18 ಬಾರಿ ಅಯ್ಯಪ್ಪ ಮಾಲೆ ಹಾಕುವ ಸ್ವಾಮಿಗಳ ಹೆಸರುಗಳು ಗೊತ್ತಾ?

ಪ್ರತಿವರ್ಷ ಭಕ್ತಿಯಿಂದ ಮಾಲೆ ಧರಿಸಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆಯುವ ಸ್ವಾಮಿಗಳಿಗೆ ಒಂದೊಂದು ಹೆಸರಿನಿಂದ ಕರೆಯಲಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಹೌದು ಸಾಮಾನ್ಯವಾಗಿ ಐದಕ್ಕಿಂತ ಹೆಚ್ಚು ಬಾರಿ ಮಾಲೆ ಧರಿಸಿ ಅಯ್ಯಪ್ಪನ ದರ್ಶನ ಪಡೆದವರನ್ನು ಗುರು ಸ್ವಾಮಿ ಎನ್ನಲಾಗುತ್ತದೆ. ಆದರೆ ಇದರ ಹೊರತಾಗಿ ಪ್ರತಿವರ್ಷ ಮಾಲೆ ಹಾಕಿದವರನ್ನು ಒಂದೊಂದು ಹೆಸರುಗಳಿಂದ ಕರೆಯಲಾಗುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

18 ಬಾರಿ ಅಯ್ಯಪ್ಪ ಮಾಲೆ ಹಾಕುವ ಸ್ವಾಮಿಗಳ ಹೆಸರುಗಳು ಗೊತ್ತಾ?
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 21, 2024 | 2:29 PM

ಶಬರಿಮಲೆ ಎಂದಾಕ್ಷಣ ನಮಗೆ ಮೊದಲು ನೆನಪಿಗೆ ಬರೋದು ಅಯ್ಯಪ್ಪ ಸ್ವಾಮಿ ಮತ್ತು ಭಕ್ತಿಯಿಂದ ಮಾಲೆ ಧರಿಸುವ ಅವನ ಭಕ್ತರು. ಕಾರ್ತಿಕ ಮಾಸ ಆರಂಭವಾಗುತ್ತಿದ್ದಂತೆ ಲಕ್ಷಾಂತರ ಜನ ಅಯ್ಯಪ್ಪ ಮಾಲೆಯನ್ನು ಧರಿಸುತ್ತಾರೆ. ಕೆಲವರು ಮಂಡಲ ದೀಕ್ಷಾ, ಇನ್ನು ಕೆಲವರು ಅರ್ಥ ಮಂಡಲ ದೀಕ್ಷಾ ತೆಗೆದುಕೊಳ್ಳುತ್ತಾರೆ. 41 ದಿನಗಳ ದೀಕ್ಷೆ ಪಡೆದು ಶಬರಿಮಲೆಗೆ ತೆರಳಿ ಅಯ್ಯಪ್ಪನ ದರ್ಶನ ಪಡೆದು ಬಂದ ಬಳಿಕ ಪೂಜೆಯೊಂದಿಗೆ ಅಯ್ಯಪ್ಪ ಮಾಲೆಯನ್ನು ತೆಗೆಯುತ್ತಾರೆ. ಆದರೆ ಪ್ರತಿವರ್ಷ ಭಕ್ತಿಯಿಂದ ಮಾಲೆ ಧರಿಸಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆಯುವ ಸ್ವಾಮಿಗಳಿಗೆ ಒಂದೊಂದು ಹೆಸರಿನಿಂದ ಕರೆಯಲಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಹೌದು ಸಾಮಾನ್ಯವಾಗಿ ಐದಕ್ಕಿಂತ ಹೆಚ್ಚು ಬಾರಿ ಮಾಲೆ ಧರಿಸಿ ಅಯ್ಯಪ್ಪನ ದರ್ಶನ ಪಡೆದವರನ್ನು ಗುರು ಸ್ವಾಮಿ ಎನ್ನಲಾಗುತ್ತದೆ. ಆದರೆ ಇದರ ಹೊರತಾಗಿ ಪ್ರತಿವರ್ಷ ಮಾಲೆ ಹಾಕಿದವರನ್ನು ಒಂದೊಂದು ಹೆಸರುಗಳಿಂದ ಕರೆಯಲಾಗುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಾಮಾನ್ಯವಾಗಿ ಮೊದಲನೇ ಬಾರಿಗೆ ದೀಕ್ಷೆ ಪಡೆದುಕೊಂಡ ಸ್ವಾಮಿಗಳನ್ನು ಕನ್ನೆಸ್ವಾಮಿ ಎಂದು ಕರೆಯಲಾಗುತ್ತದೆ.

