AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shaving on Monday: ಸೋಮವಾರ ಶೇವಿಂಗ್ ಮಾಡುವುದು ಒಳ್ಳೆಯದೋ ಕೆಟ್ಟದ್ದೋ?

ಜ್ಯೋತಿಷ್ಯದ ಪ್ರಕಾರ, ಕೂದಲು ಮತ್ತು ಉಗುರುಗಳನ್ನು ಕತ್ತರಿಸಲು ಶುಭ ಮತ್ತು ಅಶುಭ ದಿನಗಳಿವೆ. ಸೋಮವಾರ, ಮಂಗಳವಾರ ಮತ್ತು ಶನಿವಾರ ಕೂದಲು ಕತ್ತರಿಸುವುದು ಅಶುಭ ಎಂದು ಪರಿಗಣಿಸಲಾಗುತ್ತದೆ. ಬುಧವಾರ ಮತ್ತು ಶುಕ್ರವಾರ ಶುಭ ದಿನಗಳಾಗಿವೆ. ಸೋಮವಾರ ಕೂದಲು ಕತ್ತರಿಸುವುದರಿಂದ ಮಾನಸಿಕ ಸಮಸ್ಯೆಗಳು ಮತ್ತು ಅಕಾಲಿಕ ಮರಣ ಸಂಭವಿಸಬಹುದು ಎಂಬ ನಂಬಿಕೆಯಿದೆ.

Shaving on Monday: ಸೋಮವಾರ ಶೇವಿಂಗ್ ಮಾಡುವುದು ಒಳ್ಳೆಯದೋ ಕೆಟ್ಟದ್ದೋ?
ಶೇವಿಂಗ್
ಅಕ್ಷತಾ ವರ್ಕಾಡಿ
|

Updated on: Jul 11, 2025 | 11:53 AM

Share

ಜ್ಯೋತಿಷ್ಯದ ಪ್ರಕಾರ, ಯಾವಾಗೆಂದರೆ ಆವಾಗ ಕೂದಲು ಕತ್ತರಿವುಸುವುದು ಅಥವಾ ಗಡ್ಡ ತೆಗೆಯುವುದು ಒಳ್ಳೆಯದಲ್ಲ. ಉಗುರು, ಕೂದಲು ಕತ್ತರಿಸುವಂತಹ ದೈನಂದಿನ ಚಟುವಟಿಕೆಗಳಿಗೆ ಶುಭ ಮತ್ತು ಅಶುಭ ದಿನಗಳಿವೆ. ಸಾಕಷ್ಟು ಪುರುಷರು ಶುಭ ಅಶುಭ ದಿನಗಳನ್ನು ಲೆಕ್ಕಿಸದೇ ಹೋಗಿ ಶೇವಿಂಗ್​ ಮಾಡಿಕೊಂಡು ಬರುತ್ತಾರೆ. ಆದರೆ ಇಂತಹ ಅಭ್ಯಾಸಗಳು ಒಳ್ಳೆಯದಲ್ಲ ಎಂದು ಜ್ಯೋತಿಷ್ಯಶಾಸ್ತ್ರಜ್ಞರು ಎಚ್ಚರಿಸುತ್ತಾರೆ.

ಧಾರ್ಮಿಕ ನಂಬಿಕೆಗಳು ಸೋಮವಾರದಂದು ಶೇವಿಂಗ್​​ ಮಾಡುವುದು ಅಶುಭ ಎಂದು ಹೇಳಲಾಗುತ್ತದೆ. ಸೋಮವಾರ ಶಿವನಿಗೆ ಅರ್ಪಿತವಾದ ದಿನ. ಈ ದಿನ ಕೂದಲನ್ನು ಕತ್ತರಿಸುವುದರಿಂದ ಮಾನಸಿಕ ತೊಂದರೆ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಇದಲ್ಲದೇ ಸೋಮವಾರದಂದು ಕೂದಲು ಕತ್ತರಿಸುವುದರಿಂದ ಅಕಾಲಿಕ ಮರಣ ಸಂಭವಿಸುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ. ಶಿವನ ಭಕ್ತ ಅಥವಾ ತನ್ನ ಮಗನ ಕಲ್ಯಾಣವನ್ನು ಬಯಸುವ ವ್ಯಕ್ತಿಯು ಸೋಮವಾರದಂದು ಕೂದಲು ಅಥವಾ ಗಡ್ಡವನ್ನು ಕತ್ತರಿಸಬಾರದು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಮದುವೆ ಸಮಯದಲ್ಲಿ ಅಲಂಕೃತ ತೆಂಗಿನಕಾಯಿ ಬಳಸುವುದು ಶುಭವೇ?

