Temple Tour: ಝರಣಿ ನರಸಿಂಹಸ್ವಾಮಿ ದೇಗುಲದ ವಿಶೇಷತೆ ಏನು ಗೊತ್ತಾ?
ಆಂಧ್ರ, ತೆಲಂಗಾಣ, ಮಹಾರಾಷ್ಟ್ರದಿಂದಲೂ ಪ್ರಹ್ಲಾದ ವರದ ನರಸಿಂಹನ ಆಲಯಕ್ಕೆ ಭಕ್ತರ ದಂಡು ಹರಿದು ಬರುತ್ತೆ. ನವ ವಧು ವರರು, ಮಕ್ಕಳಾಗದವರು, ಹೆರಿಗೆಗೆ ತವರಿಗೆ ಹೊರಡುವ ಮುನ್ನ ತುಂಬು ಗರ್ಭಿಣಿಯರು ಸ್ವಾಮಿಯ ದರ್ಶನ ಪಡೆಯುತ್ತಾರೆ.
ಶನಿವಾರ ಅಂದ್ರೆ ವಿಷ್ಣು ಭಕ್ತರಿಗೆ ಪ್ರಿಯವಾದ ವಾರ. ವಿಷ್ಣುವಿನ ದಶಾವತಾರಗಳಲ್ಲಿ ಒಂದಾದ ನರಸಿಂಹನನ್ನ ಭಕ್ತರು ಭಕ್ತಿ ಭಾವದಿಂದ ಪೂಜಿಸುವ ವಾರ. ಈ ನಿಟ್ಟಿನಲ್ಲಿ ಬೀದರ್ನ ಝರಣಿ ನರಸಿಂಹ ಸ್ವಾಮಿ ದೇಗುಲದ ವಿಶೇಷತೆಯನ್ನ ತಿಳಿಯೋದು ಅಷ್ಟೇ ಮುಖ್ಯ. ಬೀದರ್ನ ಐತಿಹಾಸಿಕ ಝರಣಿ ನರಸಿಂಹ ಸ್ವಾಮಿ ದೇಗುಲದ ವೈಶಿಷ್ಟ್ಯವೇ ಅಂತದ್ದು. ಕರ್ನಾಟಕದ ಅಪರೂಪದ ದೇಗುಲಗಳ ಸಾಲಿನಲ್ಲಿ ಇರುವಂತಾ ಧಾರ್ಮಿಕ ಕ್ಷೇತ್ರಗಳಲ್ಲಿ ಬೀದರ್ ಹೊರವಲಯದಲ್ಲಿರುವ ಝರಣಿ ನರಸಿಂಹಸ್ವಾಮ ಕ್ಷೇತ್ರವೂ ಒಂದು. ಕರ್ನಾಟಕ ಮಾತ್ರವಲ್ಲ. ಆಂಧ್ರ, ತೆಲಂಗಾಣ, ಮಹಾರಾಷ್ಟ್ರದಿಂದಲೂ ಪ್ರಹ್ಲಾದ ವರದ ನರಸಿಂಹನ ಆಲಯಕ್ಕೆ ಭಕ್ತರ ದಂಡು ಹರಿದು ಬರುತ್ತೆ. ನವ ವಧು ವರರು, ಮಕ್ಕಳಾಗದವರು, ಹೆರಿಗೆಗೆ ತವರಿಗೆ ಹೊರಡುವ ಮುನ್ನ ತುಂಬು ಗರ್ಭಿಣಿಯರು ಸ್ವಾಮಿಯ ದರ್ಶನ ಪಡೆದು ವರ ಬೇಡುವ ಪರಿಪಾಠ ಇಲ್ಲಿದೆ.
Latest Videos