ಎರಡನೇ ಬಾರಿಗೆ ಮಾಲೆ ಹಾಕಿದ ಸ್ವಾಮಿಗಳನ್ನು ಕತ್ತಿಸ್ವಾಮಿ ಎಂದು ಸಂಬೋಧಿಸಲಾಗುತ್ತದೆ.

ಮೂರನೇ ಬಾರಿಗೆ ಮಾಲೆ ಹಾಕಿದವರನ್ನು ಗಂಟ ಸ್ವಾಮಿ ಎಂದು ಕರೆಯಲಾಗುತ್ತದೆ.

ನಾಲ್ಕನೇ ಬಾರಿಗೆ ಮಾಲೆ ಹಾಕಿದರೇ ಅವರನ್ನು ಗದಸ್ವಾಮಿ ಎನ್ನಲಾಗುತ್ತದೆ.

ಆ ಬಳಿಕ ಮಾಲೆ ಹಾಕುವ ಸ್ವಾಮಿಗಳನ್ನು ಬಿಲ್ಲು ಸ್ವಾಮಿ ಎಂದು ಕರೆಯಲಾಗುತ್ತದೆ.

ಆರನೇ ಬಾರಿಗೆ ಮಾಲೆ ಹಾಕಿದ ಸ್ವಾಮಿಗಳನ್ನು ಜ್ಯೋತಿ ಸ್ವಾಮಿ ಎನ್ನಲಾಗುತ್ತದೆ.

ಏಳನೇ ಬಾರಿಗೆ ಸೂರ್ಯ ಸ್ವಾಮಿ, ಎಂಟನೇ ಬಾರಿಗೆ ಚಂದ್ರ ಸ್ವಾಮಿ, ಒಂಬತ್ತನೇ ಬಾರಿಗೆ ಮಾಲೆ ಹಾಕಿದವರನ್ನು ವೇಲು ಸ್ವಾಮಿ, ಹತ್ತನೇ ಬಾರಿಗೆ ಮಾಲೆ ಹಾಕಿದರೆ ಅವರನ್ನು ವಿಷ್ಣು ಚಕ್ರ ಸ್ವಾಮಿ ಎಂದು ಕರೆಯಲಾಗುತ್ತದೆ.

ಹನ್ನೊಂದನೇ ಬಾರಿಗೆ ಮಾಲೆ ಹಾಕಿದರೆ ಶಂಖಾದರ ಸ್ವಾಮಿ, ಹನ್ನೆರಡನೇ ಬಾರಿಗೆ ಮಾಲೆ ಹಾಕಿದವರನ್ನು ನಾಗಾಭರಣ ಸ್ವಾಮಿ, ಬಳಿಕ ಹದಿಮೂರನೇ ಬಾರಿಗೆ ಮಾಲೆ ಹಾಕುವ ಸ್ವಾಮಿಗಳನ್ನು ಶ್ರೀಹರಿ ಸ್ವಾಮಿ, ಹದಿನಾಲ್ಕನೇ ಬಾರಿಗೆ ಮಾಲೆ ಹಾಕುವ ಸ್ವಾಮಿಗಳನ್ನು ಪದ್ಮಸ್ವಾಮಿ, ಹದಿನೈದನೇ ಬಾರಿಗೆ ಮಾಲೆ ಹಾಕುವ ಸ್ವಾಮಿಗಳನ್ನು ತ್ರಿಶೂಲಸ್ವಾಮಿ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಮನೆಯ ಈ ಮೂಲೆಯಲ್ಲಿ ನವಿಲು ಗರಿ ಇಟ್ಟರೆ ಹಣದ ಸಮಸ್ಯೆಯೇ ಬರುವುದಿಲ್ಲ

