Garuda Purana: ಮಹಿಳೆಯೇ ಆಗಲಿ ಪುರುಷರೇ ಆಗಲಿ ಈ ನಾಲ್ಕು ತಪ್ಪುಗಳನ್ನು ಮಾಡಬಾರದು ಅನ್ನುತ್ತದೆ ಗರುಡ ಪುರಾಣ! ಏನವು?

ಧರ್ಮಶಾಸ್ತ್ರಗಳಲ್ಲಿ ಜೀವನವನ್ನು ಸುಧಾರಿಸುವ, ಸಮೃದ್ಧಗೊಳಿಸುವ ಹಿತ ವಚನಗಳನ್ನು ಹೇಳಲಾಗಿದೆ. ಜೀವನದ ರೀತಿ ನೀತಿ, ಸದಾಚಾರ, ಭಕ್ತಿ ಭಾವ, ವೈರಾಗ್ಯ, ಯಕ್ಷ, ಯಜ್ಞ, ತಪ ಮುಂತಾದ ವಿಷಯಗಳ ಬಗ್ಗೆ ಸೂಕ್ಷ್ಮವಾಗಿ ಬಿಡಿಸಿ ಹೇಳಲಾಗಿದೆ. ಇಂದು ಪುರುಷ ಅಥವಾ ಮಹಿಳೆ ತನ್ನ ಜೀವನದಲ್ಲಿ ಮಾಡಬಾರದು ನಾಲ್ಕು ತಪ್ಪುಗಳ ಬಗ್ಗೆ ಬಿಡಿಸಿ ಹೇಳಲಾಗಿದೆ.

Garuda Purana: ಮಹಿಳೆಯೇ ಆಗಲಿ ಪುರುಷರೇ ಆಗಲಿ ಈ ನಾಲ್ಕು ತಪ್ಪುಗಳನ್ನು ಮಾಡಬಾರದು ಅನ್ನುತ್ತದೆ ಗರುಡ ಪುರಾಣ! ಏನವು?
ಸುಖೀ ಜೀವನ ಬಯಸುವ ಹಾಗಿದ್ದರೆ ಗರುಡ ಪುರಾಣದ ಈ ಸೂತ್ರಗಳನ್ನು ಪಾಲಿಸಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Oct 01, 2021 | 10:53 AM

ಹಿಂದೂ ಪುರಾಣದಲ್ಲಿ ಗರುಡ ಪುರಾಣವನ್ನು ಮಹಾಪುರಾಣ ಎಂದು ಕರೆಯುತ್ತಾರೆ. ಇದರಲ್ಲಿ ಜೀವನ ಮತ್ತು ಮೃತ್ಯು ಬಗ್ಗೆ ಭಗವಾನ್ ವಿಷ್ಣು ತನ್ನ ವಾಹನವಾದ ಪಕ್ಷಿರಾಜ ಗರುಡನಿಗೆ ಎದುರಾಗಿದ್ದ ಎಲ್ಲ ಜಿಜ್ಞಾಸೆಗಳನ್ನು ಪರಿಹರಿಸುತ್ತಾ ಲೋಕ ಕಲ್ಯಾಣಕ್ಕಾಗಿ ಅನೇಕ ಮಾರ್ಗದರ್ಶಿ ಸೂತ್ರಗಳನ್ನು ಹೇಳಿದ್ದಾರೆ.

ಧರ್ಮಶಾಸ್ತ್ರಗಳಲ್ಲಿ ಜೀವನವನ್ನು ಸುಧಾರಿಸುವ, ಸಮೃದ್ಧಗೊಳಿಸುವ ಹಿತ ವಚನಗಳನ್ನು ಹೇಳಲಾಗಿದೆ. ಜೀವನದ ರೀತಿ ನೀತಿ, ಸದಾಚಾರ, ಭಕ್ತಿ ಭಾವ, ವೈರಾಗ್ಯ, ಯಕ್ಷ, ಯಜ್ಞ, ತಪ ಮುಂತಾದ ವಿಷಯಗಳ ಬಗ್ಗೆ ಸೂಕ್ಷ್ಮವಾಗಿ ಬಿಡಿಸಿ ಹೇಳಲಾಗಿದೆ. ಇಂದು ಪುರುಷ ಅಥವಾ ಮಹಿಳೆ ತನ್ನ ಜೀವನದಲ್ಲಿ ಮಾಡಬಾರದು ನಾಲ್ಕು ತಪ್ಪುಗಳ ಬಗ್ಗೆ ಬಿಡಿಸಿ ಹೇಳಲಾಗಿದೆ.