ಪ್ರಸಿದ್ಧ ಸಂತ ಪ್ರೇಮಾನಂದ ಮಹಾರಾಜ್ ಅವರ ಪ್ರಕಾರ, ಸೋಮವಾರದಂದು ಕೂದಲು ಅಥವಾ ಗಡ್ಡವನ್ನು ಕತ್ತರಿಸಬಾರದು. ಸೋಮವಾರದಂದು ಕೂದಲು ಕತ್ತರಿಸುವುದರಿಂದ ಜಾತಕದಲ್ಲಿ ಚಂದ್ರನ ಸ್ಥಾನ ದುರ್ಬಲಗೊಳ್ಳುತ್ತದೆ ಮತ್ತು ಇದು ಮಾನಸಿಕ ಅಸ್ವಸ್ಥತೆಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ.

ಮಂಗಳವಾರ ಮತ್ತು ಶನಿವಾರದಂದು ಕೂಡ ಕೂದಲು ಕತ್ತರಿಸುವುದು ಅಥವಾ ಗಡ್ಡ ಬೋಳಿಸುವುದು ಒಳ್ಳೆಯದಲ್ಲ. ಆದ್ದರಿಂದ ಕೂದಲು, ಉಗುರು ಕತ್ತರಿಸಲು ಬುಧವಾರ ಮತ್ತು ಶುಕ್ರವಾರ ಮೀಸಲಿಡಿ. ಈ ಎರಡು ದಿನವನ್ನು ಶುಭವೆಂದು ಪರಿಗಣಿಸಲಾಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!
ಬಿಗ್ ಬಾಸ್ ಎಲಿಮಿನೇಷನ್: ಅಪಾಯದಲ್ಲಿ ಕಿರಣ್ ಶಾಸ್ತ್ರಿ, ಸಂಗೀತಾ, ಲಿಖಿತ್
ಬಿಗ್ ಬಾಸ್ ಎಲಿಮಿನೇಷನ್: ಅಪಾಯದಲ್ಲಿ ಕಿರಣ್ ಶಾಸ್ತ್ರಿ, ಸಂಗೀತಾ, ಲಿಖಿತ್
ಫ್ಲೈದುಬೈ ಪ್ರಕರಣ: ಸಹ ಪೈಲಟ್ ಕೃತ್ಯವನ್ನು ಶ್ಲಾಘಿಸಿದ ಅಲ್-ಖೈದಾ
ಫ್ಲೈದುಬೈ ಪ್ರಕರಣ: ಸಹ ಪೈಲಟ್ ಕೃತ್ಯವನ್ನು ಶ್ಲಾಘಿಸಿದ ಅಲ್-ಖೈದಾ
ನೆಲದ ಮೇಲೆ ಕುಳಿತು ಉಪಹಾರ ಸೇವಿಸಿದ ವಿಜಯೇಂದ್ರ
ನೆಲದ ಮೇಲೆ ಕುಳಿತು ಉಪಹಾರ ಸೇವಿಸಿದ ವಿಜಯೇಂದ್ರ
ಅಭಿಮನ್ಯು ನಿವೃತ್ತಿ ಬೆನ್ನಲ್ಲೇ ಚಿನ್ನದ ಅಂಬಾರಿ ಹೊರುವುದು ಇದೇ ಆನೆ ಅಂತೆ!
ಅಭಿಮನ್ಯು ನಿವೃತ್ತಿ ಬೆನ್ನಲ್ಲೇ ಚಿನ್ನದ ಅಂಬಾರಿ ಹೊರುವುದು ಇದೇ ಆನೆ ಅಂತೆ!
ಕೆಪಿಎಸ್​ಸಿಯ ನಾಲ್ವರು ಸದಸ್ಯರಿಗೂ ಇಡಿ ಸಂಕಷ್ಟ ಸಾಧ್ಯತೆ
ಕೆಪಿಎಸ್​ಸಿಯ ನಾಲ್ವರು ಸದಸ್ಯರಿಗೂ ಇಡಿ ಸಂಕಷ್ಟ ಸಾಧ್ಯತೆ