ಹದಿನಾರನೇ ಬಾರಿಗೆ ಮಾಲೆ ಹಾಕಿದರೆ ಅಂತಹ ಸ್ವಾಮಿಯನ್ನು ಶಬರಿಗಿರಿಸ್ವಾಮಿ, ಹದಿನೇಳನೇ ಬಾರಿಗೆ ಮಾಲೆ ಹಾಕುವ ಸ್ವಾಮಿಯನ್ನು ಓಂಕಾರ ಸ್ವಾಮಿ, ಹದಿನೆಂಟನೇ ಬಾರಿಗೆ ಮಾಲೆ ಹಾಕಿದರೆ ಅವರನ್ನು ನಾರಿಕೇಳಸ್ವಾಮಿ ಎಂದು ಕರೆಯಲಾಗುತ್ತದೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಕಾಂಗ್ರೆಸ್ ತತ್ವ ಸಿದ್ಧಾಂತಗಳು ಬಸನಗೌಡ ಯತ್ನಾಳ್​ಗೆ ಒಗ್ಗಲ್ಲ: ಲಕ್ಷ್ಮಣ್
ಕಾಂಗ್ರೆಸ್ ತತ್ವ ಸಿದ್ಧಾಂತಗಳು ಬಸನಗೌಡ ಯತ್ನಾಳ್​ಗೆ ಒಗ್ಗಲ್ಲ: ಲಕ್ಷ್ಮಣ್
ಧಾರವಾಡ: ಶಾಲಾ ಮಕ್ಕಳ ಮೇಲೆ ಕೋತಿ ದಾಳಿ
ಧಾರವಾಡ: ಶಾಲಾ ಮಕ್ಕಳ ಮೇಲೆ ಕೋತಿ ದಾಳಿ
ಮುಂದಿನ ಸಲ ದೆಹಲಿ ಬಂದಾಗ ವಿಜಯೇಂದ್ರ ವಿರುದ್ಧ ದೂರು ಸಲ್ಲಿಸುತ್ತೇವೆ: ಶಾಸಕ
ಮುಂದಿನ ಸಲ ದೆಹಲಿ ಬಂದಾಗ ವಿಜಯೇಂದ್ರ ವಿರುದ್ಧ ದೂರು ಸಲ್ಲಿಸುತ್ತೇವೆ: ಶಾಸಕ
'ಪೆಂಗಲ್' ಸೈಕ್ಲೋನ್ ಎಫೆಕ್ಟ್​​: ಬದಲಾದ ಅರಬ್ಬೀ ಸಮುದ್ರ ಬಣ್ಣ
'ಪೆಂಗಲ್' ಸೈಕ್ಲೋನ್ ಎಫೆಕ್ಟ್​​: ಬದಲಾದ ಅರಬ್ಬೀ ಸಮುದ್ರ ಬಣ್ಣ
ಯಡಿಯೂರಪ್ಪ ರಾಜ್ಯಾಧ್ಯಕ್ಷನಾದಾಗ ಕೇವಲ 45-ವರ್ಷ ವಯಸ್ಸು: ರೇಣುಕಾಚಾರ್ಯ
ಯಡಿಯೂರಪ್ಪ ರಾಜ್ಯಾಧ್ಯಕ್ಷನಾದಾಗ ಕೇವಲ 45-ವರ್ಷ ವಯಸ್ಸು: ರೇಣುಕಾಚಾರ್ಯ
ಶೋಕಾಸ್ ನೋಟೀಸ್: ಬಸನಗೌಡ ಯತ್ನಾಳ್ ಇಂದು ವರಿಷ್ಠರಿಗೆ ನೀಡುವರೇ ಉತ್ತರ?
ಶೋಕಾಸ್ ನೋಟೀಸ್: ಬಸನಗೌಡ ಯತ್ನಾಳ್ ಇಂದು ವರಿಷ್ಠರಿಗೆ ನೀಡುವರೇ ಉತ್ತರ?
ಸುರಿಯುವ ಮಳೆ ಮತ್ತು ಥರಗುಟ್ಟುವ ಚಳಿಯಿಂದ ವಯಸ್ಕರು ಕಂಗಾಲು
ಸುರಿಯುವ ಮಳೆ ಮತ್ತು ಥರಗುಟ್ಟುವ ಚಳಿಯಿಂದ ವಯಸ್ಕರು ಕಂಗಾಲು
ಪ್ರಧಾನಿ ಮೋದಿ ಕಚೇರಿಯಿಂದ ಬಂದ ಪತ್ರ ಕಂಡು ಭಾವುಕರಾದ ದಿಯಾ ಗೋಸಾಯ್
ಪ್ರಧಾನಿ ಮೋದಿ ಕಚೇರಿಯಿಂದ ಬಂದ ಪತ್ರ ಕಂಡು ಭಾವುಕರಾದ ದಿಯಾ ಗೋಸಾಯ್
ಚಾಮುಂಡಿ ಬೆಟ್ಟದಿಂದ ಏಕಾಏಕಿ ರಸ್ತೆಗೆ ಉರುಳಿದ ಕಲ್ಲುಬಂಡೆಗಳು
ಚಾಮುಂಡಿ ಬೆಟ್ಟದಿಂದ ಏಕಾಏಕಿ ರಸ್ತೆಗೆ ಉರುಳಿದ ಕಲ್ಲುಬಂಡೆಗಳು
ಫೆಂಗಲ್ ಚಂಡಮಾರುತದಿಂದಾಗಿ ನಾಳೆ ಸಾಯಂಕಾಲದವರೆಗೆ ಬೆಂಗಳೂರಲ್ಲಿ ಮಳೆ
ಫೆಂಗಲ್ ಚಂಡಮಾರುತದಿಂದಾಗಿ ನಾಳೆ ಸಾಯಂಕಾಲದವರೆಗೆ ಬೆಂಗಳೂರಲ್ಲಿ ಮಳೆ