Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತಿಯಾದ ಬುದ್ಧಿಯುಳ್ಳ ಮನುಷ್ಯನಿಗೆ ಸಾಮಾನ್ಯ ಜ್ಞಾನದ್ದೇ ಕೊರತೆ..!!

ಭಗವಂತನು ಎಲ್ಲಾ ವಸ್ತುಗಳನ್ನು ಒಂದು ಸಂಕಲ್ಪ ಮತ್ತು ಸ್ವಭಾವವನ್ನು ಅರಿತೆ ಸೃಷ್ಟಿಸುವನು. ಹಾಗೆಯೇ ಮನುಷ್ಯನನ್ನೂ ಕೂಡ. ಕರ್ಮಫಲವರಿತೇ ಮನುಷ್ಯನ ಸೃಷ್ಟಿಯಾಗುವಂತದ್ದು

ಅತಿಯಾದ ಬುದ್ಧಿಯುಳ್ಳ ಮನುಷ್ಯನಿಗೆ ಸಾಮಾನ್ಯ ಜ್ಞಾನದ್ದೇ ಕೊರತೆ..!!
Common Sense
Follow us
TV9 Web
| Updated By: Digi Tech Desk

Updated on:May 02, 2023 | 9:16 AM

ಸೃಷ್ಟಿಕರ್ತನಿಗೆ ಗೊತ್ತಿಲ್ಲದ್ದು ಏನಿದೆ? ಭಗವಂತನು ನಮ್ಮನ್ನೆಲ್ಲ ಸೃಷ್ಟಿಸಿದ್ದಂತೂ ನಿಜ ತಾನೇ? ಹಾಗಾದರೆ ಸೃಷ್ಟಿಸಿದ ಕಾರಣವಾದರೂ ಏನು, ಗೊತ್ತಿದೆಯಾ ನಮಗೆ? ಈ ಸೃಷ್ಟಿಯಲ್ಲಿ ನಾವು ಅನೇಕ ದೋಷಗಳನ್ನು ಕಾಣುತ್ತೇವೆ ಅಲ್ಲವೇ? ಆತನು ಇಷ್ಟಾರು ರೂಪ, ಅವತಾರ ಧರ್ಮಗಳನ್ನೆಲ್ಲ ಅನಾವರಣ ಮಾಡಿಕೊಂಡು, ಆತ ಏಕೆ ಅವನ ಇಚ್ಛೆ ನಮಗೆ ಅರಿವೇ ಆಗದಂತೆ ಮಾಡಿಕೊಳ್ಳಬೇಕು? ಅವನ ಇಚ್ಛೆಯು ನಮಗೆ ತಿಳಿಯುವಂತಿದ್ದರೆ ನಮ್ಮ ಎಲ್ಲರ ಜೀವನ ಇಷ್ಟಾರು ಬಗೆಯಲ್ಲಿ ಹದಗೆಡುತ್ತಿರಲಿಲ್ಲವೇನೋ ಅನ್ನಿಸಯತ್ತದೆ ಆಲೋಚಿಸಿದಾಗ. ಅವನ ಆಜ್ಞೆ ಮತ್ತು ಇಷ್ಟಾನಿಷ್ಟಗಳು ಅರ್ಥವಾಗದೇ ಜನರು ದಾರಿ ತಪ್ಪಿ ನಡೆಯುವಂತೆ ಆಗುತ್ತಿರಲಿಲ್ಲ ಅಲ್ಲವೇ!

ಒಂದು ಹಲಸಿನ ಹಣ್ಣನ್ನೇ ತೆಗೆದುಕೊಳ್ಳೋಣ. ಆ ಸಿಹಿಯಾದ ಹಲಸಿನ ತೊಳೆ ಸುಲಭಕ್ಕೆ ನಮಗೆ ಸಿಗುವುದೇ! ಅದರ ಮೇಲಿರುವ ಮುಳ್ಳಿನ ಪದರವನ್ನು ಮೊದಲು ತೆಗೆಯಬೇಕು. ಅದರೊಳಗೆ ಬೀಜವಿರುತ್ತಸೆ. ಅದನ್ನು ತೆಗೆಯಬೇಕು. ಮಧ್ಯ ಅಂಟು ಬೇರೆ. ಅನಂತರ ಸಿಹಿಯಾದ ಹಣ್ಣು ನಮ್ಮ ಕೈಗೆ ಸಿಗುವಂತದ್ದು ಮತ್ತು ಅದರ ಸ್ವಾದವು ನಮಗೆ ಗೊತ್ತಾಗುವಂಥದ್ದು. ಹಾಗೆ ಅದೇ ಮುಳ್ಳು ಅಂಟುಗಳಿರದೆ ಹಲಸಿನ ಹಣ್ಣು ಕೈಗೆಟಕುವಂತೆ ಸೃಷ್ಟಿಸಿದ್ದರೆ ಎಷ್ಟು ಅನುಕೂಲ ಎಂದು ನಾವು ಅಂದುಕೊಳ್ಳುವುದೂ ನಿಜವೇ. ಮುಳ್ಳೇ ಇಲ್ಲದೆ ತೊಳೇ ಬಿಡುವುದಾದರೆ ಪ್ರಾಣಿ, ಪಕ್ಷಿ, ಕ್ರಿಮಿ, ಕೀಟಗಳು ಅದನ್ನು ಬಿಟ್ಟಾವಾ!

