Chaitra Month 2024: ಚೈತ್ರ ಮಾಸದಲ್ಲಿ ಈ ಕೆಲಸವನ್ನು ಯಾವುದೇ ಕಾರಣಕ್ಕೂ ಮಾಡಬೇಡಿ!
ಈ ವರ್ಷ ಚೈತ್ರ ಮಾಸವು ಏ. 23 ರಂದು ಪ್ರಾರಂಭವಾಗಿ ಮೇ. 8 ರಂದು ಕೊನೆಗೊಳ್ಳುತ್ತದೆ. ಈ ತಿಂಗಳಲ್ಲಿ ನಿಮ್ಮ ಮನೆಯಲ್ಲಿ ಸಂಪತ್ತಿನ ದೇವತೆಯಾದ ಲಕ್ಷ್ಮೀ ದೇವಿಯ ಆಶೀರ್ವಾದ ಪಡೆಯಲು ಕೆಲವು ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ. ಆ ಕಾರ್ಯಗಳು ಯಾವವು? ಹಾಗಾದರೆ ಚೈತ್ರ ಮಾಸದಲ್ಲಿ ಯಾವ ಕಾರ್ಯಗಳನ್ನು ತಪ್ಪಿಸಬೇಕು ಎಂಬುದನ್ನು ತಿಳಿದುಕೊಳ್ಳಿ.
ಹಿಂದೂ ಕ್ಯಾಲೆಂಡರ್ ಪ್ರಕಾರ, ಫಾಲ್ಗುಣ ಮಾಸವು ವರ್ಷದ ಕೊನೆಯ ತಿಂಗಳಾಗಿದ್ದು ಇದರ ನಂತರ ಚೈತ್ರ ಮಾಸ ಪ್ರಾರಂಭವಾಗುತ್ತದೆ. ಅಂದರೆ ಇದು ಎ. 23 ರಂದು ಪ್ರಾರಂಭವಾಗಿ ಮೇ. 8 ರಂದು ಕೊನೆಗೊಳ್ಳುತ್ತದೆ. ಧರ್ಮಗ್ರಂಥಗಳ ಪ್ರಕಾರ, ಬ್ರಹ್ಮ ದೇವರು ಈ ತಿಂಗಳಲ್ಲಿ ಬ್ರಹ್ಮಾಂಡದ ಸೃಷ್ಟಿ ಮಾಡಿದನು ಎಂದು ನಂಬಲಾಗುತ್ತದೆ. ಹಾಗಾಗಿ ಹಿಂದೂ ಧರ್ಮದಲ್ಲಿ ಚೈತ್ರ ಮಾಸಕ್ಕೆ ವಿಶೇಷ ಮಹತ್ವವಿದೆ. ಅದರ ಜೊತೆಗೆ ಈ ತಿಂಗಳಿನಲ್ಲಿ ರಾಮ ನವಮಿ, ಪಾಪಮೋಚಿನಿ ಏಕಾದಶಿ, ಹನುಮಾನ್ ಜಯಂತಿಯಂತಹ ಅನೇಕ ಪ್ರಮುಖ ಉಪವಾಸ ಮತ್ತು ಹಬ್ಬಗಳನ್ನು ಆಚರಣೆ ಮಾಡಲಾಗುತ್ತದೆ. ಆದರೆ ಶಾಸ್ತ್ರದ ಪ್ರಕಾರ, ಈ ಮಾಸದಲ್ಲಿ ಕೆಲವು ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಈ ತಿಂಗಳಲ್ಲಿ ಈ ನಿಷೇಧಿತ ಚಟುವಟಿಕೆಗಳನ್ನು ಮಾಡುವುದರಿಂದ, ಜನರು ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ನಂಬಲಾಗಿದೆ. ಹಾಗಾದರೆ ಚೈತ್ರ ಮಾಸದಲ್ಲಿ ಯಾವ ಕಾರ್ಯಗಳನ್ನು ತಪ್ಪಿಸಬೇಕು ಎಂಬುದನ್ನು ತಿಳಿದುಕೊಳ್ಳಿ.
ಚೈತ್ರ ಮಾಸದಲ್ಲಿ, ಲಕ್ಷ್ಮೀ ದೇವಿ ಮತ್ತು ದುರ್ಗಾ ದೇವಿಯ ಆಶೀರ್ವಾದ ಪಡೆಯಲು ಕೆಲವು ವಿಶೇಷ ಕ್ರಮಗಳನ್ನು ಸಹ ಅಳವಡಿಸಿಕೊಳ್ಳಲಾಗುತ್ತದೆ, ಇದರಿಂದ ಮನೆಯಲ್ಲಿ ಸಮೃದ್ಧಿ, ಸಂತೋಷ ಮತ್ತು ಶಾಂತಿ ಸದಾ ಕಾಲ ಇರುತ್ತದೆ. ಈ ಇಡೀ ತಿಂಗಳನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ ಏಕೆಂದರೆ ಈ ತಿಂಗಳು ದುರ್ಗಾ ದೇವಿಗೆ ಸಮರ್ಪಿತವಾಗಿದೆ. ಹಾಗಾಗಿ ತಾಯಿಯನ್ನು ಭಕ್ತಿಯಿಂದ ಆರಾಧನೆ ಮಾಡಲಾಗುತ್ತದೆ.
