Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಇಂತಹ ವ್ಯಕ್ತಿತ್ವದ ಜನರಿಂದ ಸದಾ ದೂರವಿರಿ, ಇಲ್ಲದಿದ್ದರೆ ನಿಮ್ಮ ಜೀವನ ಕಷ್ಟಕರವಾಗುತ್ತದೆ

Chanakya Niti : ಸದಾ ಟೀಕಿಸುತ್ತಲೇ ಇರುವ ಜನರು ಯಾವಾಗಲೂ ಇತರರಲ್ಲಿ ತಪ್ಪುಗಳನ್ನು ಹುಡುಕುತ್ತಾರೆ, ಅವರನ್ನು ಗೇಲಿ ಮಾಡುತ್ತಿರುತ್ತಾರೆ. ಅಂತಹ ಜನರೊಂದಿಗೆ ಸ್ನೇಹ ಬೆಳೆಸುವುದು ನಿಮ್ಮ ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ. ಆದರೆ, ನಿಮ್ಮ ಪ್ರಯೋಜನಕ್ಕಾಗಿ ನಿಮ್ಮ ತಪ್ಪನ್ನು ಟೀಕಿಸುವ ವ್ಯಕ್ತಿ ಯಾವಾಗಲೂ ನಿಮ್ಮ ಒಳ್ಳೆಯದನ್ನು ಬಯಸುತ್ತಾನೆ. ಅಂತಹ ಟೀಕೆಗಳನ್ನು ಸಕಾರಾತ್ಮಕ ವಿಮರ್ಶೆ ಎಂದು ಕರೆಯಲಾಗುತ್ತದೆ.

Chanakya Niti: ಇಂತಹ ವ್ಯಕ್ತಿತ್ವದ ಜನರಿಂದ ಸದಾ ದೂರವಿರಿ, ಇಲ್ಲದಿದ್ದರೆ ನಿಮ್ಮ ಜೀವನ ಕಷ್ಟಕರವಾಗುತ್ತದೆ
ಇಂತಹ ವ್ಯಕ್ತಿತ್ವದವರಿಂದ ಸದಾ ದೂರವಿರಿ, ಇಲ್ಲದಿದ್ದರೆ ನಿಮ್ಮ ಜೀವನ ಕಷ್ಟಕರ
Follow us
ಸಾಧು ಶ್ರೀನಾಥ್​
|

Updated on: Jul 19, 2024 | 7:07 AM

Chanakya Niti: ಆಚಾರ್ಯ ಚಾಣಕ್ಯ ಪ್ರಾಚೀನ ಕಾಲದ ಮಹಾನ್ ರಾಜತಾಂತ್ರಿಕರಾಗಿದ್ದರು. ಇಂದಿಗೂ ಅವರ ಲಿಖಿತ ನೀತಿಗಳು ಜನರಲ್ಲಿ ಬಹಳ ಪ್ರಸಿದ್ಧವಾಗಿವೆ. ಆಚಾರ್ಯ ಚಾಣಕ್ಯರು ಮನುಷ್ಯನ ಜೀವನಕ್ಕೆ ಸಂಬಂಧಿಸಿದ ಅಂಶಗಳನ್ನು ನೀತಿಶಾಸ್ತ್ರದಲ್ಲಿ ಬಹಳ ಆಳವಾಗಿ ವಿವರಿಸಿದ್ದಾರೆ. ಅವರು ಜೀವನದಲ್ಲಿ ಏನನ್ನು ಕಲಿತರೂ, ಆ ಜ್ಞಾನ ಮತ್ತು ಅನುಭವವನ್ನು ಚಾಣಕ್ಯ ನೀತಿಯಲ್ಲಿ ವಿವರಿಸಲಾಗಿದೆ. ಆಚಾರ್ಯ ಚಾಣಕ್ಯರು ಯಶಸ್ವಿ ವ್ಯಕ್ತಿಯಾಗಲು ಯಾವೆಲ್ಲಾ ಪ್ರಮುಖ ವಿಷಯಗಳನ್ನು ಮನಸ್ಸಿಟ್ಟು ಮಾಡಬೇಕು, ತನ್ಮೂಲಕ ವ್ಯಕ್ತಿಯು ತನ್ನ ಜೀವನದಲ್ಲಿ ಸುಲಭವಾಗಿ ಹೇಗೆ ಯಶಸ್ಸನ್ನು ಸಾಧಿಸಬಹುದು ಎಂದು ಹೇಳಿದ್ದಾರೆ.

