Chanakya Niti: ಜೀವನದ ಹಾದಿಯಲ್ಲಿ ಈ 3 ಕಾರಣಗಳು ಒಬ್ಬ ವ್ಯಕ್ತಿಯನ್ನು ಅವಮಾನಕ್ಕೀಡು ಮಾಡುತ್ತದೆ- ಚಾಣಕ್ಯ ನೀತಿ

| Updated By: ಆಯೇಷಾ ಬಾನು

Updated on: Sep 27, 2021 | 7:52 AM

ಚಾಣಕ್ಯರ ಪ್ರಕಾರ, ಅಜ್ಞಾನವು ಅತಿದೊಡ್ಡ ದುಃಖ. ಈ ಕಾರಣದಿಂದಾಗಿ ವ್ಯಕ್ತಿಯು ಬಯಸಿದರೂ ಗೌರವವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇದನ್ನು ಹೊರತು ಪಡಿಸಿ ವ್ಯಕ್ತಿ ಅವಮಾನಕ್ಕೆ ಒಳಗಾಗಲು ಇನ್ನೂ ಅನೇಕ ಕಾರಣಗಳಿವೆ. 

Chanakya Niti: ಜೀವನದ ಹಾದಿಯಲ್ಲಿ ಈ 3 ಕಾರಣಗಳು ಒಬ್ಬ ವ್ಯಕ್ತಿಯನ್ನು ಅವಮಾನಕ್ಕೀಡು ಮಾಡುತ್ತದೆ- ಚಾಣಕ್ಯ ನೀತಿ
ನಿಮ್ಮ ಮಕ್ಕಳನ್ನು ಯೋಗ್ಯರನ್ನಾಗಿಸಲು ಬಯಸುವುದಾದರೆ ಆಚಾರ್ಯ ಚಾಣಕ್ಯ ಹೇಳುವ ಈ ಮಾತುಗಳನ್ನು ಕೇಳಿ
Follow us on

ಆಚಾರ್ಯ ಚಾಣಕ್ಯ ಘನ ವಿದ್ವಾಂಸರಾಗಿದ್ದರು. ಇವರು ಅರ್ಥಶಾಸ್ತ್ರ, ರಾಜನೀತಿ ಇತ್ಯಾದಿಗಳಲ್ಲಿ ಅಪಾರ ಜ್ಞಾನ ಹೊಂದಿದ್ದರು. ಅದೇ ರೀತಿ ಸಾಮಾಜಿಕ ವಿಚಾರಗಳಲ್ಲಿ ಕೂಡ ಚಾಣಕ್ಯರಿಗೆ ಬಹಳಷ್ಟು ತಿಳುವಳಿಕೆ ಇತ್ತು. ತಮ್ಮ ಎಲ್ಲಾ ಜ್ಞಾನ ಸಂಪತ್ತನ್ನು ಚಾಣಕ್ಯ ಸಮಾಜಕ್ಕೆ ನೀಡಿದ್ದಾರೆ. ಇವರ ನೀತಿ ಎಲ್ಲರಿಗೂ ಮಾರ್ಗದರ್ಶಿಯಾಗಿದೆ. ಚಾಣಕ್ಯರ ನೀತಿಗಳನ್ನು ಜನರು ತಿಳಿದು ಅದನ್ನು ಅಳವಡಿಸಲು ಪ್ರಯತ್ನಿಸಿದರೆ ಅಂತವರು ಖಂಡಿತವಾಗಿ ಜೀವನದಲ್ಲಿ ಯಶಸ್ವಿ ಆಗಬಹುದು.

ಚಾಣಕ್ಯ ಅಂತಹ ಹಲವು ಮಾರ್ಗದರ್ಶಿ ಸೂತ್ರಗಳನ್ನು ಚಾಣಕ್ಯ ನೀತಿ ಪುಸ್ತಕದಲ್ಲಿ ಬರೆದಿದ್ದಾರೆ. ಅದರಿಂದ ಇತರರ ಭವಿಷ್ಯ ಉತ್ತಮಗೊಳಿಸಬಹುದಾಗಿದೆ. ಆಚಾರ್ಯ ಚಾಣಕ್ಯರ ನುಡಿಗಳನ್ನು ನೋಡಿದರೆ ಅದು ಕೆಲವೊಮ್ಮೆ ಕಟು ಸತ್ಯ, ಅಥವಾ ಕಹಿ ಎಂದೂ ಕಾಣಿಸಬಹುದು. ಆದರೆ, ನೈಜವಾಗಿ ಅದು ನಿಜ ಜೀವನದ ದರ್ಶನ ಮಾಡಿಸುತ್ತದೆ. ಅಂತಹ ಕೆಲವು ವಿಚಾರಗಳನ್ನು ನಾವಿಲ್ಲಿ ತಿಳಿದುಕೊಳ್ಳೋಣ. ಆಚಾರ್ಯ ಚಾಣಕ್ಯರು  ವ್ಯಕ್ತಿಯನ್ನು ನೋಯಿಸುವ ಮತ್ತು ಅವಮಾನಿಸುವ ಕಾರಣಗಳ ಬಗ್ಗೆ ತಿಳಿಸಿದ್ದಾರೆ.

ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಯು ಗೌರವ ಮತ್ತು ಪ್ರತಿಷ್ಠೆಯನ್ನು ಬಯಸುತ್ತಾನೆ. ಆದರೆ ಗೌರವ ಮತ್ತು ಪ್ರತಿಷ್ಠೆ ಅವರ ಸದ್ಗುಣಗಳು ಮತ್ತು ಒಳ್ಳೆಯ ಕಾರ್ಯಗಳಿಂದ ಅವರನ್ನು ಹುಡುಕಿ ಬರುತ್ತದೆ. ಕೆಲವೊಮ್ಮೆ ನ್ಯೂನತೆಗಳು ಅಥವಾ ನಮ್ಮ ಅಭ್ಯಾಸಗಳು ಜೀವನದ ಹಾದಿಯಲ್ಲಿ ನಮ್ಮನ್ನು ಅವಮಾನಕ್ಕೆ ಗುರಿಯಾಗಿಸುತ್ತದೆ ಅಥವಾ ಅಪಮಾನಕ್ಕೆ ಕಾರಣವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಒಬ್ಬ ವ್ಯಕ್ತಿಯ ಬಳಿ ಎಷ್ಟೇ ಹಣವಿದ್ದರೂ, ಸಂತೋಷವಾಗಿರಲು ಸಾಧ್ಯವಾಗುವುದಿಲ್ಲ ಎಂದು ಚಾಣಕ್ಯ ಹೇಳಿದ್ದಾರೆ.

ಚಾಣಕ್ಯರ ಪ್ರಕಾರ, ಅಜ್ಞಾನವು ಅತಿದೊಡ್ಡ ದುಃಖ. ಈ ಕಾರಣದಿಂದಾಗಿ ವ್ಯಕ್ತಿಯು ಬಯಸಿದರೂ ಗೌರವವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇದನ್ನು ಹೊರತು ಪಡಿಸಿ ವ್ಯಕ್ತಿ ದಿನಂಪ್ರತಿ ಅವಮಾನಕ್ಕೆ ಒಳಗಾಗಲು ಅನೇಕ ಕಾರಣಗಳಿವೆ.

1. ಅಜ್ಞಾನ
ಒಬ್ಬ ವ್ಯಕ್ತಿಯು ಮೂರ್ಖ ಅಥವಾ ಅಜ್ಞಾನಿಯಾಗಿರುವುದೇ ದೊಡ್ಡ ಯಾತನೆ ಅಥವಾ ಅವಮಾನ. ಮೂರ್ಖತನದಿಂದಾಗಿ ಒಬ್ಬ ವ್ಯಕ್ತಿ ಏನನ್ನಾದರೂ ತಪ್ಪು ಮಾಡುತ್ತಾನೆ ಮತ್ತು ಆ ಕೆಲಸದಿಂದ ಅವಮಾನಕ್ಕೆ ಗುರಿಯಾಗುತ್ತಾನೆ. ಬುದ್ಧಿವಂತಿಕೆಯ ಅನುಪಸ್ಥಿತಿಯಲ್ಲಿ, ಒಬ್ಬ ವ್ಯಕ್ತಿಯು ಎಂದಿಗೂ ಜ್ಞಾನಿಯಾಗಲು ಸಾಧ್ಯವಿಲ್ಲ. ಗೌರವವನ್ನು ಪಡೆಯಲು, ಅಜ್ಞಾನದ ಕತ್ತಲನ್ನು ತೆಗೆದುಹಾಕುವುದು ಬಹಳ ಮುಖ್ಯ. ಒಬ್ಬ ಬುದ್ಧಿವಂತ ವ್ಯಕ್ತಿ ಎಲ್ಲಿ ಮತ್ತು ಹೇಗೆ ವರ್ತಿಸಬೇಕು ಎಂದು ಚೆನ್ನಾಗಿ ತಿಳಿದಿರುತ್ತಾನೆ. ಆದ್ದರಿಂದ ಅವನು ಎಲ್ಲೆಡೆ ಗೌರವ ಪಡೆಯುತ್ತಾನೆ ಎಂದು ಚಾಣಕ್ಯ ಹೇಳಿದ್ದಾರೆ.

