Vasthu Tips: ಎಷ್ಟೇ ದುಡಿದರೂ ಹಣ ಕೈಯಲ್ಲಿ ಉಳಿಯುತ್ತಿಲ್ಲವೇ, ಹಾಗಿದ್ರೆ ನಿಮ್ಮ ಪರ್ಸ್‌ನಲ್ಲಿ ಈ ವಸ್ತು ಇಡಿ

ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಜೇಬಿನಲ್ಲಿ ಕರ್ಪೂರ, ಲಕ್ಷ್ಮಿ ಯಂತ್ರ, ಕೇಸರಿ, ಬೆಳ್ಳಿ ನಾಣ್ಯ ಅಥವಾ ಗೋಮತಿ ಚಕ್ರ ಇಟ್ಟುಕೊಳ್ಳುವುದರಿಂದ ಹಣಕಾಸಿನ ಸಮಸ್ಯೆಗಳನ್ನು ನಿವಾರಿಸಬಹುದು. ಈ ವಸ್ತುಗಳು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಲು ಸಹಾಯ ಮಾಡುತ್ತವೆ ಎಂದು ನಂಬಲಾಗಿದೆ. ಶುಕ್ರವಾರದಂದು ಈ ವಸ್ತುಗಳನ್ನು ಪೂಜಿಸಿ, ನಂತರ ಜೇಬಿನಲ್ಲಿ ಇಟ್ಟುಕೊಳ್ಳುವುದು ಶ್ರೇಷ್ಠ.

Vasthu Tips: ಎಷ್ಟೇ ದುಡಿದರೂ ಹಣ ಕೈಯಲ್ಲಿ ಉಳಿಯುತ್ತಿಲ್ಲವೇ, ಹಾಗಿದ್ರೆ ನಿಮ್ಮ ಪರ್ಸ್‌ನಲ್ಲಿ ಈ ವಸ್ತು ಇಡಿ
Attract Wealth

Updated on: May 03, 2025 | 9:08 AM

ಎಷ್ಟೇ ದುಡಿದು ಸಂಪಾದಿಸಿದರೂ ಹಣ ನಮ್ಮ ಕೈಯಲ್ಲಿ ಉಳಿಯುವುದೇ ಇಲ್ಲ ಎನ್ನುವುದು ಪ್ರತಿಯೊಬ್ಬರ ಸಮಸ್ಯೆ. ಈ ಸಮಸ್ಯೆಗಳಿಂದ ಮುಕ್ತರಾಗಲು ವಾಸ್ತು ಸಲಹೆಯನ್ನು ಅನುಸರಿಸುವುದು ಅಗತ್ಯ ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ. ಹಣದ ಸಮಸ್ಯೆಯಿಂದ ದೂರವಿರಲು ವಾಸ್ತುವಿನಲ್ಲಿ ಕೆಲವು ಪರಿಹಾರಗಳಿವೆ. ವಾಸ್ತು ಪ್ರಕಾರ, ನಿಮ್ಮ ಜೇಬಿನಲ್ಲಿ ಅಥವಾ ಪರ್ಸ್‌ನಲ್ಲಿ ಕೆಲವು ವಸ್ತುಗಳನ್ನು ಇಟ್ಟುಕೊಳ್ಳುವುದರಿಂದ ಸಂಪತ್ತು ಆಕರ್ಷಿಸುತ್ತದೆ. ಈ ವಸ್ತುಗಳು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ತರುತ್ತವೆ ಎಂದು ನಂಬಲಾಗಿದೆ.

ಕರ್ಪೂರ:

ಹಳದಿ ಬಟ್ಟೆಯಲ್ಲಿ ಕರ್ಪೂರದ ಸಣ್ಣ ತುಂಡನ್ನು ಕಟ್ಟಿ ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳುವುದರಿಂದ ಆರ್ಥಿಕ ಲಾಭ ಸಿಗುತ್ತದೆ. ಈ ಕರ್ಪೂರದ ಸುವಾಸನೆಯು ಲಕ್ಷ್ಮಿ ದೇವಿಯನ್ನು ಆಕರ್ಷಿಸುತ್ತದೆ ಎಂದು ಹೇಳಲಾಗುತ್ತದೆ. ಆದರೆ ಪ್ರತಿ ಶುಕ್ರವಾರ ಈ ತುಂಡನ್ನು ಬದಲಾಯಿಸುವುದು ಅಗತ್ಯ.

