ಮನೆ ಮುಂದೆ ಬಾಳೆಗಿಡ ನೆಡುವುದು ಶುಭವೇ ಅಥವಾ ಅಶುಭದ ಸಂಕೇತವೇ?
ಲೇಖನದಲ್ಲಿ ಹಿಂದೂ ಧರ್ಮದಲ್ಲಿ ಬಾಳೆ ಗಿಡಕ್ಕೆ ಇರುವ ಪವಿತ್ರ ಸ್ಥಾನವನ್ನು ವಿವರಿಸಲಾಗಿದೆ. ಆದರೆ ಮನೆ ಆವರಣದಲ್ಲಿ ಬಾಳೆ ಗಿಡ ನೆಡುವುದು ಶುಭವೇ ಅಥವಾ ಅಶುಭವೇ ಎಂಬ ಗೊಂದಲ ಸಾಕಷ್ಟು ಜನರಲ್ಲಿದೆ. ಈ ಗೊಂದಲಕ್ಕೆ ಖ್ಯಾತ ಜ್ಯೋತಿಷಿಗಳಾದ ಬಸವರಾಜ ಗುರೂಜಿಯವರು ಉತ್ತರಿಸಿದ್ದಾರೆ. ಲೇಖನದಲ್ಲಿ ಇದರ ಬಗ್ಗೆ ಸ್ಪಷ್ಟನೆ ನೀಡಲಾಗಿದೆ.

ಹಿಂದೂ ಧರ್ಮದಲ್ಲಿ ಬಾಳೆ ಗಿಡಕ್ಕೆ ಪವಿತ್ರ ಸ್ಥಾನವಿದೆ. ಪುರಾಣಗಳ ಪ್ರಕಾರ, ಬಾಳೆ ಗಿಡವನ್ನು ಶ್ರೀವಿಷ್ಣುವಿನ ವಾಸಸ್ಥಾನವೆಂದು ನಂಬಲಾಗಿದೆ. ಗುರುವಾರದ ದಿನ ಬಾಳೆ ಗಿಡವನ್ನು ಪೂಜಿಸಿದರೆ ಶ್ರೀವಿಷ್ಣು ಪ್ರಸನ್ನನಾಗುತ್ತಾನೆ ಎನ್ನಲಾಗಿದೆ. ಇದಲ್ಲದೇ ಯಾವುದೇ ಶುಭ ಸಮಯದಲ್ಲಿ ಬಾಳೆ ಗಿಡಗಳನ್ನು ಬಳಸಲಾಗುತ್ತದೆ. ಆದರೆ ಬಾಳೆ ಗಿಡವನ್ನ ಮನೆ ಆವರಣದಲ್ಲಿ ನೆಡಬಹುದೇ? ಇದು ಶುಭವೋ ಅಥವಾ ಅಶುಭದ ಸಂಕೇತವೋ ಎಂಬ ಗೊಂದಲ ಸಾಕಷ್ಟು ಜನರಲ್ಲಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿಯವರು ತಿಳಿಸಿರುವ ಮಾಹಿತಿ ಇಲ್ಲಿದೆ.
ಪುರಾಣ ಕಥೆ:
ಹಿಂದೂ ಸಂಸ್ಕೃತಿಯಲ್ಲಿ, ಬಾಳೆಹಣ್ಣಿನ ಗಿಡವನ್ನು ದೂರ್ವಾಸ ಮಹರ್ಷಿಗಳು ಸೃಷ್ಟಿಸಿದ್ದಾರೆ ಎಂದು ನಂಬಲಾಗಿದೆ. ದೂರ್ವಾಸ ಮಹರ್ಷಿಗಳ ಪತ್ನಿ ಕಂದಳಿ. ಒಮ್ಮೆ ಇವರಿಬ್ಬರ ನಡುವೆ ಜಗಳವಾದಾಗ ಕಂದಳಿ ದೂರ್ವಾಸ ಮಹರ್ಷಿಯನ್ನು ಬಿಟ್ಟು ತನ್ನ ತವರಿಗೆ ಹೋಗುತ್ತಾಳೆ. ಅವಳನ್ನು ಮರಳಿ ಮನೆಗೆ ಕರೆತರುವ ಸಂದರ್ಭದಲ್ಲಿ ಕಂದಳಿ ತನ್ನ ಬೇಡಿಕೆಯೊಂದನ್ನು ಮುಂದಿಡುತ್ತಾಳೆ. ತನಗೆ ರುಚಿಯಾದ ಹಣ್ಣೊಂದು ಬೇಕು. ಆದರೆ ಅದು ಬ್ರಹ್ಮ ಸೃಷ್ಟಿಯಾಗಿರಬಾರದು ಎಂದು ಶರತ್ತು ನೀಡುತ್ತಾಳೆ. ಅದಕ್ಕಾಗಿ ದೂರ್ವಾಸ ಮಹರ್ಷಿಗಳು ಬಾಳೆ ಹಣ್ಣನ್ನು ಸೃಷ್ಟಿ ಮಾಡುತ್ತಾರೆ. ಈ ಹಣ್ಣು ತಿಂದು ಕಂದಳಿ ಶಾಂತಳಾಗುತ್ತಾಳೆ. ಅಲ್ಲಿದ್ದಲೇ ಈ ಹಣ್ಣಿಗೆ ಕದಳಿ ಎಂಬ ಹೆಸರು ಬರುತ್ತದೆ. ವಿಡಿಯೋದಲ್ಲಿ ಸಂಪೂರ್ಣ ಕಥೆ ತಿಳಿದುಕೊಳ್ಳಿ.
ವಿಡಿಯೋ ಇಲ್ಲಿದೆ ನೋಡಿ:
ಇದನ್ನೂ ಓದಿ: ಇಂದಿನಿಂದ ಬುಧ-ಶುಕ್ರ ಸಂಯೋಗ; ಈ 6 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ!
ಮನೆ ಮುಂದೆ ಬಾಳೆಗಿಡ ನೆಡಬಹುದೇ?
ಕೆಲವು ನಂಬಿಕೆಗಳ ಪ್ರಕಾರ, ಮನೆಯಲ್ಲಿ ಬಾಳೆಹಣ್ಣಿನ ಗಿಡವನ್ನು ಬೆಳೆಸುವುದು ಅಶುಭವೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಅದು ಮನೆಯ ಸಂತಾನೋತ್ಪತ್ತಿಗೆ ಅಡ್ಡಬರಬಹುದು ಎಂದು ನಂಬಲಾಗಿದೆ. ಎಂದು ಆದಾಗ್ಯೂ, ಇದು ವ್ಯಕ್ತಿಯ ವೈಯಕ್ತಿಕ ನಂಬಿಕೆ ಮತ್ತು ಆದ್ಯತೆಗಳನ್ನು ಅವಲಂಬಿಸಿರುತ್ತದೆ. ಬಾಳೆಹಣ್ಣು ಶಾಂತತೆಯನ್ನು ತರುತ್ತದೆ ಎಂಬುದನ್ನು ಕೂಡ ನಂಬಲಾಗಿದೆ. ಒಟ್ಟಾರೆಯಾಗಿ ಮನೆ ಮುಂದೆ ಬಾಳೆಹಣ್ಣಿನ ಗಿಡ ನೆಡುವುದು ವ್ಯಕ್ತಿಯ ವೈಯಕ್ತಿಕ ನಿರ್ಧಾರವಾಗಿದೆ ಎಂದು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿಯವರು ವಿವರಿಸುತ್ತಾರೆ.
ಮತ್ತಷ್ಟು ಅಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