ಕೋಪಗೊಳ್ಳುವ ವ್ಯಕ್ತಿ ಚಾಣಕ್ಯ ನೀತಿಯ ಪ್ರಕಾರ, ಕ್ರೋಧಗೊಳ್ಳುವ ವ್ಯಕ್ತಿ ಬೇಗನೆ ತನ್ನ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುತ್ತಾರೆ. ಮುಂದಾಲೋಚನೆ ಇಲ್ಲದೆ, ಯೋಚಿಸದೆ ಮಾತನಾಡುತ್ತಾರೆ ಅಥವಾ ವರ್ತಿಸುತ್ತಾರೆ. ಅಂತಹ ಜನರೊಂದಿಗೆ ಬೆರೆಯುವುದು ಅಥವಾ ವಾಸಿಸುವುದು ಅಂದರೆ ಸದಾ ಜಗಳ ಮತ್ತು ಉದ್ವೇಗದ ವಾತಾವರಣದಲ್ಲಿ ಇದ್ದಂತೆ. ಆದ್ದರಿಂದ ಯಾವಾಗಲೂ ಅಂತಹ ಜನರಿಂದ ಅಂತರ ಕಾಯ್ದುಕೊಳ್ಳಬೇಕು.

ದುರಾಸೆಯ ವ್ಯಕ್ತಿ ದುರಾಸೆಯ ಜನರು ಯಾವಾಗಲೂ ಇತರರನ್ನು ಶೋಷಿಸಲು ಪ್ರಯತ್ನಿಸುತ್ತಾರೆ. ಅಂತಹ ಜನರೊಂದಿಗೆ ಸ್ನೇಹ ಬೆಳೆಸುವುದು ಅಥವಾ ಅವರೊಂದಿಗೆ ವ್ಯವಹಾರ ಮಾಡುವುದರಿಂದ ಮುಂದೊದಗುವ ಅಪಾಯದಿಂದ ಮುಕ್ತವಾಗುವುದಿಲ್ಲ.

ಇದನ್ನೂ ಓದಿ: ADA Bangalore Recruitment 2024: ಎಡಿಎ ಬೆಂಗಳೂರು ಎಂಜಿನಿಯರಿಂಗ್​ ಪದವೀಧರರ ಆಯ್ಕೆ, ನೇರ ಸಂದರ್ಶನ ವಿವರ ಇಲ್ಲಿದೆ

ಸೋಮಾರಿ ವ್ಯಕ್ತಿ ಸೋಮಾರಿಗಳು ಎಂದಿಗೂ ತಮ್ಮ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡುವುದಿಲ್ಲ ಮತ್ತು ಇತರರಿಗೆ ಹೊರೆಯಾಗುತ್ತಾರೆ. ಅಂತಹವರ ಸಹವಾಸದಲ್ಲಿ ಸೋಮಾರಿಯೂ ಆಗಬಹುದು.

ಸುಳ್ಳುಗಾರ ವ್ಯಕ್ತಿ ಸುಳ್ಳುಗಾರರು ಎಂದಿಗೂ ಸತ್ಯವನ್ನು ಹೇಳುವುದಿಲ್ಲ ಮತ್ತು ಅವರನ್ನು ನಂಬುವುದು ಕಷ್ಟ. ಅಂತಹ ಜನರೊಂದಿಗೆ ಸ್ನೇಹ ಬೆಳೆಸುವುದು ನಿಮ್ಮ ಖ್ಯಾತಿ/ ವ್ಯಕ್ತಿತ್ವಕ್ಕೆ ಹಾನಿ ಮಾಡುತ್ತದೆ.

ನಕಾರಾತ್ಮಕ ಜನ ನಕಾರಾತ್ಮಕ ಜನರು ಯಾವಾಗಲೂ ನಕಾರಾತ್ಮಕವಾಗಿಯೇ ಆಲೋಚಿಸುತ್ತಾರೆ ಮತ್ತು ನಕಾರಾತ್ಮಕ ವಿಷಯಗಳನ್ನು ಹೇಳುತ್ತಾರೆ. ಅಂತಹ ಜನರೊಂದಿಗೆ ವಾಸಿಸುವ ವ್ಯಕ್ತಿಯು ನಕಾರಾತ್ಮಕ ಚಿಂತನೆಗೆ ಬಲಿಯಾಗುತ್ತಾನೆ.

