪ್ರೇಮದ ಪ್ರತೀಕವಾಗಿ ಟೆಡ್ಡಿ ಬೇರ್​ ಅಥವಾ ಇನ್ನಿತರ ಗೊಂಬೆಗಳನ್ನು ನಿಮ್ಮ ಪ್ರೇಮಿಗೆ ನೀಡುವ ಮೂಲಕ ಬಾಂಧವ್ಯವನ್ನು ಮತ್ತಷ್ಟು ಸುಂದರಗೊಳಿಸಬಹುದು.

ಫೆಬ್ರವರಿ 11, 2021 ಗುರುವಾರ: ಪ್ರಾಮಿಸ್ ಡೇ ಪ್ರೇಮದಲ್ಲಿ ನಂಬಿಕೆ ಮುಖ್ಯ. ಪ್ರೇಮಿಗಳು ಒಬ್ಬರಿಗೊಬ್ಬರು ಜೀವನ ಪರ್ಯಂತ ಜೊತೆಗಿರುವ ಭರವಸೆಯನ್ನು ಕೊಟ್ಟುಕೊಳ್ಳುವ ಮೂಲಕ ಈ ದಿನವನ್ನು ಆಚರಿಸಲಿ ಎನ್ನುವುದು ಮೂಲ ಉದ್ದೇಶ. ಬದುಕಿನ ಏರಿಳಿತಗಳಲ್ಲೂ ಜೊತೆಯಾಗಿರುವೆ ಎಂಬ ಭರವಸೆಯೇ ಪ್ರೇಮವನ್ನು ಮತ್ತಷ್ಟು ಗಟ್ಟಿಗೊಳಿಸುವುದರಿಂದ ಈ ದಿನಕ್ಕೆ ವಿಶೇಷ ಅರ್ಥವಿದೆ.

ಫೆಬ್ರವರಿ 12, 2021 ಶುಕ್ರವಾರ: ಹಗ್​ ಡೇ ಪ್ರೇಮಿಗಳ ವಾರದ ಆರನೇ ದಿನ ಹಗ್​ ಡೇ. ಒಬ್ಬರನ್ನೊಬ್ಬರು ಆಪ್ತವಾಗಿ ಅಪ್ಪಿಕೊಳ್ಳುವುದು ಸಂಬಂಧಕ್ಕೆ ಸೇತುವೆಯಾಗಬಲ್ಲದು. ಜೊತೆಗೆ ಪರಸ್ಪರ ನಂಬಿಕೆ, ವಿಶ್ವಾಸ ಮತ್ತು ಬೆಚ್ಚನೆಯ ಭಾವವನ್ನು ಮೂಡಿಸಬಲ್ಲದು. ಆದ್ದರಿಂದ ಪ್ರಾಮಿಸ್​ ಡೇ ಮರುದಿನ ಒಬ್ಬರನ್ನೊಬ್ಬರು ತಬ್ಬಿಕೊಂಡು ಪ್ರೇಮದ ಬೆಚ್ಚನೆಯ ಅನುಭೂತಿಯನ್ನು ಅನುಭವಿಸಲೆಂದು ಈ ದಿನವನ್ನು ಆಚರಿಸಲಾಗುತ್ತದೆ.

ಫೆಬ್ರವರಿ 13, ಶನಿವಾರ: ಕಿಸ್​ ಡೇ ಮುತ್ತು ಪ್ರೇಮದ ಅತಿ ಮಧುರ ಸಂಕೇತ. ಮನಸ್ಸಿಗೆ ಹತ್ತಿರಾದವರು ನೀಡುವ ಒಂದೇ ಒಂದು ಮುತ್ತು ಮನಸ್ಸಿನ ಭಾರವನ್ನೆಲ್ಲಾ ಕರಗಿಸಬಲ್ಲದು. ಅದು ಆಪ್ತತೆಯನ್ನು ಹೆಚ್ಚಿಸುವ ಜೊತೆಗೆ ಪ್ರೇಮದ ಇನ್ನೊಂದು ಮಜಲನ್ನೂ ಪರಿಚಯಿಸುತ್ತದೆ. ಆದ್ದರಿಂದ ಪ್ರೇಮಿಗಳ ವಾರದ ಏಳನೇ ದಿನ ಅತ್ಯಂತ ವಿಶೇಷವಾಗಿದೆ.

ಫೆಬ್ರವರಿ 14, ಭಾನುವಾರ: ಪ್ರೇಮಿಗಳ ದಿನ ಇದು ಪ್ರೇಮಿಗಳ ವಾರದ ಕಡೆಯ ಮತ್ತು ಮಹತ್ವದ ದಿನ. ಇದನ್ನು ಪ್ರೇಮದ ಸಂತ ಎಂದೇ ಕರೆಯಲ್ಪಟ್ಟ 3ನೇ ಶತಮಾನದ ರೋಮ್​ ಸಂತನೊಬ್ಬನ ನೆನಪಲ್ಲಿ ಆಚರಿಸಲಾಗುತ್ತದೆ. ಏಳು ದಿನಗಳಲ್ಲಿ ಅನುಭವಿಸಿದ ಒಟ್ಟು ಭಾವದ ಮೊತ್ತವೇ ಪ್ರೇಮಿಗಳ ದಿನ. ಇದು ಪ್ರೀತಿಯನ್ನು ಸಂಭ್ರಮಿಸುವ ದಿನ.

ಈ ಎಂಟೂ ದಿನಗಳ ಮಹತ್ವವನ್ನು ಅರಿತು, ಅವುಗಳ ಉದ್ದೇಶವನ್ನು ಮನಗಂಡು ಪ್ರೇಮದೆಡೆಗೆ ಹೆಜ್ಜೆ ಹಾಕಿದರೆ ಬದುಕು ನಿಜಕ್ಕೂ ಪ್ರೇಮಮಯವಾಗಲಿದೆ.

Published On - 9:44 pm, Wed, 3 February 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