ಲಕ್ಷ್ಮಿ ಯಂತ್ರ:

ನಿಮ್ಮ ಜೇಬಿನಲ್ಲಿ ಸಣ್ಣ ಲಕ್ಷ್ಮಿ ಯಂತ್ರ ಇಟ್ಟುಕೊಳ್ಳುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ. ಈ ಯಂತ್ರವನ್ನು ಶುಕ್ರವಾರದಂದು ಪೂಜಿಸಿ, ಸ್ವಚ್ಛವಾದ ಬಟ್ಟೆಯಲ್ಲಿ ಸುತ್ತಿ ಜೇಬಿನಲ್ಲಿ ಇಡಬೇಕು.

ಇದನ್ನೂ ಓದಿ
ಜುಲೈ 3 ರಿಂದ ಅಮರನಾಥ ಯಾತ್ರೆ ಆರಂಭ; ನೋಂದಣಿ ಸೇರಿದಂತೆ ಸಂಪೂರ್ಣ ವಿವರ
ಐದು ವರ್ಷಗಳ ನಂತರ ಕೈಲಾಸ ಮಾನಸ ಸರೋವರ ಯಾತ್ರೆ ಪುನರಾರಂಭ
ದೇವಾಲಯ ನಿರ್ಮಾಣವಾಗುತ್ತಿದ್ದಾಗಲೇ ಕೊಳಕ್ಕೆ ಹಾರಿದ ಶಿಲ್ಪಿ,ಇಂದಿಗೂ ಅಪೂರ್ಣ!
ಅಯೋಧ್ಯೆ ರಾಮಮಂದಿರದ ಮುಖ್ಯ ಅರ್ಚಕರಿಗೆ ಸಿಗುವ ಸಂಬಳ, ಸೌಲಭ್ಯ ಏನೇನು?

ಕೇಸರಿ:

ನಿಮ್ಮ ಜೇಬಿನಲ್ಲಿ ಸಣ್ಣ ಕೇಸರಿ ಪ್ಯಾಕೆಟ್ ಇಟ್ಟುಕೊಳ್ಳುವುದರಿಂದ ಸಂಪತ್ತು ಆಕರ್ಷಿಸುತ್ತದೆ. ಕೇಸರಿ ಲಕ್ಷ್ಮಿ ದೇವಿಗೆ ಪ್ರಿಯವಾದದ್ದು ಎಂದು ಪರಿಗಣಿಸಲಾಗಿದೆ. ಇದನ್ನು ಪ್ರತೀ ಶುಕ್ರವಾರದಂದು ಬದಲಾಯಿಸುವುದು ಉತ್ತಮ.

ಇದನ್ನೂ ಓದಿ: ವಿವಾಹಿತ ಮಹಿಳೆಯರು ಈ ದಿನ ತಪ್ಪಿಯೂ ತಲೆ ಸ್ನಾನ ಮಾಡಬಾರದು!

ಬೆಳ್ಳಿ ನಾಣ್ಯ:

ನಿಮ್ಮ ಜೇಬಿನಲ್ಲಿ ಸಣ್ಣ ಬೆಳ್ಳಿ ನಾಣ್ಯವನ್ನು ಇಟ್ಟುಕೊಳ್ಳುವುದರಿಂದ ಹಣದ ನಿರಂತರ ಹರಿವು ಖಚಿತ. ಈ ನಾಣ್ಯವನ್ನು ಶುಕ್ರವಾರದಂದು ಲಕ್ಷ್ಮಿ ದೇವಿಯ ಪಾದದಲ್ಲಿ ಇಟ್ಟು ಪೂಜಿಸಬೇಕು, ನಂತರ ಜೇಬಿನಲ್ಲಿ ಇಡಬೇಕು.

ಗೋಮತಿ ಚಕ್ರ:

ಗೋಮತಿ ಚಕ್ರವು ಸಮುದ್ರದಲ್ಲಿ ಕಂಡುಬರುವ ಪವಿತ್ರ ಕಲ್ಲು. ಅದನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳುವುದರಿಂದ ಆರ್ಥಿಕ ಲಾಭ ಸಿಗುವುದರ ಜೊತೆಗೆ ದುಷ್ಟ ಶಕ್ತಿಗಳಿಂದ ರಕ್ಷಣೆಯೂ ಸಿಗುತ್ತದೆ. ಅದನ್ನು ಸ್ವಚ್ಛವಾದ ಬಟ್ಟೆಯಲ್ಲಿ ಸುತ್ತಿ ನಿಮ್ಮ ಜೇಬಿನಲ್ಲಿ ಇರಿಸಿ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