Garuda Purana: ಸ್ವರ್ಗ – ನರಕ ಏನಿದರ ಲೆಕ್ಕಾಚಾರ? ಯಾವ ಕರ್ಮಕ್ಕೆ ಸ್ವರ್ಗ, ಯಾವ ಕರ್ಮಕ್ಕೆ ನರಕ? ತಿಳಿಯೋಣ ಬನ್ನೀ
heaven and hell: ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುವವರಿಗೆ ಇಹಲೋಕ ತ್ಯಜಿಸಿದ ಬಳಿಕ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂದೂ ಕೆಟ್ಟ ಕೆಟ್ಟ ಕೆಲಸಗಳನ್ನು ಆಡುವವರಿಗೆ ನರಕವೇ ಗತಿ ಎಂದು ಹೇಳಲಾಗಿದೆ. ನರಕದ ಯಾತನಾಮಯ ಪರಿಸ್ಥಿತಿಗಳನ್ನು ಸಾದ್ಯಂತವಾಗಿ ವಿವರಿಸಲಾಗಿದೆ.
ಚಿಕ್ಕಂದಿನಲ್ಲಿ ನಮ್ಮ ಹಿರಿಯರು ಸ್ವರ್ಗ ಮತ್ತು ನರಕದ ವಿಚಾರವಾಗಿ ಅನೇಕ ಬಾರಿ ಹೇಳಿರುವುದನ್ನು ನಾವೆಲ್ಲಾ ಕೇಳಿದ್ದೇವೆ. ಗರುಡ ಪುರಾಣದಲ್ಲಿಯೂ ಇದರ ಬಗ್ಗೆ ಸವಿಸ್ತಾರವಾಗಿ, ಧರ್ಮ ಸೂಕ್ಷ್ಮವಾಗಿ ತಿಳಿಯಹೇಳಲಾಗಿದೆ. ಯಾವ ಕರ್ಮಗಳಿಂದ ಸ್ವರ್ಗ ಪ್ರಾಪ್ತಿಯಾಗುತ್ತದೆ, ಯಾವ ಕರ್ಮಕ್ಕೆ ನರಕ ಸಿಗುತ್ತದೆ ಎಂಬುದನ್ನು ವಿವರಿಸಲಾಗಿದೆ.
ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುವವರಿಗೆ ಇಹಲೋಕ ತ್ಯಜಿಸಿದ ಬಳಿಕ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂದೂ ಕೆಟ್ಟ ಕೆಟ್ಟ ಕೆಲಸಗಳನ್ನು ಆಡುವವರಿಗೆ ನರಕವೇ ಗತಿ ಎಂದು ಹೇಳಲಾಗಿದೆ. ನರಕದ ಯಾತನಾಮಯ ಪರಿಸ್ಥಿತಿಗಳನ್ನು ಸಾದ್ಯಂತವಾಗಿ ವಿವರಿಸಲಾಗಿದೆ. ಇದರ ಅರ್ಥ ಇಷ್ಟೇ.. ಚಿಕ್ಕಂದಿನಿಂದಲೇ ಹಿರಿಯರು ನಮಗೆ ಇದನ್ನು ಯಾಕೆ ಹೇಳುತ್ತಿದ್ದರು ಅಂದರೆ ನಾವು ಆದಷ್ಟೂ ಒಳ್ಳೆಯದನ್ನೇ ಮಾಡುತ್ತಿರಬೇಕು ಎಂದು ಪ್ರೇರಣಾತ್ಮಕವಾಗಿ ಹೇಳುತ್ತಿದ್ದರು.
ಇನ್ನು ಗರುಡ ಪುರಾಣದಲ್ಲಿರುವ ಸ್ವರ್ಗ ಮತ್ತು ನರಕದ ಪರಿಕಲ್ಪನೆಗಳನ್ನು ಬಿಡಿಸಿ ಹೇಳುವುದಾದರೆ ಎಂತಹ ಕರ್ಮದಿಂದ ಅಧರ್ಮ ಆಗುತ್ತದೆ, ಅದರಿಂದ ನರಕ ಹೇಗೆ ಸಿಗುತ್ತದೆ ಎಂಬುದನ್ನು ಹೇಳಲಾಗಿದೆ.
ಈ ಒಳ್ಳೆಯ ಕರ್ಮಗಳು ಸ್ವರ್ಗದವರೆಗೂ ನಮ್ಮನ್ನು ಕೊಂಡೊಯ್ಯುತ್ತವೆ: 1. ಗರುಡ ಪುರಾಣದ ಪ್ರಕಾರ ಯಾರು ತಮ್ಮ ಇಂದ್ರಿಯಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿರುತ್ತಾರೋ ಕ್ರೋಧ, ಮದ, ಮೋಹ, ಭಯ, ಶೋಕಗಳನ್ನು ಬಿಟ್ಟಿರುತ್ತಾರೋ ಅಂತಹವರು ನಿಜಕ್ಕೂ ಮಹಾತ್ಮರೇ ಸರಿ. ಅವರಿಗೆ ಸ್ವರ್ಗದ ಬಾಗಿಲು ತೆರೆದಿರುತ್ತದೆ.