ಇದನ್ನೂ ಓದಿ: ಅಕ್ಷಯ ತೃತೀಯದಂದು ಮಿಸ್ ಆಗಿದ್ದರೆ ಬುದ್ದ ಪೂರ್ಣಿಮೆಯಂದು ಬಂಗಾರ ಕೊಳ್ಳಬಹುದು? ಏನಿದರ ಮಹತ್ವ? ಆಚರಣೆ ಹೇಗೆ?

ಭಗವಂತನು ಎಲ್ಲಾ ವಸ್ತುಗಳನ್ನು ಒಂದು ಸಂಕಲ್ಪ ಮತ್ತು ಸ್ವಭಾವವನ್ನು ಅರಿತೆ ಸೃಷ್ಟಿಸುವನು. ಹಾಗೆಯೇ ಮನುಷ್ಯನನ್ನೂ ಕೂಡ. ಕರ್ಮಫಲವರಿತೇ ಮನುಷ್ಯನ ಸೃಷ್ಟಿಯಾಗುವಂತದ್ದು. ಸೃಷ್ಟಿಕರ್ತನು ಎಲ್ಲಾ ವಸ್ತುಗಳನ್ನು ನಿರ್ದಿಷ್ಟ ರೀತಿಯಲ್ಲಿ ವಿನ್ಯಾಸಗೊಳಿಸಿ ನಿರ್ಮಿಸಿರುತ್ತಾನೆ. ಅವನು ಅದರ ಪ್ರತಿಯೊಂದನ್ನೂ ಖುದ್ದಾಗಿ ಬಂದು ನಿರ್ವಹಿಸುವುದಿಲ್ಲ ಅಥವಾ ಇದು ಹೀಗೆ ಆಗಬೇಕೆಂದು ನ್ಯಾಯಾಲಯದಲ್ಲಿ ತೀರ್ಪು ನೀಡಿದ ಹಾಗೆ ನೀಡುವುದೂ ಇಲ್ಲ. ಎಲ್ಲವೂ ಕರ್ಮದ ನಿಯಮದಂತೆ ನಡೆಯುವುದು.

ಇದನ್ನೂ ಓದಿ: ಗಗನದಲ್ಲಿ ಮೂಡುವ ಚಂದಿರ ತಿಳಿಸುವ ವಿಚಾರಗಳು ಏನು? ಚಂದ್ರನ‌ಗತಿ ಹೇಗೆ? ಚಂದ್ರನ ಬಗ್ಗೆ ಸಂಶೋಧನೆ ಹೇಳಿದ್ದೇನು?

ಮಾನವನ ಒಳಿತಿಗಾಗಿ ಭಗವಂತನು ಬೇರೆ ಬೇರೆ ದೇವತೆಗಳನ್ನು ಸೃಷ್ಟಿಸಿದ್ದಾನೆ. ವಿದ್ಯೆಗೆ ಸರಸ್ವತಿ, ಮಳೆಗೆ ವರುಣ, ಬೆಂಕಿಗೆ ಅಗ್ನಿ, ಗಾಳಿಗೆ ವಾಯು. ಹೀಗೆ ಆ ಪರಮಾತ್ಮನ ಸೃಷ್ಟಿ ಹೇಗೆಂದರೆ ಎಲ್ಲಕ್ಕೂ ದೇವತಾ ರೂಪವನ್ನು ಕೊಟ್ಟಿರುತ್ತಾನೆ. ಅದರಿಂದ ಮನುಷ್ಯ ಸುಖ ಜೀವನ ನಡೆಸಲು ಸಾಧ್ಯವಾಗಿದೆ. ಹಾಗೆಯೇ ಮನುಷ್ಯನ ಆಸೆಗೆ ಮಿತಿಯೆಲ್ಲಿದೆ ಹೇಳಿ? ಈ ಪ್ರಕೃತಿಯನ್ನು ಎಷ್ಟು ಹಾಳು ಮಾಡಿಲ್ಲ ಆತ? ನಮ್ಮ ಈ ಕೆಟ್ಟ ಕ್ರಿಯೆಗೆ ಕೆಟ್ಟ ಪ್ರತಿಫಲವನ್ನು ಹಾಗೆಯೇ ಒಳ್ಳೆಯ ಕ್ರಿಯೆಗೆ ಉತ್ತಮ ಪ್ರತಿಫಲವನ್ನು ಸೃಷ್ಟಿಕರ್ತನೇ ದಾಖಲಿಸಿರುತ್ತಾನೆ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು.

