AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಅಭ್ಯಾಸವಿರುವ ಜನರು ಎಷ್ಟು ಸಂಪಾದಿಸಿದರೂ ಬಡತನದಲ್ಲಿಯೇ ಬದುಕುತ್ತಾರೆ! ಯಾಕೆ ಗೊತ್ತಾ?

ಕೆಲವು ಜನರು ತಮ್ಮ ಅಗತ್ಯಗಳನ್ನು ಪೂರೈಸಲು, ತಮ್ಮ ಯೋಜನೆಗಳನ್ನು ಪೂರ್ಣಗೊಳಿಸಲು ಮಧುರವಾಗಿ/ ಸಿಹಿಯಾಗಿ ಮಾತನಾಡುತ್ತಾರೆ. ಇಂತಹವರ ಮಾತುಗಳನ್ನು ನಂಬಿದರೆ ಮುಂದೆ ದೊಡ್ಡ ನಷ್ಟವನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ದುರಾಸೆಯಿಂದ ಮಧುರವಾಗಿ ಮಾತನಾಡುವವರ ಬಲೆಗೆ ಬೀಳಬೇಡಿ.

ಈ ಅಭ್ಯಾಸವಿರುವ ಜನರು ಎಷ್ಟು ಸಂಪಾದಿಸಿದರೂ ಬಡತನದಲ್ಲಿಯೇ ಬದುಕುತ್ತಾರೆ! ಯಾಕೆ ಗೊತ್ತಾ?
ಈ ಅಭ್ಯಾಸವಿರುವ ಜನರು ಎಷ್ಟು ಸಂಪಾದಿಸಿದರೂ ಬಡತನದಲ್ಲಿಯೇ ಬದುಕುತ್ತಾರೆ!
ಸಾಧು ಶ್ರೀನಾಥ್​
|

Updated on: Oct 19, 2023 | 3:57 PM

Share

ಚಾಣಕ್ಯ ನೀತಿ: ಪ್ರತಿಯೊಬ್ಬರ ಜೀವನದಲ್ಲಿ ಹಣಕ್ಕೆ ವಿಶೇಷ ಮಹತ್ವವಿದೆ. ಜನರು ಸಂತೋಷದಿಂದ ಬದುಕಲು ಹಣ ಸಂಪಾದಿಸಲು ಅನೇಕ ರೀತಿಯ ಕೆಲಸಗಳನ್ನು ಮಾಡುತ್ತಾರೆ. ಇನ್ನು ಕೆಲವರು ಮೋಸ ಮಾಡಿ ಹಣ ಗಳಿಸುವಂತಹ ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ. ಆದರೆ ಕೆಟ್ಟ ಅಥವಾ ತಪ್ಪು ಅಭ್ಯಾಸಗಳಿಂದ ಹಣ ಗಳಿಸುವಲ್ಲಿ ಸಂಪೂರ್ಣ ವಿಫಲರಾದವರೂ ಇದ್ದಾರೆ. ಒಬ್ಬರ ಇಂದ್ರಿಯಗಳ ಮೇಲೆ ನಿಯಂತ್ರಣದ ಕೊರತೆಯು ಹಣದ ನಷ್ಟಕ್ಕೆ ಕಾರಣವಾಗುತ್ತದೆ. ಕೆಲ ಶತಮಾನಗಳ ಹಿಂದೆ ಚಾಣಕ್ಯ ಎಂಬ ದಾರ್ಶನಿಕ ಇಂತಹ ಜನರ ಬಗ್ಗೆ ವಿವರಿಸಿದ್ದಾನೆ. ಅವರ ತತ್ತ್ವಶಾಸ್ತ್ರದ ಪ್ರಕಾರ (Chanakya Neeti)… ಕೆಲವರು ಕೆಟ್ಟ ಅಭ್ಯಾಸಗಳ ಮೂಲಕ ಹಣ ಸಂಪಾದಿಸುತ್ತಾರೆ… ಅಂತಹ ಕೆಟ್ಟ ಅಭ್ಯಾಸಗಳನ್ನು ತ್ಯಜಿಸುವಂತೆ ಸಲಹೆ ನೀಡಿದರು. ಹಣ ಸಂಪಾದಿಸಲು ವ್ಯಕ್ತಿಯು ತ್ಯಜಿಸಬೇಕಾದ ಕೆಟ್ಟ ಅಭ್ಯಾಸಗಳ (Habits) ಬಗ್ಗೆ ಇಲ್ಲಿ ತಿಳಿಯೋಣ (Life Style).