ಅಸೂಯೆಪಡುವ ವ್ಯಕ್ತಿ ಅಸೂಯೆಪಡುವ ಜನರು ಇತರರ ಯಶಸ್ಸಿನ ಬಗ್ಗೆ ಅಸೂಯೆಪಡುತ್ತಾರೆ ಮತ್ತು ಯಾವಾಗಲೂ ಅವರಿಗೆ ಕೆಟ್ಟದ್ದನ್ನು ಬಯಸುತ್ತಾರೆ. ಅಂತಹ ಜನರೊಂದಿಗೆ ಸ್ನೇಹ ಬೆಳೆಸುವುದು ನಿಮ್ಮ ಮನಸ್ಸಿನಲ್ಲಿ ಇತರ ಯಶಸ್ವಿ ವ್ಯಕ್ತಿಗಳ ಬಗ್ಗೆ ಅಸೂಯೆ ಮತ್ತು ದ್ವೇಷವನ್ನು ಉಂಟುಮಾಡಬಹುದು.

ಇದನ್ನೂ ಓದಿ: Court jobs – ರಾಮನಗರ ನ್ಯಾಯಾಲಯದಲ್ಲಿ ಎಸ್​ಎಸ್​​ಎಲ್​​ಸಿ ಪಾಸಾದವರಿಗೆ ನೂರಾರು ಹುದ್ದೆಗಳು, ನಾಳಿದ್ದೇ ಕೊನೆಯ ದಿನ, ಇಂದೇ ಅರ್ಜಿ ಹಾಕಿ

ಟೀಕಿಸುವ ವ್ಯಕ್ತಿ ಟೀಕಿಸುವ ಜನರು ಯಾವಾಗಲೂ ಇತರರಲ್ಲಿ ತಪ್ಪುಗಳನ್ನು ಹುಡುಕುತ್ತಾರೆ ಮತ್ತು ಅವರನ್ನು ಗೇಲಿ ಮಾಡುತ್ತಿರುತ್ತಾರೆ. ಅಂತಹ ಜನರೊಂದಿಗೆ ಸ್ನೇಹ ಬೆಳೆಸುವುದು ನಿಮ್ಮ ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಯಾವುದೇ ಕಾರಣವಿಲ್ಲದೆ ನಕಾರಾತ್ಮಕ ಟೀಕೆಗಳನ್ನು ಮಾಡುವ ವ್ಯಕ್ತಿಯೊಂದಿಗೆ ಎಂದಿಗೂ ಸ್ನೇಹ ಬೆಳೆಸಬೇಡಿ. ನಿಮ್ಮ ಪ್ರಯೋಜನಕ್ಕಾಗಿ ನಿಮ್ಮ ತಪ್ಪನ್ನು ಟೀಕಿಸುವ ವ್ಯಕ್ತಿ ಯಾವಾಗಲೂ ನಿಮ್ಮ ಒಳ್ಳೆಯದನ್ನು ಬಯಸುತ್ತಾನೆ. ಅಂತಹ ಟೀಕೆಗಳನ್ನು ಸಕಾರಾತ್ಮಕ ವಿಮರ್ಶೆ ಎಂದು ಕರೆಯಲಾಗುತ್ತದೆ, ಇದು ವ್ಯಕ್ತಿತ್ವದ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಮೂರ್ಖ ವ್ಯಕ್ತಿ ಮೂರ್ಖ ವ್ಯಕ್ತಿಯಿಂದ ಬುದ್ಧಿವಂತಿಕೆಯನ್ನು ನಿರೀಕ್ಷಿಸುವುದು ವ್ಯರ್ಥ. ಅಂತಹ ಜನರೊಂದಿಗೆ ಇರುವುದರಿಂದ ನಿಮ್ಮ ಸಮಯ ವ್ಯರ್ಥವಾಗುತ್ತದೆ. ಆದ್ದರಿಂದ ಮೂರ್ಖ ವ್ಯಕ್ತಿಯೊಂದಿಗೆ ನಿಮ್ಮ ಸಮಯವನ್ನು ಎಂದಿಗೂ ವ್ಯರ್ಥ ಮಾಡಬೇಡಿ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್