Acharya Chanakya: ಜೀವನದಲ್ಲಿ ಎಲ್ಲ ಕ್ಷೇತ್ರದಲ್ಲೂ ಯಶಸ್ಸನ್ನು ತರುವ ಆಚಾರ್ಯ ಚಾಣಕ್ಯರ ಪ್ರಮುಖ ನೀತಿಗಳು ಇಲ್ಲಿವೆ

Chanakya Niti: ಜೀವನದಲ್ಲಿ ಎಲ್ಲ ಕ್ಷೇತ್ರದಲ್ಲೂ ಯಶಸ್ಸನ್ನು ತರುವ ಆಚಾರ್ಯ ಚಾಣಕ್ಯರ ಪ್ರಮುಖ ನೀತಿ - ತಂತ್ರಗಳು ಹೀಗಿವೆ.. ಮೊದಲು ಶತ್ರುವನ್ನು ಹತ್ತಿರದಲ್ಲಿರಲು ಬಿಡಿ! ಏಕೆಂದರೆ

Acharya Chanakya: ಜೀವನದಲ್ಲಿ ಎಲ್ಲ ಕ್ಷೇತ್ರದಲ್ಲೂ ಯಶಸ್ಸನ್ನು ತರುವ ಆಚಾರ್ಯ ಚಾಣಕ್ಯರ ಪ್ರಮುಖ ನೀತಿಗಳು ಇಲ್ಲಿವೆ
ಎಲ್ಲ ಕ್ಷೇತ್ರದಲ್ಲೂ ಯಶಸ್ಸನ್ನು ತರುವ ಆಚಾರ್ಯ ಚಾಣಕ್ಯರ ಪ್ರಮುಖ ನೀತಿಗಳು
Follow us
ಸಾಧು ಶ್ರೀನಾಥ್​
|

Updated on: Jul 02, 2024 | 6:06 AM

ಆಚಾರ್ಯ ಚಾಣಕ್ಯ ಒಬ್ಬ ರಾಜನೀತಿಜ್ಞ. ಅಪಾರ ಬುದ್ಧಿಮತ್ತೆಯ ವ್ಯಕ್ತಿ. ಚಾಣಿಕ್ಯನು ತನ್ನ ಶಿಕ್ಷಣ, ಬುದ್ಧಿವಂತಿಕೆ ಮತ್ತು ತನ್ನ ವಿಶಿಷ್ಟ ನೀತಿಗಳಿಂದ ಮೌರ್ಯ ಸಾಮ್ರಾಜ್ಯವನ್ನು ಬಲಪಡಿಸಿದನು. ಅವರು ಅದನ್ನು ದೊಡ್ಡ ರಾಷ್ಟ್ರೀಯ ಶಕ್ತಿಯಾಗಿ ಬೆಳೆಯುವಂತೆ ಮಾಡಿದರು. ಆಡಳಿತದ ಬಗ್ಗೆ ಮಾತ್ರವಲ್ಲ.. ಮಾನವ ಕಲ್ಯಾಣಕ್ಕಾಗಿ ಜೀವನದ ಪ್ರತಿಯೊಂದು ಅಂಶಗಳ ಬಗ್ಗೆ ಆಚಾರ್ಯ ಚಾಣಕ್ಯ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಆಚಾರ್ಯ ಚಾಣಕ್ಯರ ವಿಚಾರಗಳು ಮತ್ತು ವಿಧಾನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಯಾರಾದರೂ ಸಂತೋಷ ಮತ್ತು ಸಮೃದ್ಧ ಜೀವನವನ್ನು ನಡೆಸಬಹುದು ಎಂದು ನಂಬಲಾಗಿದೆ. ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ (Chanakya Niti in kannada) ಅನೇಕ ಜೀವನ ವಿಧಾನಗಳನ್ನು ನೀಡಿದ್ದಾರೆ. ಅವುಗಳನ್ನು ಅನುಸರಿಸುವ ಮೂಲಕ ಪ್ರತಿಕೂಲ ಸಂದರ್ಭಗಳಲ್ಲಿಯೂ (Enemy) ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮನುಷ್ಯರು ಯಶಸ್ವಿಯಾಗಬಹುದು.

* ಸದಾ ನಂಬಿಕೆಯನ್ನು ಹೊಂದಿರಬೇಕು. ನಂಬಿಕೆ ಎಂದಿಗೂ ವಿಫಲವಾಗುವುದಿಲ್ಲ. ಚಾಣಕ್ಯನು ನಂಬಿಕೆಯನ್ನು ಬಹಳ ಮುಖ್ಯವೆಂದು ಪರಿಗಣಿಸಿದನು. ಬೇರೆ ರೀತಿಯಲ್ಲಿ ಹೇಳುವುದಾದರೆ, ನಂಬಿಕೆಯು ಯಶಸ್ಸಿನ ಕೀಲಿಯಾಗಿದೆ.

* ಉತ್ಸಾಹವನ್ನು ಯಶಸ್ಸಿನ ಪ್ರಮುಖ ಭಾಗವೆಂದು ಚಾಣಕ್ಯ ವಿವರಿಸುತ್ತಾನೆ. ಯಾವುದೇ ಪರಿಸ್ಥಿತಿಯಲ್ಲಿ ಉತ್ಸಾಹದಿಂದ ಇರುವವನು ಎಂದಿಗೂ ನಿರಾಶೆಗೊಳ್ಳುವುದಿಲ್ಲ.

