April 2025 Festival List: ಏಪ್ರಿಲ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ
ವಿಭಿನ್ನ ಸಂಸ್ಕೃತಿಯ ಬೀಡಾಗಿರುವ ಭಾರತದಲ್ಲಿ ವರ್ಷದ 12 ತಿಂಗಳಲ್ಲೂ ಕೂಡಾ ಒಂದಲ್ಲಾ ಒಂದು ಹಬ್ಬ, ವ್ರತಾಚರಣೆಯನ್ನು ಆಚರಿಸಲಾಗುತ್ತದೆ. ಅದೇ ರೀತಿ ಚೈತ್ರ ಮತ್ತು ವೈಶಾಖ ಈ ಎರಡು ಮಾಸದಿಂದ ಕೂಡಿರುವ ಏಪ್ರಿಲ್ ತಿಂಗಳಲ್ಲೂ ಹಲವಾರು ಹಬ್ಬಗಳನ್ನು ಆಚರಿಸಲಾಗುತ್ತದೆ. ರಾಮ ನವಮಿಯಿಂದ ಹಿಡಿದು ಅಕ್ಷಯ ತೃತೀಯದ ಯಾವೆಲ್ಲಾ ಪ್ರಮುಖ ಹಬ್ಬಗಳನ್ನು ಏಪ್ರಿಲ್ ತಿಂಗಳಲ್ಲಿ ಆಚರಿಸಲಾಗುತ್ತದೆ ಎಂಬ ಮಾಹಿತಿ ಇಲ್ಲಿವೆ.

ವರ್ಷದ ನಾಲ್ಕನೇ ತಿಂಗಳಾಗಿರುವ ಏಪ್ರಿಲ್ (April) ಹಿಂದೂ (Hindu) ಧರ್ಮದಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ. ಈ ತಿಂಗಳಲ್ಲಿ (month) ಅನೇಕ ಪ್ರಮುಖ ಉಪವಾಸಗಳು, ಹಬ್ಬಗಳು (Festivals) ಮತ್ತು ಆಚರಣೆಗಳು (celebration) ಬರುತ್ತವೆ. ಹೌದು ಇದು ಚೈತ್ರ ಮತ್ತು ವೈಶಾಖ ಮಾಸದಿಂದ ಕೂಡಿರುವ ತಿಂಗಳಾಗಿರುವುದರಿಂದ, ಏಪ್ರಿಲ್ ತಿಂಗಳನ್ನು ಧಾರ್ಮಿಕ ದೃಷ್ಟಿಕೋನದಿಂದ ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಜೊತೆಗೆ ನಂಬಿಕೆಗಳ ಪ್ರಕಾರ, ಏಪ್ರಿಲ್ ತಿಂಗಳು ಧಾರ್ಮಿಕ ಆಚರಣೆಗಳು, ಉಪವಾಸ, ದಾನ ಮತ್ತು ಧ್ಯಾನಕ್ಕೆ ಶುಭವೆಂದು ಪರಿಗಣಿಸಲಾಗಿದೆ. ಹಾಗಿರುವಾಗ ಈ ತಿಂಗಳು ಯಾವೆಲ್ಲಾ ಪ್ರಮುಖ, ಹಬ್ಬಗಳು, ವ್ರತಗಳನ್ನು ಆಚರಿಸಲಾಗುತ್ತದೆ ಎಂಬುದನ್ನು ನೋಡೋಣ ಬನ್ನಿ.
ಏಪ್ರಿಲ್ ತಿಂಗಳಲ್ಲಿ ಆಚರಿಸುವ ಪ್ರಮುಖ ಹಬ್ಬಗಳ ಪಟ್ಟಿ:
• ಏಪ್ರಿಲ್ 1, 2025 – ವಿನಾಯಕ ಚತುರ್ಥಿ
• ಏಪ್ರಿಲ್ 3, 2025 – ಯಮುನಾ ಷಷ್ಠಿ
• ಏಪ್ರಿಲ್ 4, 2025 – ದುರ್ಗಾಷ್ಟಮಿ
• ಏಪ್ರಿಲ್ 4, 2025- ಅಶೋಕಾಷ್ಟಮಿ
• ಏಪ್ರಿಲ್ 6, 2025 – ರಾಮ ನವಮಿ
• ಏಪ್ರಿಲ್ 8, 2025 – ಕಾಮದಾ ಏಕಾದಶಿ
• ಏಪ್ರಿಲ್ 8, 2025- ಸರ್ವೈಕಾದಶಿ
• ಏಪ್ರಿಲ್ 10, 2025 – ಪ್ರದೋಷ ವ್ರತ
• ಏಪ್ರಿಲ್ 12, 2025 – ಹನುಮ ಜಯಂತಿ
• ಏಪ್ರಿಲ್ 12, 2025 – ಚೈತ್ರ ಪೂರ್ಣಿಮಾ ವ್ರತ
• ಏಪ್ರಿಲ್ 13, 2025- ವೈಶಾಖ ತಿಂಗಳಾರಂಭ
• ಏಪ್ರಿಲ್ 14, 2025 – ಮೇಷ ಸಂಕ್ರಾಂತಿ
• ಏಪ್ರಿಲ್ 14, 2025 – ಸೌರಮಾನ ಯುಗಾದಿ
• ಏಪ್ರಿಲ್ 16, 2025 – ಸಂಕಷ್ಟ ಚತುರ್ಥಿ
• ಏಪ್ರಿಲ್ 18, 2025- ಗುಡ್ ಫ್ರೈಡೆ
• ಏಪ್ರಿಲ್ 24, 2025 – ವರೂಥಿನಿ ಏಕಾದಶಿ
• ಏಪ್ರಿಲ್ 25, 2025 – ಪ್ರದೋಷ ವ್ರತ
• ಏಪ್ರಿಲ್ 26, 2025 – ಮಾಸಿಕ ಶಿವರಾತ್ರಿ
• ಏಪ್ರಿಲ್ 27, 2025 – ವೈಶಾಖ ಅಮಾವಾಸ್ಯೆ
• ಏಪ್ರಿಲ್ 29, 2025 – ಪರಶುರಾಮ ಜಯಂತಿ
• ಏಪ್ರಿಲ್ 30, 2025 – ಅಕ್ಷಯ ತೃತೀಯ
• ಏಪ್ರಿಲ್ 30, 2025 – ಬಸವ ಜಯಂತಿ
ಅಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