ಸೃಷ್ಟಿಯ ನಿಯಮ ಹೇಗಿದೆ ಎಂದರೆ ನಾವು ಹುಟ್ಟುತ್ತೇವೆ ಮತ್ತು ಸಾಯುತ್ತೇವೆ. ಹಾಗೆ ನಮ್ಮ ಕರ್ಮ ಕೂಡ ಮುಗಿಯುತ್ತದೆ ಎಂದರ್ಥವಲ್ಲ. ಈ ಜನ್ಮ ಅಷ್ಟೇ ಅಲ್ಲ ಹಲವು ಜನ್ಮಗಳ ಕರ್ಮದ ಪ್ರತಿಫಲವಾಗಿ ನಾವು ಮತ್ತೆ ಜನ್ಮ ತಾಳುವುದು. ನಮ್ಮ ಕೆಟ್ಟ ಕರ್ಮಗಳು ಹೋಗುವುದೇ ನಮ್ಮ ಒಳ್ಳೆಯ ಕೆಲಸದಿಂದ. ಪ್ರತಿಯೊಂದು ಕ್ರಿಯೆಗೂ ತಕ್ಕ ಪ್ರತಿಕ್ರಿಯೆ ಇದ್ದೇ ಇದೆ ಎಂಬ ಸಾಮಾನ್ಯಜ್ಞಾನವನ್ನೂ ನಾವು ಹೊಂದಿಲ್ಲವೇ?

-ಲೋಹಿತಶರ್ಮಾ

ಮತ್ತಷ್ಟು ಅಧ್ಯಾತ್ಮ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:15 am, Tue, 2 May 23

ರಶೀದ್ ಖಾನ್ ವಿರುದ್ಧ ಬೌಂಡರಿಗಳ ಮಳೆಗರೆದ ಲಿವಿಂಗ್‌ಸ್ಟೋನ್
ರಶೀದ್ ಖಾನ್ ವಿರುದ್ಧ ಬೌಂಡರಿಗಳ ಮಳೆಗರೆದ ಲಿವಿಂಗ್‌ಸ್ಟೋನ್
ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಗೂಳಿ ದಾಳಿ; ಶಾಕಿಂಗ್ ವಿಡಿಯೋ ಇಲ್ಲಿದೆ
ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಗೂಳಿ ದಾಳಿ; ಶಾಕಿಂಗ್ ವಿಡಿಯೋ ಇಲ್ಲಿದೆ
ಬೀದರ್ ಜಡ್ಜ್​​ ಮನೆಯಲ್ಲಿಯೇ ಕಳ್ಳತನ ಮಾಡಿದ ಖತರ್ನಾಕ್ ಖದೀಮರು
ಬೀದರ್ ಜಡ್ಜ್​​ ಮನೆಯಲ್ಲಿಯೇ ಕಳ್ಳತನ ಮಾಡಿದ ಖತರ್ನಾಕ್ ಖದೀಮರು
ಕರ್ನಾಟಕದಲ್ಲಿ 30,000 ಎಕರೆ ವಕ್ಫ್ ಭೂಮಿ ವಿದೇಶಿ ಕಂಪನಿಗಳಿಗೆ ಗುತ್ತಿಗೆ;ಶಾ
ಕರ್ನಾಟಕದಲ್ಲಿ 30,000 ಎಕರೆ ವಕ್ಫ್ ಭೂಮಿ ವಿದೇಶಿ ಕಂಪನಿಗಳಿಗೆ ಗುತ್ತಿಗೆ;ಶಾ
ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಆರ್​ಸಿಬಿ
ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಆರ್​ಸಿಬಿ
ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ
ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್