ಇತರರ ಪ್ರಭಾವದಿಂದ ದೂರವಿರಿ ಬುದ್ಧಿವಂತನಾದವನು ಯಾವಾಗಲೂ ತನ್ನ ಇಂದ್ರಿಯಗಳನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳುತ್ತಾನೆ. ಇತರರಿಂದ ಪ್ರಭಾವಿತನಾದ ವ್ಯಕ್ತಿ ಯಾರ ಮಾತನ್ನೂ ಕೇಳುವುದಿಲ್ಲ. ಹೀಗೆ ಇತರರಿಂದ ಪ್ರಭಾವಿತನಾದ ವ್ಯಕ್ತಿ ಜೀವನ ಪರ್ಯಂತ ನರಳಬೇಕಾಗುತ್ತದೆ.

ವೃಥಾ ವೆಚ್ಚಗಳ ತಡೆಗಟ್ಟುವಿಕೆ ಚಾಣಕ್ಯ ಹೇಳುವ ಪ್ರಕಾರ ಅನಾವಶ್ಯಕವಾಗಿ ಹಣ ಖರ್ಚು ಮಾಡುವವರು, ಉಳಿತಾಯ ಮಾಡದೇ ಇದ್ದರೆ ಕಷ್ಟ ಬಂದಾಗ ಆರ್ಥಿಕ ಸಮಸ್ಯೆ ಎದುರಿಸಬೇಕಾಗುತ್ತದೆ. ಆದ್ದರಿಂದ ಖರ್ಚು ಮಾಡುವ ನಿಮ್ಮ ಸ್ವಭಾವವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಚಾಣಕ್ಯ ಸಲಹೆ ನೀಡಲಾಗುತ್ತದೆ.

ದುರಾಸೆ/ ಅತ್ಯಾಸೆ ಹೊಂದಿರುವ ಜನರಿಗೆ ಕೆಲವು ಜನರು ತಮ್ಮ ಅಗತ್ಯಗಳನ್ನು ಪೂರೈಸಲು, ತಮ್ಮ ಯೋಜನೆಗಳನ್ನು ಪೂರ್ಣಗೊಳಿಸಲು ಮಧುರವಾಗಿ/ ಸಿಹಿಯಾಗಿ ಮಾತನಾಡುತ್ತಾರೆ. ಇಂತಹವರ ಮಾತುಗಳನ್ನು ನಂಬಿದರೆ ಮುಂದೆ ದೊಡ್ಡ ನಷ್ಟವನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ದುರಾಸೆಯಿಂದ ಮಧುರವಾಗಿ ಮಾತನಾಡುವವರ ಬಲೆಗೆ ಬೀಳಬೇಡಿ. ಏಕೆಂದರೆ ಅಂತಹ ನಿರ್ಧಾರವು ನಿಮ್ಮ ಜೀವನವನ್ನು ಹಾಳುಮಾಡುತ್ತದೆ.

ಇದನ್ನೂ ಓದಿ: ಚಾಣಕ್ಯ ನೀತಿ: ಸ್ನೇಹದ ಬಗ್ಗೆ ಕೆಲವು ಅತ್ಯುತ್ತಮ ಚಾಣಕ್ಯ ಉಲ್ಲೇಖಗಳು

ಸೋಮಾರಿತನವನ್ನು ಬಿಟ್ಟುಬಿಡಿ: ನೀವು ಜೀವನದಲ್ಲಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ಬಯಸುವುದಿಲ್ಲವಾದರೆ.. ನೀವು ಸೋಮಾರಿತನವನ್ನು ಬಿಟ್ಟುಬಿಡಬೇಕು. ಏಕೆಂದರೆ ಸೋಮಾರಿತನ ಇರುವವರು ಜೀವನದಲ್ಲಿ ಏನನ್ನೂ ಸಾಧಿಸುವುದಿಲ್ಲ.

ಇಲ್ಲಿ ಕೊಟ್ಟಿರುವ ಕೆಟ್ಟ ಚಟಗಳನ್ನು ಯಾರಾದರೂ ತ್ಯಜಿಸಿದರೆ, ಅವರು ತಮ್ಮ ಜೀವನದಲ್ಲಿ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗಿಲ್ಲ. ಇದು ಅನೇಕ ಇತರ ಸಮಸ್ಯೆಗಳನ್ನು ತಡೆಯಲು ಸಹ ನಿಮಗೆ ಸಹಾಯ ಮಾಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

(ಗಮನಿಸಿ: ಜನರ ಸಾಮಾನ್ಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಧಾರ್ಮಿಕ ಗ್ರಂಥಗಳ ಆಧಾರದ ಮೇಲೆ ಮೇಲೆ ತಿಳಿಸಿದ ಅಂಶಗಳನ್ನು ನೀಡಲಾಗಿದೆ)