2. ಅವಲಂಬಿತ ಬದುಕು
ಅವಮಾನಕ್ಕೆ ಇನ್ನೊಂದು ಪ್ರಮುಖ ಕಾರಣ ಒಬ್ಬ ವ್ಯಕ್ತಿಯ ಜೀವನ ಬೇರೆಯವರ ಮೇಲೆ ಅವಲಂಬಿತವಾಗಿರುವುದು. ಅಂತಹ ವ್ಯಕ್ತಿಯು ಗುಲಾಮನಂತೆ ಬದುಕಬೇಕು ಮತ್ತು ಯಾವಾಗಲೂ ಇತರರ ಬಂಧನಕ್ಕೆ ಬದ್ಧನಾಗಿರಬೇಕು. ಹೀಗಿರುವಾಗ ತಮ್ಮ ಸ್ವಂತ ಇಚ್ಛೆಯ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಇದು ತುಂಬಾ ನೋವುಂಟು ಮಾಡುತ್ತದೆ. ಆದ್ದರಿಂದ ನೀವು ಗೌರವ ಪಡೆಯಲು ಬಯಸಿದರೆ, ಸ್ವಯಂ-ಅವಲಂಬಿತರಾಗಿರಿ ಎಂಬುವುದು ಚಾಣಕ್ಯರ ಮಾತು.

3. ಅನಿಯಂತ್ರಿತ ಯೌವನ
ಯೌವನದಲ್ಲಿ ವ್ಯಕ್ತಿಯೊಳಗೆ ಸಾಕಷ್ಟು ಉತ್ಸಾಹವಿರುತ್ತದೆ. ಆದರೆ ವ್ಯಕ್ತಿಯು ತನ್ನ ಉತ್ಸಾಹ ಮತ್ತು ಕೋಪವನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೆ, ತಪ್ಪು ಹಾದಿಯಲ್ಲಿ ಸಾಗುವ ಮೂಲಕ, ತನಗೆ ಸೂಕ್ತವಲ್ಲದ್ದನ್ನು ಮಾಡುತ್ತಾನೆ. ಈ ಕಾರಣದಿಂದಾಗಿ ಅವನ ಪ್ರತಿಷ್ಠೆಗೆ ಕಳಂಕ ಉಂಟಾಗಬಹುದು ಮತ್ತು ನಿಮ್ಮನ್ನು ಜೀವನಪರ್ಯಂತ ಅವಮಾನಕ್ಕೆ ಗುರಿಯಾಗಿಸಬಹುದು. ಆದ್ದರಿಂದ, ಯೌವನದಲ್ಲಿ ನಿಮ್ಮ ಉತ್ಸಾಹವನ್ನು ನಿಯಂತ್ರಿಸುವ ಮೂಲಕ, ನೀವು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಆಗ ನಿಮ್ಮ ಶಕ್ತಿ, ನಿಮ್ಮ ಉತ್ಸಾಹ, ನಿಮ್ಮನ್ನು ಬಹಳ ದೂರ ಕೊಂಡೊಯ್ಯುತ್ತದೆ ಎಂದು ಚಾಣಕ್ಯ ಹೇಳಿದ್ದಾರೆ.

ಇದನ್ನೂ ಓದಿ:

Chanakya Niti: ಇಂತಹ ಜೀವನ ಸಿಕ್ಕವರು ಮತ್ತೊಂದು ಸ್ವರ್ಗ ಬೇಕು ಎಂದು ಬಯಸುವುದಿಲ್ಲ; ಚಾಣಕ್ಯ ನೀತಿ ಇಲ್ಲಿದೆ

Chanakya Niti: ಪದೇ ಪದೇ ಅಪಹಾಸ್ಯಕ್ಕೆ ಗುರಿಯಾಗಿತ್ತಿದ್ದೀರಾ? ಆಚಾರ್ಯ ಚಾಣಕ್ಯ ಹೇಳಿರುವ ಈ 3 ವಿಷಯಗಳನ್ನು ಎಂದಿಗೂ ಮರೆಯದಿರಿ