ಚೈತ್ರ ಮಾಸದಲ್ಲಿ ಈ ಕೆಲಸಗಳನ್ನು ಮಾಡಬೇಡಿ:
ತಾಮಸ ಆಹಾರ ಸೇವನೆ ಮಾಡಬಾರದು:
ಚೈತ್ರ ಮಾಸದಲ್ಲಿ ಅಪ್ಪಿತಪ್ಪಿಯೂ ತಾಮಸ ಅಥವಾ ಮಾಂಸಾಹಾರಿ ಆಹಾರವನ್ನು ಸೇವನೆ ಮಾಡಬಾರದು. ಈ ಮಾಸದಲ್ಲಿ ನಿಮ್ಮ ಆಹಾರದ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗುತ್ತದೆ. ತಾಮಸ ಆಹಾರ ಸೇವನೆ ಮಾಡಿ ಲಕ್ಷ್ಮೀ ದೇವಿಗೆ ಪೂಜೆ ಮಾಡಬೇಡಿ. ಈ ರೀತಿ ಮಾಡಿದಲ್ಲಿ, ವ್ಯಕ್ತಿಯು ಜೀವನದಲ್ಲಿ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ.
ಬೆಲ್ಲದ ಸೇವನೆ:
ಇದಲ್ಲದೆ, ಈ ತಿಂಗಳಲ್ಲಿ ಬೆಲ್ಲವನ್ನು ಸೇವಿಸಬಾರದು ಎಂದು ಹೇಳಲಾಗುತ್ತದೆ. ಜೊತೆಗೆ ಬೇಸಿಗೆಯಲ್ಲಿ ಬೆಲ್ಲವನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕವೆಂದು ಸಾಬೀತಾಗಿದೆ.
ಕೂದಲು ಮತ್ತು ಉಗುರುಗಳನ್ನು ಕತ್ತರಿಸುವುದು:
ಚೈತ್ರ ಮಾಸದಲ್ಲಿ ಸ್ನಾನ ಮಾಡಿದ ಬಳಿಕ ಕೂದಲನ್ನು ಕತ್ತರಿಸುವುದನ್ನು ನಿಷೇಧಿಸಲಾಗಿದೆ. ಈ ತಿಂಗಳಲ್ಲಿ ಕೂದಲು ಕತ್ತರಿಸುವುದು ಮನೆಯ ಆರ್ಥಿಕ ಸ್ಥಿತಿಯನ್ನು ಹದಗೆಡಿಸುತ್ತದೆ ಮತ್ತು ಕೌಟುಂಬಿಕ ತೊಂದರೆಗಳಿಗೆ ಕಾರಣವಾಗಬಹುದು ಎಂದು ನಂಬಲಾಗಿದೆ. ಇದಲ್ಲದೆ, ಈ ತಿಂಗಳಲ್ಲಿ ಉಗುರುಗಳನ್ನು ಕತ್ತರಿಸದಿರಲು ಪ್ರಯತ್ನಿಸಿ. ನೀವು ಉಗುರುಗಳನ್ನು ಕತ್ತರಿಸಲು ಬಯಸಿದರೂ, ಗುರುವಾರ ಮತ್ತು ರಾತ್ರಿ ಸಮಯದಲ್ಲಿ ಈ ಕೆಲಸವನ್ನು ಮಾಡಬೇಡಿ.
ಇದನ್ನೂ ಓದಿ: ಕಣ್ಣಿನ ಸೆಳೆತ ಏನನ್ನು ಸೂಚಿಸುತ್ತದೆ? ಇದರ ಹಿಂದಿರುವ ಮೂಢನಂಬಿಕೆ ನಿಜವೇ?
ಜಗಳವಾಡಬೇಡಿ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚೈತ್ರ ಮಾಸದಲ್ಲಿ ಮನೆಯಲ್ಲಿ ಯಾವುದೇ ವಿಷಯಕ್ಕೂ ಜಗಳ ಆಡಬಾರದು. ಗಂಡ ಮತ್ತು ಹೆಂಡತಿ ಯಾವುದೇ ವಿಷಯಕ್ಕಾಗಲಿ ವಾದ ಮಾಡುವುದನ್ನು ತಪ್ಪಿಸಬೇಕು. ಏಕೆಂದರೆ ಮನೆಯ ಮಹಿಳೆ ತಾಯಿ ಲಕ್ಷ್ಮೀ ದೇವಿಯ ರೂಪ ಎಂದು ನಂಬಲಾಗಿದೆ. ಆದ್ದರಿಂದ, ತಾಯಿ ಲಕ್ಷ್ಮೀ ಮುನಿಸಿಕೊಳ್ಳುವ ಕೆಲಸವನ್ನು ಎಂದಿಗೂ ಮಾಡಬಾರದು.
ಹೊಸ ಕೆಲಸವನ್ನು ಆರಂಭಿಸಬಹುದು:
ವೇದಗಳು ಮತ್ತು ಪುರಾಣಗಳ ಪ್ರಕಾರ, ಚೈತ್ರ ಮಾಸದ ಮೊದಲ ದಿನ ತುಂಬಾ ಶುಭವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಯಾವುದೇ ಹೊಸ ಕೆಲಸವನ್ನು ಮಾಡಲು ಈ ದಿನವನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