2. ಯಾರು ತಮ್ಮ ಪತ್ನಿಯನ್ನು ಬಿಟ್ಟು ಪರ ಸ್ತ್ರೀಯನ್ನು ಮಾತೆ, ಸಹೋದರಿ ಮತ್ತು ಪುತ್ರಿಯಂತೆ ನೋಡಿಕೊಳ್ಳುತ್ತಾರೋ, ಮಹಿಳೆಯನ್ನು ಗೌರವಯುತವಾಗಿ ಕಾಣುತ್ತಾರೋ ಅಂತಹವರಿಗೆ ಸಾವಿನ ಬಳಿಕ ಸ್ವರ್ಗದ ಬಾಗಿಲು ತೆರೆದುಕೊಂಡಿರುತ್ತದೆ.
3. ಯಾರು ಬೇರೆಯವರಲ್ಲಿ ಒಳ್ಳೆಯ ಗುಣಗಳನ್ನು ಕಾಣುತ್ತಾರೋ, ಅವರನ್ನು ನಿಜವಾಗಿಯೂ ಹೊಗಳುತ್ತಾರೋ, ಇತರರ ತಪ್ಪು ತಿದ್ದಿ ಅವರ ಸುಧಾರಣೆಗೆ ಶ್ರಮಿಸುತ್ತಾರೋ… ಅಂತಹವರಿಗೆ ಪರಲೋಕದಲ್ಲಿ ಯಮನ ದರುಶನವಾಗದು. ಯಾರು ಧರ್ಮದ ಹಾದಿಯಲ್ಲಿ ಸಾಗುತ್ತಾರೋ ಅವರು ಸ್ವರ್ಗದತ್ತ ಸೆಳೆಯಲ್ಪಡುತ್ತಾರೆ.
4. ಪರೋಪಕಾರಿಯಾಗಿ ಯಾರು ಬಾವಿ, ಕೆರೆ ಕಟ್ಟೆಗಳನ್ನು ನಿರ್ಮಾಣ ಮಾಡುತ್ತಾರೋ, ಜನರಿಗಾಗಿ ಕುಡಿಯುವ ನೀರಿನ ಕಟ್ಟೆಗಳನ್ನು ಕಟ್ಟುತ್ತಾರೋ, ಮಂದಿರ, ಆಶ್ರಮಗಳನ್ನು ನಿರ್ಮಿಸಿ ಆಶ್ರಯ ಕಲ್ಪಿಸುತ್ತಾರೋ ಅವರು ತಮ್ಮ ಪಾಪಗಳನ್ನೆಲ್ಲಾ ಕಳೆದುಕೊಂಡು ಇಹಲೋಕ ತ್ಯಜಿಸುವಾಗ ನೆಮ್ಮದಿಯಿಂದ ಪ್ರಾಣ ಬಿಟ್ಟು ಸ್ವರ್ಗದತ್ತ ತೆರಳುತ್ತಾರೆ.
ಈ ಕೆಟ್ಟ ಕೆಲಸಗಳಿಂದ ನರಕ ಕಟ್ಟಿಟ್ಟಬುತ್ತಿ: 1. ಯಾರು ಬಡವರು, ರೋಗಿಗಳು, ಅಸಹಯಾಕರು, ಅನಾಥರು, ಹಿರಿಯರು ಮುಂತಾದವರಿಗೆ ನೆರವಾಗದೆ, ಅಂತಹವರನ್ನು ಸತಾಯಿಸುತ್ತಾರೋ, ಅಂತಹವರ ಬಗ್ಗೆ ವ್ಯಂಗ್ಯವಾಡುತ್ತಾರೋ ಅವರಿಗೆ ನರಕದ ಬಾಗಿಲು ತೆರೆದಿರುತ್ತದೆ.
2. ಯಾರು ದೇವ-ದೇವತೆಗಳನ್ನು ಪೂಜಿಸುವುದಿಲ್ಲವೋ, ಯಾರು ತಮ್ಮ ಹಿರಿಯರನ್ನು ಗೌರವಿಸಿ, ಚೆನ್ನಾಗಿ ನೋಡಿಕೊಳ್ಳುವುದಿಲ್ಲವೋ ಅಂತಹವರಿಗೆ ಸ್ವರ್ಗದ ಬಾಗಿಲು ಬಂದ್ ಆಗಿರುತ್ತದೆ.
3. ಯಾರು ಸದಾ ಲೋಭ, ಮೋಹ, ಮದದಲ್ಲಿ ಮುಳುಗಿರುತ್ತಾರೋ, ಬೇರೊಬ್ಬರ ಧನ ಸಂಪತ್ತನ್ನು ಕಬಳಿಸುತ್ತಾರೋ ಅಂತಹವರಿಗೆ ಮೃತ್ಯುವಿನ ಬಳಿಕ ನರಕದಲ್ಲಿ ಅಸಹನೀಯ ಕಷ್ಟ ಕಾರ್ಪರ್ಣ್ಯಗಳು ಹೆಜ್ಜೆಹೆಜ್ಜೆಗೂ ಕಾಡುತ್ತಿರುತ್ತದೆ.
(ಇಲ್ಲಿ ನೀಡಿರುವ ಮಾಹಿತಿಯು ಧಾರ್ಮಿಕ ಶ್ರದ್ಧಾಭಕ್ತಿಗೆ ಅನುಗುಣವಾಗಿ ಲೋಕಮಾನ್ಯ ರೀತಿಯಲ್ಲಿ ನೀಡಲಾಗಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರ ಇರುವುದಿಲ್ಲ. ಜನಸಾಮಾನ್ಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಸ್ತುತ ಪಡಿಸಲಾಗಿದೆ)