* ಸದಾಚಾರಕ್ಕಿಂತ ದೊಡ್ಡ ಸಂಪತ್ತು ಇಲ್ಲ. ನೈತಿಕತೆ, ಪ್ರಾಮಾಣಿಕತೆ ಮತ್ತು ಸಾಮರ್ಥ್ಯ ಮಾತ್ರ ವ್ಯಕ್ತಿಯನ್ನು ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ಯುತ್ತದೆ ಎಂದು ಚಾಣಕ್ಯ ಹೇಳಿದರು.

Also Read: Trending -Late Marriages: ಲೇಟ್​ ಆಗಿ ಮದುವೆ ಆಗುವುದು! ಏನಿದು ಲೇಟೆಸ್ಟ್​ ಟ್ರೆಂಡ್​? ತಡವಾಗಿ ಮದುವೆ ಆಗುವುದರಿಂದ ಲಾಭ ಏನು? ನಷ್ಟವೆಷ್ಟು?

* ಕಠಿಣ ಪರಿಶ್ರಮ ಅಂದರೆ ಕಷ್ಟಪಟ್ಟು ಕೆಲಸ ಮಾಡುವುದು ಯೋಗ್ಯವಾದ ವಿಷಯ. ಯಶಸ್ಸಿಗೆ ಕಠಿಣ ಪರಿಶ್ರಮ ಮತ್ತು ಸಾಮರ್ಥ್ಯ ಅತ್ಯಗತ್ಯ ಎಂದು ಚಾಣಕ್ಯ ವಿವರಿಸಿದರು.

* ಜ್ಞಾನವೇ ನಿಜವಾದ ಸಂಪತ್ತು – ಮನುಷ್ಯನ ನಿಜವಾದ ಸಂಪತ್ತು ಅವನ ಜ್ಞಾನ. ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಬೇರೆ ಯಾರೂ ಕದಿಯಲು ಅಥವಾ ದೋಚಲು ಸಾಧ್ಯವಿಲ್ಲ.

Also Read: ಮೂಳೆ ಕೊರೆಯುವ ಚಳಿಯಲ್ಲಿಯೂ ಯುದ್ಧಕ್ಕೆ ಸನ್ನದ್ದರಾಗಿದ್ದೀರಾ? ಎಂಟೆದೆ ಬಂಟರನ್ನು ಕೈಬೀಸಿ ಕರೆಯುವ ಸದಾ ಉದ್ವಿಗ್ನ ಸ್ಥಳದಲ್ಲಿ ನಾಲ್ಕಾರು ಹೆಜ್ಜೆ ಹಾಕೋಣ ಬನ್ನೀ…

* ಮನಸ್ಸು ಹೇಳುವುದನ್ನು ಕೇಳಿ – ಪ್ರತಿ ಕ್ಷಣ-ಸಂದರ್ಭದ ಮೇಲೆ ಕೇಂದ್ರೀಕರಿಸುವ ವ್ಯಕ್ತಿ ಮಾತ್ರ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ. ಸಂಪೂರ್ಣವಾಗಿ ತಿಳಿಯದೆ ಯಾರನ್ನೂ ಕುರುಡಾಗಿ ನಂಬಬೇಡಿ.

* ಶತ್ರುವಿನ ಮೇಲೆ ಆದ್ಯವಾಗಿ ನಿಗಾ ಇರಿಸಿ – ಶತ್ರುವನ್ನು ನಿಮ್ಮ ದೃಷ್ಟಿಗೆ ಸಮೀಪವಾಗಿಯೇ ಇಟ್ಟುಕೊಳ್ಳಿ. ಶತ್ರುಗಳನ್ನು ತನ್ನ ಹತ್ತಿರ ಇಟ್ಟುಕೊಳ್ಳುವಂತೆ ಚಾಣಕ್ಯ ಸಲಹೆ ನೀಡುತ್ತಾನೆ. ಏಕೆಂದರೆ ಚಾಣಕ್ಯನ ಪ್ರಕಾರ ಶತ್ರುವನ್ನು ಚೆನ್ನಾಗಿ ತಿಳಿದುಕೊಳ್ಳುವುದು ಮತ್ತು ಅರ್ಥ ಮಾಡಿಕೊಳ್ಳುವುದು ಅವಶ್ಯಕ. ನಾವು ನಮ್ಮ ಶತ್ರುಗಳಿಗೆ ಹತ್ತಿರವಾದಾಗ.. ಅವರ ಪರಿಸ್ಥಿತಿ, ಅವರ ಉದ್ದೇಶಗಳು, ಅವರ ಆಲೋಚನೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. ಅಲ್ಲದೆ ಅವರ ಯೋಜನೆಯನ್ನು ಜಗತ್ತಿಗೆ ಘೋಷಿಸಬಹುದು. ಹೀಗೆ ಶತ್ರುಗಳ ಯೋಜನೆಗಳು ವಿಫಲವಾಗುತ್ತವೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)