1. ಪುರುಷ, ಮಹಿಳೆ ಸಂಗಾತಿಗಳಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ದೀರ್ಘ ಕಾಲ ಒಬ್ಬರನ್ನೊಬ್ಬರು ಬಿಟ್ಟು ದೀರ್ಘ ಕಾಲ ದೂರವಾಗಿ ಉಳಿಯಬಾರದು. ಹೀಗೆ ದೂರವಾದರೆ ಅದು ಅವರ ವೈವಾಹಿಕ ಜೀವನದ ಮೇಲೆ ದುಷ್ಪರಿಣಾಮ ಬೀರುತ್ತದೆ. ಗೌರವಪೂರ್ಣ ವೈವಾಹಿಕ ಜೀವನ ನಡೆಸಲು ಇಬ್ಬರೂ ಪ್ರೇಮಪೂರ್ವಕವಾಗಿ ಕೂಡಿ ಜೀವನ ನಡೆಸಬೇಕು.

2. ಮನುಷ್ಯ ತನ್ನ ಚ್ಚಾರಿತ್ರ್ಯ ಕಳೆದುಕೊಂಡರೆ ಜೀವನದಲ್ಲಿ ಎಲ್ಲಾ ಕಳೆದುಕೊಂಡಂತೆ ಎನ್ನಲಾಗುತ್ತದೆ. ಹಾಗಾಗಿ ಪ್ರತಿ ಪುರುಷ ಅಥವಾ ಮಹಿಳೆ ತನ್ನ ಚರಿತ್ರೆಯನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕು. ಅಂದರೆ ಸಚ್ಚಾರಿತ್ರ್ಯ ಹೊಂದಿರಬೇಕು. ಇದೇ ವೇಳೆ ಸಚ್ಚಾರಿತ್ರ್ಯ ಹೊಂದಿರದ ವ್ಯಕ್ತಿಯ ಜೊತೆಯೂ ಸಂಬಂಧ ಹೊಂದಬಾರದು. ಇಲ್ಲವಾದಲ್ಲಿ ಅವರ ಅಧಃಪತನ ಶುರುವಾಗಿಬಿಡುತ್ತದೆ.

3. ಗರುಡ ಪುರಾಣದಲ್ಲಿ ಉಲ್ಲೇಖಿಸಿರುವಂತೆ ಪ್ರತಿ ವ್ಯಕ್ತಿಯೂ ತನ್ನ ಸಂಗಾತಿಯನ್ನು ಗೌರವಯುತವಾಗಿ ಕಾಣಬೇಕು. ಇಂದು ನೀವು ಯಾರಿಗಾದರೂ ಅಪಮಾನ ಮಾಡಿದರೆ ಅದರಿಂದ ಭವಿಷ್ಯದಲ್ಲಿ ನೀವು ತಾಪತ್ರಯಕ್ಕೆ ಸಿಲುಕುವುದು ಖಚಿತ. ಹಾಗಾಗಿ ಸಂಗಾಥಿ ಜೊತೆ ಅನುಚಿತವಾಗಿ ನಡೆದುಕೊಳ್ಳಬೇಡಿ. ಉತ್ರಮ ಮಾತುಗಳನ್ನು ಆಡಿ, ಎಲ್ಲರನ್ನೂ ಸಮ್ಮಾನಪೂರ್ವಕವಾಗಿ ಕಾಣಿರಿ.

4. ಜೀವನದಲ್ಲಿ ಸಂಗಾತಿಯ ಜೊತೆ ಗೌರವಪೂರ್ಣ ಜೀವನ ಹೊಂದಲು ಬಯಸಿದ್ದೇ ಆದರೆ ಅಂತಹ ಸಂಗಾತಿ ತನ್ನ ಹೆತ್ತವರು, ಪೋಷಕರ ಮನೆಯಲ್ಲಿ ದೀರ್ಘಕಾಲ ಉಳಿಯಬಾರದು. ಸಂಗಾತಿಯ ಮನೆ ಬಿಟ್ಟು, ಬೇರೊಬ್ಬರ ಮನೆಯಲ್ಲಿ ಹೆಚ್ಚು ಕಾಲ ಉಳಿಯುವುದರಿಂದ ಅನಾನುಕೂಲ ಆಗುತ್ತದೆ. ಅದರಿಂದ ನಿಮ್ಮ ಮರ್ಯಾದೆಗೆ ಚ್ಯುತಿ ಬರಲಿದೆ. ಇದರಿಂದ ಮುಂದೆ ಜೀವನ ಅಸುರಕ್ಷಿತವಾಗತೊಡಗುತ್ತದೆ.

Published On - 8:19 am, Fri, 1 October 21

ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